ಹಳದಿ ಲೋಹವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಚಿನ್ನದ ಬೆಲೆ ಸಾರ್ವಕಾಲಿಕವಾಗಿ ಜಿಗಿತ ಕಂಡಿದೆ. ಎಂಸಿಎಕ್ಸ್ ಚಿನ್ನದ ಬೆಲೆ 64,000 ರೂಪಾಯಿ ಗಡಿ ದಾಟಿದೆ. 24-ಕ್ಯಾರೆಟ್ ಪ್ರತಿ 10 ಗ್ರಾಂಗೆ ಚಿನ್ನದ ಬೆಲೆ 64,200 ರೂಪಾಯಿಯ ದಾಖಲೆಯ ಮಟ್ಟವನ್ನು ತಲುಪಿದೆ.
18-ಕ್ಯಾರೆಟ್ ಮತ್ತು 22-ಕ್ಯಾರೆಟ್ ಚಿನ್ನದ ಬೆಲೆಯು ಕೂಡಾ ಸಾರ್ವಕಾಲಿಕವಾಗಿ ಏರಿಕೆಯಾಗಿದೆ. ಈ ನಡುವೆ ಸ್ಪಾಟ್ ಗೋಲ್ಡ್ 2,100 ಡಾಲರ್‌ಗೆ ತಲುಪಿ, ಅಗ್ರಸ್ಥಾನಕ್ಕೆ ಏರಿದೆ. ಈಗಾಗಲೇ ಷೇರು ಮಾರುಕಟ್ಟೆಯು ಕೂಡಾ ಸಾರ್ವಕಾಲಿಕವಾಗಿ ಏರಿಕೆಯಾಗಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಚಿನ್ನದ ಬೆಲೆ ಏರಿಕೆಗೆ ಕಾರಣ?
ಉತ್ತರ ಭಾರತದ ಮೂರು ಪ್ರಮುಖ ರಾಜ್ಯಗಳಲ್ಲಿ ಬಿಜೆಪಿ ಪಕ್ಷವು ಗೆಲುವನ್ನು ಸಾಧಿಸಿದೆ. ಇದರ ಪ್ರಭಾವ ಆರ್ಥಿಕ ಮಾರುಕಟ್ಟೆಯ ಮೇಲೆಯೂ ಬೀರಿದೆ. ಭಾರತದ ಮಾರುಕಟ್ಟೆಯು ಇಂದು ಸಾರ್ವಕಾಲಿಕವಾಗಿ ಜಿಗಿದಿದೆ. ಇದರ ಪ್ರಭಾವ ಚಿನ್ನದ ಬೆಲೆಯ ಮೇಲೆಯೂ ಬೀರಿದೆ.
ಇಂದಿನ ಚಿನ್ನದ ದರ ಎಷ್ಟಿದೆ?
ಡಿಸೆಂಬರ್ 4ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 400 ರೂಪಾಯಿ ಏರಿಕೆಯಾಗಿದ್ದು 58,850 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 440 ರೂಪಾಯಿ ಜಿಗಿತವಾಗಿದ್ದು ಪ್ರಸ್ತುತ 64,200 ರೂಪಾಯಿ ಆಗಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 330 ರೂಪಾಯಿ ಹೆಚ್ಚಳವಾಗಿದ್ದು 48,150 ರೂಪಾಯಿ ಆಗಿದೆ. ಒಂದು ಕೆಜಿ ಬೆಳ್ಳಿ ಬೆಲೆಯು ಇಂದು ಸ್ಥಿರವಾಗಿದ್ದು, 80500 ರೂಪಾಯಿ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 58,850 ರೂಪಾಯಿ (+400 ರೂಪಾಯಿ)
24 ಕ್ಯಾರೆಟ್ ಚಿನ್ನ: 64,200 ರೂಪಾಯಿ (+440 ರೂಪಾಯಿ)
ಮುಂಬೈ
22 ಕ್ಯಾರೆಟ್ ಚಿನ್ನ: 58,850 ರೂಪಾಯಿ (+400 ರೂಪಾಯಿ)
24 ಕ್ಯಾರೆಟ್ ಚಿನ್ನ: 64,200 ರೂಪಾಯಿ (+440 ರೂಪಾಯಿ)
ದೆಹಲಿ
22 ಕ್ಯಾರೆಟ್ ಚಿನ್ನ: 59,000 ರೂಪಾಯಿ (+400 ರೂಪಾಯಿ)
24 ಕ್ಯಾರೆಟ್ ಚಿನ್ನ: 64,350 ರೂಪಾಯಿ (+440 ರೂಪಾಯಿ)
ಕೇರಳ
22 ಕ್ಯಾರೆಟ್ ಚಿನ್ನ: 58,850 ರೂಪಾಯಿ (+400 ರೂಪಾಯಿ)
24 ಕ್ಯಾರೆಟ್ ಚಿನ್ನ: 64,200 ರೂಪಾಯಿ (+440 ರೂಪಾಯಿ)
ಮಂಗಳೂರು
22 ಕ್ಯಾರೆಟ್ ಚಿನ್ನ: 58,850 ರೂಪಾಯಿ (+400 ರೂಪಾಯಿ)
24 ಕ್ಯಾರೆಟ್ ಚಿನ್ನ: 64,200 ರೂಪಾಯಿ (+440 ರೂಪಾಯಿ)
ಮೈಸೂರು
22 ಕ್ಯಾರೆಟ್ ಚಿನ್ನ: 58,850 ರೂಪಾಯಿ (+400 ರೂಪಾಯಿ)
24 ಕ್ಯಾರೆಟ್ ಚಿನ್ನ: 64,200 ರೂಪಾಯಿ (+440 ರೂಪಾಯಿ)
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ
ಈ ನಡುವೆ ಕೊನೆಯ ಡಿಸೆಂಬರ್ 4ರಂದು ಕೊನೆಯ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 63471.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 76137.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ.2.31ರಷ್ಟು ಇಳಿಕೆ ಕಂಡಿದ್ದು 2,069.74 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 2.26ರಷ್ಟು ಕುಗ್ಗಿದ್ದು 25.16 ಯುಎಸ್ ಡಾಲರ್ ಆಗಿದೆ.

Click it and Unblock the Notifications