Gold Price: ಚಿನ್ನದ ಬೆಲೆ 10 ದಿನದಲ್ಲಿ 2810 ರೂಪಾಯಿ ಏರಿಕೆ, ಈಗ ಎಷ್ಟಿದೆ ಪರಿಶೀಲಿಸಿ

ಇಸ್ರೇಲ್-ಹಮಾಸ್ ಯುದ್ಧದ ನಂತರ ಸತತ ಎರಡು ದಿನಗಳ ಕಾಲ ಕುಸಿ ಚಿನ್ನದ ಬೆಲೆಯು ಮತ್ತೆ ಗಗನಕ್ಕೆ ಏರಿಕೆಯಾಗಿದೆ. ಯುದ್ಧ ಪೀಡಿತ ಗಾಜಾದಲ್ಲಿ ಆಸ್ಪತ್ರೆಯೊಂದರಲ್ಲಿ ಸ್ಫೋಟ ಸಂಭವಿಸಿ ಸುಮಾರು 500 ಜನರು ಸಾವನ್ನಪ್ಪಿದ್ದಾರೆ. ಈ ನಡುವೆ ಚಿನ್ನದ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಾ ಸಾಗುತ್ತಿದೆ.

ಭಾರತದಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 2 ದಿನಗಳಲ್ಲಿ 810 ರೂಪಾಯಿ ಏರಿಕೆಯಾಗಿದ್ದು, ಇಂದು 60,760 ರೂಪಾಯಿಗಳಿಗೆ ತಲುಪಿದೆ. ಈ ನಡುವೆ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಎರಡು ದಿನಗಳ ಅವಧಿಯಲ್ಲಿ 750 ರೂಪಾಯಿ ಹೆಚ್ಚಳವಾಗಿ, 55,700 ರೂಪಾಯಿಗೆ ತಲುಪಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ 2810 ರೂಪಾಯಿ ಹೆಚ್ಚಳವಾಗಿದೆ.

 ಚಿನ್ನದ ಬೆಲೆ 10 ದಿನದಲ್ಲಿ 2810 ರೂಪಾಯಿ ಏರಿಕೆ, ಎಷ್ಟಿದೆ ಪರಿಶೀಲಿಸ

ನಡೆಯುತ್ತಿರುವ ಮಧ್ಯಪ್ರಾಚ್ಯ ಯುದ್ಧ ಮತ್ತು ಯುಎಸ್ ಯೀಲ್ಡ್‌ಗಳ ನಡುವೆ ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಅಮೂಲ್ಯವಾದ ಲೋಹದ ಬೆಲೆಗಳು ಏರುತ್ತಿವೆ. ಅಕ್ಟೋಬರ್ 14, 2023 ರಂದು, 10 ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 1530 ರೂಪಾಯಿ ಮತ್ತು 10 ಗ್ರಾಂನ 22 ಕ್ಯಾರೆಟ್ ಚಿನ್ನಕ್ಕೆ 1400 ರೂಪಾಯಿ ಗರಿಷ್ಠ ಏಕದಿನ ಲಾಭ ಉಂಟಾಗಿದೆ. ಅಕ್ಟೋಬರ್ 10 ರಿಂದ ಇಲ್ಲಿಯವರೆಗೆ, 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 2810 ರೂಪಾಯಿ ಏರಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 3060 ರೂಪಾಯಿ ಹೆಚ್ಚಳವಾಗಿದೆ.

10 ಗ್ರಾಂ ಲೆಕ್ಕಾಚಾರದಲ್ಲಿ

ಬೆಂಗಳೂರು

22 ಕ್ಯಾರೆಟ್ ಚಿನ್ನ: 55,700 ರೂಪಾಯಿ (+250 ರೂಪಾಯಿ)
24 ಕ್ಯಾರೆಟ್ ಚಿನ್ನ: 60,760 ರೂಪಾಯಿ (+270 ರೂಪಾಯಿ)

ಮುಂಬೈ

22 ಕ್ಯಾರೆಟ್ ಚಿನ್ನ: 55,700 ರೂಪಾಯಿ (+250 ರೂಪಾಯಿ)
24 ಕ್ಯಾರೆಟ್ ಚಿನ್ನ: 60,760 ರೂಪಾಯಿ (+270 ರೂಪಾಯಿ)

ದೆಹಲಿ

22 ಕ್ಯಾರೆಟ್ ಚಿನ್ನ: 55,850 ರೂಪಾಯಿ (+250 ರೂಪಾಯಿ)
24 ಕ್ಯಾರೆಟ್ ಚಿನ್ನ: 60,910 ರೂಪಾಯಿ (+270 ರೂಪಾಯಿ)

ಕೇರಳ

22 ಕ್ಯಾರೆಟ್ ಚಿನ್ನ: 55,700 ರೂಪಾಯಿ (+350 ರೂಪಾಯಿ)
24 ಕ್ಯಾರೆಟ್ ಚಿನ್ನ: 60,760 ರೂಪಾಯಿ (+270 ರೂಪಾಯಿ)

ಮಂಗಳೂರು

22 ಕ್ಯಾರೆಟ್ ಚಿನ್ನ: 55,700 ರೂಪಾಯಿ (+250 ರೂಪಾಯಿ)
24 ಕ್ಯಾರೆಟ್ ಚಿನ್ನ: 60,760 ರೂಪಾಯಿ (+270 ರೂಪಾಯಿ)

ಮೈಸೂರು

22 ಕ್ಯಾರೆಟ್ ಚಿನ್ನ: 55,700 ರೂಪಾಯಿ (+250 ರೂಪಾಯಿ)
24 ಕ್ಯಾರೆಟ್ ಚಿನ್ನ: 60,760 ರೂಪಾಯಿ (+270 ರೂಪಾಯಿ)

ಯುದ್ಧದ ಸಮಯದಲ್ಲಿ ಚಿನ್ನ ಸುರಕ್ಷಿತ ತಾಣ

ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ಸಂದರ್ಭದಲ್ಲಿ ಜಗತ್ತಿನಾದ್ಯಂತ ಚಿನ್ನವು ಹೂಡಿಕದಾರರಿಗೆ ಸುರಕ್ಷಿತ ಹೂಡಿಕೆ ಆಯ್ಕೆಯಾಗಿದೆ. ಹಳದಿ ಲೋಹದ ಮಾರುಕಟ್ಟೆಯ ಮೇಲೆ ಯುದ್ಧದ ಪ್ರಭಾವವು ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಸ್ವರ್ಗವೆಂದು ಪರಿಗಣಿಸುವಂತೆ ಮಾಡಿದೆ.

ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದಾಗ, ಚಿನ್ನದ ಬೆಲೆಗಳು ಏರಿಕೆಯನ್ನು ಕಂಡಿದೆ. ಉಕ್ರೇನ್-ರಷ್ಯಾ ಯುದ್ಧ ಪ್ರಾರಂಭವಾದ ಸುಮಾರು ಒಂದು ವಾರದ ನಂತರ, ಬೆಲೆಬಾಳುವ ಲೋಹದ ಬೆಲೆ ಔನ್ಸ್‌ಗೆ 2000 ಡಾಲರ್ ಮೀರಿದೆ. ಮಧ್ಯಪ್ರಾಚ್ಯದಲ್ಲಿ ಯುದ್ಧ ಪ್ರಾರಂಭವಾದ ನಂತರ ಈಗ ಇದೇ ರೀತಿಯ ಪರಿಸ್ಥಿತಿ ಸಂಭವಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+