ಭವಿಷ್ಯದ ಸುಭದ್ರ ಜೀವನಕ್ಕಾಗಿ ಹೆಚ್ಚಿನವರು ಹೂಡಿಕೆಗಳತ್ತ ಗಮನ ನೀಡುತ್ತಿದ್ದಾರೆ. ಹಾಗಾಗಿ ಪೋಸ್ಟ್ ಆಫೀಸ್, ಬ್ಯಾಂಕ್‌ಗಳಲ್ಲಿ (Post Office, Bank) ಲಕ್ಷಗಟ್ಟಲೆ ಜನರು ಸೇವಿಂಗ್ಸ್ ಮಾಡಲು ಶುರು ಮಾಡಿದ್ದಾರೆ. ಅಲ್ಲದೇ ಇದರಿಂದ ಬಡ್ಡಿ ಮೂಲಕ ಆದಾಯವನ್ನೂ ಗಳಿಸುತ್ತಿದ್ದಾರೆ. ಮಾಸಿಕ ಹೂಡಿಕೆ ಯೋಜನೆ, ಆರ್‌ಡಿ, ಫಿಕ್ಸೆಡ್ ಡೆಪಾಸಿಟ್ ಹೀಗೆ ಹಲವು ರೀತಿಯಲ್ಲಿ ತಾವು ದುಡಿದ ಸಂಪಾದನೆಯಲ್ಲಿ ಸ್ವಲ್ಪ ಭಾಗವನ್ನು ಹೂಡಿಕೆ ಯೋಜನೆಗಳಿಗೆ (Investment Scheme) ಮೀಸಲಿಡಬಹುದು.

ಇನ್ನು ಭದ್ರತೆ ಮತ್ತು ಖಚಿತ ಆದಾಯದ ದೃಷ್ಟಿಯಿಂದ ಹೆಚ್ಚಿನವರು ಸ್ಥಿರ ಠೇವಣಿಗಳನ್ನು (Fixed Deposits) ಆಯ್ಕೆ ಮಾಡುತ್ತಾರೆ. ಎಫ್‌ಡಿಯಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಆದಾಯ ಗಳಿಸಬಹುದು ಎಂಬುದು ಹಲವರ ಭಾವನೆ. ಆದ್ರೆ ಯಾವುದೇ ಬ್ಯಾಂಕ್‌ಗಳಲ್ಲಾಗಲಿ, ಪೋಸ್ಟ್ ಆಫೀಸ್‌ಗಳಲ್ಲಾಗಲಿ ಹೂಡಿಕೆ ಮಾಡುವ ಮುನ್ನ ಅವುಗಳು ನೀಡುವ ಬಡ್ಡಿದರಗಳನ್ನು (Interest Rates) ತಿಳಿಯುವುದು ಮುಖ್ಯ.
ಎಫ್‌ಡಿ ಬಡ್ಡಿ ದರಗಳು ಸಾಮಾನ್ಯವಾಗಿ ಅಷ್ಟಾಗಿ ವ್ಯತ್ಯಾಸವಾಗದಿದ್ದರೂ, 50 ಬೇಸಿಸ್ ಪಾಯಿಂಟ್‌ಗಳಂತಹ ಸಣ್ಣ ವ್ಯತ್ಯಾಸವೂ ದೀರ್ಘಾವಧಿಯಲ್ಲಿ ಹೆಚ್ಚಿನ ಆದಾಯ ಪಡೆಯಲು ಕಾರಣವಾಗಬಹುದು. ಆದ್ದರಿಂದ ಯಾವ ಬ್ಯಾಂಕುಗಳು ಎಷ್ಟು ಬಡ್ಡಿಯನ್ನು ನೀಡುತ್ತದೆ ಎಂಬುದನ್ನು ಮೊದಲು ತಿಳಿದುಕೊಂಡು ನಂತರ ಹೂಡಿಕೆ ಮಾಡಬೇಕು.
ಉದಾಹರಣೆಗೆ, ಎಫ್‌ಡಿಯಲ್ಲಿ ₹10 ಲಕ್ಷ ಹಣವನ್ನು ಮೂರು ವರ್ಷಗಳ ಅವಧಿಯಲ್ಲಿ ಇಟ್ಟರೆ, ಹೆಚ್ಚುವರಿ 50 ಬೇಸಿಸ್ ಪಾಯಿಂಟ್‌ಗಳೊಂದಿಗೆ ₹15,000 ಹೆಚ್ಚಿನ ಆದಾಯ ಪಡೆಯಬಹುದು. ಅಂದರೆ ಹೂಡಿಕೆ ಮಾಡಿದ ಮೊತ್ತ ₹20 ಲಕ್ಷ ಆಗಿದ್ದರೆ, ಮೂರು ವರ್ಷದಲ್ಲಿ ಹೆಚ್ಚುವರಿ ಉಳಿತಾಯ ₹30,000 ಆಗಬಹುದು.
ಹಾಗಿದ್ರೆ ಭಾರತದ ಯಾವ ಬ್ಯಾಂಕುಗಳು ಎಫ್‌ಡಿ ಹೆಚ್ಚಿನ ಬಡ್ಡಿ ನೀಡುತ್ತದೆ ಗೊತ್ತಾ?
ಕೋಟಕ್ ಮಹೀಂದ್ರಾ ಬ್ಯಾಂಕ್: ಮೂರು ವರ್ಷಗಳ ಅವಧಿಗೆ ಸಾಮಾನ್ಯ ನಾಗರಿಕರು ಈ ಬ್ಯಾಂಕ್‌ನ ಎಫ್‌ಡಿಯಲ್ಲಿ ಹೂಡಿಕೆ ಮಾಡಿದ್ರೆ 6.4% ಮತ್ತು ಹಿರಿಯ ನಾಗರಿಕರು 6.9% ಬಡ್ಡಿ ಪಡೆಯಬಹುದು. ಆದರೆ, 391 ದಿನಗಳಿಂದ ಎರಡು ವರ್ಷಗಳಿಗಿಂತ ಕಡಿಮೆ ಅವಧಿಗೆ 6.7% ಮತ್ತು 7.2% ಅತ್ಯಧಿಕ ಬಡ್ಡಿ ದರಗಳನ್ನು ಗ್ರಾಹಕರು ಪಡೆಯಬಹುದು.
ICICI ಬ್ಯಾಂಕ್: ಈ ಖಾಸಗಿ ವಲಯದ ಬ್ಯಾಂಕ್ ಕೂಡಾ ಮೂರು ವರ್ಷಗಳ ಕಾಲ ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡಿಟ್ಟರೆ, ಸಾಮಾನ್ಯ ನಾಗರಿಕರಿಗೆ 6.6% ಮತ್ತು ಹಿರಿಯ ನಾಗರಿಕರಿಗೆ 7.2% ಬಡ್ಡಿ ದರ ನೀಡುತ್ತದೆ.
ಫೆಡರಲ್ ಬ್ಯಾಂಕ್: ಅತ್ಯುತ್ತಮ ಬಡ್ಡಿದರಗಳನ್ನು ನೀಡುವ ಬ್ಯಾಂಕ್‌ಗಳಲ್ಲಿ ಫೆಡರಲ್ ಬ್ಯಾಂಕ್ ಕೂಡಾ ಒಂದು. ಈ ಬ್ಯಾಂಕ್‌ನಲ್ಲಿ ಮೂರು ವರ್ಷಗಳ ಠೇವಣಿಗೆ ಸಾಮಾನ್ಯ ನಾಗರಿಕರು 6.7% ಬಡ್ಡಿ ಪಡೆದರೆ, ಹಿರಿಯ ನಾಗರಿಕರು 7.2% ಬಡ್ಡಿ ಪಡೆಯಬಹುದು. ಆದರೆ ನೀವು ಯಾವ ಬ್ಯಾಂಕ್‌ನಲ್ಲಿ, ಎಷ್ಟು ಹೂಡಿಕೆ ಮಾಡುತ್ತೀರಿ ಎಂಬುದರ ಮೇಲೆ ಬಡ್ಡಿ ಹಣ ನಿರ್ಧಾರವಾಗುತ್ತದೆ.
HDFC ಬ್ಯಾಂಕ್: ಖಾಸಗಿ ಬ್ಯಾಂಕ್‌ಗಳಲ್ಲಿ ಭಾರೀ ಜನಪ್ರಿಯತೆಯಲ್ಲಿರುವ ಬ್ಯಾಂಕ್ ಎಂದರೆ ಅದು ಹೆಚ್‌ಡಿಎಫ್‌ಸಿ ಬ್ಯಾಂಕ್. ಈ ಬ್ಯಾಂಕ್ ಮೂರು ವರ್ಷಗಳ ಅವಧಿಯ ಎಫ್‌ಡಿಗೆ ಸಾಮಾನ್ಯ ನಾಗರಿಕರಿಗೆ 6.45% ಮತ್ತು ಹಿರಿಯ ನಾಗರಿಕರಿಗೆ 6.95% ಬಡ್ಡಿದರ ನೀಡುತ್ತದೆ.
ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI): ಭಾರತದ ಅತಿದೊಡ್ಡ ಬ್ಯಾಂಕ್ ಎಂದು ಗುರುತಿಸಿಕೊಂಡಿರುವ ಎಸ್‌ಬಿಐ ಮೂರು ವರ್ಷಗಳ ಎಫ್‌ಡಿಗೆ ಸಾಮಾನ್ಯ ನಾಗರಿಕರಿಗೆ 6.3% ಮತ್ತು ಹಿರಿಯ ನಾಗರಿಕರಿಗೆ 6.8% ಬಡ್ಡಿ ನೀಡುತ್ತದೆ. ಎರಡು ಮತ್ತು ಮೂರು ವರ್ಷಗಳ ನಡುವಿನ ಅವಧಿಗೆ ಗರಿಷ್ಠ ಬಡ್ಡಿದರಗಳು 6.45% ಮತ್ತು 6.95% ಆಗಿರುತ್ತದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮೂರು ವರ್ಷಗಳ ಸ್ಥಿರ ಠೇವಣಿಗೆ ಸಾಮಾನ್ಯ ನಾಗರಿಕರಿಗೆ 6.6% ಮತ್ತು ಹಿರಿಯ ನಾಗರಿಕರಿಗೆ 7.1% ಬಡ್ಡಿ ನೀಡುತ್ತದೆ. ಇದಿಷ್ಟು ಫಿಕ್ಸೆಡ್ ಡೆಪಾಸಿಟ್‌ಗೆ ಸಿಗುವ ಬಡ್ಡಿದರಗಳ ಮಾಹಿತಿ. ಆದ್ದರಿಂದ ಯಾವುದರಲ್ಲಿ ಹೂಡಿಕೆ ಮಾಡಬೇಕೆಂಬುದು ನಿಮ್ಮ ಆಯ್ಕೆ.
ಕೆನರಾ ಬ್ಯಾಂಕ್: ಈ ಸರ್ಕಾರಿ ಬ್ಯಾಂಕ್ ಕೂಡಾ ಮೂರು ವರ್ಷಗಳ ಸ್ಥಿರ ಠೇವಣಿಗೆ ಸಾಮಾನ್ಯ ನಾಗರಿಕರಿಗೆ 6.25% ಮತ್ತು ಹಿರಿಯ ನಾಗರಿಕರಿಗೆ 6.75% ಬಡ್ಡಿ ನೀಡುತ್ತದೆ. 444 ದಿನಗಳ ಅವಧಿಗೆ ಗರಿಷ್ಠ ದರಗಳು 6.5% ಮತ್ತು 7%ರಷ್ಟು ಲಭ್ಯವಿವೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications