ಇಂದಿನಿಂದ ಮೂರು ದಿನದಲ್ಲೇ ಪ್ರಸ್ತುತ ಹಣಕಾಸು ವರ್ಷ ಕೊನೆಯಾಗಲಿದೆ. ಏಪ್ರಿಲ್ 1, 2023ರಿಂದ ಹಣಕಾಸು ವರ್ಷ 2023-24 ಆರಂಭವಾಗಲಿದೆ. ಹೊಸ ಹಣಕಾಸು ವರ್ಷದಲ್ಲಿ ಹಲವಾರು ಹೊಸ ಬದಲಾವಣೆಗಳು ಆಗಲಿದೆ. ಕೆಲವು ವಸ್ತುಗಳ ದರವು ಏರಿಕೆಯಾದರೆ, ಕೆಲವು ಅಗ್ಗವಾಗಲಿದೆ. ಇನ್ನು ಹಲವಾರು ಕಾರ್ಯಗಳನ್ನು ಮಾಡಲು ಈ ತಿಂಗಳೇ ಗಡುವಾಗಿದೆ. ಹಾಗೆಯೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1, 2023ರಂದು ಕೇಂದ್ರ ಬಜೆಟ್‌ನಲ್ಲಿ ಮಂಡನೆ ಮಾಡಿದ ಯೋಜನೆಗಳು ಎಲ್ಲವೂ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.
ಇನ್ನು ಇತ್ತೀಚೆಗೆ ಬಂದ ಸುದ್ದಿ ಪ್ರಕಾರ ಕೆಲವೊಂದು ಹಣಕಾಸು ಸಂಬಂಧಿತ ಕಾರ್ಯಗಳ ಗಡುವನ್ನು ವಿಸ್ತರಣೆ ಮಾಡಲಾಗಿದೆ. ಮಾರ್ಚ್ 28ರಂದು ಪ್ರಕಟವಾದ ಸುದ್ದಿ ಪ್ರಕಾರ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (ಸಿಬಿಡಿಟಿ) ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕಿಂಗ್ ಕೊನೆಯ ದಿನಾಂಕವನ್ನು ಜೂನ್ 30ರವರೆಗೆ ವಿಸ್ತರಣೆ ಮಾಡಲಾಗಿದೆ. ಪ್ರಸ್ತುತ 1 ಸಾವಿರ ರೂಪಾಯಿ ದಂಡ ಕಟ್ಟಿ ಎರಡು ಪ್ರಮುಖ ದಾಖಲೆಗಳನ್ನು ಲಿಂಕ್ ಮಾಡಲು ಅವಕಾಶವಿದೆ. ಆದರೆ ಇನ್ನು ಕೂಡಾ ಕೆಲವು ಆದಾಯ ತೆರಿಗೆ ಸಂಬಂಧಿತ ಕಾರ್ಯಗಳನ್ನು ನೀವು ಈ ತಿಂಗಳಲ್ಲೇ ಮಾಡಿಬಿಡಬೇಕಾಗುತ್ತದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

ತೆರಿಗೆ ಉಳಿತಾಯ ಹೂಡಿಕೆ ಮಾಡಿಬಿಡಿ: ನೀವು ತೆರಿಗೆ ಉಳಿತಾಯ ಮಾಡು ಅವಕಾಶವನ್ನು ನೀಡುವ ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಅಂದುಕೊಂಡಿದ್ದರೆ ಅದಕ್ಕೆ ಈ ತಿಂಗಳೇ ಕೊನೆಯ ದಿನಾಂಕವಾಗಿದೆ. ಹಣಕಾಸು ವರ್ಷ 2022-2023ಕ್ಕೆ ನೀವು ಯಾವುದೇ ತೆರಿಗೆ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದೆಂದಾದರೆ ಮಾರ್ಚ್ 31, 2023 ಕೊನೆಯ ದಿನಾಂಕವಾಗಿದೆ. ನೀವು ಈ ತೆರಿಗೆ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಮತ್ತು 80D ಅಡಿಯಲ್ಲಿ 1.5 ಲಕ್ಷ ರೂಪಾಯಿ ತೆರಿಗೆ ವಿನಾಯಿತಿಯನ್ನು ಪಡೆಯಬಹುದಾಗಿದೆ.
ಮುಂಗಡ ತೆರಿಗೆ ಪಾವತಿ: ಟಿಡಿಎಸ್/ಟಿಸಿಎಸ್ ಮತ್ತು ಎಂಎಟಿ ಕಡಿತ ಮಾಡಿದ ಬಳಿಕವೂ ಯಾರ ಆದಾಯ ತೆರಿಗೆ ಬಾಕಿಯು ಒಂದು ಹಣಕಾಸು ವರ್ಷದಲ್ಲಿ ಹತ್ತು ಸಾವಿರ ರೂಪಾಯಿ ಆಗಿರುತ್ತದೋ ಅವರು ನಾಲ್ಕು ಕಂತುಗಳಲ್ಲಿ ಮುಂಗಡ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಮಾರ್ಚ್ 15, 2023ಕ್ಕೂ ಮುನ್ನ ತೆರಿಗೆದಾರರು ಹಣಕಾಸು ವರ್ಷ 2022-23ರ ಶೇಕಡ 100ರಷ್ಟು ಮುಂಗಡ ತೆರಿಗೆ ಪಾವತಿಯನ್ನು ಮಾಡಬೇಕಾಗುತ್ತದೆ. ಮಾರ್ಚ್ 15ಕ್ಕೂ ಮುನ್ನ ನೀವು ಮುಂಗಡ ತೆರಿಗೆ ಪಾವತಿ ಮಾಡಿಲ್ಲದಿದ್ದರೆ, ಮಾರ್ಚ್ 31ಕ್ಕೂ ಮುನ್ನ ಪಾವತಿಬೇಕಾಗುತ್ತದೆ. ಆ ಗುಡುವು ಕಳೆದ ಬಳಿಕ ಮುಂಗಡ ತೆರಿಗೆ ಪಾವತಿ ಮಾಡಿದರೆ ಹೆಚ್ಚು ಶುಲ್ಕ ವಿಧಿಸಲಾಗುತ್ತದೆ.
ಇವಿ ಖರೀದಿ ಸಾಲದಲ್ಲಿ ಬಡ್ಡಿದರ ಪ್ರಯೋಜನ: ಕೇಂದ್ರ ಸರ್ಕಾರವು ಎಲೆಕ್ಟ್ರಾನಿಕ್ ವಾಹನ ಬಳಕೆಗೆ ಉತ್ತೇಜನವನ್ನು ನೀಡುತ್ತಿದೆ. ಇವಿ ಖರೀದಿ ಸಾಲಕ್ಕೆ ಬಡ್ಡಿದರ ಪ್ರಯೋಜನವನ್ನು ನೀಡುತ್ತಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 EEB ಅಡಿಯಲ್ಲಿ ಇವಿ ಸಾಲದ ಮೇಲೆ ಬಡ್ಡಿದರ ಪ್ರಯೋಜನವನ್ನು ನಾವು ಪಡೆಯುವುದಕ್ಕೆ ಮಾರ್ಚ್ 31, 2023 ಕೊನೆಯ ದಿನಾಂಕವಾಗಿದೆ.
ಆದಾಯ ತೆರಿಗೆ ರಿಟರ್ನ್ ಅಪ್‌ಡೇಟ್ ಮಾಡಿ: ಹಣಕಾಸು ವರ್ಷ 2019-20ರ ಅಪ್‌ಡೇಟೆಡ್ ಆದಾಯ ತೆರಿಗೆ ರಿಟರ್ನ್ ಅನ್ನು ಯಾರು ಫೈಲ್ ಮಾಡಿಲ್ಲವೋ ಅವರಿಗೆ ಆದಾಯ ತೆರಿಗೆ ರಿಟರ್ನ್ ಅಪ್‌ಡೇಟ್ ಮಾಡಲು ಮಾರ್ಚ್ 31, 2023 ಕೊನೆಯ ದಿನಾಂಕವಾಗಿದೆ. ಅದಕ್ಕೂ ಮುನ್ನ ನೀವು ಅಪ್‌ಡೇಟ್ ಮಾಡಬೇಕಾಗುತ್ತದೆ.


Click it and Unblock the Notifications