ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯು ನಿರಂತರವಾಗಿ ಏರಿಕೆಯನ್ನು ಕಾಣುತ್ತಿದೆ. ನಾವು ಹತ್ತು ದಿನಗಳ ಬಂಗಾರ ದರವನ್ನು ಪರಿಶೀಲನೆ ಮಾಡಿದರೆ, ದರವು ಹತ್ತು ದಿನದಲ್ಲಿ 1200 ರೂಪಾಯಿಯಷ್ಟು ಏರಿಕೆಯಾಗಿದೆ. 22 ಕ್ಯಾರೆಟ್, 18 ಕ್ಯಾರೆಟ್ ಮತ್ತು 24 ಕ್ಯಾರೆಟ್‌ನ ಬೆಲೆಯು ಹೆಚ್ಚಳವಾಗಿದೆ.
ಇನ್ನು ನಾವು ಬೆಳ್ಳಿ ದರವನ್ನು ಪರಿಶೀಲನೆ ಮಾಡಿದರೆ, ದರವು ಇಂದು ಇಳಿಕೆಯಾಗಿದೆ. ನಿರಂತರವಾಗಿ ಏರಿಳಿತ ಕಾಣುತ್ತಾ ಬರುತ್ತಿದೆ. ಸತತವಾಗಿ ಎರಡು ದಿನಗಳ ಕಾಲ ಹೆಚ್ಚಳವಾಗಿದ್ದರೆ, ಮತ್ತೆ ಒಂದು ದಿನ ದರವು ಇಳಿಕೆಯಾಗಿದೆ. ಪ್ರಸ್ತುತ ನಿಮ್ಮ ನಗರದಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬ ವಿವರ ಇಲ್ಲಿದೆ ಮುಂದೆ ಓದಿ....

ಇಂದಿನ ಚಿನ್ನದ ದರ ಎಷ್ಟಿದೆ?
ಡಿಸೆಂಬರ್ 27ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 100 ರೂಪಾಯಿ ಏರಿಕೆಯಾಗಿದ್ದು 58,500 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 110 ರೂಪಾಯಿ ಹೆಚ್ಚಳವಾಗಿದ್ದು ಪ್ರಸ್ತುತ 63,820 ರೂಪಾಯಿ ಆಗಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 80 ರೂಪಾಯಿ ಏರಿಕೆಯಾಗಿ 47,860 ರೂಪಾಯಿ ಆಗಿದೆ. ಒಂದು ಕೆಜಿ ಬೆಳ್ಳಿ ಬೆಲೆಯು ಇಂದು 300 ರೂಪಾಯಿ ಇಳಿಕೆಯಾಗಿದ್ದು, 79,200 ರೂಪಾಯಿ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ ಚಿನ್ನದ ಬೆಲೆಯು ಚೆನ್ನೈನಲ್ಲಿ 59000 ರೂಪಾಯಿ, ಮುಂಬೈನಲ್ಲಿ 58500 ರೂಪಾಯಿ, ದೆಹಲಿಯಲ್ಲಿ 58650 ರೂಪಾಯಿ, ಕೋಲ್ಕತ್ತಾದಲ್ಲಿ 58500 ರೂಪಾಯಿ ಮತ್ತು ಬೆಂಗಳೂರಿನಲ್ಲಿ 58500 ರೂಪಾಯಿ ಆಗಿದೆ. ಹೈದಾರಾಬಾದ್‌ನಲ್ಲಿ 58500 ರೂಪಾಯಿ ಆಗಿದೆ.
ಕೇರಳದಲ್ಲಿ 58500 ರೂಪಾಯಿ, ಪುಣೆಯಲ್ಲಿ 58500 ರೂಪಾಯಿ, ಅಹಮದಾಬಾದ್‌ನಲ್ಲಿ ಚಿನ್ನದ ಬೆಲೆ 58500 ರೂಪಾಯಿ, ಕೋಯಮತ್ತೂರು 59000 ರೂಪಾಯಿ, ಚಂಡೀಗಢದಲ್ಲಿ 58650 ರೂಪಾಯಿ, ಮಂಗಳೂರಿನಲ್ಲಿ 58500 ರೂಪಾಯಿ, ಮೈಸೂರಿನಲ್ಲಿ 58500 ರೂಪಾಯಿ ಆಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ
ಈ ನಡುವೆ ಕೊನೆಯ ಡಿಸೆಂಬರ್ 27ರಂದು ಕೊನೆಯ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 63357.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 74750.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ.0.09ರಷ್ಟು ಇಳಿಕೆ ಕಂಡಿದ್ದು 2,064.31 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.91ರಷ್ಟು ಕುಗ್ಗಿದ್ದು 23.98 ಯುಎಸ್ ಡಾಲರ್ ಆಗಿದೆ.
ಬೆಳ್ಳಿ ದರ ಎಷ್ಟಿದೆ ತಿಳಿಯಿರಿ
22 ಕ್ಯಾರೆಟ್ ಚಿನ್ನದ ಬೆಲೆಯು ಚೆನ್ನೈನಲ್ಲಿ 80700 ರೂಪಾಯಿ, ಮುಂಬೈನಲ್ಲಿ 79200 ರೂಪಾಯಿ, ದೆಹಲಿಯಲ್ಲಿ 79200 ರೂಪಾಯಿ, ಕೋಲ್ಕತ್ತಾದಲ್ಲಿ 79200 ರೂಪಾಯಿ ಮತ್ತು ಬೆಂಗಳೂರಿನಲ್ಲಿ 77000 ರೂಪಾಯಿ ಆಗಿದೆ. ಹೈದಾರಾಬಾದ್‌ನಲ್ಲಿ 80700 ರೂಪಾಯಿ ಆಗಿದೆ.
ಕೇರಳದಲ್ಲಿ 80700 ರೂಪಾಯಿ, ಪುಣೆಯಲ್ಲಿ 79200 ರೂಪಾಯಿ, ಅಹಮದಾಬಾದ್‌ನಲ್ಲಿ ಚಿನ್ನದ ಬೆಲೆ 79200 ರೂಪಾಯಿ, ಕೋಯಮತ್ತೂರು 80700 ರೂಪಾಯಿ, ಚಂಡೀಗಢದಲ್ಲಿ 79200 ರೂಪಾಯಿ, ಮಂಗಳೂರಿನಲ್ಲಿ 77000 ರೂಪಾಯಿ, ಮೈಸೂರಿನಲ್ಲಿ 77000 ರೂಪಾಯಿ ಆಗಿದೆ.


Click it and Unblock the Notifications