ಭಾರತವು ವಿಶ್ವದಲ್ಲಿ ಅತೀ ಅಧಿಕ ಚಿನ್ನದ ಬೇಡಿಕೆಯನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ ಎಂಬ ವಿಚಾರ ಸಾಮಾನ್ಯವಾಗಿಯೇ ತಿಳಿದಿರುವುದು ಆಗಿದೆ. ಈ ವರ್ಷದ ಆರಂಭದಲ್ಲಿ ಜನವರಿ 19, 2023 ರಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಬಿಡುಗಡೆ ಮಾಡಿದ 'ಆಭರಣಗಳ ಬೇಡಿಕೆ ಮತ್ತು ವ್ಯಾಪಾರ' ವರದಿಯ ಪ್ರಕಾರ ಭಾರತ ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಗ್ರಾಹಕ ದೇಶವಾಗಿದೆ.
ಅಂದರೆ ಭಾರತದಲ್ಲಿ ಈಗ ಚಿನ್ನದ ಆಭರಣಗಳಿಗೆ ಬೇಡಿಕೆ ಹೆಚ್ಚಾಗಿದೆ. ಭಾರತವು 2021 ರಲ್ಲಿ 611 ಟನ್ ಹಳದಿ ಲೋಹದ ಆಭರಣಗಳನ್ನು ಖರೀದಿಸಿ ಚೀನಾದ ನಂತರ ಎರಡನೇ ಸ್ಥಾನದಲ್ಲಿದೆ. ಚೀನಾವು 673 ಟನ್‌ಗಳ ಚಿನ್ನದ ಆಭರಣಗಳನ್ನು ಖರೀದಿ ಮಾಡಿದೆ. ಈ ನಡುವೆ ಭಾರತದಲ್ಲಿ 18 ಕ್ಯಾರೆಟ್ ಚಿನ್ನಕ್ಕೆ ಬೇಡಿಕೆ ಅಧಿಕವಾಗಿದೆಯೇ? ಇಲ್ಲಿದ ವಿವರ ಮುಮದೆ ಓದಿ....

ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ, ಸರಳವಾಗಿರುವ ಹಳದಿ ಲೋಹದ ಆಭರಣಗಳು ಮಾರುಕಟ್ಟೆಯ ಪಾಲಿನ ಸರಿಸುಮಾರು ಶೇಕಡ 80 -85 ರಷ್ಟಿದೆ. ಅದರಲ್ಲಿ ಹೆಚ್ಚಾಗಿ 22-ಕ್ಯಾರೆಟ್ ಚಿನ್ನವಾಗಿದೆ. ಆದರೆ ಈಗ 18 ಕ್ಯಾರೆಟ್ ಚಿನ್ನದ ಆಭರಣಗಳ ಮಾರುಕಟ್ಟೆಯೂ ಹೆಚ್ಚುತ್ತಿದೆ. ದೈನಂದಿನವಾಗಿ ಬಳಕೆ ಮಾಡಲಾಗುವ ಅಥವಾ ತೊಡುವ ಆಭರಣಗಳು ಮಾರುಕಟ್ಟೆಯ ಸುಮಾರು ಶೇಕಡ 40-45 ರಷ್ಟಿದೆ.
ಭಾರತದಲ್ಲಿ ಚಿನ್ನದ ಆಭರಣಗಳ ರಫ್ತು 2015 ರಲ್ಲಿ 7.6 ಬಿಲಿಯನ್ ಡಾಲರ್ ಆಗಿದ್ದು, 2019 ರಲ್ಲಿ 12.4 ಬಿಲಿಯನ್ ಡಾಲರ್‌ಗೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ ಎಂದು ವರದಿ ಹೇಳಿದೆ. ಇನ್ನು ಈ ಮಾರುಕಟ್ಟೆ ಪಾಲಿನಲ್ಲಿ ವಧುವಿನ ಆಭರಣಗಳು ಸುಮಾರು ಶೇಕಡ 50-55 ರಷ್ಟಿದೆ.
ಏನಿದು 18 ಕ್ಯಾರೆಟ್ ಚಿನ್ನ?
ಇನ್ನು ನಾವು 18k ಚಿನ್ನದ ವಿಷಯಕ್ಕೆ ಬಂದಾಗ, ಇದು ಶೇಕಡ 75 ಚಿನ್ನ ಮತ್ತು ಶೇಕಡ 25 ರಷ್ಟು ಮಿಶ್ರಲೋಹ ಲೋಹಗಳನ್ನು ಒಳಗೊಂಡಿದೆ. ನಾವು 18 ಗ್ರಾಂನ 18 ಕ್ಯಾರೆಟ್ ಚಿನ್ನ ಖರೀದಿ ಮಾಡಿದರೆ, ಅದರಲ್ಲಿ 13.5 ಗ್ರಾಂ ಮಾತ್ರ ನಿಜವಾದ ಚಿನ್ನ ಇರುತ್ತದೆ. ಉಳಿದ 4.5 ಗ್ರಾಂ ತಾಮ್ರ, ಬೆಳ್ಳಿ ಅಥವಾ ನಿಕಾಲ್‌ನಂತಹ ಇತರ ಲೋಹಗಳನ್ನು ಒಳಗೊಂಡಿರುತ್ತದೆ.
ಇತ್ತೀಚೆಗೆ ಖರೀದಿದಾರರು ಆಗಾಗ್ಗೆ ತಮ್ಮ ಆಭರಣಗಳಿಗಾಗಿ 18k ಚಿನ್ನವನ್ನು ಆರಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಇದರಲ್ಲಿ ಇತರೆ ತಾಮ್ರಗಳ ಬೆರಕೆ ಅಧಿಕವಾಗಿರುವ ಕಾರಣ ಗಟ್ಟಿಯಾಗಿರುತ್ತದೆ ಮತ್ತು ಕೈಗೆಟುಕುವ ದರದಲ್ಲಿ ಲಭ್ಯವಾಗುತ್ತದೆ ಎಂಬುವುದು ಆಗಿದೆ.
ಆದರೆ ನಾವು 24 ಕ್ಯಾರೆಟ್ ಚಿನ್ನ ಖರೀದಿ ಮಾಡಿದರೆ, ಇದು ಶೇಕಡ 100 ರಷ್ಟು ಶುದ್ಧ ಚಿನ್ನವನ್ನು ಹೊಂದಿರುತ್ತದೆ. ಬೇರೆ ಯಾವುದೇ ಲೋಹ ಬೆರೆಸಲಾಗಿರುವುದಿಲ್ಲ. ಆದರೆ ಅಧಿಕ ಗಟ್ಟಿಯಾಗಿರುವುದಿಲ್ಲ, ಮೃದುವಾಗಿರುತ್ತದೆ.
22 ಕ್ಯಾರೆಟ್ ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಹೋಲಿಸಿದರೆ 24 ಕ್ಯಾರೆಟ್ ಚಿನ್ನ ಹೆಚ್ಚು ದುಬಾರಿಯಾಗಿದೆ. 24 ಕ್ಯಾರೆಟ್ ಚಿನ್ನವು ಮೃದುವಾಗಿರುತ್ತದೆ ಮತ್ತು ಸಾಮಾನ್ಯ ಆಭರಣಗಳನ್ನು ತಯಾರಿಸಲು ಬಳಸಲು ಸಾಧ್ಯವಾಗುವುದಿಲ್ಲ.
ಚಿನ್ನದ ಆಭರಣ ತಯಾರಿಕೆಯಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. 22 ಕ್ಯಾರೆಟ್ ಚಿನ್ನದ ಆಭರಣಗಳ ವಿಷಯಕ್ಕೆ ಬಂದರೆ, ಆಭರಣದ 22 ಭಾಗಗಳು ಚಿನ್ನದಿಂದ ಕೂಡಿರುತ್ತವೆ ಮತ್ತು ಉಳಿದ ಎರಡು ಭಾಗಗಳು ಸತು, ನಿಕಲ್ ಮತ್ತು ಇತರ ಮಿಶ್ರಲೋಹಗಳನ್ನು ಒಳಗೊಂಡಿರುತ್ತವೆ.
ಇತರ ಮಿಶ್ರಲೋಹಗಳನ್ನು ಬೆರೆಸಿದಾಗ ಮಾತ್ರವೇ ಚಿನ್ನದ ವಿನ್ಯಾಸವನ್ನು ಮಾಡಲು, ಗಟ್ಟಿಗೊಳಿಸಲು ಸಹಾಯವಾಗುತ್ತದೆ. ಅದರಿಂದಾಗಿ ಆಭರಣವು ಬಾಳಿಕೆ ಬರುತ್ತದೆ.
18 ಗ್ರಾಂ ಚಿನ್ನದತ್ತ ಗ್ರಾಹಕರ ಚಿತ್ತ
ಇತ್ತೀಚೆಗೆ ಗ್ರಾಹಕರು ತಮ್ಮ ಆಭರಣದಲ್ಲಿ ಬೇರೆ ಬೇರೆ ರೀತಿಯ ಡಿಸೈನ್ ನೋಡಲು ಬಯಸುತ್ತಾರೆ. ಅದಕ್ಕೆ 18 ಕ್ಯಾರೆಟ್ ಚಿನ್ನ ಉತ್ತಮ. ಅದು ಅಧಿಕ ಬಾಳಿಕೆ ಬರುತ್ತದೆ ಎಂದು ತಜ್ಞರು ಹೇಳುತ್ತಾರೆ. 18 ಕ್ಯಾರೆಟ್ ಚಿನ್ನವು ಹಗುರವಾದ ಆಭರಣಗಳಿಗೆ ಉತ್ತಮ ಆಯ್ಕೆಯಾಗಿದೆ.
ಭಾರತದಲ್ಲಿ 18 ಕ್ಯಾರೆಟ್ ಚಿನ್ನದ ಬೆಲೆ
ಭಾರತದಲ್ಲಿ 10 ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆ 120 ರೂಪಾಯಿ ಇಳಿಕೆಯ ನಂತರ 45,900 ರೂಪಾಯಿ ಆಗಿದೆ. ನೀವು ಭಾರತದಲ್ಲಿ 100 ಗ್ರಾಂ 18 ಕ್ಯಾರೆಟ್ ಹಳದಿ ಲೋಹವನ್ನು ಖರೀದಿಸಲು ಮುಂದಾದರೆ, ನಿಮಗೆ 4,59,000 ರೂಪಾಯಿ ಬೇಕಾಗುತ್ತದೆ.
ಈ ನಡುವೆ ಭಾರತದಲ್ಲಿ ಇಂದು 10 ಗ್ರಾಂ ಹಳದಿ ಲೋಹದ 22 ಕ್ಯಾರೆಟ್ ಬೆಲೆ 150 ರೂಪಾಯಿ ಇಳಿದು 56,100 ರೂಪಾಯಿಗೆ ತಲುಪಿದೆ. ಭಾರತದಲ್ಲಿ ಇಂದು 160 ರೂಪಾಯಿ ಕುಸಿದ ಬಳಿಕ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 61,200 ರೂಪಾಯಿ ಆಗಿದೆ.


Click it and Unblock the Notifications