ಇಸ್ರೇಲ್ ಹಮಾಸ್ ನಡುವೆ ಯುದ್ಧ ನಡೆಯುತ್ತಿದೆ. ಈ ಬೆನ್ನಲ್ಲೇ ಭಾರತದಲ್ಲಿ ಚಿನ್ನದ ಬೆಲೆಯು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕೆಲವು ವಾರಗಳ ಹಿಂದೆ ನಿರಂತರವಾಗಿ ಕುಸಿತ ಕಾಣುತ್ತಾ ಬಂದಿದ್ದ ಚಿನ್ನದ ಬೆಲೆಯು ಇಸ್ರೇಲ್ ಯುದ್ಧದ ಬಳಿಕ ಬಂಗಾರ ದರವು ಒಂದು ವಾರದಲ್ಲಿ ಗರಿಷ್ಠ ಮಟ್ಟಕ್ಕೆ ಏರಿಕೆಯಾಗುತ್ತಾ ಸಾಗುತ್ತಿದೆ.
ಅಕ್ಟೋಬರ್ 7, 2023 ರಿಂದ ಭಾರತದಲ್ಲಿ ಚಿನ್ನದ ಬೆಲೆಗಳು ಏರಿಕೆ ಕಾಣುತ್ತಿವೆ. ಅಕ್ಟೋಬರ್ 11 ರಂದು ಮಾತ್ರ ಬದಲಾಗದೆ ಉಳಿದಿದೆ. ಉಳಿದೆಲ್ಲ ದಿನಗಳು ಬಂಗಾರ ಬೆಲೆ ಹೆಚ್ಚಳವಾಗುತ್ತಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಅಕ್ಟೋಬರ್ 7 ರಿಂದ ಅಕ್ಟೋಬರ್ 12 ರವರೆಗೆ 1600 ರೂಪಾಯಿ ಏರಿಕೆಯಾಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1750 ರೂಪಾಯಿ ಹೆಚ್ಚಳವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸರಕು ಮತ್ತು ಕರೆನ್ಸಿ ವಿಭಾಗದ ಮುಖ್ಯಸ್ಥ ಅನುಜ್ ಗುಪ್ತಾ, "ಜಾಗತಿಕವಾಗಿ ಕೆಲವು ಬೆಳವಣಿಗಳಿಂದಾಗಿ ಚಿನ್ನದ ಮಾರುಕಟ್ಟೆಯಲ್ಲಿ ಬೇಡಿಕೆ ಕಂಡುಬಂದಿದೆ ಎಂದು ನಾವು ಗಮನಿಸಿದ್ದೇವೆ. ಡಾಲರ್ ಸೂಚ್ಯಂಕವು ಕೂಡಾ ಬದಲಾಗಿದೆ. ಚಿನ್ನದ ಬೆಲೆಗೆ ಬೆಂಬಲ ಸೂಚಿಸುವ ವಲಯವಿದೆ. ಡಾಲರ್ ಸೂಚ್ಯಂಕವು 105.40 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ," ಎಂದು ಹೇಳಿದರು.
"ಡಾಲರ್ ಸೂಚ್ಯಂಕವು ಚಿನ್ನಕ್ಕೆ ಬೆಂಬಲವನ್ನು ಸೂಚಿಸುವಂತಿದೆ. ಡಾಲರ್ ಸೂಚ್ಯಂಕವು 105.40 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಮುಂಬರುವ ಸಭೆಯಲ್ಲಿ ಎಫ್‌ಒಎಂಸಿ ಬಡ್ಡಿದರವನ್ನು ಸ್ಥಿರವಾಗಿ ಇರಿಸುವ ನಿರೀಕ್ಷೆಯಿದೆ," ಎಂದು ಅನುಜ್ ಗುಪ್ತಾ ತಿಳಿಸಿದರು.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 54,000 ರೂಪಾಯಿ (+350 ರೂಪಾಯಿ)
24 ಕ್ಯಾರೆಟ್ ಚಿನ್ನ: 58,910 ರೂಪಾಯಿ (+380 ರೂಪಾಯಿ)
ಮುಂಬೈ
22 ಕ್ಯಾರೆಟ್ ಚಿನ್ನ: 54,000 ರೂಪಾಯಿ (+350 ರೂಪಾಯಿ)
24 ಕ್ಯಾರೆಟ್ ಚಿನ್ನ: 58,910 ರೂಪಾಯಿ (+380 ರೂಪಾಯಿ)
ದೆಹಲಿ
22 ಕ್ಯಾರೆಟ್ ಚಿನ್ನ: 54,150 ರೂಪಾಯಿ (+350 ರೂಪಾಯಿ)
24 ಕ್ಯಾರೆಟ್ ಚಿನ್ನ: 59,060 ರೂಪಾಯಿ (+380 ರೂಪಾಯಿ)
ಕೇರಳ
22 ಕ್ಯಾರೆಟ್ ಚಿನ್ನ: 54,000 ರೂಪಾಯಿ (+350 ರೂಪಾಯಿ)
24 ಕ್ಯಾರೆಟ್ ಚಿನ್ನ: 58,910 ರೂಪಾಯಿ (+380 ರೂಪಾಯಿ)
ಮಂಗಳೂರು
22 ಕ್ಯಾರೆಟ್ ಚಿನ್ನ: 54,000 ರೂಪಾಯಿ (+350 ರೂಪಾಯಿ)
24 ಕ್ಯಾರೆಟ್ ಚಿನ್ನ: 58,910 ರೂಪಾಯಿ (+380 ರೂಪಾಯಿ)
ಮೈಸೂರು
22 ಕ್ಯಾರೆಟ್ ಚಿನ್ನ: 54,000 ರೂಪಾಯಿ (+350 ರೂಪಾಯಿ)
24 ಕ್ಯಾರೆಟ್ ಚಿನ್ನ: 58,910 ರೂಪಾಯಿ (+380 ರೂಪಾಯಿ)
ಈ ನಡುವೆ ಕೊನೆಯ ಅಕ್ಟೋಬರ್ 12ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 58165.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 69902.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ.0.31ರಷ್ಟು ಏರಿಕೆ ಕಂಡಿದ್ದು 1,881.33 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.60ರಷ್ಟು ಹಿಗ್ಗಿದ್ದು 22.19 ಯುಎಸ್ ಡಾಲರ್ ಆಗಿದೆ.

Click it and Unblock the Notifications