ಇನ್ನೇನು ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಒಂದು ತಿಂಗಳು ಬಾಕಿ ಇದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಮೆಲಾನಿಯಾಗೆ ಕೊರೊನಾ ಪಾಸಿಟಿವ್ ಎಂದು ಗೊತ್ತಾಗಿದೆ. ಆ ಸುದ್ದಿ ಹೊರಬಿದ್ದ ಮೇಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಏರಿಕೆ ಆಗಿದೆ. ಸ್ಪಾಟ್ ಚಿನ್ನದ ದರದಲ್ಲಿ ಔನ್ಸ್ ಗೆ (28.3495) 0.4% ಏರಿಕೆ ಕಂಡು, $ 1913.90 ತಲುಪಿದೆ.
ಆರಂಭದಲ್ಲಿ ಆದ 0.8% ನಷ್ಟದಿಂದ ಚಿನ್ನದ ದರ ಚೇತರಿಕೆ ಕಂಡು, ಏರಿಕೆ ದಾಖಲಿಸಿದೆ. ಇನ್ನು ಬೆಳ್ಳಿಯ ದರವು 0.9% ಏರಿಕೆ ಕಂಡು, ಔನ್ಸ್ ಗೆ $ 23.9992 ತಲುಪಿದೆ. ಅದು ಕೂಡ 1.3% ನಷ್ಟದಿಂದ ಚೇತರಿಕೆ ಕಂಡಿದೆ. ಆದರೆ ತೈಲ ಹಾಗೂ ತಾಮ್ರದ ಬೆಲೆಯಲ್ಲಿ ಇಂದು ಇಳಿಕೆ ಕಂಡಿದೆ.
ಎಂಸಿಎಕ್ಸ್ ಮತ್ತಿತರ ಮಾರ್ಕೆಟ್ ಗಳಿಗೆ ರಜಾ
ಇಂದಿನಿಂದ ನಮ್ಮ ಕ್ವಾರಂಟೇನ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ಟ್ರಂಪ್ ಹಾಗೂ ಮೆಲಾನಿಯಾ ಬಗ್ಗೆ ಟ್ವಿಟ್ ಮಾಡಿದ್ದರು. ಆ ನಂತರ ಡೌ ಫ್ಯೂಚರ್ಸ್ 1.5%ಗೂ ಹೆಚ್ಚು ಇಳಿಕೆ ಕಂಡಿತು. ಇತರ ಕರೆನ್ಸಿಗಳ ವಿರುದ್ಧ ಯುಎಸ್ ಡಾಲರ್ ಮೇಲ್ಮಟ್ಟದಲ್ಲಿ ಇದೆ. ಗಾಂಧಿ ಜಯಂತಿ ಪ್ರಯುಕ್ತವಾಗಿ ಷೇರು ಮಾರುಕಟ್ಟೆ, ಎಂಸಿಎಕ್ಸ್ ಮತ್ತಿತರ ಮಾರ್ಕೆಟ್ ಗಳಿಗೆ ರಜಾ ಇದೆ. ಗುರುವಾರದಂದು ಎಂಸಿಎಕ್ಸ್ ನಲ್ಲಿ ಚಿನ್ನದ ಫ್ಯೂಚರ್ಸ್ ದರ 0.4% ಏರಿಕೆ ಕಂಡು, 50544 ರುಪಾಯಿ ತಲುಪಿತು. ಬೆಳ್ಳಿ ದರದಲ್ಲಿ 1.6% ಹೆಚ್ಚಳವಾಗಿ, ಪ್ರತಿ ಕೇಜಿಗೆ 60,900 ರುಪಾಯಿ ಮುಟ್ಟಿತು.
ಪ್ರತಿ ಹತ್ತು ಗ್ರಾಮ್ ಚಿನ್ನದ ದರ 56 ಸಾವಿರ ರುಪಾಯಿ ದಾಟಿತ್ತು
ಈ ವರ್ಷ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಆಗಿದೆ. ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಆದ ಹಾನಿಯನ್ನು ಭರಿಸಲು ದೊಡ್ಡ ಮೊತ್ತದ ಹಣದ ಪೂರೈಕೆಯನ್ನು ಆರ್ಥಿಕತೆಗೆ ಮಾಡಲಾಗಿದೆ. ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಪ್ರತಿ ಹತ್ತು ಗ್ರಾಮ್ ಚಿನ್ನದ ದರ 56 ಸಾವಿರ ರುಪಾಯಿ ದಾಟಿತ್ತು. ಡಾಲರ್ ಮೌಲ್ಯ ಮೇಲ್ಮಟ್ಟದಲ್ಲೇ ಇರುವುದರಿಂದ ಕಳೆದ ಎಂಟು ವಾರಗಳಿಂದ ಚಿನ್ನದ ದರದಲ್ಲಿ ಇಳಿಕೆ ಕಾಣುತ್ತಿದೆ. ಕಡಿಮೆ ಬಡ್ಡಿ ದರ, ವಿಶ್ವದ ಕೆಲವು ಕಡೆ ಮತ್ತೆ ಕಾಣಿಸಿಕೊಳ್ಳುತ್ತಿರುವ ಕೊರೊನಾ, ಯುಎಸ್ ಚುನಾವಣೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಅನಿಶ್ಚಿತತೆ ಕಾರಣಕ್ಕೆ ತಳ ಮಟ್ಟದಲ್ಲಿ ಚಿನ್ನಕ್ಕೆ ಬೆಂಬಲ ಸಿಗಬಹುದು ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.
ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬರುವ ಸಾಧ್ಯತೆ
ಇಂದೇ ಹೊರ ಬೀಳಲಿರುವ ಯುಎಸ್ ತಿಂಗಳ ಉದ್ಯೋಗ ಮಾಹಿತಿಗಾಗಿ ಚಿನ್ನದ ಹೂಡಿಕೆದಾರರು ಎದುರು ನೋಡುತ್ತಿದ್ದಾರೆ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ $ 2.2 ಟ್ರಿಲಿಯನ್ ಆರ್ಥಿಕ ಪ್ಯಾಕೇಜ್ ಘೋಷಣೆಗೆ ಡೆಮಾಕ್ರಟಿಕ್ ಯೋಜನೆಗೆ ಯುಎಸ್ ಜನಪ್ರತಿನಿಧಿಗಳ ಸಭೆ ಗುರುವಾರ ಒಪ್ಪಿಗೆ ನೀಡಿದೆ. ಆರ್ಥಿಕ ಉತ್ತೇಜನಾ ಕ್ರಮಗಳನ್ನು ಘೋಷಣೆ ಮಾಡುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬರುವ ಸಾಧ್ಯತೆ ಹೆಚ್ಚಿಸುತ್ತದೆ. ಏಕೆಂದರೆ ಹಣದುಬ್ಬರವನ್ನು ತಡೆಯುವ ಉದ್ದೇಶ ಇಟ್ಟುಕೊಂಡು ನೋಡುವುದಾದರೂ ಚಿನ್ನಕ್ಕೆ ಆದ್ಯತೆ ನೀಡಲಾಗುತ್ತದೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಚಿನ್ನದ ಬೆಲೆ ಇಳಿಕೆ: ಖರೀದಿಗೆ ಇದೇ ಸುವರ್ಣಾವಕಾಶವೇ?



Click it and Unblock the Notifications