ಗಮನಿಸಿ; ನಾಳೆಯಿಂದ ಎಟಿಎಂ ವ್ಯವಹಾರದ ಶುಲ್ಕಗಳು ಬದಲಾಗಲಿವೆ

ನವದೆಹಲಿ, ಜೂನ್ 30: ಎಟಿಎಂ ನಗದು ಹಿಂಪಡೆಯುವ ಶುಲ್ಕಗಳು ಮತ್ತು ಖಾತೆಯಲ್ಲಿ ಕನಿಷ್ಠ ಮೊತ್ತ ಇಡುವ ಷರತ್ತುಗಳು ಸೇರಿದಂತೆ ಹಲವಾರು ಪ್ರಮುಖ ಬ್ಯಾಂಕಿಂಗ್ ನಿಯಮಗಳು ಜುಲೈ 1 ರಿಂದ ಬದಲಾಗಬಹುದು ಎನ್ನಲಾಗಿದೆ.

ಮಾರ್ಚ್‌ನಲ್ಲಿ ಘೋಷಿಸಲಾದ ರಾಷ್ಟ್ರವ್ಯಾಪಿ ಲಾಕ್‌ಡೌನ್ ಗಮನದಲ್ಲಿಟ್ಟುಕೊಂಡು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಟಿಎಂ ನಗದು ವ್ಯವಹಾರದ ಶುಲ್ಕ ಮತ್ತು ಖಾತೆಯಲ್ಲಿ ಕನಿಷ್ಠ ಮೊತ್ತ ಇಡದಿದ್ದರೇ ದಂಡ ವಿಧಿಸುವ ಪ್ರಕ್ರಿಯೆಗೆ ತಡೆ ನೀಡಿದ್ದರು. ಜೂನ್ 31 ರವರೆಗೆ ವಿನಾಯಿತಿ ನೀಡಿದ್ದರು. ಡಿಜಿಟಲ್ ವ್ಯಾಪಾರ ಮತ್ತು ವಹಿವಾಟುಗಳಿಗೆ ಶುಲ್ಕವನ್ನು ಸಹ ಕಡಿಮೆ ಮಾಡಲಾಗಿತ್ತು.

ಈಗ ನಾಲ್ಕನೇ ಹಂತದ ಲಾಕ್‌ಡೌನ್ ಮುಗಿದು ಮತ್ತೆ ಆರ್ಥಿಕ ಚಟುವಟಿಕೆಗಳು ಪುನಾರಂಭವಾಗಿರುವುದರಿಂದ ಎಟಿಎಂ ಶುಲ್ಕ ಮತ್ತು ಖಾತೆಯಲ್ಲಿ ಕನಿಷ್ಠ ಮೊತ್ತ ಇಡದಿದ್ದರೇ ದಂಡ ವಿಧಿಸುವ ಪ್ರಕ್ರಿಯೆ ಮತ್ತೆ ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ವರದಿಗಳು ತಿಳಿಸಿವೆ.

ಗಮನಿಸಿ; ನಾಳೆಯಿಂದ ಎಟಿಎಂ ವ್ಯವಹಾರದ ಶುಲ್ಕಗಳು ಬದಲಾಗಲಿವೆ

ಈ ಕುರಿತು ಹೊಸ ಪ್ರಕಟಣೆ ಬರುವವರೆಗೂ ಜುಲೈ 1 ರಿಂದ ಬ್ಯಾಂಕುಗಳ ಹಿಂದಿನ ಎಟಿಎಂ ಹಾಗೂ ಇತರೆ ನಿಯಮಗಳು ಅನ್ವಯವಾಗುತ್ತವೆ ಎಂಬುದು ಖಾತ್ರಿ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಗಳು ಬಂದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+