ನಮ್ಮ ಗುರಿಗಳನ್ನು, ಕನಸುಗಳನ್ನು ಸಾಧಿಸಲು ಮತ್ತು ನಮ್ಮ ಆರ್ಥಿಕ ಭವಿಷ್ಯವನ್ನು ಸುರಕ್ಷಿತವಾಗಿಸಲು ಹೂಡಿಕೆ ಮಾಡುವುದು ಬುದ್ಧಿವಂತಿಕೆಯಾಗಿದೆ. ಮಾತ್ರವಲ್ಲದೇ ಇಂದಿನ ಕಾಲಘಟ್ಟದಲ್ಲಿ, ಹೂಡಿಕೆಗಳು ಅತ್ಯಗತ್ಯವಾಗಿದೆ. ಏಕೆಂದರೆ ಆರಾಮದಾಯಕ ಜೀವನಶೈಲಿಯನ್ನು ನಡೆಸಲು ಅಥವಾ ಕನಸುಗಳು ಮತ್ತು ಗುರಿ ಮುಟ್ಟಲು ವೇತನಕ್ಕಾಗಿ ಶ್ರಮಿಸುವುದು ಮಾತ್ರ ಸಾಲುವುದಿಲ್ಲ, ಹೂಡಿಕೆಯೂ ಮುಖ್ಯವಾಗುತ್ತದೆ.
ಹೂಡಿಕೆಯ ವಿಷಯಕ್ಕೆ ಬಂದರೆ ಯಾವುದು ಸೂಕ್ತ ಎಂಬ ಪ್ರಶ್ನೆಗಳು ಕಾಡುವುದು ಸಹಜ. ಹೆಚ್ಚುತ್ತಿರುವ ಹಣದುಬ್ಬರದ ನಡುವೆ ಸುರಕ್ಷಿತ ಹೂಡಿಕೆಗಳಲ್ಲಿ ರಿಯಲ್ ಎಸ್ಟೇಟ್ ಕೂಡಾ ಒಂದಾಗಿದೆ. ವಿವಿಧ ರೀತಿಯ ಹೂಡಿಕೆ ಪರ್ಯಾಯಗಳು ನಮ್ಮ ಮುಂದಿರುವಾಗ ರಿಯಲ್ ಎಸ್ಟೇಟ್ ಅನ್ನು ಕೆಲವೊಮ್ಮೆ ಕಡಿಮೆ ಮೌಲ್ಯೀಕರಿಸಲಾಗುತ್ತದೆ ಅಥವಾ ನಿರ್ಲಕ್ಷಿಸಲಾಗುತ್ತದೆ.

ಅದರೂ, ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದು ಸಾಕಷ್ಟು ಲಾಭದಾಯಕವಾಗಿದೆ. ಇದು ನಮಗೆ ಸ್ಥಿರವಾದ ಆದಾಯದ ಸ್ಟ್ರೀಮ್, ಬಂಡವಾಳ ಲಾಭಗಳು ಮತ್ತು ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ. ಹೀಗಾಗಿ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವ ಮೊದಲು ಈ ಐದು ಸಲಹೆಗಳನ್ನು ಅನುಸರಿಸುವುದು ಉತ್ತಮ.
ಸರಿಯಾದ ರಿಸರ್ಚ್ ಮಾಡುವುದು ಅಗತ್ಯ
ಇಂದು ಆಸ್ತಿಯನ್ನು ಖರೀದಿಸುವ ಮೊದಲು ಸೂಕ್ತವಾದ ರಿಸರ್ಚ್ ಅತ್ಯಗತ್ಯ. ಒದಗಿಸಿರುವ ಸೌಲಭ್ಯಗಳು,ಕಟ್ಟಡ ನಿರ್ಮಾಣ ಮಾಡಿರುವ ಕಂಪನಿಯ ಟ್ರ್ಯಾಕ್ ರೆಕಾರ್ಡ್, ಇದಕ್ಕೆ ಬಳಸಿದ ವಸ್ತುಗಳು ಮತ್ತು ಮನೆ ಅಥವಾ ಆಸ್ತಿಯ ನೆರೆಹೊರೆಯ ಪ್ರದೇಶ/ ಕಟ್ಟಡಗಳು ನಿಮ್ಮ ಹೂಡಿಕೆಯ ಮೇಲಿನ ಆದಾಯದ ಮೇಲೆ ಪರಿಣಾಮ ಬೀರಬಹುದು. ಇದಕ್ಕಾಗಿ ಈ ಎಲ್ಲಾ ಅಂಶಗಳನ್ನು ನೀವು ಎಲ್ಲವನ್ನೂ ಪರಿಶೀಲಿಸಬೇಕು. ಪ್ರಾಪರ್ಟಿಯನ್ನು ಆಯ್ಕೆ ಮಾಡುವಾಗ, ನಿಮ್ಮ ರಿಸರ್ಚ್ ಪ್ರಕಾರ ನೀವು ಹಣಕಾಸಿನ ಯೋಜನೆಯನ್ನು ಸಹ ಸಿದ್ಧಪಡಿಸಬೇಕು ಇದೆಲ್ಲವೂ ರೆಡಿ ಆದ ಬಳಿಕ ಮಾತ್ರ ನಿಮ್ಮ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು.
ಮಾರ್ಕೆಟ್‌ನಲ್ಲಿರುವ ರೇಟ್ ಪರಿಶೀಲಿಸಿ
ಸ್ಥಳೀಯ ಸರ್ಕಾರಗಳು ಹೆಚ್ಚಾಗಿ ಆಸ್ತಿಯ ದರವನ್ನು ನಿರ್ಧರಿಸುವಲ್ಲಿ ಹೂಡಿಕೆದಾರರಿಗೆ ಸಹಾಯ ಮಾಡಲು ಮಾರ್ಗದರ್ಶಿ ಮೌಲ್ಯವನ್ನು ನೀಡುತ್ತವೆ. ಇನ್ನು ಮಾರ್ಕೆಟ್ ನಲ್ಲಿರುವ ರೇಟ್ ಸಹಾಯದಿಂದ ನೆರೆಹೊರೆಯ ಸ್ಥಳಗಳಲ್ಲಿ ಇರುವ ಟ್ರೆಂಡ್‌ಗಳನ್ನು ಟ್ರ್ಯಾಕ್ ಮಾಡುವ ಮೂಲಕ, ಮನೆಗೆ ಮೌಲ್ಯಕ್ಕಿಂತ ಹೆಚ್ಚಿನ ಹಣವನ್ನು ಪಾವತಿಸುವಂತೆ ಆಗುವ ಮೋಸದಿಂದ ನೀವು ತಪ್ಪಿಸಿಕೊಳ್ಳಬಹುದು. ಮಾರ್ಕೆಟ್ ನಲ್ಲಿರುವ ರೇಟ್ ಅಧ್ಯಯನ ಮಾಡುವ ಮೂಲಕ ಟ್ರೆಂಡ್‌ಗಳನ್ನು ಕಂಡುಹಿಡಿಯಬಹುದಾಗಿದ್ದು ಈ ಮೂಲಕ ಭವಿಷ್ಯದಲ್ಲಿ ನೀವು ನಿರೀಕ್ಷಿಸಬಹುದಾದ ಲಾಭವನ್ನು ನೀವು ಊಹೆ ಮಾಡಬಹುದಾಗಿದೆ.
ರಿಯಲ್ ಎಸ್ಟೇಟ್ ಇನ್ವೆಸ್ಟ್ಮೆಂಟ್ ಟ್ರಸ್ಟ್‌ಗಳು (REIT)
ರಿಯಲ್ ಎಸ್ಟೇಟ್ ಇನ್ವೆಸ್ಟ್ಮೆಂಟ್ ಟ್ರಸ್ಟ್‌ಗಳು (REIT ಗಳು) ಹೂಡಿಕೆದಾರರಿಗೆ ಲಾಭವನ್ನು ಗಳಿಸಲು ಹೂಡಿಕೆ ಮಾಡಲು ಅನುವು ಮಾಡಿಕೊಡುವ ಫಂಡ್ ಗಳ ರಚನೆಯಲ್ಲಿ ತೊಡಗಿಕೊಂಡಿವೆ. ಲಾಭದಾಯಕ ಹೂಡಿಕೆಗಳಲ್ಲಿ ತೊಡಗಿಸಿಕೊಳ್ಳಲು REIT ಗಳು ಅತ್ಯುತ್ತಮ ಅವಕಾಶವನ್ನು ನೀಡುತ್ತವೆ. ಇಲ್ಲಿ ಹೂಡಿಕೆದಾರರು REIT ಷೇರುಗಳನ್ನು ಖರೀದಿಸುತ್ತಾರೆ ಮತ್ತು ಪ್ರಾಪರ್ಟಿಯಿಂದ ಉತ್ಪತ್ತಿಯಾಗುವ ಆದಾಯದಲ್ಲಿ ಪ್ರಮಾಣಾನುಗುಣವಾಗಿ ಹಂಚಿಕೊಳ್ಳಬೇಕಾಗುತ್ತದೆ. ರಿಯಲ್ ಎಸ್ಟೇಟ್ ಅನ್ನು ಸಂಪೂರ್ಣವಾಗಿ ಖರೀದಿಸುವುದಕ್ಕೆ ಹೋಲಿಸಿದರೆ, REIT ಗಳು ಬಹಳಷ್ಟು ಪ್ರಯೋಜನಗಳನ್ನು ಒದಗಿಸುತ್ತವೆ. REIT ಗಳು ನೇರ ರಿಯಲ್ ಎಸ್ಟೇಟ್ ಹೂಡಿಕೆಗಳಿಗಿಂತ ಕಡಿಮೆ ರಿಸ್ಕ್ ನ್ನು ಹೊಂದಿರುತ್ತದೆ.
ರಿಯಲ್ ಎಸ್ಟೇಟ್ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿ
ರಿಯಲ್ ಎಸ್ಟೇಟ್ ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ಆರ್ಥಿಕ ಬಂಡವಾಳವನ್ನು ಇನ್ನಷ್ಟು ವೈವಿಧ್ಯಗೊಳಿಸಬಹುದಾಗಿದೆ. ಇದು ಮ್ಯೂಚುಯಲ್ ಫಂಡ್‌ಗಳಂತೆಯೇ ಕಾರ್ಯನಿರ್ವಹಿಸುತ್ತದೆ ಜೊತೆಗೆ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಸುಲಭವಾದ ಮಾರ್ಗವನ್ನು ಒದಗಿಸಿಕೊಡುತ್ತವೆ. ಗಳಿಕೆಯು ಡಿವಿಡೆಂಡ್ ಅಥವಾ ಷೇರು ಮೌಲ್ಯದಲ್ಲಿ ನಿರ್ದಿಷ್ಟ ಶೇಕಡಾವಾರು ಹೆಚ್ಚಳದ ರೂಪವನ್ನು ತೆಗೆದುಕೊಳ್ಳಬಹುದಾಗಿದೆ.


Click it and Unblock the Notifications