ಈಗಾಗಲೇ ನಾವು 2023 ರ ಕೊನೆಯಲ್ಲಿದ್ದೇವೆ. 2024ರ ಸ್ವಾಗತಕ್ಕೆ ಕಾಯುತ್ತಿದ್ದೇವೆ. ಈ ನಡುವೆ ಚಿನ್ನದ ಬೆಲೆಯು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ ಇಂದು ಮಾತ್ರ ಬಂಗಾರ ಹಾಗೂ ಬೆಳ್ಳಿ ದರವು ಇಳಿಕೆಯಾಗಿದೆ. ಅದು ಕೂಡಾ ನೂರು ಇನ್ನೂರು ರೂಪಾಯಿಯಲ್ಲ ಒಂದು ಸಾವಿರ ರೂಪಾಯಿಯಷ್ಟು ಕುಸಿತ ಕಂಡಿದೆ.
2024 ರ ದಶಕದ ಆರಂಭದಲ್ಲಿ ಯುಎಸ್ ಫೆಡರಲ್ ರಿಸರ್ವ್‌ನಿಂದ ದರ ಕಡಿತದ ನಿರೀಕ್ಷೆಯಿದೆ. ಈ ನಡುವೆಯೂ ಅಮೂಲ್ಯವಾದ ಲೋಹಗಳ ಬೆಲೆ ಮಂಗಳವಾರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಳಿಕೆಯಾಗಿದೆ. ಭಾರತದಲ್ಲಿಯೂ ಸ್ಥಳೀಯವಾಗಿ ಚಿನ್ನದ ಬೆಲೆಯು ಇಳಿಕೆಯಾಗಿದೆ.

ಒಂದೆಡೆ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗರಿಷ್ಠ ಮಟ್ಟಕ್ಕೆ ತಲುಪಿದ ಲಾಭವನ್ನು ವ್ಯಾಪಾರಿಗಳು ಪಡೆಯುತ್ತಿದ್ದರು. ಅದಕ್ಕೆ ಮುಖ್ಯ ಕಾರಣವೆಂದರೆ ಈಗೀನ ವಿವಾಹದ ಸೀಸನ್ ಆಗಿದೆ. ವಿವಾಹದ ಸೀಸನ್ ಕಾರಣ ಜನರು ಚಿನ್ನ ಖರೀದಿ ಮಾಡಲೇಬೇಕಾದ ಸ್ಥಿತಿಯಿದೆ. ಇದರ ಲಾಭವನ್ನು ವ್ಯಾಪಾರಿಗಳು ಪಡೆಯುತ್ತಿದ್ದಾರೆ. ಈ ನಡುವೆಯೇ ಡಾಲರ್ ಸೂಚ್ಯಂಕ ಏರಿಳಿತವಾಗುತ್ತಿದ್ದಂತೆ ಈಗ ಚಿನ್ನದ ಬೆಲೆ ಇಳಿಕೆಯಾಗಿದೆ.
ಭಾರತದಲ್ಲಿ ಚಿನ್ನದ ಬೆಲೆ ಎಷ್ಟಿದೆ?
ಭಾರತದಲ್ಲಿ, ರಿಟೇಲ್ ಸ್ಟೋರ್‌ಗಳಲ್ಲಿ, 24 ಕ್ಯಾರೆಟ್ ಚಿನ್ನದ ಬೆಲೆಯು ಮಂಗಳವಾರದಂದು 10 ಗ್ರಾಂಗೆ 1,090 ರೂಪಾಯಿಯಷ್ಟು ಇಳಿಕೆಯಾಗಿ, 63,110 ರೂಪಾಯಿಗೆ ಕುಸಿತ ಕಂಡಿದೆ. ಈ ಹಿಂದೆ 24 ಕ್ಯಾರೆಟ್‌ನ ಚಿನ್ನವು ಸಾರ್ವಕಾಲಿಕವಾಗಿ 64,200 ರೂಪಾಯಿಗೆ ತಲುಪಿದೆ. 100 ಗ್ರಾಂ ಬೆಲೆಯು 10,900 ರೂಪಾಯಿ ಇಳಿದಿದೆ.
ಇದಲ್ಲದೆ, 22 ಕ್ಯಾರೆಟ್‌ನ ಚಿನ್ನದ ದರವು ಭಾರತದಲ್ಲಿ 10 ಗ್ರಾಂಗೆ 1,000 ರೂಪಾಯಿಯಷ್ಟು ಇಳಿಕೆಯಾಗಿ, 57,850 ರೂಪಾಯಿಗೆ ಕುಸಿದಿದೆ. 22 ಕ್ಯಾರೆಟ್‌ನ ಚಿನ್ನದ ಗರಿಷ್ಠ ಮಟ್ಟ 10 ಗ್ರಾಂಗೆ 58,850 ರೂಪಾಯಿ ಆಗಿತ್ತು. 100 ಗ್ರಾಂ ಹಳದಿ ಲೋಹವು 10,000 ರೂಪಾಯಿ ಕುಸಿದಿದೆ.
ಇದಲ್ಲದೆ, ಈ ಹಿಂದೆ 10 ಗ್ರಾಂನ 18 ಕ್ಯಾರೆಟ್ ಚಿನ್ನವು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ. ಆದರೆ ಇಂದು 10 ಗ್ರಾಂ ಚಿನ್ನದ ಬೆಲೆ 820 ರೂಪಾಯಿ ಇಳಿದು, 47,330 ರೂಪಾಯಿಗೆ ಇಳಿದಿದೆ. 100 ಗ್ರಾಂ ಚಿನ್ನವು 8,200 ರೂಪಾಯಿಯಷ್ಟು ಕುಸಿದಿದೆ. ಒಂದು ಗ್ರಾಂ ಬೆಲೆ 82 ರೂಪಾಯಿ ಇಳಿದಿದೆ.
ಭಾರತದಾದ್ಯಂತ ರಿಟೇಲ್ ಸ್ಟೋರ್‌ನಲ್ಲಿ ಬೆಳ್ಳಿ ಬೆಲೆಯು ಕೂಡಾ ಇಂದು ಇಳಿಕೆಯಾಗಿದೆ. ಚಿನ್ನದೊಂದಿಗೆ ಬೆಳ್ಳಿ ಲೋಹವು ಕೂಡಾ ಅಗ್ಗವಾಗಿದೆ. ಡಿಸೆಂಬರ್ 3 ರಂದು 1 ಕೆಜಿ ಬೆಳ್ಳಿ ದರವು 80,500 ರೂಪಾಯಿ ಆಗಿದೆ. ಆದರೆ ಡಿಸೆಂಬರ್ 4 ರಂದು 1 ಕೆಜಿ ಬೆಳ್ಳಿ ದರವು 2,000 ರೂಪಾಯಿಯಷ್ಟು ಇಳಿದು, 78,500 ರೂಪಾಯಿಗೆ ತಲುಪಿದೆ.
ಬೆಲೆ ಇಳಿಕೆಗೆ ಕಾರಣವೇನು?
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೆಹ್ತಾ ಈಕ್ವಿಟೀಸ್‌ನ ಕಮೋಡಿಟೀಸ್ ವಿಪಿ ರಾಹುಲ್ ಕಲಂತ್ರಿ, "ಏಷ್ಯನ್ ಸೆಷನ್‌ನಲ್ಲಿ ಸೋಮವಾರ ಆರಂಭದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಏರಿದೆ. ಚಿನ್ನವು 2,150 ಡಾಲರ್‌ನ ಹೊಸ ದಾಖಲೆಯನ್ನು ತಲುಪಿದೆ. ಳ್ಳಿಯ ಬೆಲೆಗಳು ಏಳು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ," ಎಂದು ತಿಳಿಸಿದರು.
"ಯುರೋಪಿಯನ್ ಮತ್ತು ಯುಎಸ್ ಮಾರುಕಟ್ಟೆಗಳು ತೆರೆದಂತೆ ಚಿನ್ನದ ಬೆಲೆ ಏರಿಕೆಯು ಸ್ಥಗಿತವಾಗಿ, ಇಳಿಕೆಯಾಗಿದೆ. ಇದರಿಂದಾಗಿ ಗಣನೀಯ ಪ್ರಮಾಣದ ಮಾರಾಟಕ್ಕೆ ಕಾರಣವಾಗಿದೆ. ಬಹುಶಃ ಬಾಂಡ್ ದರಗಳಲ್ಲಿನ ರಿಬೌಂಡ್‌ನಿಂದಾಗಿ ಈ ಬೆಳವಣಿಗೆ ಕಂಡು ಬಂದಿದೆ," ಎಂದು ವಿಪಿ ರಾಹುಲ್ ಕಲಂತ್ರಿ ಹೇಳಿದರು.
ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಬೆಲೆ ಎಷ್ಟಿದೆ?
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆಯು 5,850 ರೂಪಾಯಿ, ಮುಂಬೈನಲ್ಲಿ 57,850 ರೂಪಾಯಿ, ದೆಹಲಿಯಲ್ಲಿ 58,000 ರೂಪಾಯಿ, ಕೇರಳದಲ್ಲಿ 57,850 ರೂಪಾಯಿ, ಮಂಗಳೂರಿನಲ್ಲಿ 57,850 ರೂಪಾಯಿ, ಮೈಸೂರಿನಲ್ಲಿ 57,850 ರೂಪಾಯಿ ಆಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ
ಈ ನಡುವೆ ಕೊನೆಯ ಡಿಸೆಂಬರ್ 5ರಂದು ಕೊನೆಯ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 62555.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 75962.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ.0.04ರಷ್ಟು ಏರಿಕೆ ಕಂಡಿದ್ದು 2,034.41 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.15ರಷ್ಟು ಕುಗ್ಗಿದ್ದು 24.49 ಯುಎಸ್ ಡಾಲರ್ ಆಗಿದೆ.


Click it and Unblock the Notifications