ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್ ನಾನ್ ಕಾಲೇಬಲ್ ಫಿಕ್ಸಿಡ್ ಡೆಪಾಸಿಟ್‌ಗಳ (ಎಫ್‌ಡಿ) ಬಡ್ಡಿದರಗಳನ್ನು ಪರಿಷ್ಕರಿಸಿದೆ. ಪರಿಷ್ಕರಣೆಯ ಬಳಿಕ ಒಂದರಿಂದ ಎರಡು ವರ್ಷಗಳ ಅವಧಿಯಲ್ಲಿ ಬ್ಯಾಂಕ್ ಈಗ ಗರಿಷ್ಠ ಶೇಕಡ 7.45 ಆದಾಯವನ್ನು ನೀಡುತ್ತಿದೆ.
ಫಿಕ್ಸಿಡ್ ಡೆಪಾಸಿಟ್‌ಗಳನ್ನು ಅಕಾಲಿಕವಾಗಿ ಹಿಂಪಡೆಯಲು ಈ ನಾನ್ ಕಾಲೇಬಲ್ ಎಫ್‌ಡಿಯಲ್ಲಿ ಅವಕಾಶವಿಲ್ಲ. ಅಂದರೆ ಡೆಪಾಸಿಟ್‌ದಾರರು ಅವಧಿ ಮುಗಿಯುವ ಮೊದಲು ಫಿಕ್ಸಿಡ್ ಡೆಪಾಸಿಟ್‌ನಿಂದ ನಿರ್ಗಮಿಸಲು ಸಾಧ್ಯವಿಲ್ಲ. ಎಚ್‌ಡಿಎಫ್‌ಸಿ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಈ ಡೆಪಾಸಿಟ್‌ಗಳ ಮೇಲಿನ ಬಡ್ಡಿ ದರಗಳು ಇಂದಿನ ನವೆಂಬರ್ 27 ರಿಂದ ಜಾರಿಗೆ ಬರುತ್ತದೆ, ಇಲ್ಲಿದೆ ವಿವರ, ಮುಂದೆ ಓದಿ...

ಎಚ್‌ಡಿಎಫ್‌ಸಿ ಬ್ಯಾಂಕ್ ನಾನ್ ಕಾಲೇಬಲ್ ಎಫ್‌ಡಿ ದರಗಳು
1 ರಿಂದ 2 ವರ್ಷಗಳ ಅವಧಿ 2 ಕೋಟಿ ರೂಪಾಯಿಯಿಂದ 5 ಕೋಟಿ ರೂಪಾಯಿ ನಡುವಿನ ಎಫ್‌ಡಿ ಡೆಪಾಸಿಟ್ ಮೊತ್ತದ ಮೇಲೆ ಶೇಕಡ 7.45 ಬಡ್ಡಿದರವನ್ನು ಪಾವತಿಸಲಾಗುತ್ತದೆ. ಎರಡರಿಂದ ಹತ್ತು ವರ್ಷಗಳ ಮೆಚ್ಯೂರಿಟಿ ಹೊಂದಿರುವ ನಾನ್‌ಕಾಲೇಬಲ್ ಎಫ್‌ಡಿ ಬಡ್ಡಿದರ ಶೇಕಡ 7.20 ಆಗಿದೆ.
ನಾನ್ ರೆಸಿಡೆಂಟ್ ವರ್ಗವೂ ಕೂಡಾ ಡೆಪಾಸಿಟ್‌ಗೆ ಅರ್ಹರಾಗಿರುತ್ತಾರೆ. ಎನ್‌ಆರ್‌ಇ ಡೆಪಾಸಿಟ್‌ಗಳಿಗೆ ಒಂದು ವರ್ಷದ ಅವಧಿಯು ಕಡ್ಡಾಯವಾಗಿದೆ. ನಾನ್‌ಕಾಲೇಬಲ್ ಡೆಪಾಸಿಟ್ ಭಾರತೀಯ ನಾಗರಿಕರಿಗೆ 2 ಕೋಟಿ ರೂಪಾಯಿಯಿಂದ 5 ಕೋಟಿ ರೂಪಾಯಿಗೂ ಅಧಿಕ ಮೊತ್ತಕ್ಕೆ ಮಾತ್ರ ಲಭ್ಯವಿದೆ. ಆರು ತಿಂಗಳಿಗಿಂತ ಹೆಚ್ಚಿನ ಅವಧಿಯ ಡೆಪಾಸಿಟ್‌ಗಳಿಗೆ ತ್ರೈಮಾಸಿಕ ಬಡ್ಡಿ ಲೆಕ್ಕಾಚಾರಗಳನ್ನು ಕೈಗೊಳ್ಳಲಾಗುತ್ತದೆ.
ವಿತ್‌ಡ್ರಾ ಮಾಡಲಾಗದ ಡೆಪಾಸಿಟ್‌ಗಳಿಗೆ ಸಂಬಂಧಿಸಿದಂತೆ, "ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ ಬ್ಯಾಂಕ್‌ನಲ್ಲಿ ಸ್ಪಷ್ಟವಾದ ಹಣದ ಲಭ್ಯತೆಯ ಮೇಲೆ ಠೇವಣಿ ಬುಕ್ ಮಾಡಲಾಗುವುದು ಮತ್ತು ಬ್ಯಾಂಕ್‌ನಿಂದ ಹಣವನ್ನು ಸ್ವೀಕರಿಸಿದ ದಿನಾಂಕದಂದು ಅನ್ವಯವಾಗುವ ಬಡ್ಡಿ ದರವನ್ನು ನೀಡಲಾಗುತ್ತದೆ ಎಂದು ಉಲ್ಲೇಖಿಸಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ತ್ರೈಮಾಸಿಕ ವರದಿ
ಎಚ್‌ಡಿಎಫ್‌ಸಿ ಬ್ಯಾಂಕ್ ನಿವ್ವಳ ಲಾಭವು ಹಣಕಾಸು ವರ್ಷ 2024ರ ಎರಡನೇ ತ್ರೈಮಾಸಿಕದಲ್ಲಿ ಶೇಕಡ 50.6 ರಷ್ಟು ಜಿಗಿದು 15,976 ಕೋಟಿ ರೂಪಾಯಿ ಆಗಿದೆ. ನಿವ್ವಳ ಬಡ್ಡಿ ಆದಾಯವು ಇದೇ ತ್ರೈಮಾಸಿಕದಲ್ಲಿ 27,385 ಕೋಟಿ ರೂಪಾಯಿಗೆ ತಲುಪಿದೆ. ಹಣಕಾಸು ವರ್ಷ 2023ರ ಎರಡನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ 21,021 ಕೋಟಿ ರೂಪಾಯಿ ಆಗಿದೆ.
ಬ್ಯಾಂಕಿನ ನಿವ್ವಳ ಆದಾಯವು ಶೇಕಡ 33.1 ಕ್ಕೆ ಜಿಗಿದಿದೆ. ಸೆಪ್ಟೆಂಬರ್ 30, 2022 ಕ್ಕೆ ಕೊನೆಗೊಂಡ ತ್ರೈಮಾಸಿಕಕ್ಕೆ 28,617 ಕೋಟಿ ರೂಪಾಯಿಯಿಂದ ಸೆಪ್ಟೆಂಬರ್ 30, 2023 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 38,093 ಕೋಟಿ ರೂಪಾಯಿಗೆ ಏರಿದೆ.


Click it and Unblock the Notifications