ಚಿನ್ನದ ದರವು ಮಾರ್ಚ್ 20ರಂದು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಮಲ್ಟಿ ಕಮೋಡಿಟಿಸ್ ಎಕ್ಸ್‌ಚೇಂಜ್‌ನಲ್ಲಿ (ಎಂಸಿಎಕ್ಸ್) ಚಿನ್ನದ ದರವು ಸೋಮವಾರ ಸಾರ್ವಕಾಲಿಕವಾಗಿ ಏರಿಕೆಯಾಗಿದೆ. ಎಂಸಿಎಕ್ಸ್‌ನಲ್ಲಿ ಹಳದಿ ಲೋಹದ ದರವು ಹತ್ತು ಗ್ರಾಮ್‌ಗೆ 60,000 ರೂಪಾಯಿಯನ್ನು ದಾಟಿದೆ. ಆದರೆ ಮಾರ್ಚ್ 22ರಂದು ಭಾರತದಲ್ಲಿ ಗೋಲ್ಡ್ ರೇಟ್ ಕುಸಿತವಾಗಿದೆ. ಆದರೆ ಎಂದಿಗೂ ಕೂಡಾ ನಾವು ಭಾರತದಲ್ಲಿ ಚಿನ್ನವನ್ನು ಪವಿತ್ರ ಎಂದು ಕಾಣುತ್ತೇವೆ, ಸುರಕ್ಷಿತ ಹೂಡಿಕೆ ಎಂದು ಕೂಡಾ ನೋಡುತ್ತೇವೆ. ಹಾಗಿರುವಾಗ ಹೆಚ್ಚಿನ ಜನರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ.
ಯಾವುದೇ ಹಣಕಾಸು ಬಿಕ್ಕಟ್ಟು ಉಂಟಾದರೂ ಕೂಡಾ ಚಿನ್ನವನ್ನು ನಾವು ಸುರಕ್ಷಿತ ಸಾಧನವೆಂದು ಪರಿಗಣಿಸುತ್ತೇವೆ. ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡಿ ಸುರಕ್ಷಿತ ಆಟವನ್ನು ಆಡುತ್ತಾರೆ. ಇನ್ನು ಯುಎಸ್ ಫೆಡ್ ಸಭೆ, ಜಾಗತಿಕವಾಗಿ ಬ್ಯಾಂಕಿಂಗ್ ವಲಯದಲ್ಲಿನ ಬಿಕ್ಕಟ್ಟು ಕೂಡಾ ಚಿನ್ನದ ಮಾರುಕಟ್ಟೆ ಮೇಲೆ ಪ್ರಭಾವ ಬೀರುತ್ತಿದೆ. ಹಾಗಿರುವಾಗ ಚಿನ್ನವೇ ನಮಗೆ ಎಂದಿಗೂ ಸುರಕ್ಷಿತ. ಫಿಸಿಕಲ್ ಚಿನ್ನಕ್ಕಿಂತ ಚಿನ್ನದ ಇಟಿಎಫ್‌ಗಳು ಅತೀ ಸುರಕ್ಷಿತ. ಅದರಲ್ಲೂ ಕಳೆದ 6 ತಿಂಗಳಿನಲ್ಲಿ ಚಿನ್ನದ ಇಟಿಎಫ್‌ಗಳು ಶೇಕಡ 20ರಷ್ಟು ರಿಟರ್ನ್ ಅನ್ನು ನೀಡಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

ಗೋಲ್ಡ್ ಇಟಿಎಫ್‌ಗಳಿಗಿಂತ ಚಿನ್ನದ ಮೇಲೆ ಅಧಿಕ ಒಲವೇಕೆ?
ನಾವು ಫಿಸಿಕಲ್ ಚಿನ್ನದ ಮೇಲೆ ಹೂಡಿಕೆ ಮಾಡುವ ವಿಚಾರಕ್ಕೆ ಬಂದಾಗ ಎಂದಿಗೂ "ನೋ" ಎನ್ನಬಹುದು. ಸಾಮಾನ್ಯವಾಗಿ ನಾವು ಭೌತಿಕ ಚಿನ್ನವನ್ನು ಆಭರಣ ರೂಪದಲ್ಲಿ ಅಲಂಕಾರ ಮಾಡಲು ಬಳಕೆ ಮಾಡಬಹುದು. ಆದರೆ ಚಿನ್ನದ ಇಟಿಎಫ್‌ಗಳನ್ನು ನಾವು ಅಲಂಕಾರಕ್ಕೆ ಬಳಸಲು ಸಾಧ್ಯವಾಗದು. ಆದರೆ ಚಿನ್ನದಲ್ಲಿ ಹೂಡಿಕೆ ಮಾಡಲು ಬಯಸುವವರು ಸಹ ಭೌತಿಕ ಚಿನ್ನದಲ್ಲಿ ಹೂಡಿಕೆ ಮಾಡುತ್ತಾರೆ.
ನೀವು ಚಿನ್ನದ ಇಟಿಎಫ್‌ಗಳಿಗೆ ಹೋಲಿಕೆ ಮಾಡಿದಾಗ ಭೌತಿಕ ಚಿನ್ನದಲ್ಲಿ ನೀವು ಮಾರಾಟ ಮಾಡುವಾಗ ಅಧಿಕ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗದು. ಅಂದರೆ ಇಟಿಎಫ್‌ಗೆ ಅದುವೇ ಬೆಲೆ ಅಥವಾ ಅಧಿಕ ಬೆಲೆ ಲಭ್ಯವಾದರೆ, ಭೌತಿಕ ಚಿನ್ನಕ್ಕೆ ಕೊಂಚ ಕಡಿಮೆ ಬೆಲೆಯೇ ಲಭ್ಯವಾಗುತ್ತದೆ. ಇದಲ್ಲದೆ, ಭೌತಿಕ ಚಿನ್ನದಲ್ಲಿ ಕಳ್ಳತನದ ಚಿಂತೆ ಇಲ್ಲ. ಬ್ಯಾಂಕ್ ಲಾಕರ್ ಶುಲ್ಕವೂ ಇಲ್ಲ. ಚಿನ್ನದ ಇಟಿಎಫ್‌ಗಳು ಚಿನ್ನದ ಬೆಲೆಗಳನ್ನು ಟ್ರ್ಯಾಕ್ ಮಾಡುತ್ತವೆ. ನೀವು ಈಗಲೂ ಚಿನ್ನದ ಇಟಿಎಫ್ ಬದಲಾಗಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದರೆ ನಿರ್ಧಾರವನ್ನು ಮತ್ತೆ ಪರಿಶೀಲಿಸಬೇಕಾಗುತ್ತದೆ.
ಚಿನ್ನದ ಇಟಿಎಫ್‌ನಿಂದ ಲಭ್ಯವಾಗುವ ರಿಟರ್ನ್
1. ಇನ್‌ವೆಸ್ಕೊ ಗೋಲ್ಡ್ ಇಟಿಎಫ್: 6 ತಿಂಗಳಲ್ಲಿ ಶೇಕಡ 20.09ರಷ್ಟು, 1 ವರ್ಷದಲ್ಲಿ ಶೇಕಡ 13.67ರಷ್ಟು ರಿಟರ್ನ್
2. ಐಡಿಬಿಐ ಗೋಲ್ಡ್ ಇಟಿಎಫ್: 6 ತಿಂಗಳಲ್ಲಿ ಶೇಕಡ 20.45ರಷ್ಟು, 1 ವರ್ಷದಲ್ಲಿ ಶೇಕಡ 14.08ರಷ್ಟು ರಿಟರ್ನ್
3. ಎಸ್‌ಬಿಐ ಇಟಿಎಫ್ ಗೋಲ್ಡ್: 6 ತಿಂಗಳಲ್ಲಿ ಶೇಕಡ 19.99ರಷ್ಟು, 1 ವರ್ಷದಲ್ಲಿ ಶೇಕಡ 13.53ರಷ್ಟು ರಿಟರ್ನ್
4. ಬಿರ್ಲಾ ಸನ್‌ಲೈಫ್ ಗೋಲ್ಡ್: 6 ತಿಂಗಳಲ್ಲಿ ಶೇಕಡ 19.99ರಷ್ಟು, 1 ವರ್ಷದಲ್ಲಿ ಶೇಕಡ 13.52ರಷ್ಟು ರಿಟರ್ನ್
ಇಲ್ಲಿ ಗಮನಿಸಿ
ಇಟಿಎಫ್‌ನಲ್ಲಿ ಹೂಡಿಕೆ ಮಾಡುವುದು ಅಥವಾ ಬೇರೆ ಯಾವುದೇ ಕಮೋಡಿಟಿಯಲ್ಲಿ ಹೂಡಿಕೆ ಮಾಡುವುದು ಅತೀ ಅಪಾಯಕಾರಿಯಾಗಿದೆ. ಹೂಡಿಕೆ ಮಾಡುವುದಕ್ಕೂ ಮುನ್ನ ವೃತ್ತಿಪರರ ಸಲಹೆಯನ್ನು ನೀವು ಪಡೆಯುವುದು ಮುಖ್ಯವಾಗುತ್ತದೆ. ನೀವು ಈ ಲೇಖನವನ್ನು ಓದಿ ಇದರ ಆಧಾರದಲ್ಲಿ ಹೂಡಿಕೆಯನ್ನು ಮಾಡಿ ಅದರಿಂದ ಯಾವುದೇ ನಷ್ಟಕ್ಕೆ ಗ್ರೇನಿಯಂ ಇನ್ಫಾರ್‌ಮೇಷನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಆಗಲಿ ಅಥವಾ ಲೇಖಕರು ಆಗಲಿ ಜವಾಬ್ದಾರಿಯಲ್ಲ.
More From GoodReturns

ಚಿನ್ನದ ಬೆಲೆ ಇಂದು ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಚಿನ್ನದ ಬೆಲೆ ಏರಿಕೆ: ಇಂದೇ ಖರೀದಿಸುವುದು ಲಾಭವೇ ಅಥವಾ ನಷ್ಟವೇ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಚಿನ್ನದ ಬೆಲೆ ಇಳಿಕೆ: ಖರೀದಿಗೆ ಇದೇ ಸುವರ್ಣಾವಕಾಶವೇ?

ಚಿನ್ನದ ಬೆಲೆ ಏರಿಕೆ: ಖರೀದಿಗೆ ಮುನ್ನ ಈ ವಿಷಯ ತಿಳಿಯಿರಿ

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?



Click it and Unblock the Notifications