ಚಿನ್ನದ ದರ ಗರಿಷ್ಠ ಮಟ್ಟದಿಂದ 5700 ರು. ಕುಸಿತ; ಬಣ್ಣ ಕಳೆದುಕೊಂಡ ಬೆಳ್ಳಿ

ಭಾರತೀಯ ಮಾರುಕಟ್ಟೆಯಲ್ಲಿ ಮಂಗಳವಾರ (ಅಕ್ಟೋಬರ್ 6, 2020) ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಇಳಿಕೆ ಕಂಡುಬಂತು. ಬೆಳಗಿನ ವಹಿವಾಟಿನಲ್ಲಿ MCX ಡಿಸೆಂಬರ್ ಫ್ಯೂಚರ್ಸ್ 0.15% ಇಳಿಕೆ ಕಂಡು, ಪ್ರತಿ 10 ಗ್ರಾಮ್ ಗೆ 50,550 ರುಪಾಯಿಯಂತೆ ವಹಿವಾಟು ನಡೆಸಿತು. ಇನ್ನು ಬೆಳ್ಳಿ ದರವು 0.12% ಕುಸಿತ ಕಂಡು, ಪ್ರತಿ ಕೇಜಿಗೆ 61,868 ರುಪಾಯಿಯಂತೆ ವ್ಯವಹಾರ ಮಾಡಿತು.

ಈ ಹಿಂದಿನ ಸೆಷನ್ ನಲ್ಲಿ ದಿನದ ಕನಿಷ್ಠ ಮಟ್ಟವಾದ 50,030 ರುಪಾಯಿಯಿಂದ ಚೇತರಿಕೆ ಕಂಡ ಚಿನ್ನದ ಬೆಲೆಯು 0.1% ಹೆಚ್ಚಳವಾಗಿತ್ತು. ಇನ್ನು ಬೆಳ್ಳಿಯ ದರದಲ್ಲೂ 1% ಏರಿಕೆ ಆಗಿತ್ತು. ಆಗಸ್ಟ್ 7ನೇ ತಾರೀಕಿನಂದು ಪ್ರತಿ 10 ಗ್ರಾಮ್ ಚಿನ್ನದ ದರವು ಗರಿಷ್ಠ ಮಟ್ಟವಾದ 56,200 (ಪ್ರತಿ 10 ಗ್ರಾಮ್ ಗೆ) ರುಪಾಯಿ ಮುಟ್ಟಿತ್ತು. ಕಳೆದ ಹಲವು ಸೆಷನ್ ಗಳಿಂದಲೇ ಚಿನ್ನದ ದರದಲ್ಲಿ ಏರಿಳಿತ ಆಗುತ್ತಲೇ ಇದೆ.

ಪ್ರತಿ ಕೇಜಿಗೆ 80,000 ರುಪಾಯಿ ಸಮೀಪ ಇದ್ದ ಬೆಳ್ಳಿ ಬೆಳ್ಳಿ

ಪ್ರತಿ ಕೇಜಿಗೆ 80,000 ರುಪಾಯಿ ಸಮೀಪ ಇದ್ದ ಬೆಳ್ಳಿ ಬೆಳ್ಳಿ

ಇನ್ನು ಆಗಸ್ಟ್ ತಿಂಗಳಲ್ಲಿ ಬೆಳ್ಳಿ ಬೆಲೆಯು ಪ್ರತಿ ಕೇಜಿಗೆ 80,000 ರುಪಾಯಿ ಸಮೀಪದಲ್ಲಿ ಇದ್ದದ್ದು ಅಲ್ಲಿಂದ ಇಳಿಯುತ್ತಾ ಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಈ ಹಿಂದಿನ ಸೆಷನ್ ನಲ್ಲಿ ಎರಡು ವಾರಗಳ ಗರಿಷ್ಠ ಮಟ್ಟಕ್ಕೆ ಮುಟ್ಟಿದ್ದ ಚಿನ್ನದ ಬೆಲೆಯು ಸ್ಥಿರವಾಗಿತ್ತು. ಸ್ಪಾಟ್ ಗೋಲ್ಡ್ ಬೆಲೆ ಪ್ರತಿ ಔನ್ಸ್ ಗೆ (28.3495 ಗ್ರಾಮ್) $ 1912.49ರಂತೆ ವ್ಯವಹಾರ ನಡೆಸಿತು. ಸೆಪ್ಟೆಂಬರ್ 22ನೇ ತಾರೀಕಿನ ನಂತರ ಸೋಮವಾರದಂದು ಚಿನ್ನದ ದರ ಪ್ರತಿ ಔನ್ಸ್ ಗೆ $ 1918.36 ತಲುಪಿತು. ಮೂರು ರಾತ್ರಿಗಳ ಕಾಲ ಆಸ್ಪತ್ರೆಯಲ್ಲಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನಕ್ಕೆ ಹಿಂತಿರುಗಿದ ನಂತರ ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರಿಗೆ ಭರವಸೆ ಮತ್ತೆ ಬಂದಿದೆ. ಡೊನಾಲ್ಡ್ ಟ್ರಂಪ್ ಅವರಿಗೆ ಕೊರೊನಾ ಪಾಸಿಟಿವ್ ಎಂಬ ಕಾರಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆ ನಂತರ ಡಾಲರ್ ಮೌಲ್ಯದಲ್ಲಿ ಅಲ್ಪ ಪ್ರಮಾಣದ ಇಳಿಕೆ ಆಗಿ, ಚಿನ್ನದ ಮೇಲೆ ಒಲವು ಹೆಚ್ಚಾಗಲು ಕಾರಣ ಆಗಿತ್ತು.

USನಲ್ಲಿ ಎರಡನೇ ಹಂತದ ಕೊರೊನಾ ಆರ್ಥಿಕ ಪ್ಯಾಕೇಜ್ ಘೋಷಣೆ

USನಲ್ಲಿ ಎರಡನೇ ಹಂತದ ಕೊರೊನಾ ಆರ್ಥಿಕ ಪ್ಯಾಕೇಜ್ ಘೋಷಣೆ

ಬೆಲೆ ಬಾಳುವ ಲೋಹಗಳ ಪೈಕಿ ಬೆಳ್ಳಿ ದರ ಪ್ರತಿ ಔನ್ಸ್ ಗೆ 0.1% ಹೆಚ್ಚಳವಾಗಿ $ 24.37ಗೆ ವಹಿವಾಟು ನಡೆಸಿದರೆ, ಪ್ಲಾಟಿನಂ 0.1% ಏರಿಕೆ ಕಂಡು, $ 897.99ರಲ್ಲಿ ಇತ್ತು. ಇನ್ನು ಪಲಾಡಿಯಂ 0.2% ಇಳಿಕೆಯಾಗಿ, $ 2,356.85ರಲ್ಲಿ ವ್ಯವಹಾರ ನಡೆಸಿತು. ಯುಎಸ್ ಮಾರ್ಕೆಟ್ ನಲ್ಲಿನ ಗಳಿಕೆಯನ್ನೇ ಏಷ್ಯಾದ ಬಹುತೇಕ ಷೇರು ಮಾರ್ಕೆಟ್ ಗಳು ಅನುಸರಿಸಿದವು. ಯುಎಸ್ ನಲ್ಲಿ ಎರಡನೇ ಹಂತದ ಕೊರೊನಾ ಆರ್ಥಿಕ ಪ್ಯಾಕೇಜ್ ಘೋಷಣೆ ಹತ್ತಿರ ಆಗುತ್ತಿದೆ ಎಂಬ ಭರವಸೆ ಕಂಡುಬಂತು. ಡಾಲರ್ ಒತ್ತಡದಲ್ಲಿ ಕಂಡುಬಂತು. ಪ್ರತಿಸ್ಪರ್ಧಿ ಕರೆನ್ಸಿಗಳಿಗಿಂತ 0.1% ಇಳಿಯಿತು. ಅಮೆರಿಕ ಅಧ್ಯಕ್ಷರ ಆರೋಗ್ಯ ಸುಧಾರಣೆ ಸುದ್ದಿ ಬಂದ ಕೂಡಲೇ ಹೂಡಿಕೆದಾರರಲ್ಲಿ ಉತ್ಸಾಹ ಕಂಡುಬಂತು. ಇದರ ಜತೆಗೆ ಯುಎಸ್ ನಲ್ಲಿ ಕೊರೊನಾ ಆರ್ಥಿಕ ಪ್ಯಾಕೇಜ್ ಗೆ ಇನ್ನೇನು ಅಂತಿಮ ಹಂತದ ಯತ್ನಗಳು ನಡೆಯುತ್ತಿರುವುದು ಸಹ ನೆರವಿಗೆ ಬಂತು ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.

ಚಿನ್ನದ ಬೆಲೆಯನ್ನು ನಿರ್ಧರಿಸುವ ಅಂಶ

ಚಿನ್ನದ ಬೆಲೆಯನ್ನು ನಿರ್ಧರಿಸುವ ಅಂಶ

ಫೆಡ್ ಅಧ್ಯಕ್ಷ ಜೆರೋಮ್ ಪೊವೆಲ್ ಅತಿ ಮುಖ್ಯವಾದ ಭಾಷಣವನ್ನು ಈ ದಿನ ಮಾಡಲಿದ್ದಾರೆ. ಚಿನ್ನದ ವರ್ತಕರು ಆ ಕಡೆಗೆ ದೃಷ್ಟಿ ನೆಟ್ಟಿದ್ದಾರೆ. ಇನ್ನು ಸೆಪ್ಟೆಂಬರ್ 15- 16ನೇ ತಾರೀಕಿನಂದು ನಡೆದಿದ್ದ ಫೆಡ್ ಸಭೆಯ ಮುಖ್ಯಾಂಶಗಳನ್ನು ಬುಧವಾರ ಬಿಡುಗಡೆ ಮಾಡಲಾಗುತ್ತದೆ. ಯುಎಸ್ ಆರ್ಥಿಕತೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಹೇಳಬೇಕಾದರೆ ಮುಂದಿನ ಕೆಲ ಸಮಯ ಚಿನ್ನದ ಬೆಲೆಯನ್ನು ನಿರ್ಧರಿಸುವ ಅಂಶಗಳಲ್ಲಿ ಯುಎಸ್ ಡಾಲರ್ ಅತಿ ಮುಖ್ಯವಾಗುತ್ತದೆ ಎಂದು ಕೊಟಕ್ ಸೆಕ್ಯೂರಿಟೀಸ್ ಅಭಿಪ್ರಾಯ ಪಟ್ಟಿದೆ. "ಯುಎಸ್ ಆರ್ಥಿಕತೆಯ ಆರೋಗ್ಯ ಕೂಡ ಯುಎಸ್ ಕರೆನ್ಸಿಯ ಮೇಲೆ ಅವಲಂಬನೆ ಆಗಿದೆ. ಆರ್ಥಿಕ ಡೇಟಾದ ಮಿಶ್ರ ಫಲಿತಾಂಶ, ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು, ಹೆಚ್ಚುವರಿ ಆರ್ಥಿಕ ಉತ್ತೇಜನ ಕ್ರಮಗಳ ವಿಳಂಬ... ಇವೆಲ್ಲವೂ ಯುಎಸ್ ಆರ್ಥಿಕತೆ ಆರೋಗ್ಯದ ಬಗ್ಗೆ ಚಿಂತೆ ಹೆಚ್ಚಿಸಿದೆ," ಎಂದು ಬ್ರೋಕರೇಜ್ ಸಂಸ್ಥೆ ಹೇಳಿದೆ. ಚಿನ್ನದ ಬೆಲೆಯಲ್ಲಿ ಚೇತರಿಕೆ ಕಾಣದ ಹೊರತು ಇಟಿಎಫ್ ನಲ್ಲಿ ಖರೀದಿ ಕಾಣಲು ಸಾಧ್ಯವಿಲ್ಲ ಎಂದು ಕೂಡ ಅಭಿಪ್ರಾಯ ಪಡಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+