ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ ದರವನ್ನು ಮತ್ತೆ ಏರಿಕೆ ಮಾಡಿದೆ. ಆರ್‌ಬಿಐ ರೆಪೋ ದರವನ್ನು 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 5.4ಕ್ಕೆ ತಲುಪಿದೆ. ಈ ಬೆನ್ನಲ್ಲೇ ಹಲವಾರು ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಸಾಲ ಬಡ್ಡಿದರವನ್ನು ಏರಿಕೆ ಮಾಡಲು ಆರಂಭ ಮಾಡಿದೆ. ಎಚ್‌ಡಿಎಫ್‌ಸಿ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ಕೂಡಾ ತನ್ನ ಸಾಲದ ಬಡ್ಡಿದರವನ್ನು ಹೆಚ್ಚಳ ಮಾಡಿದ್ದು, ಇನ್ಮುಂದೆ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಸಾಲ ದುಬಾರಿಯಾಗಿದೆ.
ಆರ್‌ಬಿಐ ಕಳೆದ ವಾರ ರೆಪೋ ದರ ಏರಿಕೆ ಮಾಡಿದ ಹಿನ್ನೆಲೆಯಿಂದಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಸಾಲದ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಎಲ್ಲ ಅವಧಿಯ ಸಾಲದ ಬಡ್ಡಿದರವನ್ನು 5-10 ಮೂಲಾಂಕ ಏರಿಕೆ ಮಾಡಲಾಗಿದೆ. ಈ ಬಡ್ಡಿದರ ಏರಿಕೆ ಆಗಸ್ಟ್ 8 ಅಂದರೆ ನಿನ್ನೆಯಿಂದಲೇ ಜಾರಿಗೆ ಬಂದಿದೆ.
ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಸಾಲ ನೀಡುವ ಕನಿಷ್ಠ ಬಡ್ಡಿದರವಾಗಿದೆ. ಇದಕ್ಕಿಂತ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್‌ನಲ್ಲಿ ಸಾಲ ದೊರೆಯದು. ಈ ಎಂಸಿಎಲ್‌ಆರ್ ವ್ಯವಸ್ಥೆಯನ್ನು ಆರ್‌ಬಿಐ 2016ರ ಏಪ್ರಿಲ್ 1ರಲ್ಲಿ ಆರಂಭ ಮಾಡಿದೆ.
ಸಾಲದ ಬಡ್ಡಿದರ, ಎಫ್‌ಡಿ ಮೇಲೆ ರೆಪೋ ಪರಿಣಾಮ
ಇನ್ನು ಹಿಂದೆ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದ ಸಂದರ್ಭದಲ್ಲಿಯೂ ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಎಚ್‌ಡಿಎಫ್‌ಸಿ ಸಾಲದ ಬಡ್ಡಿದರವನ್ನು ಏರಿಕೆ ಮಾಡಿದೆ. ಸಾಮಾನ್ಯವಾಗಿ ರೆಪೋ ದರದಲ್ಲಿ ಆಗುವ ಪರಿಷ್ಕರಣೆಯು ಸಾಲದ ಬಡ್ಡಿದರ ಹಾಗೂ ಎಫ್‌ಡಿ ಮೇಲೆಯೂ ಪರಿಣಾಮ ಬೀರುತ್ತದೆ. ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳು ಸಾಲದ ಬಡ್ಡಿದರದಲ್ಲಿ ಬದಲಾವಣೆ ಮಾಡುವ ಜೊತೆಯೇ ಎಫ್‌ಡಿ ಮೇಲಿನ ಬಡ್ಡಿದರವನ್ನು ಕೂಡಾ ಪರಿಷ್ಕರಣೆ ಮಾಡುತ್ತದೆ. ಜೂನ್ ತಿಂಗಳಿನಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ.
ಎಚ್‌ಡಿಎಫ್‌ಸಿ ಸಾಲದ ಬಡ್ಡಿದರ ಹೆಚ್ಚಳ
ಎಚ್‌ಡಿಎಫ್‌ಸಿ ಕೂಡಾ ಸೋಮವಾರ ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಆರ್‌ಪಿಎಲ್‌ಆರ್ ಅನ್ನು 25 ಮೂಲಾಂಕ ಎಚ್‌ಡಿಎಫ್‌ಸಿ ಏರಿಸಿದ್ದು ಇದು ಇಂದಿನಿಂದ (ಜುಲೈ 9) ಜಾರಿಗೆ ಬರಲಿದೆ. ಈ ಬಗ್ಗೆ ಬಿಎಸ್‌ಇ ಫೈಲಿಂಗ್‌ನಲ್ಲಿ ಮಾಹಿತಿ ನೀಡಲಾಗಿದೆ. "ಗೃಹ ಸಾಲದ ಮೇಲಿನ ಆರ್‌ಪಿಎಲ್‌ಆರ್ ಅನ್ನು 25 ಮೂಲಾಂಕ ಹೆಚ್ಚಿಸಲಾಗಿದೆ. ಇದು ಜುಲೈ 9ರಿಂದ ಜಾರಿಗೆ ಬರುತ್ತದೆ," ಎಂದು ತಿಳಿಸಿದೆ.
3 ತಿಂಗಳಲ್ಲಿ 6 ಬಾರಿ ದರ ಏರಿಕೆ
ಎಚ್‌ಡಿಎಫ್‌ಸಿ ಈ ತಿಂಗಳಿನಲ್ಲಿ ಎರಡು ಬಾರಿ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಇದಕ್ಕೂ ಮುನ್ನ ಆಗಸ್ಟ್ ಒಂದರಂದು ಎಚ್‌ಡಿಎಫ್‌ಸಿ ಸಾಲದ ಮೇಲಿನ ಬಡ್ಡಿದರವನ್ನು ಏರಿಸಿದೆ. ಕಳೆದ ಮೂರು ತಿಂಗಳಿನಲ್ಲಿ ಒಟ್ಟು ಆರು ಬಾರಿ ಸಾಲದ ಬಡ್ಡಿದರವನ್ನು ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಎಚ್‌ಡಿಎಫ್‌ಸಿ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಸಾಲ ಪಡೆಯುವುದು ದುಬಾರಿಯಾಗಲಿದೆ. ಎಚ್‌ಡಿಎಫ್‌ಸಿ 2022ರ ಮೇ ತಿಂಗಳಿನಿಂದ ಈವರೆಗೆ ಒಟ್ಟು 140 ಮೂಲಾಂಕ ಸಾಲದ ಬಡ್ಡಿದರವನ್ನು ಹೆಚ್ಚಳ ಮಾಡಿದೆ.
ಎಷ್ಟೆಷ್ಟು ಬಡ್ಡಿದರ ಏರಿಕೆ
ಇದಕ್ಕೂ ಮುನ್ನ ಜೂನ್ 9ರಂದು ಎಚ್‌ಡಿಎಫ್‌ಸಿ ಆರ್‌ಪಿಎಲ್‌ಆರ್ 50 ಮೂಲಾಂಕ ಏರಿಕೆ ಮಾಡಿದೆ. ಜೂನ್ 1ರಂದು 5 ಮೂಲಾಂಕ ಸಾಲದ ಬಡ್ಡಿದರ ಏರಿಸಲಾಗಿದೆ. ಅದಕ್ಕೂ ಮುನ್ನ ಮೇ 2ರಂದು ಸಾಲದ ಬಡ್ಡಿದರವನ್ನು 5 ಮೂಲಾಂಕ ಹೆಚ್ಚಿಸಲಾಗಿದೆ. ಮತ್ತೆ ಮೇ 9ರಂದು ಗೃಹ ಸಾಲದ ಮೇಲಿನ ಬಡ್ಡಿದರ 30 ಮೂಲಾಂಕ ಏರಿಸಲಾಗಿದೆ. ಈಗ ಮತ್ತೆ 25 ಮೂಲಾಂಕ ಏರಿಸಲಾಗಿದೆ. ಸಾಮಾನ್ಯವಾಗಿ ತ್ರೈಮಾಸಿಕವಾಗಿ ಎಚ್‌ಡಿಎಫ್‌ಸಿ ಸಾಲದ, ಫಿಕ್ಸಿಡ್ ಡೆಪಾಸಿಟ್‌ನ ಬಡ್ಡಿದರವನ್ನು ಪರಿಷ್ಕರಣೆ ಮಾಡುತ್ತದೆ.


Click it and Unblock the Notifications