ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದ ನಡುವೆ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಬದಲಾವಣೆಗಳು ಆಗುತ್ತಲೇ ಇದೆ. ಯುದ್ಧದ ಪರಿಣಾಮದಿಂದಾಗಿ ಆರ್ಥಿಕ ವ್ಯವಸ್ಥೆಯಲ್ಲಿ ಪ್ರತಿ ಕ್ಷಣ ವ್ಯತ್ಯಯ ಉಂಟಾಗುತ್ತಿದೆ. ಭಾರತದಲ್ಲಿ ಷೇರುಪೇಟೆಯ ಮೇಲೆಯೂ ರಷ್ಯಾ-ಉಕ್ರೇನ್ ಯುದ್ಧ ಪರಿಣಾಮ ಉಂಟಾಗಿದೆ. ಈ ನಡುವೆ ಒಎನ್‌ಜಿಸಿ, ಇಂಡಿಯನ್ ಆಯಿಲ್ ಷೇರು 2014ರ ಬಳಿಕ ಮೊದಲ ಬಾರಿಗೆ ಏರಿಕೆ ಕಂಡಿದೆ.
ಜಾಗತಿಕ ಕಚ್ಚಾ ತೈಲ ಬೆಲೆಗಳು ಗಗನಕ್ಕೇರಿದೆ. ಈ ನಡುವೆ ಸರ್ಕಾರಿ ಸ್ವಾಮ್ಯದ ತೈಲ ಪರಿಶೋಧನೆ ಮತ್ತು ಉತ್ಪಾದನಾ ಕಂಪನಿಗಳಾದ ಆಯಿಲ್ ಇಂಡಿಯಾ ಮತ್ತು ಆಯಿಲ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ಒಎನ್‌ಜಿಸಿ) ಷೇರುಗಳು ಬುಧವಾರ ಸುಮಾರು 10 ಪ್ರತಿಶತದಷ್ಟು ಜಿಗಿದವು. 2014ರ ಬಳಿಕ ಮೊದಲ ಬಾರಿಗೆ ಈ ಮಟ್ಟಿನಲ್ಲಿ ಜಿಗಿತ ಕಂಡು ಬಂದಿದೆ.
ಕಡಿಮೆ ಸರಬರಾಜು ಮತ್ತು ರಷ್ಯಾ-ಉಕ್ರೇನ್ ನಡುವಿನ ಯುದ್ಧವು ಬ್ರೆಂಟ್ ಕಚ್ಚಾ ತೈಲ ಬೆಲೆಯನ್ನು ಸುಮಾರು 8 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಸಿದೆ. ಅಂದರೆ ಪ್ರಸ್ತುತ ಬ್ರೆಂಟ್ ಕಚ್ಚಾ ತೈಲದ ಬೆಲೆ 111 ಡಾಲರ್‌ಗೆ ಏರಿಕೆ ಕಂಡು ಬಂದಿದೆ. ಕಳೆದ ಎರಡು ದಿನಗಳಲ್ಲಿ ಕಚ್ಚಾತೈಲ ಬೆಲೆ ಶೇ.15ರಷ್ಟು ಏರಿಕೆಯಾಗಿದೆ. ಪ್ರಸ್ತುತ, ರಷ್ಯಾವು ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲ ಉತ್ಪಾದಕವಾಗಿದೆ ಮತ್ತು ರಷ್ಯಾದ ವಿರುದ್ಧದ ನಿರ್ಬಂಧಗಳು ಜಾಗತಿಕ ಪೂರೈಕೆಗೆ ಹಾನಿಯಾಗಬಹುದು.

ಒಎನ್‌ಜಿಸಿ, ಇಂಡಿಯನ್ ಆಯಿಲ್ ಷೇರು ಎಷ್ಟು ಏರಿಕೆ?
ವೈಯಕ್ತಿಕ ಷೇರುಗಳಲ್ಲಿ, ಆಯಿಲ್ ಇಂಡಿಯಾ ಶೇಕಡಾ 9.8 ರಷ್ಟು ಏರಿಕೆ ಕಂಡು 245 ರೂಪಾಯಿಗಳಿಗೆ ತಲುಪಿದೆ. ಆದರೆ ಒಎನ್‌ಜಿಸಿ ಇಂಟ್ರಾ-ಡೇನಲ್ಲಿ ಬಿಎಸ್‌ಇಯಲ್ಲಿ 4.6 ಶೇಕಡಾ 168.05 ಕ್ಕೆ ಏರಿತು. ಈ ನಡುವೆ ಎಸ್&ಪಿ ಬಿಎಸ್‌ಇ ಸೆನ್ಸೆಕ್ಸ್ 09:30 ಗಂಟೆಗೆ 1 ಶೇಕಡಾ ಅಂದರೆ 55,649 ಕ್ಕೆ ಇಳಿದಿದೆ. ಕಳೆದ ಆರು ತಿಂಗಳಲ್ಲಿ, ಬೆಂಚ್‌ಮಾರ್ಕ್ ಸೂಚ್ಯಂಕದಲ್ಲಿ 3.8 ರಷ್ಟು ಕುಸಿತದೊಂದಿಗೆ, ಒಎನ್‌ಜಿಸಿ ಮತ್ತು ಆಯಿಲ್ ಇಂಡಿಯಾ ಕ್ರಮವಾಗಿ ಶೇಕಡಾ 41 ಮತ್ತು 30 ರಷ್ಟು ಏರಿಕೆ ಕಂಡಿದೆ.
"ಯುಎಸ್ ಮತ್ತು ಸೌದಿ ಅರೇಬಿಯಾ ಬಳಿಕ ರಷ್ಯಾ ಜಾಗತಿಕ ತೈಲ ಪೂರೈಕೆಯ ಮೂರನೇ ಅತಿದೊಡ್ಡ ಕಚ್ಚಾ ತೈಲ ರಫ್ತುದಾರ ರಾಷ್ಟ್ರವಾಗಿದೆ. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವು ಜಾಗತಿಕ ತೈಲ ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಮಂಗಳವಾರ ಬಿಡುಗಡೆಯಾದ ಎಪಿಐ ವರದಿಯ ಪ್ರಕಾರ, ಯುಎಸ್ ದಾಸ್ತಾನುಗಳು ಕಳೆದ ವಾರ ಅನಿರೀಕ್ಷಿತವಾಗಿ 6.1 ಮಿಲಿಯನ್ ಬ್ಯಾರೆಲ್‌ಗಳಷ್ಟು ಕಡಿಮೆಯಾಗಿದೆ," ಎಂದು ಬ್ರೋಕರೇಜ್ ಸಂಸ್ಥೆ ಪೃಥ್ವಿ ಫಿನ್‌ಮಾರ್ಟ್ ಹೇಳಿಕೆಯನ್ನು ಸುದ್ದಿ ಸಂಸ್ಥೆ ಐಎಎನ್‌ಎಸ್ ವರದಿ ಮಾಡಿದೆ.


Click it and Unblock the Notifications