ದೇಶದಲ್ಲಿ ಚಿನ್ನದ ಬೆಲೆಯು ನಿರಂತರವಾಗಿ ಏರಿಕೆಯನ್ನು ಕಾಣುತ್ತಾ ಬರುತ್ತಿದೆ. ಕಳೆದ ಹತ್ತು ದಿನಗಳ ಚಿನ್ನದ ಬೆಲೆಯನ್ನು ನಾವು ಪರಿಶೀಲನೆ ಮಾಡಿದಾಗ, ಕೇವಲ ಎರಡು ಬಾರಿ ಮಾತ್ರ ಚಿನ್ನದ ಬೆಲೆ ಕುಸಿತಗೊಂಡಿರುವುದನ್ನು ನಾವು ಕಾಣಬಹುದು. ಅದು ಕೂಡಾ ಹತ್ತು ಗ್ರಾಂ ಚಿನ್ನದ ಬೆಲೆಯು ಕಳೆದ ಹತ್ತು ದಿನಗಳಲ್ಲಿ ಬರೀ 100 ರೂಪಾಯಿ ಇಳಿಕೆಯಾಗಿದೆ.
ಆದರೆ ದರ ಏರಿಕೆಯು ಮಾತ್ರ ನಿರಂತರವಾಗಿ ನಡೆಯುತ್ತಿದೆ. ಸತತವಾಗಿ ಹಳದಿ ಲೋಹದ ಬೆಲೆಯು ಜಿಗಿತ ಕಂಡಿಲ್ಲದಿದ್ದರೂ ಕೂಡಾ, ನಿರಂತರವಾಗಿ ಏರುಗತಿಯಲ್ಲೇ ಸಾಗುತ್ತಿರುವುದನ್ನು ನಾವು ಕಾಣಬಹುದಾಗಿದೆ. ಒಟ್ಟಾರೆಯಾಗಿ ಹತ್ತು ದಿನಗಳಲ್ಲಿ ಬಂಗಾರ ದರವು 1650 ರೂಪಾಯಿ ಏರಿಕೆಯನ್ನು ಕಂಡಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಇಂದಿನ ಚಿನ್ನದ ದರ ಎಷ್ಟಿದೆ?
ನವೆಂಬರ್ 29ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 750 ರೂಪಾಯಿ ಏರಿಕೆಯಾಗಿದ್ದು 58,100 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 820 ರೂಪಾಯಿ ಜಿಗಿತವಾಗಿದ್ದು ಪ್ರಸ್ತುತ 63,380 ರೂಪಾಯಿ ಆಗಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 620 ರೂಪಾಯಿ ಹೆಚ್ಚಳವಾಗಿದ್ದು 47,540 ರೂಪಾಯಿ ಆಗಿದೆ.
ಈ ನಡುವೆ ಇಂದು ಬೆಳ್ಳಿ ದರ ಕೂಡಾ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 700 ರೂಪಾಯಿ ಹೆಚ್ಚಳ ಕಂಡಿದ್ದು ಪ್ರಸ್ತುತ 79,200 ರೂಪಾಯಿ ಆಗಿದೆ. ಹತ್ತು ದಿನಗಳಲ್ಲಿ 1 ಕೆಜಿ ಬೆಳ್ಳಿ ದರ 3600 ರೂಪಾಯಿ ಜಿಗಿತ ಕಂಡಿದ್ದು, ಬರೀ 400 ರೂಪಾಯಿ ಇಳಿಕೆಯಾಗಿದೆ.
ಈ ನಡುವೆ ಕೊನೆಯ ನವೆಂಬರ್ 29ರಂದು ಕೊನೆಯ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 62550.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 75403.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ.0.01ರಷ್ಟು ಇಳಿಕೆ ಕಂಡಿದ್ದು 2,044.23 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.56ರಷ್ಟು ಕುಗ್ಗಿದ್ದು 24.94 ಯುಎಸ್ ಡಾಲರ್ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 58,100 ರೂಪಾಯಿ (+750 ರೂಪಾಯಿ)
24 ಕ್ಯಾರೆಟ್ ಚಿನ್ನ: 63,380 ರೂಪಾಯಿ (+820 ರೂಪಾಯಿ)
ಮುಂಬೈ
22 ಕ್ಯಾರೆಟ್ ಚಿನ್ನ: 58,100 ರೂಪಾಯಿ (+750 ರೂಪಾಯಿ)
24 ಕ್ಯಾರೆಟ್ ಚಿನ್ನ: 63,380 ರೂಪಾಯಿ (+820 ರೂಪಾಯಿ)
ದೆಹಲಿ
22 ಕ್ಯಾರೆಟ್ ಚಿನ್ನ: 58,250 ರೂಪಾಯಿ (+750 ರೂಪಾಯಿ)
24 ಕ್ಯಾರೆಟ್ ಚಿನ್ನ: 63,530 ರೂಪಾಯಿ (+820 ರೂಪಾಯಿ)
ಕೇರಳ
22 ಕ್ಯಾರೆಟ್ ಚಿನ್ನ: 58,100 ರೂಪಾಯಿ (+750 ರೂಪಾಯಿ)
24 ಕ್ಯಾರೆಟ್ ಚಿನ್ನ: 63,380 ರೂಪಾಯಿ (+820 ರೂಪಾಯಿ)
ಮಂಗಳೂರು
22 ಕ್ಯಾರೆಟ್ ಚಿನ್ನ: 58,100 ರೂಪಾಯಿ (+750 ರೂಪಾಯಿ)
24 ಕ್ಯಾರೆಟ್ ಚಿನ್ನ: 63,380 ರೂಪಾಯಿ (+820 ರೂಪಾಯಿ)
ಮೈಸೂರು
22 ಕ್ಯಾರೆಟ್ ಚಿನ್ನ: 58,100 ರೂಪಾಯಿ (+750 ರೂಪಾಯಿ)
24 ಕ್ಯಾರೆಟ್ ಚಿನ್ನ: 63,380 ರೂಪಾಯಿ (+820 ರೂಪಾಯಿ)

Click it and Unblock the Notifications