ಚಿನ್ನದ ಬೆಲೆಯು ನಿರಂತರವಾಗಿ ಕೊಂಚ ಕೊಂಚ ಪ್ರಮಾಣದಲ್ಲಿ ಏರಿಳಿತವಾಗುತ್ತಿದೆ. ಭಾರತದಲ್ಲಿ ಚಿನ್ನದ ಬೆಲೆ ಮಂಗಳವಾರ ಫೆಬ್ರವರಿ 13 ರಂದು ಇನ್ನಷ್ಟು ಇಳಿಕೆಯಾಗಿದೆ. ಸತತವಾಗಿ ದರವು ಎರಡು ದಿನಗಳು ಸ್ಥಿರವಾಗಿದ್ದು, ಈಗ ಕೊಂಚ ಪ್ರಮಾಣದಲ್ಲಿ ಇಳಿಕೆಯಾಗಿದೆ.
ನಾಳೆ ಪ್ರೇಮಿಗಳ ದಿನ ಇರಲಿದ್ದು, ನೀವು ನಿಮ್ಮ ಸಂಗಾತಿಗೆ ಬಂಗಾರದ ಉಡುಗೊರೆಯನ್ನು ನೀಡಲು ಬಯಸಿದರೆ ದರವನ್ನು ತಿಳಿಯುವುದು ಉತ್ತಮವಾಗಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

ಕಳೆದ ಐದು ದಿನಗಳಲ್ಲಿ ಮೂರು ದಿನಗಳ ಕಾಲ ಚಿನ್ನದ ಬೆಲೆಯು ಇಳಿಕೆಯಾಗಿದೆ. ಹತ್ತು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯು ಐದು ದಿನದಲ್ಲಿ ಸುಮಾರು 400 ರೂಪಾಯಿ ಇಳಿಕೆ ಕಂಡಿದೆ. ಇನ್ನು ನಾವು 24 ಕ್ಯಾರೆಟ್ ಚಿನ್ನದ ಬೆಲೆ ನೋಡಿದಾಗ ಅದು ನಾಲ್ಕು ದಿನದಲ್ಲಿ ಸುಮಾರು 390 ರೂಪಾಯಿ ಇಳಿಕೆಯಾಗಿದೆ. ನಿಮ್ಮ ನಗರದಲ್ಲಿ ಎಷ್ಟಿದೆ ಚಿನ್ನದ ದರ ಎಂಬ ಮಾಹಿತಿ ಈ ಕೆಳಗಿದೆ ಮುಂದೆ ಓದಿ....
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ
ಫೆಬ್ರವರಿ 13ರಂದು ಈ ಸಮಯದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 62090.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 71419.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ.0.31ರಷ್ಟು ಏರಿಕೆ ಕಂಡಿದ್ದು 2,025.29 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.78ರಷ್ಟು ಹಿಗ್ಗಿದ್ದು 22.87 ಯುಎಸ್ ಡಾಲರ್ ಆಗಿದೆ.
ಇಂದಿನ ಚಿನ್ನದ ದರ ಎಷ್ಟಿದೆ?
ಫೆಬ್ರವರಿ 13ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 100 ರೂಪಾಯಿ ಇಳಿಕೆಯಾಗಿದ್ದು 57,600 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 110 ರೂಪಾಯಿ ಕುಸಿತವಾಗಿದ್ದು ಪ್ರಸ್ತುತ 62,840 ರೂಪಾಯಿ ಆಗಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 80 ರೂಪಾಯಿ ಇಳಿಕೆಯಾಗಿ 47,130 ರೂಪಾಯಿ ಆಗಿದೆ. ಒಂದು ಕೆಜಿ ಬೆಳ್ಳಿ ಬೆಲೆಯು ಸ್ಥಿರವಾಗಿದ್ದು 75,500 ರೂಪಾಯಿ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ ಚಿನ್ನದ ಬೆಲೆಯು ಚೆನ್ನೈನಲ್ಲಿ 58100 ರೂಪಾಯಿ, ಮುಂಬೈನಲ್ಲಿ 57600 ರೂಪಾಯಿ, ದೆಹಲಿಯಲ್ಲಿ 57750 ರೂಪಾಯಿ ಆಗಿದೆ. ಕೋಲ್ಕತ್ತಾದಲ್ಲಿ, ಬೆಂಗಳೂರಿನಲ್ಲಿ, ಹೈದಾರಾಬಾದ್‌ನಲ್ಲಿ 57600 ರೂಪಾಯಿ ಆಗಿದೆ.
ಕೇರಳದಲ್ಲಿ, ಪುಣೆಯಲ್ಲಿ 57600 ರೂಪಾಯಿ, ಅಹಮದಾಬಾದ್‌ನಲ್ಲಿ ಚಿನ್ನದ ಬೆಲೆ 57650 ರೂಪಾಯಿ, ಕೋಯಮತ್ತೂರು 58100 ರೂಪಾಯಿ, ಚಂಡೀಗಢದಲ್ಲಿ 57750 ರೂಪಾಯಿ, ಮಂಗಳೂರಿನಲ್ಲಿ, ಮೈಸೂರಿನಲ್ಲಿ 57600 ರೂಪಾಯಿ ಆಗಿದೆ.


Click it and Unblock the Notifications