ದೇಶದಲ್ಲಿನ ಕ್ರಿಪ್ಟೋ ಹೂಡಿಕೆದಾರರು ಈ ಅಪಾಯಕಾರಿ ಹೂಡಿಕೆ ಮಾಡುವುದನ್ನು ಇನ್ನಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್ ಕ್ರಿಪ್ಟೋಕರೆನ್ಸಿಗಳ ಮೇಲೆ ಶೇಕಡಾ 28 ರಷ್ಟು ತೆರಿಗೆಯನ್ನು ವಿಧಿಸುವ ಚಿಂತನೆ ನಡೆಸುತ್ತಿದೆ. ಇದು ಕ್ಯಾಸಿನೋಗಳು, ಬೆಟ್ಟಿಂಗ್ ಮತ್ತು ಲಾಟರಿ ಮೇಲಿನ ಪ್ರಸ್ತುತ ಜಿಎಸ್‌ಟಿಗೆ ಸಮನಾಗಿರುತ್ತದೆ ಸೋಮವಾರ ಮಾಧ್ಯಮಗಳು ವರದಿ ಮಾಡಿದೆ.
ವರದಿಗಳ ಪ್ರಕಾರ, ಮುಂದಿನ ಜಿಎಸ್‌ಟಿ ಸಭೆಯಲ್ಲಿ ಪ್ರಸ್ತಾವನೆಯು ಜಾರಿಗೆ ಬಂದರೆ ಕ್ರಿಪ್ಟೋ ಗಣಿಗಾರಿಕೆಯಂತಹ ಸೇವೆಗಳು ಮತ್ತು ಮಾರಾಟ ಮತ್ತು ಖರೀದಿಗಳು ಶೇಕಡಾ 28 ಜಿಎಸ್‌ಟಿಯನ್ನು ಒಳಗೊಂಡಿರುತ್ತದೆ. ಮುಂದಿನ ಜಿಎಸ್‌ಟಿ ಸಭೆಯ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ.
ಹಣಕಾಸು ಸಚಿವಾಲಯವು ಈಗಾಗಲೇ ಕ್ರಿಪ್ಟೋ ಸ್ವತ್ತುಗಳ ವರ್ಗಾವಣೆ ಮತ್ತು ಎನ್‌ಎಫ್‌ಟಿ ಲಾಭದ ಮೇಲೆ ಶೇಕಡಾ 30 ತೆರಿಗೆಯನ್ನು ವಿಧಿಸಿದೆ. ಭಾರತವು ಕ್ರಿಪ್ಟೋಕರೆನ್ಸಿಗಳು ಮತ್ತು ಕ್ರಿಪ್ಟೋ ಸ್ವತ್ತುಗಳ ನಡುವೆ ವ್ಯತ್ಯಾಸವನ್ನು ಹೊಂದಿದೆ.

ಫೆಬ್ರವರಿಯಲ್ಲಿ 2022-23 ರ ಕೇಂದ್ರ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ವಹಿವಾಟಿನಿಂದ ಬರುವ ಆದಾಯದ ಮೇಲೆ 30 ಶೇಕಡಾ ತೆರಿಗೆಯನ್ನು ಘೋಷಿಸಿದರು. ಕ್ರಿಪ್ಟೋ ಗಳಿಕೆಯ ಮೇಲೆ 30 ಪ್ರತಿಶತ ತೆರಿಗೆ ವಿಧಿಸುವ ಅವರ ಪ್ರಸ್ತಾಪವು ಏಪ್ರಿಲ್ 1 ರಂದು ಜಾರಿಗೆ ಬಂದಿತು.
28 ಪ್ರತಿಶತ ಜಿಎಸ್‌ಟಿಯು ಕ್ರಿಪ್ಟೋ ಆಸ್ತಿ ವಹಿವಾಟಿನಿಂದ ಗಳಿಸುವ 30 ಪ್ರತಿಶತ ಆದಾಯ ತೆರಿಗೆಗೆ ಹೆಚ್ಚುವರಿಯಾಗಿರುತ್ತದೆ. ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಆಸ್ತಿ ವರ್ಗಗಳಲ್ಲಿನ ವಹಿವಾಟುಗಳ ಮೇಲೆ 1 ಶೇಕಡಾ ಟಿಡಿಎಸ್ ಸಹ ಇದೆ. ಕ್ರಿಪ್ಟೋ ಮತ್ತು ಡಿಜಿಟಲ್ ಸ್ವತ್ತುಗಳಲ್ಲಿನ ಉಡುಗೊರೆಗಳಿಗೆ ಸಹ ತೆರಿಗೆ ವಿಧಿಸಲಾಗುತ್ತದೆ.
ಡಿಜಿಟಲ್ ಸ್ವತ್ತುಗಳ ಮೇಲೆ ತೆರಿಗೆ ವಿಧಿಸಲು '115BBH' ಹೊಸ ವಿಭಾಗ
ಆದಾಯ ತೆರಿಗೆ ಕಾಯಿದೆ, 1961 ರಲ್ಲಿ ಡಿಜಿಟಲ್ ಸ್ವತ್ತುಗಳನ್ನು ತೆರಿಗೆ ಮಾಡಲು '115BBH' ಎಂಬ ಹೊಸ ವಿಭಾಗವನ್ನು ಸೇರಿಸಲಾಗಿದೆ. ಕಳೆದ ತಿಂಗಳು ಯುಎಸ್ ಪ್ರವಾಸದ ಸಂದರ್ಭದಲ್ಲಿ, ಸೀತಾರಾಮನ್ ಅವರು ವಿಶ್ವಾದ್ಯಂತ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯ ಗಾತ್ರದ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದರು. ಹಣವನ್ನು ಲಾಂಡರಿಂಗ್ ಮಾಡಲು ಮತ್ತು ಭಯೋತ್ಪಾದನೆಗೆ ನಿಧಿಯನ್ನು ಬಳಸುವುದನ್ನು ತಡೆಯಲು ಎಲ್ಲಾ ದೇಶಗಳು ಕ್ರಮ ಕೈಗೊಳ್ಳಭೇಕಾಗಿದೆ ಎಂದು ಒತ್ತಿ ಹೇಳಿದರು.
ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಆಯೋಜಿಸಿದ್ದ ಸೆಮಿನಾರ್‌ನಲ್ಲಿ ಸೀತಾರಾಮನ್ ಮಾತನಾಡಿ, ಎಲ್ಲಾ ದೇಶಗಳಿಗೆ ದೊಡ್ಡ ಅಪಾಯವೆಂದರೆ ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದು ಆಗಿದೆ ಎಂದರು. ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯ ಗಾತ್ರದ ಬಗ್ಗೆ ಸಚಿವರು ಈ ಹಿಂದೆ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.
ಈ ನಡುವೆ ಬಿಟ್‌ಕಾಯಿನ್ ಸೋಮವಾರ ಶೇಕಡಾ 2.7 ರಷ್ಟು ಕುಸಿದಿದೆ. ಶೇಕಡ 33,531 ನಲ್ಲಿ ವಹಿವಾಟು ನಡೆಸುತ್ತಿದೆ. ಮಾರುಕಟ್ಟೆ ಮೌಲ್ಯದ ಪ್ರಕಾರ ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿಯು ಕಳೆದ ವರ್ಷ ನವೆಂಬರ್‌ನಲ್ಲಿ ಗರಿಷ್ಠ ಮಟ್ಟದಿಂದ ಶೇಕಡಾ 50 ರಷ್ಟು ಕುಸಿದಿದೆ.


Click it and Unblock the Notifications