ಚಿನ್ನದ ಬೆಲೆಗಳು ಇಂದು ಕೊಂಚ ಕಡಿಮೆಯಾಗಿದೆ. ಆದರೆ ಸೋಮವಾರ ಭಾರತದಲ್ಲಿ ಚಿನ್ನದ ಬೆಲೆಯು 62,000 ರೂಪಾಯಿಗೆ ತಲುಪಿದೆ. ಜಾಗತಿಕವಾಗಿ ಹಲವಾರು ಬದಲಾವಣೆಗಳು ಅಮೂಲ್ಯವಾದ ಚಿನ್ನದ ಬೆಲೆಯ ಮೇಲೆ ಪ್ರಭಾವ ಉಂಟು ಮಾಡುತ್ತದೆ. ಆದರೆ ಈ ವಾರದ ಫೆಡ್‌ನ ನೀತಿ ಸಭೆಗೆ ಮುಂಚಿತವಾಗಿ ಹೂಡಿಕೆದಾರರು ಜಾಗರೂಕರಾಗಿರುವುದರಿಂದ ಲಾಭಗಳು ಸೀಮಿತವಾಗಿವೆ.
ಭಾರತದಲ್ಲಿ ಈಗ ಹಬ್ಬದ ಸೀಸನ್ ಆಗಿದೆ. ಈ ಕಾರಣದಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇತ್ತೀಚೆಗೆ ಏರಿಕೆ ಕಂಡಿದೆ. ಹಾಗೆಯೇ ಹಬ್ಬದ ಸೀಸನ್‌ನಲ್ಲಿ ಚಿನ್ನ ಖರೀದಿ ಮಾಡುವುದು ಮಂಗಳಕರ ವಿಷಯವೆಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ, 10 ಗ್ರಾಂ 24-ಕ್ಯಾರೆಟ್ ಚಿನ್ನದ ಬೆಲೆ ಪ್ರಸ್ತುತ 62,400 ರೂಪಾಯಿ ಆಗಿದೆ. ಆದರೆ ಅದೇ ಪ್ರಮಾಣದ 22-ಕ್ಯಾರೆಟ್ ಚಿನ್ನವು ಪ್ರಸ್ತುತ ದೇಶದಲ್ಲಿ 57,200 ರೂಪಾಯಿ ಆಗಿದೆ.

ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್ (ಎಂಸಿಎಕ್ಸ್) ನಲ್ಲಿ ಡಿಸೆಂಬರ್ 2023 ರ ಮುಕ್ತಾಯಕ್ಕೆ ಗೋಲ್ಡ್ ಫ್ಯೂಚರ್ ಶೇಕಡ 0.08 ರಷ್ಟು ಏರಿಕೆಯಾಗಿ 61203 ರೂಪಾಯಿಗೆ ತಲುಪಿದೆ. ಜಾಗತಿಕವಾಗಿ, ಸ್ಪಾಟ್ ಗೋಲ್ಡ್ ಔನ್ಸ್‌ಗೆ ಶೇಕಡ 0.2 ರಷ್ಟು ಕುಸಿದು 2,001.37 ಡಾಲರ್‌ಗೆ ತಲುಪಿದೆ. ಯುಎಸ್ ಫ್ಯೂಚರ್ಸ್ ಗೋಲ್ಡ್ ಶೇಕಡ 0.6 ರಷ್ಟು ಏರಿಕೆಯಾಗಿ 2,011.20 ಡಾಲರ್‌ಗೆ ತಲುಪಿದೆ.
ಭಾರತದ ವಿವಿಧ ನಗರಗಳಲ್ಲಿ ಇಂದು ಚಿನ್ನದ ದರ
ಇಂದು, ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ (10 ಗ್ರಾಂ) ಚಿನ್ನದ ದರ 62,550 ರೂಪಾಯು ಆಗಿದ್ದರೆ. ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 57,350 ರೂಪಾಯು ಆಗಿದೆ. ದೆಹಲಿಯಲ್ಲಿ ಚಿನ್ನದ ದರವು ಚಂಡೀಗಢ, ಜೈಪುರ ಮತ್ತು ಲಕ್ನೋದಲ್ಲಿನ ಚಿನ್ನದ ಬೆಲೆಗೆ ಸಮನಾಗಿದೆ.
ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ (10 ಗ್ರಾಂ) ಚಿನ್ನದ ಬೆಲೆ 62,400 ರೂಪಾಯಿ ಆಗಿದ್ದರೆ, ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 57,200 ರೂಪಾಯಿ ಆಗಿದೆ. ಬೆಂಗಳೂರಿನಲ್ಲಿ ಚಿನ್ನದ ದರವು ಹೈದರಾಬಾದ್, ಕೇರಳ ಮತ್ತು ಕೋಲ್ಕತ್ತಾದ ಚಿನ್ನದ ಬೆಲೆಗೆ ಸಮನಾಗಿದೆ.
ಧನ್ತೇರಸ್ ಮತ್ತು ದೀಪಾವಳಿಯಂದು ಚಿನ್ನದ ಖರೀದಿ
ಸಾಮಾನ್ಯವಾಗಿ ದುರ್ಗಾ ಪೂಜೆಯ ನಂತರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬರುವುದರಿಂದ ಭಾರತದಲ್ಲಿ ಅನೇಕ ಜನರು ಧಂತೇರಸ್ ಮತ್ತು ದೀಪಾವಳಿಯಂದು ಚಿನ್ನವನ್ನು ಖರೀದಿಸಲು ಯೋಚಿಸುತ್ತಿದ್ದಾರೆ. ಆದರೆ ಜಾಗತಿಕ ಬೆಳವಣಿಗೆಯಿಂದಾಗಿ ಚಿನ್ನದ ಬೆಲೆ ಅಸ್ಥಿರವಾಗಿದೆ. ಆದ್ದರಿಂದಾಗಿ ಹಲವಾರು ಜನರು ಈಗ ಬೆಳ್ಳಿಯನ್ನು ಖರೀದಿ ಮಾಡಲು ಮುಂದಾಗಿದ್ದಾರೆ ಎಂದು ವರದಿ ಹೇಳಿದೆ.


Click it and Unblock the Notifications