ಜೀವನದಲ್ಲಿ ನಾವು ಸರಿಯಾದ ವಯಸ್ಸಿಗೆ ಹೂಡಿಕೆಯನ್ನು ಆರಂಭಿಸಿದ್ದಾರೆ ಮಾತ್ರ ನಿವೃತ್ತಿಯ ಜೀವನವನ್ನು ಸುಖಕರವಾಗಿ ಕಳೆಯಬಹುದು.ವೃತ್ತಿ ಜೀವನದ ಆರಂಭದಲ್ಲಿ ನೀವು ನಿಮ್ಮ ಹಣವನ್ನು ಉಳಿತಾಯ ಮಾಡಿ ಒಂದು ಒಳ್ಳೆಯ ಕಡೆಯಲ್ಲಿ ಹೂಡಿಕೆ ಮಾಡಿದ್ದರೆ ನಿಮ್ಮ ಮುಂದಿನ ಭವಿಷ್ಯವು ಆರ್ಥಿಕವಾಗಿ ಉಜ್ವಲವಾಗುತ್ತದೆ. ಹಣಕಾಸಿನ ನಿರ್ವಹಣೆಯಲ್ಲಿ ನೀವು ಕೊಂಚ ಎಡವಿದ್ದರೂ ಸಮಸ್ಯೆಗಳ ಸುಳಿವಿಗೆ ನಿಮ್ಮನ್ನು ದೂಡಬಹುದು. ನಾನು ಏನು ತಪ್ಪು ಮಾಡದೇ ಎಂದು ತಿಳಿಯವ ಹೊತ್ತಿಗೆ ಸಮಯವೇ ಮೀರಿ ಹೋಗಿರುತ್ತದೆ. ಹಾಗಿದ್ದರೆ ನಾವು ಹೂಡಿಕೆಯನ್ನು ಆರಂಭಿಸಯೌಮತಹ ವೇಳೆಯಲ್ಲಿ ಏನೆಲ್ಲಾ ತಪ್ಪುಗಳನ್ನು ಮಾಡಬಾರದು ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.

ಹೌದು, ನೀವು ನಿಮ್ಮ ವೃತ್ತಿ ಜೀವನವನ್ನು 18ರಿಂದ 30ರ ವಯಸ್ಸಿನೊಳಗೆ ಆರಂಭಿಸಿದ್ದರೆ ಉತ್ತಮ. ನೀವು ಈ ವಯಸ್ಸಿನಲ್ಲಿ ಹೂಡಿಕೆಯನ್ನು ಆರಂಭಿಸಿದ್ದರೆ ಕೆಲವೊಂದು ತಪ್ಪುಗಳನ್ನು ಮಾಡುವುದನ್ನು ಈಗಲೇ ನಿಲ್ಲಿಸಿಬಿಡಿ.ಅವು ಯಾವುವು ಎಂಬುವುದು ಈ ಕೆಳಗಿನಂತೆ ಇದೆ.
ಸಮಯಯದ ಬಗ್ಗೆ ನಿರ್ಲಕ್ಷ್ಯ ತೋರಬೇಡಿ
ನಾವು ನಮ್ಮ ಜೀವನದಲ್ಲಿ ಎಷ್ಟು ಬೇಗ ಹಣದ ಉಳಿತಾಯವನ್ನು ಆರಂಭ ಮಾಡುತ್ತವೋ ಅಷ್ಟೇ ಒಳ್ಳೆಯದ್ದು,ಅದರಲ್ಲೂ ಕೆಲವರು ಆಗ ತಾನೇ ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಸೇರಿರುತ್ತಾರೆ. ವಿದ್ಯಾರ್ಥೀ ಸಾಲಗಳು, ಮನೆಯ ನಿರ್ವಾಹಣೆಯ ಖರ್ಚುಗಳು ಇರುತ್ತವೆ. ಇವೆಲ್ಲೆವನ್ನೂ ನಿರ್ವಹಣೆ ಮಾಡುವುದೇ ಕಷ್ಟ ಎಂದು ಸುಮ್ಮನೆ ಆಗುತ್ತಾರೆ. ನೀವು ಯಾವುದೇ ಕಷ್ಟಗಳಿಗೆ ಅಂಜದೇ ಬಹಬೇಗನೆ ಚಿಕ್ಕ ಹಣವನ್ನುನ ಉಳಿತಾಯ ಮಾಡಿ, ಮ್ಯೂಚುವಲ್ ಫಂಡ್, ಉಳಿತಾಯದಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದರೆ ನಿಮ್ಮ ಜೀವನ ಸುಂದರವಾಗುತ್ತದೆ.
ಎಲ್ಲಿ ಬೇಕು ಅಲ್ಲಿ ಹೂಡಿಯನ್ನು ಮಾಡಬೇಡಿ
ನೀವು ಹೂಡಿಕೆ ಮಾಡಬೇಕು ಎಮದುಕೊಂಡು ಸಿಕ್ಕ ಸಿಕ್ಕ ಕಡಯಲ್ಲಿ ಎಲ್ಲೂ ಹೂಡಿಕೆಯನ್ನು ಮಾಡುವುದಕ್ಕೆ ಹೋಗಬೇಡಿ. ಗಳಲ್ಲಿ ರಿಯಲ್ ಎಸ್ಟೇಟ್, ಕ್ರಿಪ್ಟೋಗೆ ಷೇರುಗಳಲ್ಲಿ ಹೂಡಿಕೆ ಮಾಡುವ ಬದಲು, ಚಿನ್ನ, ]ವಿವಿಧ ಆಸ್ತಿಗಳಲ್ಲಿ ನಿಮ್ಮ ಹೂಡಿಕೆಯನ್ನು ಮಾಡುವುದನ್ನು ಆರಂಭಿಸಿ.
ಹೂಡಿಕೆಗೆ ಉದ್ದೇಶ ಮುಖ್ಯ
ನಿಮ್ಮ ಹಣದ ಹೂಡಿಕೆ ಯಾವುದಕ್ಕೆ ಮುಖ್ಯ ಎಂದು ಯೋಜನೆ ಮಾಡುವುದು ಮುಖ್ಯವಾಗುತ್ತದೆ. ನಿಮ್ಮ ಹೂಡಿಕೆ ಮೊತ್ತ ಹೆಚ್ಚಳವಾದಂತೆ ಅದನ್ನು ವಿಸ್ತರಣೆ ಮಾಡಿ.ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಹೂಡಿಕೆ ಎಂದು ವಿಂಗಡಿಸಿ ಅಲ್ಲಿ ಹೂಡಿಕೆ ಮಾಡುತ್ತಾ ಹೋದರೆ ನಿಮ್ಮ ಹೂಡಿಕೆಗೆ ಹೆಚ್ಚಾಗುತ್ತದೆ.
ತುರ್ತು ನಿಧಿ ಇರವುದು ಮುಖ್ಯ
ವ್ಯಕ್ತಿ ಅಂದ ಮೇಲೆ ಒಂದೆಲ್ಲಾ ಒಂದು ತುರ್ತು ಸಮಸ್ಯೆಗಳು ಎದುರಾಗುತ್ತಲೇ ಇರುತ್ತದೆ.ಅದಕ್ಕಾಗಿ ವಿಮೆಗಳನ್ನು ಮಾಡಿಸಿಕೊಳ್ಳವದು ತುಂಬಾನೇ ಮುಖ್ಯ. ಕೆಲವೊಂದು ಮಂದಿ ಯಾವುದೇ ತುರ್ತು ನಿಧಿ ಅಥವಾ ಬ್ಯಾಕಪ್ ಹಣವಿಲ್ಲದೇ ಅನೇಕ ಜನರು ಆಕ್ರಮಣಕಾರಿಯಾಗಿ ಹೂಡಿಕೆ ಮಾಡುತ್ತಾರೆ. ಇದನ್ನು ಯಾವುದೇ ತುರ್ತು ಪರಿಸ್ಥಿತಿ ಬಂದಾಗ ಖರ್ಚುಗಳಿಗಾಗಿ ಹೂಡಿಕೆಯ ಹಣವನ್ನು ತೆಗೆಯುವುದು ಸೂಕ್ತವಲ್ಲ. ಬದಲಾಗಿ, ತುರ್ತು ಖರ್ಚುಗಳಿಗಾಗಿ ಹಣವನ್ನು ಮುಂಚಿತವಾಗಿ ಇಟ್ಟಿಕೊಳ್ಳವುದು ತುಂಬಾನೇ ಮುಖ್ಯ.
ತಡವಾಗಿ ಹೂಡಿಕೆಯನ್ನು ಶುರುಮಾಡಬೇಡಿ
ಕೊಲವೊಂದು ಮಂದಿ ಮದುಮೆಯಾಗಿ ಮಕ್ಕಳಾದ ನಂತರ ಹೂಡಿಕೆಯನ್ನು ಮಾಡಲು ಆರಂಭ ಮಾಡುತ್ತಾರೆ. ಆಗ ಹೂಡಿಕೆ ಮಾಡಿದ್ದಾರೆ ಯಾವುದೇ ಪ್ರಯೋಜನವಾಗುವುದಿಲ್ಲ. ಮೊದಲಿನಿಂದಲ್ಲಿ ಹಣವನ್ನು ಉಳಿಸುವಂತಹ ಪ್ರಯತ್ನವನ್ನು ಮಾಡಿ.


Click it and Unblock the Notifications