ಉಳಿತಾಯ (Savings) ಮಾಡೋದು ಹಲವರ ಕನಸು. ಆದರೆ ಕೆಲವರಿಗೆ ಎಷ್ಟೇ ಸಂಪಾದಿಸಿದ್ರೂ ಉಳಿತಾಯ ಮಾಡೋಕೆ ಆಗೋದೆ ಇಲ್ಲ. ಇನ್ನೂ ಕೆಲವರು ಕಡಿಮೆ ಸಂಬಳ ಇದ್ರೂ ಹೆಂಗಾದ್ರೂ ಮಾಡಿ, ಕಷ್ಟಪಟ್ಟು ಸಂಪಾದನೆ ಮಾಡಿದ ಹಣದಲ್ಲಿ ಸೇವಿಂಗ್ಸ್ ಮಾಡುತ್ತಾರೆ. ಆದ್ರೆ ಇದೀಗ ಆರ್‌ಬಿಐ ರೆಪೋ ದರ ಕಡಿತಗೊಳಿಸಿದ (RBI Repo Rate) ನಂತರ, ಹೂಡಿಕೆದಾರರಿಗೂ ಹಲವು ಪ್ರಶ್ನೆಗಳು ಹುಟ್ಟಿದೆ. ಅದರಲ್ಲೂ ಫಿಕ್ಸೆಡ್ ಡೆಪಾಸಿಟ್‌ಗೆ (Fixed Deposit) ಯಾವ ಬ್ಯಾಂಕ್‌ನಲ್ಲಿ ಹಣ ಹೂಡಿಕೆ (Money Investment) ಮಾಡಿದ್ರೆ ಉತ್ತಮ ಎಂಬುದು ಹಲವರ ಪ್ರಶ್ನೆ. ಇದಕ್ಕೆ ಉತ್ತರ ಈ ಲೇಖನದಲ್ಲಿದೆ ಓದಿ.

ನಿಮ್ಮ ಉಳಿತಾಯವನ್ನು ಸ್ಥಿರ ಠೇವಣಿ (FD) ಖಾತೆಯಲ್ಲಿ ಹೂಡಿಕೆ ಮಾಡುವ ಮುನ್ನ, ವಿವಿಧ ಬ್ಯಾಂಕುಗಳು ನೀಡುವ ಬಡ್ಡಿದರಗಳನ್ನು ತಿಳಿದುಕೊಳ್ಳುವುದು ಬಹಳ ಅತ್ಯಗತ್ಯ. ಸಾಮಾನ್ಯವಾಗಿ, 3 ವರ್ಷಗಳ ಅವಧಿಯ ಸ್ಥಿರ ಠೇವಣಿಗಳ ಮೇಲೆ ವಾರ್ಷಿಕವಾಗಿ ಸಾಮಾನ್ಯ ಅಂದರೆ 6% ರಿಂದ 6.75% ರಷ್ಟು ಬಡ್ಡಿದರಗಳು ಲಭ್ಯ. ಇನ್ನು ದೀರ್ಘಾವಧಿಯ FD ಹೂಡಿಕೆಗೆ ಅಲ್ಪಾವಧಿ ಹೂಡಿಕೆಗೆ ಹೋಲಿಸಿದ್ರೆ, ಹೆಚ್ಚಿನ ಆದಾಯ ನೀಡುತ್ತವೆ ಎಂಬುದನ್ನು ತಿಳಿಯಬೇಕಾದ ವಿಷಯ. ಆದರೆ ಎಲ್ಲಾ ಬ್ಯಾಂಕುಗಳಲ್ಲಿ ಇದು ಅನ್ವಯವಾಗುವುದಿಲ್ಲ.
ಉದಾಹರಣೆಗೆ, ಹೆಚ್ಚಿನ ಬ್ಯಾಂಕುಗಳು 1 ವರ್ಷದ ಅವಧಿಯ FD ಗಳಿಗಿಂತ 3 ವರ್ಷಗಳ FD ಗಳಿಗೆ ಉತ್ತಮ ಬಡ್ಡಿಯನ್ನು ನೀಡುತ್ತದೆ. ಯಾವುದೇ ಬ್ಯಾಂಕ್‌ನಲ್ಲಿ ನೀಡುವ ಬಡ್ಡಿದರದಲ್ಲಿನ ಕೇವಲ 50 ಬೇಸಿಸ್ ಪಾಯಿಂಟ್‌ಗಳ (bps) ಸಣ್ಣ ವ್ಯತ್ಯಾಸವೂ ನೀವು ಪಡೆಯುವ ಆದಾಯದ ಮೇಲೆ ಗಣನೀಯ ಪರಿಣಾಮ ಬೀರಬಹುದು. ಅಂದರೆ ₹10 ಲಕ್ಷವನ್ನು FD ಯಲ್ಲಿ ಹೂಡಿಕೆ ಮಾಡಿದಾಗ, 50 bps ಹೆಚ್ಚು ಬಡ್ಡಿ ನೀಡುವ ಬ್ಯಾಂಕ್ 3 ವರ್ಷಗಳ ಅವಧಿಯಲ್ಲಿ ₹15,000ಕ್ಕಿಂತಲೂ ಹೆಚ್ಚುವರಿ ಉಳಿತಾಯಕ್ಕೆ ಕಾರಣವಾಗುತ್ತದೆ.
ಖಾಸಗಿ ಬ್ಯಾಂಕುಗಳು:
ಖಾಸಗಿ ಬ್ಯಾಂಕುಗಳ ಪಟ್ಟಿಯಲ್ಲಿ, ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ HDFC, 3 ವರ್ಷಗಳ ಸ್ಥಿರ ಠೇವಣಿಗಳ ಮೇಲೆ ತನ್ನ ಸಾಮಾನ್ಯ ಠೇವಣಿದಾರರಿಗೆ 6.45% ಮತ್ತು ಹಿರಿಯ ನಾಗರಿಕರಿಗೆ 6.95% ಬಡ್ಡಿದರ ನೀಡುತ್ತದೆ. ಇನ್ನು ICICI ಬ್ಯಾಂಕ್, ಮತ್ತೊಂದು ಪ್ರಮುಖ ಖಾಸಗಿ ಬ್ಯಾಂಕ್ ಆಗಿ ಗುರುತಿಸಿಕೊಂಡಿದ್ದು, ಇದು 3 ವರ್ಷಗಳ FD ಗಳಿಗೆ ಸಾಮಾನ್ಯ ನಾಗರಿಕರಿಗೆ 6.45% ಮತ್ತು ಹಿರಿಯ ನಾಗರಿಕರಿಗೆ 6.95% ಬಡ್ಡಿದರವನ್ನು ಒದಗಿಸುತ್ತದೆ.
ಕೋಟಕ ಮಹೀಂದ್ರಾ ಬ್ಯಾಂಕ್ ಕೂಡಾ ಒಂದು ಪ್ರಮುಖ ಖಾಸಗಿ ಬ್ಯಾಂಕ್ ಆಗಿದೆ. 3 ವರ್ಷಗಳ ಅವಧಿಗೆ ಸಾಮಾನ್ಯ ನಾಗರಿಕರಿಗೆ 6.4% ಮತ್ತು ಹಿರಿಯ ನಾಗರಿಕರಿಗೆ 6.9% ಬಡ್ಡಿದರ ನೀಡುತ್ತದೆ. ಫೆಡರಲ್ ಬ್ಯಾಂಕ್‌ನ ಇತ್ತೀಚಿನ ದರಗಳು ಜನವರಿ 1, 2026 ರಿಂದ ಜಾರಿಗೊಂಡಿದ್ದು, ಈ ಖಾಸಗಿ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ 6.75% ಮತ್ತು ಹಿರಿಯ ನಾಗರಿಕರಿಗೆ 7.25% FD ಬಡ್ಡಿದರವನ್ನು 3 ವರ್ಷಗಳಿಗೆ ಆದಾಯವನ್ನು ನೀಡುತ್ತದೆ.
ಸಾರ್ವಜನಿಕ ವಲಯದ ಬ್ಯಾಂಕುಗಳು:
ಸಾರ್ವಜನಿಕ ವಲಯದ ಬ್ಯಾಂಕುಗಳ ವಿಚಾರಕ್ಕೆ ಬಂದರೆ, ಭಾರತದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ 3 ವರ್ಷಗಳ FD ಗಳ ಮೇಲೆ ಸಾಮಾನ್ಯ ನಾಗರಿಕರಿಗೆ 6.3% ಮತ್ತು ಹಿರಿಯ ನಾಗರಿಕರಿಗೆ 6.8% ಬಡ್ಡಿದರ ನೀಡುತ್ತದೆ. ಈ ಮೂಲಕ ಗ್ರಾಹಕರು ಹೆಚ್ಚಿನ ಆದಾಯ ಪಡೆಯಬಹುದು.
ಇನ್ನೊಂದು ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಆದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಡಿಸೆಂಬರ್ 5, 2025 ರ ದರಗಳ ಪ್ರಕಾರ, ಸಾಮಾನ್ಯ ನಾಗರಿಕರಿಗೆ 6% ಮತ್ತು ಹಿರಿಯ ನಾಗರಿಕರಿಗೆ 6.5% ಬಡ್ಡಿದರವನ್ನು 3 ವರ್ಷಗಳ FDಯಲ್ಲಿ ಹೂಡಿಕೆ ಮಾಡಿದರೆ, ಉತ್ತಮ ಆದಾಯ ಗಳಿಸಬಹುದು. ಇನ್ನು ಕೆನರಾ ಬ್ಯಾಂಕ್, ಜನವರಿ 5, 2026 ರಿಂದ ಜಾರಿಗೆ ಬಂದ ಬಡ್ಡಿದರದ ವಿವರದಂತೆ, ಸಾಮಾನ್ಯ ನಾಗರಿಕರಿಗೆ 6.25% ಮತ್ತು ಹಿರಿಯ ನಾಗರಿಕರಿಗೆ 6.75% ಬಡ್ಡಿದರವನ್ನು 3 ವರ್ಷಗಳ ಅವಧಿಗೆ ನೀಡುತ್ತದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications