ಸ್ಪಾಟ್ ಮಾರುಕಟ್ಟೆಯಲ್ಲಿ ನೀರಸ ಬೇಡಿಕೆಯ ನಡುವೆ ಮಂಗಳವಾರ ಭಾರತದಲ್ಲಿ ಚಿನ್ನದ ಬೆಲೆ ಕುಸಿದಿದೆ. ಚಿನ್ನದ ಬೆಲೆ ಮುಖ್ಯವಾಗಿ ಜನರು ಎಷ್ಟು ಬಯಸುತ್ತಾರೆ ಮತ್ತು ಎಷ್ಟು ಲಭ್ಯವಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಕಳೆದ ನಾಲ್ಕು ದಿನಗಳಲ್ಲಿ ಚಿನ್ನದ ಬೆಲೆಯು 950 ರೂಪಾಯಿ ಇಳಿಕೆಯಾಗಿದೆ. ಒಟ್ಟಾಗಿ ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯನ್ನು ನಾವು ನೋಡಿದಾಗ ಏರಿಕೆಗಿಂತ ಅಧಿಕ ಇಳಿಕೆಯಾಗಿದೆ. ನಿರಂತರ ಬೆಲೆ ಏರಿಕೆಯಿಂದ ಚಿನ್ನ ಖರೀದಿ ಮಾಡಲು ಸಾಧ್ಯವಾಗದಿರುವುವರಿಗೆ ಈ ಬೆಲೆ ಇಳಿಕೆ ಕೊಂಚ ರಿಲೀಫ್ ನೀಡಿದೆ.

ಇಂದಿನ ಚಿನ್ನದ ದರ ಎಷ್ಟಿದೆ?
ಡಿಸೆಂಬರ್ 12ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 200 ರೂಪಾಯಿ ಇಳಿಕೆಯಾಗಿದ್ದು 56,750 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 220 ರೂಪಾಯಿ ಕುಸಿತವಾಗಿದ್ದು ಪ್ರಸ್ತುತ 61,910 ರೂಪಾಯಿ ಆಗಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 170 ರೂಪಾಯಿ ಇಳಿಕೆಯಾಗಿ 46,430 ರೂಪಾಯಿ ಆಗಿದೆ. ಒಂದು ಕೆಜಿ ಬೆಳ್ಳಿ ಬೆಲೆಯು ಇಂದು 100 ರೂಪಾಯಿ ಇಳಿಕೆಯಾಗಿದ್ದು, 75,700 ರೂಪಾಯಿ ಆಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ
ಈ ನಡುವೆ ಕೊನೆಯ ಡಿಸೆಂಬರ್ 12ರಂದು ಕೊನೆಯ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 61397.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 72400.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ.0.24ರಷ್ಟು ಏರಿಕೆ ಕಂಡಿದ್ದು 1,987.95 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.78ರಷ್ಟು ಹಿಗ್ಗಿದ್ದು 22.99 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ ಚಿನ್ನದ ಬೆಲೆಯು ಚೆನ್ನೈನಲ್ಲಿ 57200 ರೂಪಾಯಿ, ಮುಂಬೈನಲ್ಲಿ 56750 ರೂಪಾಯಿ, ದೆಹಲಿಯಲ್ಲಿ 56900 ರೂಪಾಯಿ, ಕೋಲ್ಕತ್ತಾದಲ್ಲಿ 56750 ರೂಪಾಯಿ ಮತ್ತು ಬೆಂಗಳೂರಿನಲ್ಲಿ 56750 ರೂಪಾಯಿ ಆಗಿದೆ.
ಹೈದಾರಾಬಾದ್‌ನಲ್ಲಿ 56750 ರೂಪಾಯಿ, ಕೇರಳದಲ್ಲಿ 56750 ರೂಪಾಯಿ, ಪುಣೆಯಲ್ಲಿ 56750 ರೂಪಾಯಿ, ಅಹಮದಾಬಾದ್‌ನಲ್ಲಿ ಚಿನ್ನದ ಬೆಲೆ 56800 ರೂಪಾಯಿ, ಕೋಯಮತ್ತೂರು 57200 ರೂಪಾಯಿ, ಚಂಡೀಗಢದಲ್ಲಿ 56900 ರೂಪಾಯಿ, ಮಂಗಳೂರಿನಲ್ಲಿ 56750 ರೂಪಾಯಿ, ಮೈಸೂರಿನಲ್ಲಿ 56750 ರೂಪಾಯಿ ಆಗಿದೆ.


Click it and Unblock the Notifications