For Quick Alerts
ALLOW NOTIFICATIONS  
For Daily Alerts

ಇಳಿಕೆಯಲ್ಲೂ ದಾಖಲೆ ಬರೆದ ಚಿನ್ನ; ಬೆಳ್ಳಿ ಬೆಲೆಯಲ್ಲಿ ಭರ್ಜರಿ ಕುಸಿತ

By ಅನಿಲ್ ಆಚಾರ್
|

ಈ ವರ್ಷದ ಮಾರ್ಚ್ ನಿಂದ ಈಚೆಗೆ ಲೆಕ್ಕ ಹಾಕಿದಲ್ಲಿ ಸೆಪ್ಟೆಂಬರ್ 26, 2020ಕ್ಕೆ ಕೊನೆಯಾದ ವಾರದಲ್ಲಿ ಚಿನ್ನ ಹಾಗೂ ಬೆಳ್ಳಿ ಅತಿ ದೊಡ್ಡ ಪ್ರಮಾಣದ ವಾರದ ನಷ್ಟವನ್ನು ದಾಖಲಿಸಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಈ ವಾರ 4.4% ಬೆಲೆ ಇಳಿಕೆ ಆಗಿದೆ. ಇನ್ನು ಬೆಳ್ಳಿಯ ದರದಲ್ಲಿ 15% ದರ ಇಳಿದಿದೆ.

ಇದಕ್ಕೆ ಕಾರಣವಾಗಿದ್ದು ಯುಎಸ್ ಡಾಲರ್ ಗಳಿಕೆ. ಏಪ್ರಿಲ್ ನಿಂದ ಈಚೆಗೆ ಯುಎಸ್ ಡಾಲರ್ ಮೌಲ್ಯವು ಅತುತ್ತಮ ಗಳಿಕೆ ಕಂಡ ವಾರವಿದು. ಹೂಡಿಕೆದಾರರಿಗೆ ಚಿನ್ನ ಹಾಗೂ ಬೆಳ್ಳಿ ಫೇವರಿಟ್ ಆಗಿದೆ. ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಅನಿಶ್ಚಿತತೆ ತಲೆದೋರಿರುವಾಗ ಹೂಡಿಕೆದಾರರು ಯುಎಸ್ ಡಾಲರ್ ಕಡೆಗೆ ನೋಡುತ್ತಿದ್ದಾರೆ.

ಯುಎಸ್ ಆರ್ಥಿಕ ಉತ್ತೇಜನದ ಅನಿಶ್ಚಿತತೆ
 

ಯುಎಸ್ ಆರ್ಥಿಕ ಉತ್ತೇಜನದ ಅನಿಶ್ಚಿತತೆ

ಬೇರೆ ಕರೆನ್ಸಿಗಳನ್ನು ಬಳಸಿ ಚಿನ್ನದ ವ್ಯವಹಾರ ಮಾಡಬೇಕು ಅಂದರೆ ಅದು ಕೂಡ ದುಬಾರಿ ಎನ್ನುವಂತೆ ಮಾಡಿದೆ ಯುಎಸ್ ಡಾಲರ್. ಯುರೋಪ್ ನಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು, ಹೆಚ್ಚುವರಿ ಆರ್ಥಿಕ ಉತ್ತೇಜನದ ಬಗ್ಗೆ ಯುಎಸ್ ಸರ್ಕಾರದ ಅನಿಶ್ಚಿತತೆಯಿಂದಾಗಿ ಹೂಡಿಕೆದಾರರ ಭರವಸೆಗೆ ಬಿದ್ದಿರುವ ಪೆಟ್ಟಿನಿಂದಾಗಿ ಡಾಲರ್ ಮೌಲ್ಯವನ್ನು ಹೆಚ್ಚಿಸಿದೆ.

ಭಾರತದಲ್ಲಿ ಪ್ರತಿ 10 ಗ್ರಾಮ್ ಗೆ 49,659 ರು.ನಂತೆ ವಹಿವಾಟು

ಭಾರತದಲ್ಲಿ ಪ್ರತಿ 10 ಗ್ರಾಮ್ ಗೆ 49,659 ರು.ನಂತೆ ವಹಿವಾಟು

ಇನ್ನು ಸ್ಪಾಟ್ ಚಿನ್ನ 0.3% ಇಳಿಕೆ ಕಂಡು, ಪ್ರತಿ ಔನ್ಸ್ ಗೆ (28.3495) $ 1861.58ರಂತೆ ವಹಿವಾಟು ನಡೆಸಿತು. ಭಾರತದಲ್ಲಿ ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್ (ಎಂಸಿಎಕ್ಸ್) ಚಿನ್ನದ ಫ್ಯೂಚರ್ಸ್ 0.5% ಇಳಿಕೆಯಾಗಿ, ಪ್ರತಿ 10 ಗ್ರಾಮ್ ಗೆ 49,659 ರುಪಾಯಿಯಂತೆ ವಹಿವಾಟು ನಡೆಸಿತು.

ಚಿನ್ನದ ಬೆಲೆ ಇಳಿಕೆ ತಾತ್ಕಾಲಿಕ

ಚಿನ್ನದ ಬೆಲೆ ಇಳಿಕೆ ತಾತ್ಕಾಲಿಕ

ತಜ್ಞರು ಹೇಳುವಂತೆ, ಚಿನ್ನದ ಬೆಲೆ ಇಳಿಕೆ ತಾತ್ಕಾಲಿಕ. ಅದು ಯುಎಸ್ ಅಧ್ಯಕ್ಷೀಯ ಚುನಾವಣೆ ಬಗೆಗಿನ ಅನಿಶ್ಚಿತತೆ ಇಂಥದ್ದೊಂದು ವಾತಾವರಣ ಸೃಷ್ಟಿಸಿದೆ. ಆದರೆ ಇತಿಹಾಸವನ್ನು ಗಮನಿಸಿ ನೋಡಿದರೆ, ಬೌಗೋಳಿಕ ರಾಜಕೀಯ ಹಾಗೂ ಆರ್ಥಿಕ ಅನಿಶ್ಚಿತತೆಯಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿರುವುದೇ ಕಂಡುಬರುತ್ತದೆ.

English summary

Gold, Silver Recorded Biggest Weekly Losses Since March

For the week ended 26 September, 2020, precious metal gold, silver posted their biggest weekly decline since March.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X