ದೀಪಾವಳಿ ಬರುತ್ತಿದೆ, ಈಗ ದೀಪಾವಳಿ ಉಡುಗೊರೆಯ ಸೀಸನ್ ಕೂಡಾ ಬಂದಿದೆ. ಯಾವ ರೀತಿಯ ಉಡುಗೊರೆಗಳು ತೆರಿಗೆಗೆ ಒಳಪಡಬಹುದು ಎಂದು ನೀವು ಆಶ್ಚರ್ಯ ಪಡಬಹುದು. ಯಾವ ರೀತಿಯ ಉಡುಗೊರೆಗಳು ತೆರಿಗೆಗೆ ಒಳಪಟ್ಟಿರುತ್ತವೆ ಮತ್ತು ಯಾವ ವಸ್ತುಗಳಿಗೆ ವಿನಾಯಿತಿ ನೀಡಲಾಗಿದೆ ಎಂಬುದನ್ನು ನಾವು ಈ ಲೇಖನದಲ್ಲಿ ವಿವರಿಸಿದ್ದೇವೆ.
ತಜ್ಞರ ಪ್ರಕಾರ, ಸಂಬಂಧಿಕರಿಂದ ಪಡೆದ ದೀಪಾವಳಿ ಉಡುಗೊರೆಗಳನ್ನು ಆದಾಯ ತೆರಿಗೆ ಕಾಯ್ದೆ (ಐಟಿಎ) ಅಡಿಯಲ್ಲಿ ಸಂಪೂರ್ಣವಾಗಿ ವಿನಾಯಿತಿಗೆ ಅರ್ಹವಾಗಿರುತ್ತದೆ. ಆದರೆ ಸಂಬಂಧಿ ಹೊರತುಪಡಿಸಿ ಬೇರೆ ವ್ಯಕ್ತಿಯಿಂದ ಪಡೆದ 50 ಸಾವಿರ ರೂಪಾಯಿಗಿಂತ ಅಧಿಕ ಮೌಲ್ಯದ ಉಡುಗೊರೆಗಳನ್ನು "ಇತರ ಮೂಲಗಳಿಂದ ಬಂದ ಆದಾಯ" ಎಂದು ಪರಿಗಣಿಸಿ, ತೆರಿಗೆ ವಿಧಿಸಲಾಗುತ್ತದೆ.

ಹಾಗಾದರೆ ಸಂಬಂಧಿಗಳು ಯಾರಾಗುತ್ತಾರೆ?
(ಎ) ವ್ಯಕ್ತಿಯ ಸಂಗಾತಿ
(ಬಿ) ವ್ಯಕ್ತಿಯ ಸಹೋದರ ಅಥವಾ ಸಹೋದರಿ
(ಸಿ) ವ್ಯಕ್ತಿಯ ಸಂಗಾತಿಯ ಸಹೋದರ ಅಥವಾ ಸಹೋದರಿ
(ಡಿ) ವ್ಯಕ್ತಿಯ ಪೋಷಕರಲ್ಲಿ ಒಬ್ಬರ ಸಹೋದರ ಅಥವಾ ಸಹೋದರಿ
(ಇ) ವ್ಯಕ್ತಿಯ ಯಾವುದೇ ವಂಶಸ್ಥರು
(ಎಫ್) ವ್ಯಕ್ತಿಯ ಸಂಗಾತಿಯ ಯಾವುದೇ ವಂಶಸ್ಥರು
(ಜಿ) ಬಿ ಮತ್ತು ಎಫ್‌ನಲ್ಲಿ ಉಲ್ಲೇಖಿಸಲಾದ ವ್ಯಕ್ತಿಯ ಸಂಗಾತಿ
ಯಾವೆಲ್ಲ ಸಂದರ್ಭದಲ್ಲಿ ತೆರಿಗೆ ವಿನಾಯಿತಿ?
ಸಾಮಾನ್ಯವಾಗಿ ದೀಪಾವಳಿಯಲ್ಲಿ ಉಡುಗೊರೆಗಳನ್ನು ನೀಡಲಾಗುತ್ತದೆ. ಈ ಮೂಲಕ ಖುಷಿ ಹಂಚಿಕೊಳ್ಳಲಾಗುತ್ತದೆ. ಅದೇ ರೀತಿಯಾಗಿ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಸ್ವೀಕರಿಸಿದ ಉಡುಗೊರೆಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ. ಅಂತಹ ವಿಶೇಷ ಸಂದರ್ಭಗಳು ಈ ಕೆಳಗಿದೆ:
• ವಿವಾಹ
• ವಿಲ್ ಪ್ರಕಾರ
• ಉತ್ತರಾಧಿಕಾರದ ಮೂಲಕ ಅಥವಾ ಪಾವತಿಸುವವರ ಮರಣದ ಸಂದರ್ಭದಲ್ಲಿ
• ಸ್ಥಳೀಯ ಆಡಳಿತದಿಂದ ಸ್ವೀಕರಿಸಿದ ಉಡುಗೊರೆ
• ಸೆಕ್ಷನ್ 10 (23) ಅಡಿಯಲ್ಲಿ ಯಾವುದೇ ಶಿಕ್ಷಣ ಸಂಸ್ಥೆಯಿಂದ ಸ್ವೀಕರಿಸಿದ ಉಡುಗೊರೆ
• ದತ್ತಿ ಸಂಸ್ಥೆಯಿಂದ ಪಡೆದ ಉಡುಗೊರೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿವಿಎಸ್ ಅಡ್ವಾಸರ್ಸ್‌ನ ಸಂಸ್ಥಾಪಕ ಮತ್ತು ಸಿಇಒ ದಿವಾಕರ್ ವಿಜಯಸಾರಥಿ, "ಈ ಮೇಲೆ ಯಾವೆಲ್ಲ ಸಂದರ್ಭದಲ್ಲಿ ಸ್ವೀಕರಿಸಿದ ಉಡುಗೊರೆಯು ತೆರಿಗೆ ಮುಕ್ತವಾಗಿರುತ್ತದೆ ಎಂದು ತಿಳಿಸಲಾಗಿದೆ. ಆದರೆ ಇದರಲ್ಲಿ ದೀಪಾವಳಿಯಿಲ್ಲ ಎಂಬುವುದು ಗಮನಾರ್ಹವಾಗಿದೆ," ಎಂದು ತಿಳಿಸಿದ್ದಾರೆ.
"ಈ ಮೇಲೆ ತಿಳಿಸಿದ ಸಂದರ್ಭಗಳಲ್ಲಿ ಹೊರತುಪಡಿಸಿ ಇತರ ಸಂದರ್ಭಗಳಲ್ಲಿ ಸಂಬಂಧಿಕರಲ್ಲದವರಿಂದ ಪಡೆದ ಉಡುಗೊರೆಗಳ ಮೌಲ್ಯವು 50 ಸಾವಿರ ರೂಪಾಯಿಗಿಂತ ಅಧಿಕವಾಗಿದ್ದರೆ, ಅದಕ್ಕೆ ತೆರಿಗೆಯನ್ನು ವಿಧಿಸಲಾಗುತ್ತದೆ," ಎಂದು ಹೇಳಿದರು.
ಯಾವೆಲ್ಲ ಉಡುಗೊರೆಗೆ ತೆರಿಗೆ ವಿಧಿಸಲಾಗುತ್ತದೆ?
1. ಷೇರುಗಳು ಮತ್ತು ಸೆಕ್ಯೂರಿಟಿಗಳು
2. ಆಭರಣ
3. ಪುರಾತತ್ವ ಸಂಗ್ರಹಗಳು
4. ಡ್ರಾಯಿಂಗ್‌ಗಳು
5. ವರ್ಣಚಿತ್ರಗಳು
6. ಶಿಲ್ಪಗಳು
7. ಯಾವುದೇ ಕಲಾಕೃತಿ
8. ಚಿನ್ನ, ಬೆಳ್ಳಿ
"ಬೇರೆ ರೀತಿಯಲ್ಲಿ ಹೇಳುವುದಾದರೆ, ಮೇಲೆ ಪಟ್ಟಿ ಮಾಡಲಾದ ಆಸ್ತಿಗಳನ್ನು ಹೊರತುಪಡಿಸಿ ಇತರ ಉಡುಗೊರೆಗಳು, 50 ಸಾವಿರ ರೂಪಾಯಿಗಿಂತ ಮೇಲ್ಪಟ್ಟಿದ್ದರೂ ತೆರಿಗೆಗೆ ಒಳಪಡುವುದಿಲ್ಲ. 50000 ರೂಪಾಯಿಗಿಂತ ಅಧಿಕ ನಗದು ಅಥವಾ ಸ್ಥಿರಾಸ್ತಿಯು ತೆರಿಗೆಗೆ ಒಳಪಡುತ್ತದೆ ಎಂದು ವಿಜಯಸಾರಥಿ ಹೇಳುತ್ತಾರೆ.


Click it and Unblock the Notifications