For Quick Alerts
ALLOW NOTIFICATIONS  
For Daily Alerts

ವಿದೇಶೀ ಸ್ಟಾಕ್ ಗಳಲ್ಲಿ ಹೂಡಿಕೆ ಮಾಡಿದರೆ ತೆರಿಗೆ ಲೆಕ್ಕಾಚಾರ ಹೇಗೆ ಗೊತ್ತಾ?

By ಅನಿಲ್ ಆಚಾರ್
|

2002ನೇ ಇಸವಿಯಲ್ಲಿ ನೆಟ್ ಫ್ಲಿಕ್ಸ್ ನಿಂದ ಇನ್ಷಿಯಲ್ ಪಬ್ಲಿಕ್ ಆಫರಿಂಗ್ (ಐಪಿಒ)ನಲ್ಲಿ 990 ಯುಎಸ್ ಡಿಗೆ ವಿತರಿಸಲಾಗಿತ್ತು. ಡಿಸೆಂಬರ್ 10, 2020ರಲ್ಲಿ ಆ ಷೇರಿನ ಮೌಲ್ಯ $ 4,55,532 ಇದೆ. ಅಂದರೆ ಹದಿನೆಂಟು ವರ್ಷದಲ್ಲಿ ಹೂಡಿಕೆ ಮೇಲೆ 45,913% ರಿಟರ್ನ್ಸ್ ಬಂದಿದೆ. ವಿದೇಶೀ ಸ್ಟಾಕ್ ಗಳಲ್ಲಿ ಇಂಥ ಹಲವು ಯಶೋಗಾಥೆಗಳು ದೊರೆಯುತ್ತವೆ.

ಒಂದು ವೇಳೆ ನೀವು ವಿದೇಶೀ ಸ್ಟಾಕ್ ಗಳಲ್ಲಿ ಹೂಡಿಕೆ ಮಾಡಬೇಕು ಎಂದಿದ್ದಲ್ಲಿ ಅದರ ತೆರಿಗೆ ಲೆಕ್ಕಾಚಾರ ಹೇಗೆ ಎಂಬುದನ್ನು ತಿಳಿಯುವುದಕ್ಕೆ ಈ ಲೇಖನ ಸಹಾಯ ಮಾಡುತ್ತದೆ. ಜತೆಗೆ ಫಾರಿನ್ ಎಕ್ಸ್ ಚೇಂಜ್ ಮ್ಯಾನೇಜ್ ಮೆಂಟ್ ಆಕ್ಟ್ (FEMA) ಮತ್ತು ಆದಾಯ ತೆರಿಗೆ ಕಾಯ್ದೆಯು ಈ ಹೂಡಿಕೆಗೆ ಹೇಗೆ ಅನ್ವಯ ಆಗುತ್ತವೆ ಎಂಬುದು ಸಹ ತಿಳಿಯುತ್ತದೆ.

'ಫೆಮಾ' ತಿಳಿಸುವ ಪ್ರಕಾರ, ಒಂದು ನಿಶ್ಚಿತ ಮಿತಿಯಲ್ಲಿ ಮಾತ್ರ ಭಾರತದ ಹೊರಗೆ ಹೂಡಿಕೆ ಮಾಡುವುದಕ್ಕೆ ಸಾಧ್ಯ. ಲಿಬರಲೈಸ್ಡ್ ರೆಮಿಟೆನ್ಸ್ ಸ್ಕೀಮ್ (LRS) ಅಡಿಯಲ್ಲಿ ಭಾರತೀಯರು ವಿದೇಶದಲ್ಲಿನ ಲಿಸ್ಟೆಡ್, ಅನ್ ಲಿಸ್ಟೆಡ್ ಕಂಪೆನಿಗಳ ಷೇರು ಖರೀದಿ ಮತ್ತು ಡೆಟ್ ಇನ್ ಸ್ಟ್ರುಮೆಂಟ್ ನಲ್ಲಿ ಹೂಡಿಕೆ ಮಾಡಬಹುದು. ಆರ್ ಬಿಐನಿಂದ ಈ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಕೆಲವು ನಿರ್ದಿಷ್ಟ ಉದ್ದೇಶಗಳಿಗಾಗಿ ಮಾತ್ರ ಬ್ಲಾಂಕೆಟ್ ಮಿತಿ ಎಂದು 2,50,000 ಯುಎಸ್ ಡಿ ನೀಡಲಾಗಿದೆ.

ಪಾಸ್ ವರ್ಡ್ ಮರೆತಿದ್ದಕ್ಕೆ ಈ ಆಸಾಮಿ ತೆರುತ್ತಿರುವ ಬೆಲೆ 1800 ಕೋಟಿ ರು.ಪಾಸ್ ವರ್ಡ್ ಮರೆತಿದ್ದಕ್ಕೆ ಈ ಆಸಾಮಿ ತೆರುತ್ತಿರುವ ಬೆಲೆ 1800 ಕೋಟಿ ರು.

ವಿದೇಶೀ ಸ್ಟಾಕ್ ಗಳ ಮೇಲೆ ಹಣ ಹೂಡಿದ ನಂತರ ಅದರಿಂದ ಕ್ಯಾಪಿಟಲ್ ಗೇಯ್ನ್ಸ್ ಗಳಿಸುತ್ತೀರಿ. ಡಿವಿಡೆಂಡ್ ರೂಪದಲ್ಲಿ ಆದಾಯ ಬರುತ್ತದೆ. ಈ ಎರಡಕ್ಕೂ ಆದಾಯ ತೆರಿಗೆ ಕಾಯ್ದೆ ಮತ್ತು ಒಪ್ಪಂದದ ಪ್ರಕಾರ ಹೇಗೆ ತೆರಿಗೆ ಹಾಕಲಾಗುತ್ತದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಕ್ಯಾಪಿಟಲ್ ಗೇಯ್ನ್ಸ್ ತೆರಿಗೆ ಲೆಕ್ಕಾಚಾರ

ಕ್ಯಾಪಿಟಲ್ ಗೇಯ್ನ್ಸ್ ತೆರಿಗೆ ಲೆಕ್ಕಾಚಾರ

ವಿದೇಶೀ ಕಂಪೆನಿಗಳಲ್ಲಿನ ಷೇರುಗಳಲ್ಲಿ ಹೂಡಿಕೆ ಮಾಡಿದ್ದನ್ನು 24 ತಿಂಗಳ ಅವಧಿಯೊಳಗೆ ಮಾರಾಟ ಮಾಡಿ, ಅದರಿಂದ ಲಾಭ ಪಡೆದುಕೊಂಡರೆ ಅದನ್ನು ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ ಎಂದು ಪರಿಗಣಿಸಲಾಗುತ್ತದೆ. ಅದನ್ನು ಮೀರಿದ ಅವಧಿಯದ್ದಾದರೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ ಆಗುತ್ತದೆ. ಒಂದು ವೇಳೆ ಅವೇ ಷೇರುಗಳು ಭಾರತದ ಯಾವುದಾದರೂ ಸ್ಟಾಕ್ ಎಕ್ಸ್ ಚೇಂಜ್ ನಲ್ಲೂ ಲಿಸ್ಟಿಂಗ್ ಆಗಿದ್ದಲ್ಲಿ, ಅಂದರೆ ಇಂಟರ್ ನ್ಯಾಷನಲ್ ಫೈನಾನ್ಷಿಯಲ್ ಸರ್ವೀಸಸ್ ಸೆಂಟರ್ (IFSC) ಆಗಿದ್ದಲ್ಲಿ ಅವಧಿಯು 24 ತಿಂಗಳಿಂದ 12 ತಿಂಗಳಿಗೆ ಇಳಿಕೆ ಆಗುತ್ತದೆ. ಲಿಸ್ಟೆಡ್ ಹಾಗೂ ಅನ್ ಲಿಸ್ಟೆಡ್ ಷೇರು ಎರಡಕ್ಕೂ ಒಂದೇ ಬಗೆಯಲ್ಲಿ ಕ್ಯಾಪಿಟಲ್ ಗೇಯ್ನ್ಸ್ ಲೆಕ್ಕಾಚಾರ ಹಾಕಲಾಗುತ್ತದೆ.

ಅನ್ ಲಿಸ್ಟೆಡ್ ಈಕ್ವಿಟಿ ಷೇರುಗಳ ಮಾರಾಟಕ್ಕೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ 20 ಪರ್ಸೆಂಟ್ ತೆರಿಗೆ+ ಸರ್ ಚಾರ್ಜ್+ ಹೆಲ್ತ್ ಹಾಗೂ ಎಜುಕೇಷನ್ ಸೆಸ್ ಹಾಕಲಾಗುತ್ತದೆ. ಭಾರತೀಯ ನಿವಾಸಿ ತೆರಿಗೆದಾರರಾದಲ್ಲಿ ಇಂಡೆಕ್ಸೇಷನ್ ಅನುಕೂಲ ಸಿಗಲಿದೆ. ಅನಿವಾಸಿಗಳಾದಲ್ಲಿ 10% ತೆರಿಗೆ ಹಾಕಲಾಗುತ್ತದೆ. ಇಂಡೆಕ್ಸೇಷನ್ ಮತ್ತು ವಿದೇಶೀ ಕರೆನ್ಸಿ ಏರಿಳಿತಗಳ ಅನುಕೂಲ ಸಿಗಲ್ಲ. ಆದರೆ ಯಾವುದೇ ವಿದೇಶೀ ಸ್ಟಾಕ್ ಐಎಫ್ ಎಸ್ ಸಿಯಲ್ಲೂ ಲಿಸ್ಟ್ ಆಗಿದ್ದಲ್ಲಿ ಒಂದು ಲಕ್ಷ ರುಪಾಯಿ ಮೇಲ್ಪಟ್ಟ ಲಿಸ್ಟೆಡ್ ಷೇರುಗಳ ಮಾರಾಟದಿಂದ ಬರುವ ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ ಗೆ 10%ತೆರಿಗೆ+ ಸರ್ ಚಾರ್ಜ್ ಮತ್ತು ಹೆಲ್ತ್ ಹಾಗೂ ಎಜುಕೇಷನ್ ಸೆಸ್ ಬೀಳುತ್ತದೆ. ಇಂಡೆಕ್ಸೇಷನ್ ಹಾಗೂ ವಿದೇಶೀ ಕರೆನ್ಸಿ ಏರಿಳಿತದ ಅನುಕೂಲ ಸಿಗಲ್ಲ.

ಅನ್ ಲಿಸ್ಟೆಡ್ ಷೇರುಗಳು ವರ್ಗಾವಣೆಯಿಂದ ಸಿಗುವ ಅಲ್ಪಾವಧಿ ಕ್ಯಾಪಿಟಲ್ ಗೇಯ್ನ್ ಗೆ ಮಾಮೂಲಿ ದರದ ತೆರಿಗೆ ಹಾಕಲಾಗುತ್ತದೆ. ಆದರೆ ಯಾವುದೇ ಐಎಫ್ ಎಸ್ ಸಿ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಲಿಸ್ಟೆಡ್ ಆಗಿರುವ ಷೇರುಗಳ ಅಲ್ಪಾವಧಿ ಕ್ಯಾಪಿಟಲ್ ಗೇಯ್ನ್ಸ್ ಗೆ 15% ತೆರಿಗೆ ಬೀಳುತ್ತದೆ. ಭಾರತವು 95ಕ್ಕೂ ಹೆಚ್ಚು ದೇಶಗಳ ಜತೆ DTAA ಮಾಡಿಕೊಂಡಿದೆ. ಈ ಒಪ್ಪಂದದ ಮೂಲಕವಾಗಿ ಮೂಲ ದೇಶ ಹಾಗೂ ವಾಸವಿರುರುವ ದೇಶಗಳ ಒಪ್ಪಂದದ ಕಾರಣಕ್ಕೆ ಮೂಲ ಯಾವ ದೇಶದಲ್ಲಿ ಕ್ಯಾಪಿಟಲ್ ಗೇಯ್ನ್ಸ್ ಆಗುತ್ತದೋ ಅಲ್ಲಿಯೇ ತೆರಿಗೆ ಆಗುತ್ತದೆ. ಆದ್ದರಿಂದ ಭಾರತದ ನಿವಾಸಿಗೆ ಷೇರಿನ ವರ್ಗಾವಣೆಯಿಂದ ಬರುವ ಕ್ಯಾಪಿಟಲ್ ಗೇಯ್ನ್ಸ್ ಗೆ ವಿದೇಶ (ಮೂಲ ದೇಶದಲ್ಲಿನ ನಿಯಮ) ಹಾಗೂ ಭಾರತ (ಸ್ಥಳೀಯ ನಿವಾಸಿಗೆ ಇರುವ ಕಾನೂನು) ಎರಡರಲ್ಲೂ ತೆರಿಗೆ ಬೀಳುತ್ತದೆ. ಆದರೆ ವಿದೇಶದ ತೆರಿಗೆ ಕ್ರೆಡಿಟ್ ಅನ್ನು ಯಾವ ದೇಶದ ನಿವಾಸಿ ಆಗಿರುತ್ತಾರೋ ಅಲ್ಲಿ ತೆರಿಗೆ ಪಾವತಿಸುವ ವೇಳೆಯಲ್ಲಿ ಪಡೆಯಬಹುದು.

ಡಿವಿಡೆಂಡ್ ತೆರಿಗೆ ಲೆಕ್ಕಾಚಾರ

ಡಿವಿಡೆಂಡ್ ತೆರಿಗೆ ಲೆಕ್ಕಾಚಾರ

ವಿದೇಶೀ ಷೇರುಗಳ ಮೇಲಿನ ಡಿವಿಡೆಂಡ್ ಗೆ ಭಾರತದಲ್ಲಿ ಅನ್ವಯಿಸುವಂಥ ದರದಲ್ಲಿ ತೆರಿಗೆ ಬೀಳುತ್ತದೆ. ಡಿವಿಡೆಂಡ್ ಮೇಲೆ ನಿವ್ವಳದ (ನೆಟ್) ಆಧಾರದಲ್ಲಿ ತೆರಿಗೆ ಹಾಕಲಾಗುತ್ತದೆ. ಆ ಆದಾಯ ಪಡೆಯುವ ಸಲುವಾಗಿ ಬಡ್ಡಿ ವೆಚ್ಚದ ವಿನಾಯಿತಿಯು ಆ ಒಟ್ಟು ಡಿವಿಡೆಂಡ್ ವೆಚ್ಚದ 20% ದಾಟುವಂತಿಲ್ಲ. ಸೆಕ್ಷನ್ 57ರ ಅಡಿಯಲ್ಲಿ ಬೇರೆ ಯಾವುದೇ ವಿನಾಯಿತಿಗೆ ಅವಕಾಶ ಇಲ್ಲ. ಇತರ ವೆಚ್ಚಗಳಾದ ಕಮಿಷನ್ ಅಥವಾ ಬ್ಯಾಂಕರ್ ಗೆ ಪಾವತಿಸಿದ ಗೌರವಧನ ಅಥವಾ ಅಂಥ ಇನ್ಯಾವುದೇ ವ್ಯಕ್ತಿಗೆ ಪಾವತಿಸಿದ ಮೊತ್ತದಿಂದ ವಿನಾಯಿತಿ ಸಿಗಲ್ಲ.

ಆದರೆ, ಭಾರತೀಯ ಕಂಪೆನಿಗೆ ಡಿವಿಡೆಂಡ್ ಸೇರಿದಂತೆ ಒಟ್ಟಾರೆ ಆದಾಯವು ವಿದೇಶಿ ಕಂಪೆನಿಯಿಂದ ಆದ ವಿತರಣೆ ಆಗಲಿ ಅಥವಾ ಪಾವತಿ ಆಗಲಿ, ಅದರಲ್ಲಿ ಭಾರತೀಯ ಕಂಪೆನಿಯು ಒಟ್ಟಾರೆ ಈಕ್ವಿಟಿ ಷೇರು ಬಂಡವಾಳ 26% ಅಥವಾ ಹೆಚ್ಚು ಹೊಂದಿದ್ದರೆ ಅದಕ್ಕೆ 15% ತೆರಿಗೆ ಬೀಳುತ್ತದೆ. ಇದು ಕೂಡ ನಿಯಮಾವಳಿಗೆ ಅನುಸಾರವಾಗಿ ನಡೆಯುತ್ತದೆ.

DTAA ಪ್ರಕಾರ, ಡಿವಿಡೆಂಡ್ ಅನ್ನು ಯಾವ ದೇಶದಲ್ಲಿ ಗಳಿಸಲಾಗಿದೆಯೋ ಅಲ್ಲಿಯದೇ ದರದಲ್ಲಿ ತೆರಿಗೆ ಹಾಕಲಾಗುತ್ತದೆ. ಆದರೂ ಕೆಲವು ನಿಯಮಾವಳಿಗಳು ಪೂರ್ಣ ಮಾಡಿದಲ್ಲಿ ಆ ದೇಶದಲ್ಲಿ ವಿನಾಯಿತಿ ದರದಲ್ಲಿ ತೆರಿಗೆ ಹಾಕಲಾಗುತ್ತದೆ. ಭಾರತದ ಜತೆ DTAA ಒಪ್ಪಂದ ಮಾಡಿಕೊಂಡಿರುವ ಬಹುತೇಕ ದೇಶಗಳಲ್ಲೇ ಡಿವಿಡೆಂಡ್ ಮೇಲೆ ತೆರಿಗೆ ಹಾಕಲಾಗುತ್ತದೆ. ಅದು ಡಿವಿಡೆಂಡ್ ನ ಗ್ರಾಸ್ ಮೊತ್ತದ ಮೇಲೆ 5ರಿಂದ 15% ಆಗುತ್ತದೆ.

ವಿದೇಶಿ ತೆರಿಗೆ ಕ್ರೆಡಿಟ್ ಕ್ಲೇಮ್

ವಿದೇಶಿ ತೆರಿಗೆ ಕ್ರೆಡಿಟ್ ಕ್ಲೇಮ್

ಒಂದು ವೇಳೆ ಡಿವಿಡೆಂಡ್ ಬರುತ್ತಿರುವ ದೇಶ ಹಾಗೂ ಬಂದ ದೇಶ ಎರಡರಲ್ಲೂ ತೆರಿಗೆ ಬಿದ್ದಲ್ಲಿ, ಅಂಥ ಸನ್ನಿವೇಶದಲ್ಲಿ ಆ ನಿವಾಸಿ ಇರುವ ಸ್ಥಳದಲ್ಲಿ ತೆರಿಗೆ ವಿನಾಯಿತಿಯೋ ಮತ್ತೊಂದೋ ಪಡೆಯುವುದಕ್ಕೆ ಅವಕಾಶ ಇದೆ. ತೆರಿಗೆ ಪಾವತಿದಾರರು ಭಾರತದಲ್ಲಿ ಆ ಡಿವಿಡೆಂಡ್ ಮಾಹಿತಿಯನ್ನು ನೀಡಬೇಕಾಗುತ್ತದೆ. ತೆರಿಗೆ ಪಾವತಿದಾರರು ಫಾರ್ಮ್ ನಂ. 67ರಲ್ಲಿ ಹೇಳಿಕೆ ನೀಡಬೇಕಾಗುತ್ತದೆ. ಅದು ಕೂಡ ವಿದೇಶಿ ತೆರಿಗೆ ಕ್ರೆಡಿಟ್ ಕ್ಲೇಮ್ ಮಾಡುವುದಕ್ಕೆ ಇರುವ ಅಂತಿಮ ದಿನದ ಗಡುವಿನೊಳಗೆ ಮಾಡಬೇಕು.

ಐಟಿಆರ್ ನಲ್ಲಿ ಮಾಹಿತಿ

ಐಟಿಆರ್ ನಲ್ಲಿ ಮಾಹಿತಿ

ಡಿವಿಡೆಂಡ್ ಮೂಲಕ ಬರುವ ಆದಾಯವನ್ನು ಇತರ ಮೂಲಗಳಿಂದ ಬಂದ ಆದಾಯ ಎಂದು ಷೆಡ್ಯೂಲ್ OSನಲ್ಲಿ ನಮೂದಿಸಬೇಕು. ಒಂದು ವೇಳೆ ಮಾಮೂಲು ದರದಲ್ಲಿ ತೆರಿಗೆ ಬೀಳುವಂತಿದ್ದಲ್ಲಿ ಮತ್ತು ಷೆಡ್ಯೂಲ್ SIನಲ್ಲಿ ಇದ್ದಲ್ಲಿ, ಆದಾಯಕ್ಕೆ ವಿಶೇಷ ದರದ ತೆರಿಗೆ ಹಾಕಬೇಕಾಗುತ್ತದೆ. ಮತ್ತು ಅಂಥ ಆದಾಯಕ್ಕೆ ವಿಶೇಷ ದರದ ತೆರಿಗೆ ಹಾಕಲಾಗುತ್ತದೆ. ಕ್ಯಾಪಿಟಲ್ ಗೇಯ್ನ್ಸ್ ಆದಾಯದ ಬಗ್ಗೆ ಷೆಡ್ಯೂಲ್ CGಯಲ್ಲಿ ಮಾಹಿತಿ ನೀಡಬೇಕು. ಅದು ಕೂಡ ಅಲ್ಪಾವಧಿಯದೋ ಅಥವಾ ದೀರ್ಘಾವಧಿಯದೋ ಎಂಬುದರ ಮೇಲೆ ಆಧಾರ ಪಟ್ಟಿರುತ್ತದೆ. ಇನ್ನೇನಾದರೂ ಮಾಹಿತಿಯು SI ಷೆಡ್ಯೂಲ್ ನಲ್ಲಿ ನೀಡಬೇಕು, ಅಂದರೆ ವಿಶೇಷ ದರದ ತೆರಿಗೆ ಬೀಳುತ್ತದೆ ಎಂದಾದ್ದಲ್ಲಿ ಅಂಥ ಮಾಹಿತಿಯನ್ನು ನೀಡಬೇಕಾಗುತ್ತದೆ. ಅದಕ್ಕೆ ವಿಶೇಷ ದರದ ತೆರಿಗೆ ಬೀಳುತ್ತದೆ.

 

English summary

Foreign Company Stock Investments Tax Treatment And FEMA Implications

Here is an explainer about foreign stock investments tax treatment and FEMA implication.
Story first published: Thursday, January 14, 2021, 13:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X