Festive Season: ಗೋಲ್ಡ್ ಇಟಿಎಫ್‌ ಅಥವಾ ಸವರನ್ ಗೋಲ್ಡ್ ಬಾಂಡ್, ಹಬ್ಬದ ಸೀಸನ್‌ನಲ್ಲಿ ಯಾವುದು ಬೆಸ್ಟ್?

ಈಗಾಗಲೇ ದಸರಾ ಹಬ್ಬ ಮುಗಿದಿದೆ. ಆದರೆ ಹಬ್ಬದ ಸೀಸನ್ ಮಾತ್ರ ಇನ್ನೂ ಮುಗಿದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದೆ, ಧನ ತ್ರಯೋದಶಿಯು ಬರಲಿದೆ. ಈ ಸಂದರ್ಭದಲ್ಲಿ ಸಾಮಾನ್ಯವಾಗಿಯೇ ಅನೇಕ ಜನರು ಚಿನ್ನವನ್ನು ಖರೀದಿಸುತ್ತಾರೆ.

ಚಿನ್ನದ ಬಾರ್‌ಗಳು ಮತ್ತು ನಾಣ್ಯಗಳು ಉತ್ತಮವೆಂದು ಅನಿಸಿದರೂ ಶುದ್ಧತೆ ಯಾವಾಗಲೂ ಖಾತರಿಪಡಿಸಲಾಗದು. ಹಾಗೆಯೇ ಯಾವುದೇ ಚಿನ್ನದ ಆಭರಣವಾದರೂ ಅದನ್ನು ಸುರಕ್ಷಿತವಾಗಿ ಇಡುವುದು ಕೂಡಾ ಒಂದು ರಿಸ್ಕ್. ಹಾಗಿದ್ದಾಗ ಈ ಆಧುನಿಕ ಯುಗದಲ್ಲಿ ನಾವು ಚಿನ್ನದ ಮೇಲೆ ಬೇರೆ ರೀತಿಯಲ್ಲಿ ಹೂಡಿಕೆ ಮಾಡುವ ಆಯ್ಕೆ ಮಾಡಿಕೊಳ್ಳಬಹುದು.

ಇಟಿಎಫ್- ಸವರನ್ ಗೋಲ್ಡ್ ಬಾಂಡ್, ಹಬ್ಬದ ಸೀಸನ್‌ಗೆ ಬೆಸ್ಟ್ ಯಾವುದು?

ಇತ್ತೀಚಿನ ಜೆಫರೀಸ್ ವರದಿಯ ಪ್ರಕಾರ, ಮಾರ್ಚ್ 2023 ವರೆಗಿನ ಲೆಕ್ಕಾಚಾರದ ಪ್ರಕಾರ ಒಟ್ಟು ಭಾರತೀಯ ಮನೆಯ ಆಸ್ತಿಯಲ್ಲಿ ಶೇಕಡ 15.5 ರಷ್ಟು ಚಿನ್ನವಾಗಿದೆ. ಶೇಕಡ 50.7 ರಷ್ಟು ಸ್ಥಾನವನ್ನು ರಿಯಲ್ ಎಸ್ಟೇಟ್ ಹೊಂದಿದ್ದರೆ, ಎರಡನೇ ಸ್ಥಾನದಲ್ಲಿ ಚಿನ್ನವಿದೆ. ಬ್ಯಾಂಕ್ ಡೆಪಾಸಿಟ್‌ಗಳು ಶೇಕಡ 14, ವಿಮೆ ಶೇಕಡ 5.9, ಭವಿಷ್ಯ ಮತ್ತು ಪಿಂಚಣಿ ನಿಧಿಗಳು ಶೇಕಡ ಶೇಕಡ 5.8, ಇಕ್ವಿಟಿಗಳು ಶೇಕಡ 4.7 ಮತ್ತು ನಗದು ಶೇಕಡ 3.4 ರಷ್ಟಿದೆ.

ಚಿನ್ನದ ಮೇಲೆ ಭಾರತೀಯರ ನಂಬಿಕೆ

ಸಾಂಪ್ರದಾಯಿಕವಾಗಿ ಭಾರತೀಯರು ಸಣ್ಣ ಆಭರಣಗಳು ಅಥವಾ ಚಿನ್ನದ ಬಾರ್‌ಗಳು ಮತ್ತು ನಾಣ್ಯಗಳನ್ನು ಖರೀದಿಸುವ ಮೂಲಕ ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಹೂಡಿಕೆ ಎನ್ನುವುದಕ್ಕಿಂತ ಇತ್ತೀಚೆಗೆ ಚಿನ್ನ ಎಂಬುವುದು ಒಂದು ಪ್ರತಿಷ್ಠೆಯಾಗಿದೆ ಎಂದರೆ ತಪ್ಪಾಗದು. ಮೊದಲು ಸಣ್ಣ ಮೊತ್ತದಲ್ಲಿ ಚಿನ್ನ ಖರೀದಿ ಬಳಿಕ ಅದನ್ನು ದೊಡ್ಡ ಆಭರಣವಾಗಿ ಬದಲಾಯಿಸಿಕೊಳ್ಳುವುದು ಭಾರತದಲ್ಲಿ ಸಾಮಾನ್ಯವಾಗಿದೆ.

ಹಾಗೆಯೇ ಯಾವುದೆ ಹಣಕಾಸಿನ ತೊಂದರೆಯಿದ್ದರೂ ಭಾರತದಲ್ಲಿ ಜನರಿಗೆ ಕೊನೆಯ ಆಯ್ಕೆಯಾಗುವುದು ಚಿನ್ನ. ಆದರೆ ಈಗ ಬದಲಾಗುತ್ತಿರುವ ಬ್ಯಾಂಕಿಂಗ್ ಸೌಲಭ್ಯ, ಡಿಜಿಟಲ್ ಆರ್ಥಿಕತೆಯಿಂದಾಗಿ ಹಣಕಾಸಿನ ಹೂಡಿಕೆ ಅರಿವು ಅಧಿಕವಾಗುತ್ತಿದೆ.

ಹಣ ಉಳಿತಾಯ ಮಾಡಿ ಯಾವುದೇ ಕಷ್ಟ ಬಂದರೂ ಹೂಡಿಕೆ ಮಾಡಿದ ಹಣವನ್ನು ಬಳಸಲು ಜನರು ಮುಂದಾಗುತ್ತಿದ್ದಾರೆ. ಅದಕ್ಕಾಗಿ ಡಿಜಿಟಲ್ ಮಾರ್ಗ ಜನರಿಗೆ ಸಹಾಯಕವಾಗಿದೆ. ಈ ಬೆನ್ನಲ್ಲೇ ಗ್ಲೋಬಲ್ ಗೋಲ್ಡ್ ಕೌನ್ಸಿಲ್ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಚಿನ್ನದ ಬಾರ್ ಮತ್ತು ನಾಣ್ಯಗಳಿಗೆ ಭಾರತದಲ್ಲಿ ಬೇಡಿಕೆಯು ಕಡಿಮೆಯಾಗಿದೆ.

ಇಟಿಎಫ್, ಸವರನ್ ಗೋಲ್ಡ್ ಬಾಂಡ್‌ ಬೇಡಿಕೆ

ಮತ್ತೊಂದೆಡೆ, ಇಂದು ದೇಶದಲ್ಲಿ ಪ್ರಮುಖ ಡಿಜಿಟಲ್ ಚಿನ್ನದ ಹೂಡಿಕೆ ಮಾರ್ಗಗಳಾಗಿರುವ ಗೋಲ್ಡ್ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳು (ಇಟಿಎಫ್‌ಗಳು) ಮತ್ತು ಸವರನ್ ಗೋಲ್ಡ್ ಬಾಂಡ್‌ಗಳ (ಎಸ್‌ಜಿಬಿಗಳು) ಬೇಡಿಕೆಯು ಅಧಿಕವಾಗುತ್ತಿದೆ. ಗೋಲ್ಡ್ ಇಟಿಎಫ್‌ನಲ್ಲಿ ಹೂಡಿಕೆ ಮಾಡಿದರೆ ಅಧಿಕ ಶುದ್ಧತೆಯ ಚಿನ್ನದಲ್ಲಿ ಹೂಡಿಕೆ ಮಾಡಿದಂತೆ ಆಗಿದೆ.

ಸಾಮಾನ್ಯವಾಗಿ, ಒಂದು ಚಿನ್ನದ ಇಟಿಎಫ್ ಯುನಿಟ್‌ ಸರಿಸುಮಾರು 0.01 ಗ್ರಾಂ ಚಿನ್ನಕ್ಕೆ ಸಮಾನವಾಗಿರುತ್ತದೆ. ಯೂನಿಟ್‌ಗಳನ್ನು ಸ್ಟಾಕ್ ಎಕ್ಸ್‌ಚೇಂಜ್‌ಗಳಲ್ಲಿ ಲೀಸ್ಟ್ ಮಾಡಲಾಗುತ್ತದೆ ಮತ್ತು ವ್ಯಾಪಾರ ಮಾಡಲಾಗುತ್ತದೆ. ಹೂಡಿಕೆದಾರರಿಗೆ ಸ್ಟಾಕ್ ಹೂಡಿಕೆಯ ಫ್ಲೆಕ್ಸಿಬಿಲಿಟಿ ಇದೆ. ಚಿನ್ನದ ಹೂಡಿಕೆಗಳನ್ನು ಇದು ಸರಳವಾಗಿಸಿದೆ.

ಡಿಜಿಟಲ್ ಗೋಲ್ಡ್‌ಗೆ ಬದಲಾವಣೆ

2007 ರಲ್ಲಿ ಚಿನ್ನದ ಇಟಿಎಫ್‌ಗಳನ್ನು ಪ್ರಾರಂಭಿಸಲಾಗಿದೆ. ಆದರೆ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಭೌತಿಕ ಚಿನ್ನದ ಮಾರುಕಟ್ಟೆಗಳು ಕೂಡಾ ಇತರೆ ಮಾರುಕಟ್ಟೆಯಂತೆ ಲಾಕ್‌ಡೌನ್ ಆದಾಗ, ಹಣಕಾಸು ಸಮಸ್ಯೆ ಉಂಟಾದಾಗ ಹೂಡಿಕೆದಾರರು ಇಟಿಎಫ್‌ ಅನ್ನು ವಿತ್‌ಡ್ರಾ ಮಾಡಿಕೊಂಡಿದ್ದಾರೆ.

ಆ ಸಮಯದಲ್ಲಿ ಹಣಕಾಸು ಮಾರುಕಟ್ಟೆಗಳು ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದ್ದರಿಂದ, ಗೋಲ್ಡ್ ಇಟಿಎಫ್‌ಗಳನ್ನು ಹೂಡಿಕೆದಾರರು ವಿತ್‌ಡ್ರಾ ಮಾಡಿಕೊಂಡಿದ್ದಾರೆ. ಗೋಲ್ಡ್ ಇಟಿಎಫ್‌ಗಳಲ್ಲಿನ ಹೂಡಿಕೆದಾರರ ಸಂಖ್ಯೆಯು ಜನವರಿ 2020 ರಲ್ಲಿ 4.61 ಲಕ್ಷದಿಂದ ಸೆಪ್ಟೆಂಬರ್ 2023 ರಲ್ಲಿ 48.06 ಲಕ್ಷಕ್ಕೆ ಏರಿಕೆಯಾಗಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಆಸ್ತಿಗಳು 23,798 ಕೋಟಿ ರೂಪಾಯಿ ಆಗಿದೆ.

ಮತ್ತೊಂದೆಡೆ, ಸವರನ್ ಗೋಲ್ಡ್ ಬಾಂಡ್‌ಗಳು ಚಿನ್ನದಲ್ಲಿ ಗುರುತಿಸಲಾದ ಸರ್ಕಾರಿ ಬಾಂಡ್‌ಗಳಾಗಿವೆ. ಅದು ಹೂಡಿಕೆದಾರರಿಗೆ ಚಿನ್ನದ ಮೇಲೆ ಮಾರುಕಟ್ಟೆ-ಸಂಬಂಧಿತ ಆದಾಯವನ್ನು ನೀಡುತ್ತದೆ. ಚಿನ್ನದ ಇಟಿಎಫ್‌ಗಳು ಮತ್ತು ಸವರನ್ ಗೋಲ್ಡ್ ಬಾಂಡ್‌ಗಳು ಚಿನ್ನದಲ್ಲಿ ದೀರ್ಘಕಾಲೀನ ಹೂಡಿಕೆಗೆ ಸೂಕ್ತವಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+