For Quick Alerts
ALLOW NOTIFICATIONS  
For Daily Alerts

ಪ್ರಧಾನಮಂತ್ರಿ ಜನ್ ಧನ್ ಖಾತೆ 500 ರು. ಬಗ್ಗೆ ಮುಖ್ಯ ಮಾಹಿತಿ ಇಲ್ಲಿದೆ

|

ಪ್ರಧಾನಮಂತ್ರಿ ಜನ್ ಧನ್ ಯೋಜನಾ ಖಾತೆ ಇರುವ ಮಹಿಳೆಯರಿಗೆ ತಲಾ 500 ರುಪಾಯಿಯಂತೆ ಇನ್ನೂ ಎರಡು ಕಂತು, ಅಂದರೆ ಮುಂದಿನ ಎರಡು ತಿಂಗಳಲ್ಲಿ 1000 ರುಪಾಯಿಯನ್ನು ನೀಡಲಾಗುವುದು. ಯಾವುದೇ ವದಂತಿಗಳನ್ನು ನಂಬದಿರಿ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

"ಒಂದು ವೇಳೆ ಖಾತೆಯಿಂದ ಹಣ ವಿಥ್ ಡ್ರಾ ಮಾಡದಿದ್ದಲ್ಲಿ ಸರ್ಕಾರ ಹಣವನ್ನು ವಾಪಸ್ ತೆಗೆದುಕೊಂಡು ಬಿಡುತ್ತದೆ ಎಂಬ ವದಂತಿಗಳನ್ನು ನಂಬಬೇಡಿ" ಎಂದು ಸ್ಟೇಟ್ ಬ್ಯಾಂಕ್ ಇಂಡಿಯಾವು ಮನವಿ ಮಾಡಿದೆ. ಏಕೆಂದರೆ ಈ ರೀತಿ ವದಂತಿ ಹಬ್ಬಿ, ಹಣ ವಿಥ್ ಡ್ರಾ ಮಾಡಲು ಏಕಾಏಕಿ ಮಹಿಳೆಯರು ಬ್ಯಾಂಕ್ ಗಳಿಗೆ ಬಂದಿದ್ದರು.

ಸಾಲ ನೀಡುವ ನಿಯಮ ಸಡಿಲಿಸಿದ ಸರ್ಕಾರಿ ಬ್ಯಾಂಕ್ ಗಳು !ಸಾಲ ನೀಡುವ ನಿಯಮ ಸಡಿಲಿಸಿದ ಸರ್ಕಾರಿ ಬ್ಯಾಂಕ್ ಗಳು !

ಏಪ್ರಿಲ್ ತಿಂಗಳ ಮೊತ್ತವನ್ನು ಜನ್ ಧನ್ ಖಾತೆಗೆ ಹಾಕಲಾಗಿದೆ. ಆ 500 ರುಪಾಯಿಯನ್ನು ಯಾವಾಗಲಾದರೂ ವಿಥ್ ಡ್ರಾ ಮಾಡಬಹುದು ಎಂದು ಡಿಪಾರ್ಟ್ ಮೆಂಟ್ ಆಫ್ ಫೈನಾನ್ಷಿಯಲ್ ಸರ್ವೀಸಸ್ (ಡಿಎಫ್ ಎಸ್) ಟ್ವೀಟ್ ಮಾಡಿದೆ. ಮೇ ಹಾಗೂ ಜೂನ್ ನಲ್ಲೂ 500 ರುಪಾಯಿ ಮೊತ್ತವನ್ನು ಖಾತೆಗೆ ಜಮೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಪ್ರಧಾನಮಂತ್ರಿ ಜನ್ ಧನ್ ಖಾತೆ 500 ರು. ಬಗ್ಗೆ ಮುಖ್ಯ ಮಾಹಿತಿ ಇಲ್ಲಿದೆ

38.08 ಕೋಟಿ ಪ್ರಧಾನ್ ಮಂತ್ರಿ ಜನ್ ಧನ್ ಯೋಜನಾ ಖಾತೆಗಳು ಇದ್ದು, ಅದರಲ್ಲಿ 20.60 ಕೋಟಿ ಖಾತೆಗಳು ಮಹಿಳೆಯರು ಹೊಂದಿದ್ದಾರೆ. ಏಪ್ರಿಲ್ 1ನೇ ತಾರೀಕಿಗೆ ಜನ್ ಧನ್ ಖಾತೆಗೆ ಠೇವಣಿ ಮಾಡಿದ ಮೊತ್ತ 1.19 ಲಕ್ಷ ಕೋಟಿ ರುಪಾಯಿ.

ಕೊರೊನಾ ವೈರಾಣು ಲಾಕ್ ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್- ಮೇ- ಜೂನ್ ಮೂರು ತಿಂಗಳು ತಲಾ 500 ರುಪಾಯಿಯಂತೆ 20.5 ಕೋಟಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ.

English summary

Government To Deposit 500 Rupees Each In Two Months In Jan Dhan Yojna

Government to deposit 500 rupees each in two months to PMJDY accounts. Here is the details.
Story first published: Thursday, April 9, 2020, 19:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X