ಚಿನ್ನದ ಬೆಲೆಯು ನಿರಂತರವಾಗಿ ಏರಿಳಿತ ಕಾಣುತ್ತಾ ಬರುತ್ತಿದೆ. ಆದರೆ ನಾವು ಕಳೆದ ಹತ್ತು ದಿನಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿನ ಬೆಳವಣಿಗೆಯನ್ನು ನೋಡಿದಾಗ ಇಳಿಕೆಗಿಂತ ಅಧಿಕ ದರ ಹೆಚ್ಚಳವಾಗಿದೆ. ಬೆಳ್ಳಿ ದರವು ಕೂಡಾ ಇದೇ ರೀತಿಯಾಗಿ ಏರಿಳಿತ ಕಾಣುತ್ತಾ ಬಂದಿದೆ.
ಕಳೆದ ಹತ್ತು ದಿನಗಳಲ್ಲಿ ಬೆಳ್ಳಿ ದರವು ಒಟ್ಟಾಗಿ ಐದು ಬಾರಿ ಹೆಚ್ಚಳವಾಗಿದ್ದರೆ, ಮೂರು ಬಾರಿ ಕುಸಿತ ಕಂಡಿದೆ. ಇನ್ನುಳಿದಂತೆ ಎರಡು ಬಾರಿ ಬೆಳ್ಳಿ ದರವು ಸ್ಥಿರತೆ ಕಾಯ್ದುಕೊಂಡಿದೆ. ಇನ್ನು 22 ಕ್ಯಾರೆಟ್ ಚಿನ್ನದ ದರವು 10 ದಿನದಲ್ಲಿ 4 ಬಾರಿ ಜಿಗಿದರೆ, ಎರಡು ಬಾರಿ ಇಳಿದಿದೆ. ಒಟ್ಟಾಗಿ ನಾಲ್ಕು ಬಾರಿ ಸ್ಥಿರವಾಗಿದೆ.

ಇಂದಿನ ಚಿನ್ನದ ದರ ಎಷ್ಟಿದೆ?
ನವೆಂಬರ್ 21ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ ಸ್ಥಿರವಾಗಿದ್ದು 56,850 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಯಥಾಸ್ಥಿತಿ ಕಾಯ್ದುಕೊಂಡಿದ್ದು ಪ್ರಸ್ತುತ 62,020 ರೂಪಾಯಿ ಆಗಿದೆ. ಆದರೆ 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 10 ರೂಪಾಯಿ ಕುಸಿದು 46,510 ರೂಪಾಯಿ ಆಗಿದೆ.
ಈ ನಡುವೆ ಇಂದು ಬೆಳ್ಳಿ ದರ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 400 ರೂಪಾಯಿ ಇಳಿಕೆ ಕಂಡಿದ್ದು ಪ್ರಸ್ತುತ 76,000 ರೂಪಾಯಿ ಆಗಿದೆ. ಹತ್ತು ದಿನಗಳಲ್ಲಿ 1 ಕೆಜಿ ಬೆಳ್ಳಿ ದರ 4500 ರೂಪಾಯಿ ಜಿಗಿತ ಕಂಡಿದ್ದು, 1500 ರೂಪಾಯಿ ಇಳಿಕೆಯಾಗಿದೆ.
ಈ ನಡುವೆ ಕೊನೆಯ ನವೆಂಬರ್ 21ರಂದು ಕೊನೆಯ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 61153.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 73237.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ.0.89ರಷ್ಟು ಏರಿಕೆ ಕಂಡಿದ್ದು 1,998.91 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.89ರಷ್ಟು ಹಿಗ್ಗಿದ್ದು 23.82 ಯುಎಸ್ ಡಾಲರ್ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 56,850 ರೂಪಾಯಿ (-------)
24 ಕ್ಯಾರೆಟ್ ಚಿನ್ನ: 62,020 ರೂಪಾಯಿ (-------)
ಮುಂಬೈ
22 ಕ್ಯಾರೆಟ್ ಚಿನ್ನ: 56,850 ರೂಪಾಯಿ (-------)
24 ಕ್ಯಾರೆಟ್ ಚಿನ್ನ: 62,020 ರೂಪಾಯಿ (-------)
ದೆಹಲಿ
22 ಕ್ಯಾರೆಟ್ ಚಿನ್ನ: 57,000 ರೂಪಾಯಿ (-------)
24 ಕ್ಯಾರೆಟ್ ಚಿನ್ನ: 62,170 ರೂಪಾಯಿ (-------)
ಕೇರಳ
22 ಕ್ಯಾರೆಟ್ ಚಿನ್ನ: 56,850 ರೂಪಾಯಿ (-------)
24 ಕ್ಯಾರೆಟ್ ಚಿನ್ನ: 62,020 ರೂಪಾಯಿ (-------)
ಮಂಗಳೂರು
22 ಕ್ಯಾರೆಟ್ ಚಿನ್ನ: 56,850 ರೂಪಾಯಿ (-------)
24 ಕ್ಯಾರೆಟ್ ಚಿನ್ನ: 62,020 ರೂಪಾಯಿ (-------)
ಮೈಸೂರು
22 ಕ್ಯಾರೆಟ್ ಚಿನ್ನ: 56,850 ರೂಪಾಯಿ (-------)
24 ಕ್ಯಾರೆಟ್ ಚಿನ್ನ: 62,020 ರೂಪಾಯಿ (-------)

Click it and Unblock the Notifications