ಕಷ್ಟಪಟ್ಟು ದುಡಿದು ಕೂಡಿಟ್ಟ ಹಣವನ್ನು ಒಂದು ಒಳ್ಳೆಯ ಕಡೆಯಲ್ಲಿ ಸುರಕ್ಷಿತವಾಗಿ ಹೂಡಿಕೆ ಮಾಡುವುದು ತುಂಬಾನೇ ಮುಖ್ಯ. ಅದರಲ್ಲೂ ಹೂಡಿಕೆ ಆಗಿಯೇ ಷೇರುಮಾರುಕಟ್ಟೆ,ಚಿನ್ನ, ರಿಯಲ್ ಎಸ್ಟೇಟ್ ಹೂಡಿಕೆ, ಮ್ಯೂಚುಯಲ್ ಫಂಡ್ ಉಳಿತಾಯ ಯೋಜನೆಗಳು ಹೀಗೆ ಹಲವು ಆಯ್ಕೆಗಳು ಮಾರುಕಟ್ಟೆಯಲ್ಲಿ ಇವೆ. ಆದರೆ ನೀವು ಇದರಲ್ಲಿ ಸರಿಯಾದ ಆಯ್ಕೆಯನ್ನು ಮಾಡಿಕೊಂಡು ಹೂಡಿಕೆ ಮಾಡುವುದು ತುಂಬಾನೇ ಮುಖ್ಯವಾಗುತ್ತದೆ. ಹಾಗಿದ್ದರೆ ನಾವಿಂದು ಚಿನ್ನ ಮತ್ತು ರಿಯಲ್ ಎಸ್ಟೇಟ್ ಹೂಡಿಕೆಯಲ್ಲಿ ಎಲ್ಲಿ ಹೂಡಿಕೆಯನ್ನು ಮಾಡಿದ್ದರೆ ಹೆಚ್ಚಿನ ಅನುಕೂಲ ಸಿಗುತ್ತದೆ ಎಂಬ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ನಮ್ಮ ಭಾರತೀಯ ಹೂಡಿಕೆದಾರರು ಹೂಡಿಕೆ ವಿಚಾರ ಬಂದಾಗ ಮೊದಲು ಆಯ್ಕೆ ಮಾಡಿಕೊಳ್ಳವುದು ಚಿನ್ನದ ಮೇಲೆ ಯಾಕೆಂದರೆ ಚಿನ್ನ ಹೂಡಿಕೆ ಹಾಗೂ ಅಲಂಕಾರ ಎರಡುಕ್ಕೂ ಅನುಕೂಲಕ್ಕೆ ಬರುತ್ತದೆ. ಇದು ಆದ ನಂತರ ರಿಯಲ್ ಎಸ್ಟೇಟ್ ಮೇಲೆ ಸಹ ಹೂಡಿಕೆಯನ್ನು ಮಾಡಿತ್ತಾರೆ. ಇವೆರಡು ಆಯ್ಕೆಗಳು ಹಿಂದಿನಿಂದಲೂ ಜನಪ್ರಿಯ ಹೂಡಿಕೆಯ ವಿಧಾನವಾಗಿದೆ.
ನೀವು ಕೇವಲ ಆಸ್ತಿ ಹೆಚ್ಚಳ ಮಾತ್ರವಲ್ಲದೇ ಜೀವನದ ಆರ್ಥಿಕ ಭದ್ರತೆಗೆ ಸಹಾಯಕವಾಗುತ್ತದೆ. ನಿಮಗೆ ಕಳೆದ 10 ರಿಂದ 15 ವರ್ಷಗಳಲ್ಲಿ ಈ ಎರಡರಲ್ಲಿ ಯಾವುದು ಹೆಚ್ಚು ಲಾಭದಾಯಕ ಇರಬಹುದು ಅನಿಸಿದಿದ್ಯಾ? ಹಾಗಿದ್ದರೆ ನಮ್ಮ ಆರ್ಥಿಕ ಯಶಸ್ಸುಗೆ ನಮ್ಮ ಹೂಡಿಕೆಯ ಸರಿಯಾದ ಆಯ್ಕೆ ಮುಖ್ಯವಾಗುತ್ತದೆ.
ಚಿನ್ನದ ಮೇಲೆ ಹೂಡಿಕೆ
ಭಾರತೀಯರು ಅತಿ ಹೆಚ್ಚಾಗಿ ಚಿನ್ನವನ್ನು ಖರೀದಿ ಮಾಡುವುದರಿಂದ ಅಭರಣದ ರೀತಿಯಲ್ಲಿ ಅಥವಾ ನಾಣ್ಯದ ರೂಪದಲ್ಲಿ ಹೂಡಿಕೆಯನ್ನು ಮಾಡುತ್ತಾರೆ. ಚಿನ್ನ ದಾಖಲೆಯ ಮಟ್ಟದಲ್ಲಿ ಏರಿಕೆಯನ್ನು ಕಂಡರೂ ಸಹ ಚಿನ್ನದ ಮೇಲಿನ ವ್ಯಾಮೋಹ ಕಡಿಮೆಯಾಗುವುದಿಲ್ಲ. ಚಿನ್ನದ ಬೆಲೆ ಏರಿಕೆ ಕಳೆದ 15 ವರ್ಷಗಳ ಅವಧಿಗೆ ಹೂಲಿಕೆಯನ್ನು ಮಾಡಿದ್ದರೆ ಈ ಬಾರಿಯೇ ಸಾರ್ವಕಾಲೀಕ ಏರಿಕೆಯನ್ನು ಕಂಡಿದೆ. ಚಿನ್ನ ನಿಮ್ಮಗೆ ಇತರ ಹೂಡಿಕೆ ಮಾರ್ಗಗಳಿಗಿಂತ ಹೆಚ್ಚಿನ ಲಾಭವನ್ನು ನೀಡಿದೆ. ಹೇಗೆ ಲಾಭಗಳಿಸಬಹುದು ಎಂಬುವುದನ್ನು ಉದಾಹರಣೆಗೆ ನೋಡುವುದಾದರೆ ನೀವು 2009ರಲ್ಲಿ ಚಿನ್ನದಲ್ಲಿ 2 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಈಗ ಅದರ ಮೌಲ್ಯ ಸುಮಾರು 6 ಲಕ್ಷಕ್ಕಿಂತ ಹೆಚ್ಚಾಗಿ ಇರುತ್ತದೆ.
ನೀವು ಚಿನ್ನದ ರೂಪದಲ್ಲಿ ಹೂಡಿಕೆಯನ್ನು ಮಾಡಿದ್ದರೆ ಆರ್ಥಿಕ ಸಂಕಷ್ಟ ಎದುರಾದಾಗ,ಹಣದುಬ್ಬರದಂತಹ ಪರಿಸ್ಥಿಗಳು ಬಂದರೆ ನಿಮಗೆ ಇದು ಆರ್ಥಿಕ ಭದ್ರತೆಯನ್ನು ನೀಡುತ್ತದೆ. ನೀವು ಚಿನ್ನವನ್ನು ಅಡವಿಟ್ಟು ಹಣವನ್ನು ಪಡೆದುಕೊಳ್ಳಬಹುದು. ಸುಲಭವಾಗಿ ಚಿನ್ನವನ್ನು ನಗದು ಮಾಡಬಹುದು. ಇದಕ್ಕೆ ಅಷ್ಟೋಂದು ಹಣವನ್ನೂ ತಗುಲುವುದಿಲ್ಲ.ಆದರೆ ಚಿನ್ನದ ಮೌಲ್ಯಗಳು ಏರಿಳಿತವಾಗಬಹುದು. ನಿಮ್ಮ ಚಿನ್ನ ಯಾವಗಲೂ ನಿಯಮಿತವಾದ ಆದಾಯವನ್ನು ನೀಡುವುದಿಲ್ಲ ಆದ್ದರಿಂದ ಚಿನ್ನ ಹೂಡಿಕೆಗೆ ಉತ್ತಮ ಆಯ್ಕೆಯಾದರೂ ಹೆಚ್ಚಿನ ಆದಾಯ ಮಾಡುಲು ಸಾದ್ಯವಾಗುವುದಿಲ್ಲ.
ರಿಯಲ್ ಎಸ್ಟೇಟ್ ಹೂಡಿಕೆ
ನಮ್ಮ ಭಾರತದಲ್ಲಿ ರಿಯಲ್ ಎಸ್ಟೇಟ್ ವೇಗವಾಗಿ ಬೆಳೆಯುತ್ತಿದೆ. ಇತ್ತೀಚಿಗೆ ಹೂಡಿಕೆದಾರರ ಜನಪ್ರಿಯ ಆಯ್ಕೆಯಾಗಿದೆ. ರಿಯಲ್ ಎಸ್ಟೇಟ್‌ನಿಂದ ಹೆಚ್ಚಿನ ಲಾಭ ಆಸ್ತಿಯ ಸ್ಥಳ, ಮತ್ತು ಮಾರುಕಟ್ಟೆಯ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ ರಿಯಲ್ ಎಸ್ಟೇಟ್ ಹೂಡಿಕೆಯು ವಾರ್ಷಿಕವಾಗಿ ಶೇ. 5 ರಿಂದ ಶೇ 10ರಷ್ಟು ಲಾಭವನ್ನು ನಿಮ್ಮಗೆ ಸಿಗುತ್ತದೆ. ನೀವು ರಿಯಲ್ ಎಸ್ಟೇಟ್ ನಲ್ಲಿ ಬಾಡಿಗೆ ರೂಪದಲ್ಲಿ ನಿಯಮಿತ ಆದಾಯವನ್ನು ಪಡೆದುಕೊಳ್ಳಬಹುದು. ರಿಯಲ್ ಎಸ್ಟೇಟ್ ಹೂಡಿಕೆಯನ್ನು ಉದಾಹರನೆಯ ಮೂಲಕ ನೋಡುವುದಾದರೆ, ನೀವಿನಾದರೂ 20 ವರ್ಷಗಳ ಹಿಂದೆ ರಿಯಲ್ ಎಸ್ಟೇಟ್‌ನಲ್ಲಿ 2 ಲಕ್ಷ ರೂಪಾಯಿ ಹೂಡಿಕೆ ಮಾಡಿದ ವ್ಯಕ್ತಿಯ ಆಸ್ತಿಯ ಮೌಲ್ಯ ಇಂದು ಸುಮಾರು 3.5 ಲಕ್ಷ ರೂಪಾಯಿ ಆಗಿರುತ್ತದೆ.
ನಿಮ್ಮಗೆ ಬಾಡಿಗೆ ಆದಾಯದ ಜೊತೆಗೆ, ಗೃಹ ಸಾಲದ ಮೇಲಿನ ತೆರಿಗೆ ವಿನಾಯಿತಿ ಸಹ ಸಿಗುತ್ತದೆ. ನಿಮ್ಮಗೆ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಬಂಡವಾಳ ನಿಮ್ಮಗೆ ಬೇಕಾಗುತ್ತದೆ.ಆದರೆ ಇದಕೆಲ್ಲಾ ನಿಯಮಗಳು ನಿರ್ವಹಣಾ ವೆಚ್ಚಗಲು ಅಧಿಕವಾಗಿರುತ್ತದೆ.
ನೀವು ಕಡಿಮೆ ಆದಾಯ ಹಾಗೂ ತಕ್ಷಣಕ್ಕೆ ಹಣ ಬೇಕೇ ಇದ್ದಾಗ ಚಿನ್ನದ ಮೇಲೆ ಹೂಡಿಕೆ ಸೂಕ್ತವಾದ ಆಯ್ಕೆಯಾಗಿದೆ. ನೀವು ದೀರ್ಘಾವಧಿಯ ಹೂಡಿಕೆಯನ್ನು ಬಯಸಿದ್ದರೆ ಬಾಡಿಗೆ ಆದಾಯವನ್ನು ಪಡೆಯಲು ಬಯಸುವವರಿಗೆ ರಿಯಲ್ ಎಸ್ಟೇಟ್ ಉತ್ತಮವೆಂದೇ ಹೇಳಬಹುದು.
ಚಿನ್ನ ಮತ್ತು ರಿಯಲ್ ಎಸ್ಟೇಟ್ ಎರಡೂ ಪ್ರಯೋಜನಗಳನ್ನು ನೀಡುತ್ತದೆ.ಚಿನ್ನ ನಿಮ್ಮಗೆ ಭದ್ರತೆಯ ಸಂಕೇತವಾದರೆ, ರಿಯಲ್ ಎಸ್ಟೇಟ್ ಆದಾಯ ಮತ್ತು ಆಸ್ತಿಯ ರೂಪದಲ್ಲಿ ನಿಮ್ಮ ಆರ್ಥಿಕ ನೆರವುವನ್ನು ನಿಮ್ಮಗೆ ಒದಗಿಸುತ್ತದೆ.


Click it and Unblock the Notifications