ನೀವು ಹಿರಿಯ ನಾಗರಿಕರೇ ಆಗಿದ್ದರೆ ನೀವು ಈ ಸುದ್ದಿ ನೋಡಲೇ ಬೇಕು.ಹೌದು ಅಂಚೆ ಕಚೇರಿಯಲ್ಲಿ ವಯಸ್ಸಾದ ವೃದ್ಧರಿಗಾಗಿ ಹಲವಾರು ಯೋಜನೆಗಳಿವೆ.ಅದರಲ್ಲೂ ಈ ಯೋಜನೆಯಿಂದ ಅವರಿಗೆ ಉತ್ತಮ ಬಡ್ಡಿ ಕೂಡ ಸಿಗುತ್ತದೆ. ಹಾಗಿದ್ರೆ ಆ ಯೋಜನೆಯ ಹೆಸರೇನು..? ಈ ಯೋಜನೆಯಿಂದ ಎಷ್ಟು ಬಡ್ಡಿ ಸಿಗುತ್ತೆ ಎಂಬುವುದನ್ನು ತಿಳಿಯೋಣ ಬನ್ನಿ...
ಹೌದು, ವೃದ್ಧರಿಗಾಗಿ ಅಂಚೆ ಕಚೇರಿಯಲ್ಲಿ ಇರುವ ಯೋಜನೆ ಹೆಸರು ಹಿರಿಯ ನಾಗರಿಕರ ಉಳಿತಾಯ ಯೋಜನೆ.ಈ ಯೋಜನೆಯ ಮೂಲಕ, ವೃದ್ಧರು ಬಯಸಿದರೆ,ಬಡ್ಡಿಯಿಂದಲೇ ಅವರು ಜೀವನ ಸಾಗಿಸಬಹುದು. ಈ ಉಳಿತಾಯ ಯೋಜನೆಯಿಂದ 12,30,000 ರೂಪಾಯಿಗಳ ಬಡ್ಡಿಯನ್ನು ಗಳಿಸಬಹುದು. ಹೆಚ್ಚಿನ ವೃದ್ಧರು ಹೂಡಿಕೆಯ ವಿಷಯದಲ್ಲಿ ಯಾವುದೇ ರೀತಿಯ ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ ಇತವರಿಗೆ ಈ ಯೋಜನೆ ಸೂಕ್ತವಾಗಿದೆ ಎಂದೇ ಹೇಳಬಹುದು.

ಇನ್ನೂ ನಿವೃತ್ತಿಯ ನಂತರ, ವೃದ್ಧರಿಗೆ ಯಾವುದೇ ಆದಾಯದ ಮೂಲವಿಲ್ಲ. ಅವರು ಜೀವಿತಾವಧಿಯ ಬಂಡವಾಳವನ್ನು ಹೊಂದಿದ್ದಾರೆ ಅಂದರೆ ನಿವೃತ್ತಿ ನಿಧಿಯನ್ನು ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸುತ್ತಾರೆ ಮತ್ತು ವಿವಿಧ ಸ್ಥಳಗಳಲ್ಲಿ ಹೂಡಿಕೆ ಮಾಡುತ್ತಾರೆ ಇದರಿಂದ ಅವರ ಹಣವು ಸಮಯದೊಂದಿಗೆ ಬೆಳೆಯುತ್ತಲೇ ಇರುತ್ತದೆ.
ಎಷ್ಟು ಬಡ್ಡಿ ಸಿಗುತ್ತಿದೆ..?
ಅಂಚೆ ಕಛೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಠೇವಣಿ ಯೋಜನೆಯಾಗಿದೆ. ಇದರಲ್ಲಿ, 5 ವರ್ಷಗಳವರೆಗೆ ನಿಗದಿತ ಮೊತ್ತವನ್ನು ಠೇವಣಿ ಮಾಡಲಾಗುತ್ತದೆ. ಹಿರಿಯ ನಾಗರಿಕರು ಈ ೋಜನೆಯಲ್ಲಿ30,00,000ಲಕ್ಷದವರೆಗೆ ಹೂಡಿಕೆ ಮಾಡಬಹುದು,ಆದರೆ ಕನಿಷ್ಠ ಹೂಡಿಕೆ ಮಿತಿ ರೂ 1000. ಪ್ರಸ್ತುತ, SCSS ಶೇ.8.2ರಷ್ಟು ದರದಲ್ಲಿ ಬಡ್ಡಿಯನ್ನು ಪಡೆಯಬಹುದು.
ಯಾವ ರೀತಿ ನಿಮಗೆ 12,30,000 ಲಕ್ಷ ಬಡ್ಡಿ ಸಿಗುತ್ತದೆ
ನೀವು ಈ ಯೋಜನೆಯಲ್ಲಿ ಗರಿಷ್ಠ 30,00,000 ರೂ.ಮೊತ್ತವನ್ನು ಹೂಡಿಕೆ ಮಾಡಿದರೆ ನಿಮ್ಮಗೆ 5 ವರ್ಷಗಳ ನಂತರ ಶೇ.8.2 ದರದಲ್ಲಿ 12,30,000 ಬಡ್ಡಿಯನ್ನು ಪಡೆಯುತ್ತೀರಿ. ಪ್ರತಿ ಮೂರು ತಿಂಗಳಗೊಮ್ಮೆ 61,500 ಬಡ್ಡಿಯಾಗಿ ಜಮಾ ಮಾಡಲಾಗುತ್ತದೆ. ಈ ರೀತಿಯಾಗಿ, 5 ವರ್ಷಗಳ ನಂತರ ನಿಮ್ಮ ಮೆಚ್ಯೂರಿಟಿ ಮೊತ್ತವಾಗಿ ಒಟ್ಟು 42,30,000 ಲಕ್ಷ ಪಡೆಯುತ್ತೀರಿ.
ಮತ್ತೊಂದೆಡೆ, ನೀವು ಈ ಯೋಜನೆಯಲ್ಲಿ 5 ವರ್ಷಗಳವರೆಗೆ 15 ಲಕ್ಷವನ್ನು ಠೇವಣಿ ಮಾಡಿದರೆ, ಪ್ರಸ್ತುತ ಶೇಕಡಾ 8.2 ರ ಬಡ್ಡಿದರ ಪ್ರಕಾರ, ನೀವು 5 ವರ್ಷಗಳಲ್ಲಿ ಕೇವಲ 6,15,000 ಬಡ್ಡಿಯನ್ನು ಪಡೆಯುತ್ತೀರಿ. ನೀವು ತಿಂಗಳ ಆಧಾರದ ಮೇಲೆ ಬಡ್ಡಿಯನ್ನು ಲೆಕ್ಕ ಹಾಕಿದರೆ, ನಂತರ ನೀವು ಪ್ರತಿ ಮೂರು ತಿಂಗಳಿಗೊಮ್ಮೆ 30,750 ಬಡ್ಡಿಯನ್ನು ಪಡೆಯುತ್ತೀರಿ. ಈ ರೀತಿ 15,00,000 ಮತ್ತು ಬಡ್ಡಿ ಮೊತ್ತ 6,15,000 ಸೇರಿಸಿ ಒಟ್ಟು 21,15,000 ರೂ.ಗಳನ್ನು ಮೆಚ್ಯೂರಿಟಿ ಮೊತ್ತವಾಗಿ ಪಡೆಯಲಾಗುತ್ತದೆ.
ಯಾರು ಹೂಡಿಕೆ ಮಾಡಬಹುದು?
60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಯಾವುದೇ ವ್ಯಕ್ತಿಯಾದರೂ ಹೂಡಿಕೆ ಮಾಡಬಹುದು. ಮತ್ತೊಂದೆಡೆ, ವಿಆರ್‌ಎಸ್ ತೆಗೆದುಕೊಳ್ಳುವ ನಾಗರಿಕ ವಲಯದ ಸರ್ಕಾರಿ ನೌಕರರು ಮತ್ತು ರಕ್ಷಣೆಯಿಂದ ನಿವೃತ್ತರಾಗುವವರಿಗೆ ಕೆಲವು ಷರತ್ತುಗಳೊಂದಿಗೆ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.
ಈ ಯೋಜನೆಯು 5 ವರ್ಷಗಳ ನಂತರ ಪೂರ್ಣವಾಗಿರುತ್ತದೆ.
5 ವರ್ಷಗಳ ನಂತರವೂ ನೀವು ಈ ಯೋಜನೆಯ ಪ್ರಯೋಜನಗಳನ್ನು ಮುಂದುವರಿಸಲು ಬಯಸಿದರೆ, ಠೇವಣಿ ಮೊತ್ತವು ನಂತರ ನಿಮ್ಮ ಖಾತೆಯ ಅವಧಿಯನ್ನು ಮೂರು ವರ್ಷಗಳವರೆಗೆ ವಿಸ್ತರಿಸಬಹುದು. ಮುಕ್ತಾಯದ 1 ವರ್ಷದೊಳಗೆ ಇದನ್ನು ವಿಸ್ತರಿಸಬಹುದು. ಮುಕ್ತಾಯದ ದಿನಾಂಕದಂದು ಅನ್ವಯವಾಗುವ ದರದಲ್ಲಿ ನಿಮ್ಮ ಖಾತೆಗೆ ಬಡ್ಡಿಯನ್ನು ನೀಲಾಗುತ್ತದೆ, ಸೆಕ್ಷನ್ 80C ಅಡಿಯಲ್ಲಿ SCSS ನಲ್ಲಿ ತೆರಿಗೆ ವಿನಾಯಿತಿ ಪ್ರಯೋಜನ ಲಭ್ಯವಿದೆ.
More From GoodReturns

Savings Tips: ತಿಂಗಳಿಗೆ 1000 ಹೂಡಿಕೆ ಮಾಡಿ, 4 ಲಕ್ಷ ಲಾಭ ಪಡೆಯಿರಿ! ಇದರಲ್ಲಿ ಮಾತ್ರ

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications