ಯಾವುದೇ ಅವಘಡ ಅಥವಾ ಆರೋಗ್ಯ ಸಮಸ್ಯೆಯಿಂದಾಗಿ ನಿಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಳ್ಳುವುದು ಬಹಳ ನೋವಿನ ಸಂಗತಿ. ಆದರೆ ಈ ಸಂದರ್ಭದಲ್ಲಿ ಹಾಗೂ ಈ ಸಂದರ್ಭ ಬರುವುದಕ್ಕೂ ಮೊದಲೇ ಕುಟುಂಬ ಸದಸ್ಯರು ತಮ್ಮ ಕುಟುಂಬ ಸದಸ್ಯರೆಲ್ಲರ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಹಾಗೆಯೇ ಏನೇ ಅವಘಢವಾದರೂ ಮುಂದೆ ಸಾಗಲೇ ಬೇಕಾಗುತ್ತದೆ.
ನೀವು ನಿಮ್ಮ ಮರಣದ ನಂತರ ನಿಮ್ಮ ಕುಟುಂಬ ಸದಸ್ಯರಿಗೆ ಯಾವುದೇ ತೊಂದರೆ ಉಂಟಾಗದಂತೆ ಎಲ್ಲಾ ವ್ಯವಹಾರವನ್ನು ಸರಿಯಾದ ರೀತಿಯಲ್ಲಿ ಮಾಡಿದ್ದರೆ, ಈ ಎಲ್ಲಾ ಮಾಹಿತಿಯನ್ನು ನೀವು ಮರಣ ಅಪ್ಪುವ ಮುನ್ನವೇ ನಿಮ್ಮ ಕುಟುಂಬ ಸದಸ್ಯರಿಗೆ ತಿಳಿಸಬೇಕು. ಇಲ್ಲವಾದರೆ ಮುಂದೆ ಇದರಿಂದಾಗಿ ಕುಟುಂಬ ಸದಸ್ಯರಿಗೆ ಆರ್ಥಿಕ ತೊಂದರೆಯಲ್ಲಿ ನಿಮ್ಮ ಉಳಿತಾಯ ಬಾಯಿಗೆ ಸಿಗದ ತುತ್ತಾಗಬಹುದು. ನೀವು ಯಾವ ತಜ್ಞರ ಜೊತೆ ನಿಮ್ಮ ಮರಣದ ನಂತರದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೀರಿಯೋ ಅವರ ಬಗ್ಗೆ ನಿಮ್ಮ ಕುಟುಂಬ ಸದಸ್ಯರು ಕೂಡಾ ತಿಳಿದಿರಬೇಕು. ಹಾಗೆಯೇ ನಿಮ್ಮ ಆರ್ಥಿಕ ವ್ಯವಹಾರದ ಬಗ್ಗೆ ಎಲ್ಲಾ ಮಾಹಿತಿಯನ್ನು ನೀವು ನಿಮ್ಮ ವಕೀಲರಿಗೆ ಆದರೂ ತಿಳಿಸಿರಬೇಕು.
ನೀವು ಈ ಬಗ್ಗೆ ವಿಲ್ ಬರೆಯುವುದು ಉತ್ತಮವಾದ ಆಯ್ಕೆಯಾಗಿದೆ. ಪ್ರತಿಯೊಬ್ಬ ಕುಟುಂಬ ಸದಸ್ಯರು ತಮ್ಮ ಕುಟುಂಬದವರ ಮಾಹಿತಿಯನ್ನು ತಿಳಿಯಲು ವಿಲ್ ಸಹಕಾರಿಯಾಗಿದೆ. ವಿಲ್ ಬರೆಯುವ ಮೂಲಕ ನಿಮ್ಮ ಮರಣದ ನಂತರ ನಿಮ್ಮ ಕುಟುಂಬಕ್ಕೆ ಯಾವೆಲ್ಲಾ ಆಸ್ತಿಯ ವಿಜಭನೆ ಮಾಡಲಿದೆ. ಯಾರಿಗೆ ಎಷ್ಟು ಪಾಲು? ಎಂಬುವುದನ್ನು ನೀವು ಮೊದಲೇ ಬರೆದಿಟ್ಟರೆ ನಿಮ್ಮ ಮರಣದ ನಂತರ ನಿಮ್ಮ ಕುಟುಂಬಸ್ಥರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಆದರೆ ನಿಮ್ಮ ಮರಣದ ನಂತರ ನಿಮ್ಮ ಸಂಪತ್ತನ್ನು ಪಡೆಯಲು ನಿಮ್ಮ ಕುಟುಂಬ ಸದಸ್ಯರು ಎಲ್ಲೆಲ್ಲಾ ಪರಿಶೀಲನೆ ನಡೆಸಬೇಕು? ನಿಮ್ಮ ಉಳಿತಾಯವನ್ನು ಅಥವಾ ಹಣವನ್ನು ನಿಮ್ಮ ಕುಟುಂಬ ಸದಸ್ಯರು ಪಡೆಯಲು ಸಾಧ್ಯವಾಗಬೇಕಾದರೆ ಕೆಲವೊಂದು ಮುಖ್ಯ ಅಂಶಗಳನ್ನು ನೀವು ಪರಿಗಣನೆಗೆ ತೆಗೆದುಕೊಳ್ಳಲೇಬೇಕು. ನಿಮ್ಮ ಹಣಕಾಸಿನ ಹಾಗೂ ಉಳಿತಾಯದ ಬಗ್ಗೆ ನಿಮ್ಮ ಕುಟುಂಬ ಸದಸ್ಯರಿಗೆ ತಿಳಿಯಲು ಸಾಧ್ಯವಾಗುವ ಪ್ರಮುಖ ದಾಖಲೆಗಳು ಅಥವಾ ವ್ಯಕ್ತಿಗಳು ಇದ್ದಾರೆ. ಅವುಗಳು ಯಾವುದು ಎಂದು ತಿಳಿಯಲು ಮುಂದೆ ಓದಿ...
ನಿಮ್ಮ ಕುಟುಂಬದ ಅಕೌಂಟೆಂಟ್‌ಗೆ ಮಾಹಿತಿ ನೀಡಿ
ಕೆಲವು ಕುಟುಂಬ ಸದಸ್ಯರು ತಮ್ಮದೇ ಕುಟುಂಬದ ಅಕೌಂಟೆಟ್ ಅಥವಾ ತೆರಿಗೆ ಬಗ್ಗೆ ಮಾಹಿತಿ ನೀಡುವ ವ್ಯಕ್ತಿಯನ್ನು ಹೊಂದಿರುತ್ತಾರೆ. ನೀವು ನಿಮ್ಮ ಮರಣಕ್ಕೂ ಮುನ್ನ ನಿಮ್ಮ ಅಕೌಂಟಟ್ ನಿಮ್ಮ ಆರ್ಥಿಕ ಮಾಹಿತಿಯನ್ನು ನೀಡಿದರೆ ಇದು ನಿಮ್ಮ ಮರಣದ ನಂತರ ನಿಮ್ಮ ಕುಟುಂಬಕ್ಕೆ ಸಹಕಾರಿಯಾಗಲಿದೆ. ನಿಮ್ಮ ಮರಣದ ನಂತರ ನಿಮ್ಮ ಸಂಪತ್ತನ್ನು ನಿಮ್ಮ ಪತ್ನಿ ಮಕ್ಕಳಿಗೆ ಹಂಚಿದರೂ ಕೂಡಾ ನಿಮ್ಮ ಸಾಲ ಯಾವುದಾದರೂ ಬಾಕಿ ಇದ್ದರೆ ಆ ಬಗ್ಗೆ ನಿಮ್ಮ ಕುಟುಂಬಕ್ಕೆ ಈ ಅಕೌಂಟೆಂಟ್ ಅಥವಾ ಸಲಹೆಗಾರರ ಮೂಲಕ ತಿಳಿಸುವುದು ಉತ್ತಮ.
ಆರ್ಥಿಕ ಸಲಹೆಗಾರರಿಗೆ ನಿಮ್ಮ ಆರ್ಥಿಕತೆಯ ಮಾಹಿತಿ ನೀಡಿ
ಹಲವು ಮಂದಿ ತಮ್ಮ ಎಲ್ಲಾ ಆರ್ಥಿಕ ಹೂಡಿಕೆಯ ಬಗ್ಗೆ ಲೆಕ್ಕಾಚಾರ ಮಾಡಲು ಹಾಗೂ ತಾವು ಯಾವ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕು ಎಂದು ತಿಳಿಯಲು ತಮ್ಮ ಆರ್ಥಿಕ ಸಲಹೆಗಾರರ ಬಳಿ ಮಾಹಿತಿ ಪಡೆಯುತ್ತಾರೆ. ಆರ್ಥಿಕ ಸಲಹೆಗಾರರ ಜೊತೆ ಚರ್ಚೆ ನಡೆಸಿ ಹೂಡಿಕೆ ಮಾಡುತ್ತಾರೆ. ಈ ಹಿನ್ನೆಲೆ ನೀವು ನಿಮ್ಮ ಆರ್ಥಿಕ ಸಲಹೆಗಾರರಿಗೆ ಮಾಹಿತಿ ನೀಡಿರಬೇಕು. ಇನ್ನು ನಿಮ್ಮ ಕುಟುಂಬ ಸದಸ್ಯರು ನಿಮ್ಮೆ ಆರ್ಥಿಕ ಸಲಹೆಗಾರರಿಂದ ನಿಮ್ಮ ಆರ್ಥಿಕ ವ್ಯವಹಾರದ ಮಾಹಿತಿಯನ್ನು ಪಡೆಯಬಹುದು. ನೀವು ನಿಮ್ಮ ಆರ್ಥಿಕ ಸಲಹೆಗಾರರಿಗೆ ನಿಮ್ಮ ಉಳಿತಾಯ ಮೊದಲಾದವುಗಳ ಬಗ್ಗೆ ತಿಳಿಸಿರುವುದು ಅತೀ ಅಗತ್ಯ. ಏಕೆಂದರೆ ನಿಮ್ಮ ಆರ್ಥಿಕ ಸಲಹೆಗಾರರು ಈ ಮಾಹಿತಿಯನ್ನು ನಿಮ್ಮ ಕುಟುಂಬಸ್ಥರಿಗೆ ತಿಳಿಸಲು ಸಾಧ್ಯವಾಗುತ್ತದೆ. ನಿಮ್ಮ ಹೂಡಿಕೆಯು ನಿಮ್ಮ ನಂತರ ಯಾರಿಗೆ ಸೇರಲಿದೆ ಎಂಬುವುದು ಕೂಡಾ ನಿಮ್ಮ ಕುಟುಂಬ ಸದಸ್ಯರಿಗೆ ನೀವು ತಿಳಿಸಿರಬೇಕು.
ವಿಮೆ ಏಜೆಂಟ್ ಬಳಿ ಕುಟುಂಬ ಸದಸ್ಯರು ಮಾಹಿತಿ ಪಡೆಯಬಹುದು
ನೀವು ಯಾವುದಾದರೂ ಆರೋಗ್ಯ ವಿಮೆಯನ್ನು ಮಾಡಿಸಿಕೊಂಡಿರಬಹುದು. ಈ ಆರೋಗ್ಯ ವಿಮೆಯನ್ನು ನೀವು ಏಜೆಂಟ್ ಮೂಲಕವೇ ಮಾಡಿಸಿಕೊಂಡಿರುತ್ತೀರಿ. ನೀವು ಸಾವನ್ನಪ್ಪಿದರೆ ಅಥವಾ ಯಾವುದಾದರೂ ಆರೋಗ್ಯ ಸಮಸ್ಯೆಗೆ ಒಳಗಾದರೆ ನಿಮ್ಮ ಕುಟುಂಬ ಸದಸ್ಯರಿಗೆ ಆಸ್ಪತ್ರೆಯ ಬಿಲ್ ಪಾವತಿ ಮಾಡಲು ಹಣದ ಅಗತ್ಯವಿರುತ್ತದೆ ಅಥವಾ ಜೀವ ವಿಮೆ ಆದರೆ ನಿಮ್ಮ ಕುಟುಂಬದ ನಾಮಿನಿಗೆ ಇದರ ಹಣ ದೊರೆಯಲಿದೆ. ಈ ಹಿನ್ನೆಲೆ ನೀವು ನಿಮ್ಮ ವಿಮೆ ಏಜೆಂಟ್ ಬಗ್ಗೆಯೂ ನಿಮ್ಮ ಕುಟುಂಬ ಸದಸ್ಯರಿಗೆ ಮಾಹಿತಿ ನೀಡುವುದು ಉತ್ತಮ. ನಿಮ್ಮ ಕುಟುಂಬ ಸದಸ್ಯರು ನಿಮ್ಮೆ ವಿಮೆ ಏಜೆಂಟ್ ರನ್ನು ಸಂಪರ್ಕ ಮಾಡಿ ನಿಮ್ಮೆವಿಮೆಯ ಬಗ್ಗೆ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ.
ಸ್ಟಾಕ್ ಬ್ರೋಕರ್ ಕೂಡಾ ಮಾಹಿತಿ ನೀಡಬಲ್ಲರು
ಹಲವಾರು ಮಂದಿ ತಮ್ಮ ಜೀವನದುದ್ದಕ್ಕೂ ಸ್ಟಾಕ್ ಅಥವಾ ಷೇರು ಅನ್ನು ಖರೀದಿ ಹಾಗೂ ಮಾರಾಟ ಮಾಡುತ್ತಲ್ಲೇ ಇರುತ್ತಾರೆ. ಪ್ರಸ್ತುತ ಆನ್‌ಲೈನ್ ಮೂಲಕ ಸ್ಟಾಕ್ ಅಥವಾ ಷೇರುಗಳನ್ನು ಖರೀದಿ ಮಾಡುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಏನೇ ಆದರೂ ನಿಮ್ಮ ಸ್ಟಾಕ್ ಬ್ರೋಕರ್ ಬಗ್ಗೆ ಮಾಹಿತಿಯನ್ನು ನಿಮ್ಮ ಕುಟುಂಬಕ್ಕೆ ನೀಡುವುದು ಉತ್ತಮ. ಹಾಗೆಯೇ ನಿಮ್ಮ ಸ್ಟಾಕ್ ಬ್ರೋಕರ್ ಬಗ್ಗೆ ಮಾಹಿತಿಯನ್ನು ನಿಮ್ಮ ಡೈರಿ ಅಥವಾ ಕುಟುಂಬಸ್ಥರಿಗೆ ಲಭಿಸುವಂತೆ ಬರೆದಿಡುವುದು ಉತ್ತಮ. ನಿಮ್ಮ ಆರ್ಥಿಕ ಸಲಹೆಗಾರರ ಮಾಹಿತಿಯನ್ನು ನಿಮ್ಮ ಕುಟುಂಬ ಸದಸ್ಯರಿಗೆ ನೀಡುವುದು ಎಷ್ಟು ಮುಖ್ಯವೋ ನಿಮ್ಮ ಹೂಡಿಕೆಯ ಸ್ಟಾಕ್ ಬ್ರೋಕರ್ ಬಗ್ಗೆ ಮಾಹಿತಿ ನೀಡುವುದು ಕೂಡಾ ಅಷ್ಟೇ ಮುಖ್ಯ.
ವಕೀಲರ ಬಗ್ಗೆ ಮಾಹಿತಿ ಅಗತ್ಯ
ಯಾವುದಾದರೂ ಕಾನೂನು ತೊಡಕುಗಳು ನೀವು ಜೀವಂತವಾಗಿರುವ ಸಂದರ್ಭದಲ್ಲೇ ಪರಿಹಾರವಾಗಿದ್ದರೂ ಕೂಡಾ ನಿಮ್ಮ ವಕೀಲರ ಮಾಹಿತಿಯನ್ನು ನಿಮ್ಮ ಕುಟುಂಬಕ್ಕೆ ನೀಡುವುದು ಮುಖ್ಯ. ನಿಮ್ಮ ಮರಣದ ನಂತರ ಯಾವುದೇ ಕಾನೂನು ತೊಡಕು ಉಂಟಾದರೂ ಈ ಕಾನೂನು ವಿಚಾರದ ಸರಿಯಾಗಿ ಮಾಹಿತಿ ಇರುವ ವಕೀಲರು ಬೇಕಾಗುತ್ತಾರೆ. ಬೇರೆ ವಕೀಲರು ಈ ಬಗ್ಗೆ ಮಾಹಿತಿ ಪಡೆದು ನಿರ್ವಹಣೆ ಮಾಡಬಲ್ಲರು, ಆದರೆ ಈ ಕಾನೂನು ವಿಚಾರವನ್ನು ಈ ಹಿಂದೆ ಪರಿಹರಿಸಿದ್ದ ವಕೀಲರಿಗೆ ಈ ಬಗ್ಗೆ ಅಧಿಕ ಮಾಹಿತಿ ಇರುತ್ತದೆ. ಇನ್ನು ನಿಮ್ಮ ಯಾವುದೇ ಕಾನೂನು ವಿಚಾರಗಳು ಇನ್ನೂ ಇತ್ಯರ್ಥವಾಗಿರದಿದ್ದರೆ ಈ ಬಗ್ಗೆ ನಿಮ್ಮ ವಕೀಲರಿಗೆ ಮಾಹಿತಿ ಇರುವ ಹಿನ್ನೆಲೆ ನಿಮ್ಮ ವಕೀಲರ ಎಲ್ಲಾ ಮಾಹಿತಿಯನ್ನು ನಿಮ್ಮ ಕುಟುಂಬ ಸದಸ್ಯರಿಗೆ ನೀವು ನೀಡಬೇಕು.
ನಿಮ್ಮ ಎಲ್ಲಾ ದಾಖಲೆಗಳನ್ನು ಒಟ್ಟಾಗಿ ಇರಿಸಿಕೊಳ್ಳಿ
ನೀವು ನಿಮ್ಮ ಎಲ್ಲಾ ದಾಖಲೆಗಳನ್ನು ಒಟ್ಟಾಗಿ ಇರಿಸಿಕೊಳ್ಳಬೇಕು. ನಿಮ್ಮ ಕುಟುಂಬ ಸದಸ್ಯರಿಗೆ ಸುಳಭವಾಗಿ ಲಭಿಸುವ ಸ್ಥಳದಲ್ಲಿ ನಿಮ್ಮ ಎಲ್ಲಾ ದಾಖಲೆಗಳನ್ನು ಇರಿಸಿಕೊಳ್ಳಿ ಹಾಗೂ ಮೂಲ ದಾಖಲೆಯನ್ನು ನೀವು ನಿಮ್ಮ ದಾಖಲೆ ಪಟ್ಟಿಯಲ್ಲಿ ಇರಿಸಿಕೊಳ್ಳಿ. ನಿಮ್ಮ ಒರಿಜಿನಲ್ ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್‌ಗಳನ್ನು ನೀವು ನಿಮ್ಮ ದಾಖಲೆಯನ್ನೆಲ್ಲಾ ಸಂಗ್ರಹಿಸಿರುವ ಜಾಗದಲ್ಲೇ ಇರಿಸಿಕೊಳ್ಳಿ. ಫೈಲ್ ಮಾಡಿಕೊಳ್ಳಿ. ಇದು ಸುರಕ್ಷಿತವಾಗಿದೆ ಎಂಬುವುದನ್ನು ಖಾತರಿ ಪಡಿಸಿಕೊಳ್ಳಿ. ಹಾಗೆಯೇ ಈ ಬಗ್ಗೆ ನಿಮ್ಮ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿ. ಇನ್ನು ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್‌ಗಳು ಬಹಳ ಮುಖ್ಯವಾದ ದಾಖಲೆಗಳು ಆಗಿದೆ. ಆದ್ದರಿಂದ ಇದನ್ನು ಜಾಗರೂಕತೆಯಿಂದ ಇರಿಸಿಕೊಳ್ಳಿ.
ಕ್ರೆಡಿಟ್/ ಡೆಬಿಟ್ ಕಾರ್ಡ್ ಸುರಕ್ಷಿತವಾಗಿರಲಿ
ನೀವು ನಿಮ್ಮಲ್ಲಿ ಇರುವ ಎಲ್ಲಾ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್‌ಗಳ ಬಗ್ಗೆ ಪಟ್ಟಿಯನ್ನು ಮಾಡಿಟ್ಟುಕೊಳ್ಳಿ. ಯಾಕೆಂದರೆ ವ್ಯಕ್ತಿಯು ಸಾವನ್ನಪ್ಪಿದ ನಂತರ ಕ್ರೆಡಿಟ್ ಕಾರ್ಡ್ ಅನ್ನು ಎಂದಿಗೂ ನಾವು ವಾಪಾಸ್ ನೀಡಲೇಬೇಕು. ನಿಮ್ಮ ಕ್ರೆಡಿಟ್ ಕಾರ್ಡ್ ನಿಮ್ಮ ಕುಟುಂಬಸ್ಥರಿಗೆ ದೊರೆಯದಿದ್ದರೂ ಬ್ಯಾಂಕಿನ ಮಾಹಿತಿ ಅವರಲ್ಲಿ ಇದ್ದರೆ ಆ ಕ್ರೆಡಿಟ್ ಕಾರ್ಡ್ ಅನ್ನು ಬ್ಲಾಕ್ ಮಾಡಬಹುದು. ಎಟಿಎಂ ಕಾರ್ಡ್‌ಗಳನ್ನು ಕೂಡಾ ವ್ಯಕ್ತಿಯ ಮರಣದ ನಂತರ ವಾಪಾಸ್ ನೀಡಬೇಕು. ಒಂದು ವೇಳೆ ಯಾರಿಗಾದರು ಈ ಕಾರ್ಡ್‌ಗಳು ದೊರೆತರೆ ನಿಮ್ಮ ಮರಣದ ನಂತರವು ಮಿಸ್ ಯೂಸ್ ಆಗಬಹುದು. ಆದ್ದರಿಂದ ನಿಮ್ಮ ಕಾರ್ಡ್‌ಗಳನ್ನು ಕುಟುಂಬ ಸದಸ್ಯರಿಗೆ ನೀಡದಿದ್ದರೂ ಬ್ಯಾಂಕಿನ ಮಾಹಿತಿಯನ್ನು ನೀಡಿ.
More From GoodReturns

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ, ಈಗ ಎಲ್ಲಿ ಹೂಡಿಕೆ ಮಾಡಬೇಕು?

SIP ಹೂಡಿಕೆ ದಾಖಲೆ: ನಿಮ್ಮ ಹಣ ಸುರಕ್ಷಿತವಾಗಿದೆಯೇ?

ಚಿನ್ನದ ಬೆಲೆ ಏರಿಳಿತ: ಹೂಡಿಕೆದಾರರಿಗೆ ಈಗ ಸುವರ್ಣಾವಕಾಶವೇ?

SBI ಕ್ಯಾಶ್ಬ್ಯಾಕ್ ಕಾರ್ಡ್ ಬಳಕೆದಾರರೇ, ನಿಮ್ಮ ಹಣಕ್ಕೆ ಕುತ್ತು ಬಂದಿದೆ!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಬ್ಯಾಂಕ್ ರಜೆ ಇದ್ದರೂ ನಿಮ್ಮ ಹಣಕಾಸಿನ ವ್ಯವಹಾರ ಸುಗಮವಾಗಿ ನಡೆಸುವುದು ಹೇಗೆ?

ಚಿನ್ನದ ಹೂಡಿಕೆ: ಗೊಂದಲ ಬಿಡಿ, ಈ ದಾರಿ ಬೆಸ್ಟ್!

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆಯಲ್ಲಿ ಲಾಭ ಗಳಿಸುವುದು ಹೇಗೆ?

ಷೇರು ಮಾರುಕಟ್ಟೆ ಏರಿಳಿತ: ಇಂದಿನ ಹೂಡಿಕೆದಾರರ ಆತಂಕವೇನು?

ಷೇರು ಮಾರುಕಟ್ಟೆ ಇಂದು ಭರ್ಜರಿ ಏರಿಕೆಯ ನಿರೀಕ್ಷೆ: ಹೂಡಿಕೆದಾರರೇ ಎಚ್ಚರ!



Click it and Unblock the Notifications