For Quick Alerts
ALLOW NOTIFICATIONS  
For Daily Alerts

ಇಪಿಎಫ್‌ ಚಂದಾದಾರರಿಗೆ ಒಳ್ಳೆಯ ಸುದ್ದಿ: ಪಿಎಫ್ ಮೇಲಿನ ಬಡ್ಡಿ ಘೋಷಣೆ

|

ನೌಕರರ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಒ) ತನ್ನ 6 ಕೋಟಿ ಚಂದಾದಾರರಿಗೆ ಸಾಕಷ್ಟು ಒಳ್ಳೆಯ ಸುದ್ದಿ ನೀಡಿದೆ. ಇಂದು ಸಭೆ ಸೇರಿದಂತೆ ಕೇಂದ್ರ ಇಪಿಎಫ್‌ಒ ಮಂಡಳಿಯು ಬಡ್ಡಿ ದರದಲ್ಲಿ ಯಾವುದೇ ಕಡಿತ ಮಾಡಿಲ್ಲ.

 

2020-21ರ ನೌಕರರ ಭವಿಷ್ಯ ನಿಧಿ ಬಡ್ಡಿದರವನ್ನು ಪ್ರಕಟಿಸಿದ್ದು, ಶೇಕಡಾ 8.5ರಷ್ಟು ಶಿಫಾರಸ್ಸು ಮಾಡಿದೆ. ಕಳೆದ ಹಣಕಾಸು ವರ್ಷದಲ್ಲಿ ಇಪಿಎಫ್ ಕೊಡುಗೆಯಲ್ಲೂ ಅದೇ ಬಡ್ಡಿಯನ್ನು ಪಾವತಿಸಲಾಗಿದೆ.

ಬಡ್ಡಿ ದರ 8.5%

ಬಡ್ಡಿ ದರ 8.5%

ಇಪಿಎಫ್ ಕೊಡುಗೆಯ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಲಾಗಿಲ್ಲ, ಇದು ಒಳ್ಳೆಯ ಸುದ್ದಿಯಾದ್ರೂ, 2012-13ರ ನಂತರದ ಅತ್ಯಂತ ಕಡಿಮೆ ಬಡ್ಡಿದರವಾಗಿದೆ. ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಅನೇಕ ಗ್ರಾಹಕರು ತಮ್ಮ ಇಪಿಎಫ್‌ಒ ಹಣವನ್ನು ಹಿಂಪಡೆದರು. ಇದಾದ ಬಳಿಕ ಬಡ್ಡಿ ದರ ಕಡಿತವಾಗಬಹುದು, ಶೇ 8.3 ಕ್ಕೆ ಇಳಿಸಬಹುದು ಎಂದೇ ಅಂದಾಜಿಸಲಾಗಿತ್ತು. ಆದ್ರೆ ಬಡ್ಡಿದರವನ್ನು 8.5ರಷ್ಟು ಉಳಿಸಿಕೊಳ್ಳಲಾಗಿದೆ.

ಇದಕ್ಕೂ ಮೊದಲು ಇಪಿಎಫ್‌ ಬಡ್ಡಿದರ ಎಷ್ಟಿತ್ತು?

ಇದಕ್ಕೂ ಮೊದಲು ಇಪಿಎಫ್‌ ಬಡ್ಡಿದರ ಎಷ್ಟಿತ್ತು?

2019-20ರಲ್ಲಿ ಇಪಿಎಫ್‌ಒ ಗ್ರಾಹಕರು ಶೇ 8.5 ರಷ್ಟು ಬಡ್ಡಿ ಪಡೆದರು. ಇದಕ್ಕೂ ಮೊದಲು 2018-19ರಲ್ಲಿ 8.65, 2017-18ರಲ್ಲಿ 8.55, 2016-17ರಲ್ಲಿ 8.65, 2015-16ರಲ್ಲಿ 8.8, 2014-2015ರಲ್ಲಿ 8.75, 2013-2014ರಲ್ಲಿ 8.75 ಮತ್ತು 2012-13ರಲ್ಲಿ 8.5 ಶೇಕಡಾ ಬಡ್ಡಿ ದರ ನೀಡಲಾಗಿದೆ.

ಆದರೆ ಈ ಮೊದಲು 1989-90ರಿಂದ 1999-2000ರವರೆಗೆ ಶೇ 12 ರಷ್ಟು ಬಡ್ಡಿ ಪಾವತಿಸಲಾಗಿತ್ತು. ಇದು ಇಪಿಎಫ್‌ನಲ್ಲಿ ಇದುವರೆಗಿನ ಅತಿ ಹೆಚ್ಚಿನ ಬಡ್ಡಿದರವಾಗಿದೆ.

ಎರಡು ಕಂತುಗಳಲ್ಲಿ ಪಿಎಫ್ ಬಡ್ಡಿ ವಿತರಣೆ
 

ಎರಡು ಕಂತುಗಳಲ್ಲಿ ಪಿಎಫ್ ಬಡ್ಡಿ ವಿತರಣೆ

ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಎರಡು ಕಂತುಗಳಲ್ಲಿ 8.5% ಬಡ್ಡಿ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಶೇಕಡಾ 8.15 ಮತ್ತು 0.35 ರಷ್ಟು ಎರಡು ಕಂತುಗಳನ್ನು ನೀಡಲಾಗುವುದು ಎಂದು ಹೇಳಲಾಗಿದೆ. ಆದರೆ ಇದೀಗ ಏಕಕಾಲದಲ್ಲಿ ಶೇ 8.5 ರಷ್ಟು ಬಡ್ಡಿ ನೀಡಲಾಗುವುದು ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಂತೋಷ್ ಗಂಗ್ವಾರ್ ತಿಳಿಸಿದ್ದರು.

2.50 ಲಕ್ಷ ರೂಪಾಯಿಗೂ ಹೆಚ್ಚಿನ ಪಿಎಫ್‌ ಕೊಡುಗೆಗೆ ತೆರಿಗೆ

2.50 ಲಕ್ಷ ರೂಪಾಯಿಗೂ ಹೆಚ್ಚಿನ ಪಿಎಫ್‌ ಕೊಡುಗೆಗೆ ತೆರಿಗೆ

ಈ ವರ್ಷದ ಕೇಂದ್ರ ಬಜೆಟ್‌ನಲ್ಲಿ ಪಿಎಫ್ ಕೊಡುಗೆ ಮೇಲಿನ ಬಡ್ಡಿಗೆ ತೆರಿಗೆ ವಿಧಿಸಲು ಸರ್ಕಾರ ಪ್ರಸ್ತಾಪಿಸಿದೆ. ಆದಾಗ್ಯೂ, ಎಲ್ಲಾ ಪಿಎಫ್ ಖಾತೆದಾರರಿಗೆ ಇದು ಅನ್ವಯಿಸುವುದಿಲ್ಲ. ಸರ್ಕಾರದ ಹೊಸ ಪ್ರಸ್ತಾವನೆಯಡಿಯಲ್ಲಿ, ಪಿಎಫ್ ಕೊಡುಗೆಯ ಮೇಲಿನ ಬಡ್ಡಿ ಆದಾಯವು ಆರ್ಥಿಕ ವರ್ಷದಲ್ಲಿ ಗರಿಷ್ಠ 2.5 ಲಕ್ಷ ರೂ.ಗಳವರೆಗೆ ಮಾತ್ರ ತೆರಿಗೆ ಮುಕ್ತವಾಗಿರುತ್ತದೆ.

ಅಂದರೆ, ಆರ್ಥಿಕ ವರ್ಷದಲ್ಲಿ ಯಾರಾದರೂ ಪಿಎಫ್‌ನಲ್ಲಿ 2.50 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಕೊಡುಗೆ ನೀಡಿದರೆ, ಅದರ ಮೇಲಿನ ಬಡ್ಡಿಯನ್ನು ತೆರಿಗೆಯ ಆದಾಯದಲ್ಲಿ ಸೇರಿಸುವ ಮೂಲಕ ತೆರಿಗೆ ವಿಧಿಸಲಾಗುತ್ತದೆ.

Read more about: epf epfo interest pf
English summary

Good News: EPF Subscribers To Get 8.5% Rate Of Interest For 2020-21

EPFO announced the interest rates on Provident Fund deposits for the financial year 2020-21 on March 4. The EPFO board has recommended 8.5 percent interest for the financial year 2020-21
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X