ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಎಚ್‌ಡಿಎಫ್‌ಸಿ ವಿಲೀನ ಪ್ರಕ್ರಿಯೆ ಪೂರ್ಣವಾಗಲು ಇನ್ನು ಕೆಲವೇ ಕೆಲವು ತಿಂಗಳುಗಳಿದೆ. ಜೂನ್ ವೇಳೆಗೆ ಎರಡು ಪ್ರಮುಖ ಹಣಕಾಸು ಸಂಸ್ಥೆಗಳ ವಿಲೀನ ಪ್ರಕ್ರಿಯೆ ಪೂರ್ಣವಾಗುವ ಸಾಧ್ಯತೆ ಇದೆ. ಭಾರತದ ಅತೀ ದೊಡ್ಡ ಖಾಸಗಿ ಬ್ಯಾಂಕ್, ಹಣಕಾಸು ಸಂಸ್ಥೆಯ ವಿಲೀನದಿಂದಾಗಿ ಗ್ರಾಹಕರ, ಸಾಲ ಪಡೆಯುವವರ, ಹಣ ಹೂಡಿಕೆದಾರರ ಮೇಲೆ ಭಾರೀ ಪ್ರಭಾವ ಉಂಟು ಮಾಡಲಿದೆ.
ಜೂನ್ ವೇಳೆಗೆ ಈ ವಿಲೀನ ಪ್ರಕ್ರಿಯೆ ಪೂರ್ಣವಾಗುವ ಸಾಧ್ಯತೆಯಿದೆ ಎಂದು ಎಚ್‌ಡಿಎಫ್‌ಸಿ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಈ ವಿಲೀನ ಪ್ರಕ್ರಿಯೆಯು 21 ಲಕ್ಷ ಹೂಡಿಕೆದಾರರ ಖಾತೆಯ ಮೇಲೆ ಪ್ರಭಾವ ಉಂಟು ಮಾಡುತ್ತದೆ. ಎಚ್‌ಡಿಎಫ್‌ಸಿಯಲ್ಲಿ ಹೂಡಿಕೆ ಮಾಡಿದ ಹೂಡಿಕೆದಾರರು ಪ್ರಮುಖವಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಎಚ್‌ಡಿಎಫ್‌ಸಿ ವಿಲೀನವಾದ ಬಳಿಕ ಉಂಟಾಗುವ ಪ್ರಭಾವವನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಬಡ್ಡಿದರದಲ್ಲಿನ ಬದಲಾವಣೆ ಹೇಗಿದೆ?
ಪ್ರಮುಖವಾಗಿ ಬಡ್ಡಿದರದಲ್ಲಿ ಬದಲಾವಣೆಯಾಗುತ್ತದೆ. ಎರಡು ಹಣಕಾಸು ಸಂಸ್ಥೆಗಳಲ್ಲಿ ಬಡ್ಡಿದರ ವಿಭಿನ್ನವಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಹೋಲಿಕೆ ಮಾಡಿದಾಗ ಎಚ್‌ಡಿಎಫ್‌ಸಿಯಲ್ಲಿ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಮೇಲೆ ಅಧಿಕ ಬಡ್ಡಿದರವನ್ನು ನೀಡಲಾಗುತ್ತದೆ. ನೀವು ಎಚ್‌ಡಿಎಫ್‌ಸಿಯಲ್ಲಿ 66 ತಿಂಗಳುಗಳ ಅವಧಿಯ 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಹೂಡಿಕೆ ಮಾಡಿದ್ದೀರಿ ಎಂದುಕೊಳ್ಳಿ. ಎಚ್‌ಡಿಎಫ್‌ಸಿಯಲ್ಲಿ ವಾರ್ಷಿಕವಾಗಿ ಶೇಕಡ 7.45ರಷ್ಟು ಬಡ್ಡಿದರವಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಇದೇ ಅವಧಿಯ ಎಫ್‌ಡಿ ಮೇಲೆ ಶೇಕಡ 7ರಷ್ಟು ಬಡ್ಡಿದರ ನೀಡಲಾಗುತ್ತದೆ.
ರಿಟೇಲ್ ಹೂಡಿಕೆದಾರರ ಮೇಲೆ 22 ತಿಂಗಳುಗಳಿಂದ 120 ತಿಂಗಳುಗಳ ಅವಧಿಯ ಹೂಡಿಕೆ ಮೇಲೆ ಹೂಡಿಕೆದಾರರಿಗೆ ಶೇಕಡ 6.95ರಿಂದ ಶೇಕಡ 8ರಷ್ಟು ಬಡ್ಡಿದರ ನೀಡಲಾಗುತ್ತದೆ. ಆದರೆ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ರಿಟೇಲ್ ಹೂಡಿಕೆದಾರರ ಅದೇ ಅವಧಿಯ ಹೂಡಿಕೆಯ ಮೇಲೆ ಶೇಕಡ 3ರಿಂದ ಶೇಕಡ 7.5ರಷ್ಟು ಬಡ್ಡಿದರವಿದೆ. ಹಿರಿಯ ನಾಗರಿಕರಿಗೆ ಎಚ್‌ಡಿಎಫ್‌ಸಿಯಲ್ಲಿ 2 ಲಕ್ಷ ರೂಪಾಯಿವರೆಗಿನ ಹೂಡಿಕೆಗೆ ಹೆಚ್ಚುವರಿಯಾಗಿ ಶೇಕಡ 0.25ರಷ್ಟು ಬಡ್ಡಿದರ ನೀಡಲಾಗುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಶೇಕಡ 0.50ರಷ್ಟು ಬಡ್ಡಿದರ ನೀಡಲಾಗುತ್ತದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಎಚ್‌ಡಿಎಫ್‌ಸಿ ವಿಲೀನ ಪ್ರಕ್ರಿಯೆ ನಂತರ, ಎಚ್‌ಡಿಎಫ್‌ಸಿ ಬ್ಯಾಂಕ್ ನಿಯಮದಂತೆ ಎಫ್‌ಡಿ ಬಡ್ಡಿದರವನ್ನು ರಿನಿವಲ್ ಮಾಡಲಾಗುತ್ತದೆ. ರಿನಿವಲ್ ಅನ್ನು ಆಯ್ಕೆ ಮಾಡದವರಿಗೆ, ಯಾವುದೇ ಬದಲಾವಣೆ ಇರುವುದಿಲ್ಲ. ಇದಲ್ಲದೆ, ಮೆಚ್ಯೂರಿಟಿಗೂ ಮುನ್ನ ಅಪ್‌ಡೇಟ್ ಮಾಡುವ ನಿಯಮವನ್ನು ಕೂಡಾ ನವೀಕರಣ ಮಾಡಲಾಗುತ್ತದೆ.
ಎಚ್‌ಡಿಎಫ್‌ಸಿ ಬ್ಯಾಂಕ್‌ನ ನಿಯಮಗಳ ಪ್ರಕಾರ ಎಫ್‌ಡಿ ವಿಮಾ ಪಾಲಿಸಿಗಳನ್ನು ಸಹ ಬದಲಾಯಿಸಬಹುದು. ಎರಡು ಹಣಕಾಸು ಸಂಸ್ಥೆಗಳ ವಿಲೀನದ ಬಳಿಕ ರಿನಿವಲ್ ಅಪ್‌ಡೇಟ್ ಆಯ್ಕೆ ಮಾಡಿದವರು ತಮ್ಮ ಎಫ್‌ಡಿಗಳನ್ನು ಎಚ್‌ಡಿಎಫ್‌ಸಿ ಬ್ಯಾಂಕ್‌ನ ನಿಯಮಗಳ ಪ್ರಕಾರ ರಿನಿವಲ್ ಮಾಡಬೇಕಾಗುತ್ತದೆ. ರಿನಿವಲ್ ಆಯ್ಕೆ ಮಾಡದವರಿಗೆ, ಯಾವುದೇ ಬದಲಾವಣೆ ಇರುವುದಿಲ್ಲ.
ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಎಚ್‌ಡಿಎಫ್‌ಸಿ ವಿಲೀನ ಪ್ರಕ್ರಿಯೆ ಏಪ್ರಿಲ್ 4, 2022ರಂದು ಆರಂಭವಾಗಿದ್ದು, ಪ್ರಸ್ತುತ ಪ್ರಕ್ರಿಯೆ ಎಂದು ಕೊನೆಯಾಗಲಿದೆ ಎಂಬ ಬಗ್ಗೆ ಸುದ್ದಿಯಾಗುತ್ತಿದೆ. ಪ್ರಕ್ರಿಯೆ ಆರಂಭವಾಗಿ ಸುಮಾರು 7-8 ತಿಂಗಳುಗಳು ಆದ ಬಳಿಕ ಸಂಸ್ಥೆಗಳು ಪ್ರಕ್ರಿಯೆ ಪೂರ್ಣವಾಗಲು 8-10 ತಿಂಗಳು ಬೇಕಾಗುತ್ತದೆ ಎಂದು ನವೆಂಬರ್ ಅಂತ್ಯದಲ್ಲಿ ಹೇಳಿಕೊಂಡಿದೆ. ಈಗ ಲಭ್ಯವಾದ ಮಾಹಿತಿ ಪ್ರಕಾರ ಜುಲೈ ವೇಳೆಗೆ ಪ್ರಕ್ರಿಯೆ ಕೊನೆಯಾಗಲಿದೆ.


Click it and Unblock the Notifications