ಭಾರತದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಆಯ್ದ ಸಾಲಗಳ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಇದು ಪ್ರಮುಖವಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರ ಮೇಲೆ ಪ್ರಭಾವ ಉಂಟು ಮಾಡಲಿದೆ. ಸೆಪ್ಟೆಂಬರ್ 7 ರಿಂದ, ಗ್ರಾಹಕರು ಕೆಲವು ಎಚ್‌ಡಿಎಫ್‌ಸಿ ಬ್ಯಾಂಕ್ ಸಾಲಗಳ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ಪಾವತಿಸಬೇಕಾಗುತ್ತದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಮಾನದಂಡದ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಅನ್ನು ಶೇಕಡ 0.15 ಅಥವಾ 15 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆ ಮಾಡಿದೆ. ಈ ಹೊಸ ಬಡ್ಡಿದರಗಳು ಸೆಪ್ಟೆಂಬರ್ 7 ರಂದು ಜಾರಿಗೆ ಬಂದಿದೆ. ಇದು ಎಚ್‌ಡಿಎಫ್‌ಸಿ ಗೃಹ ಸಾಲ, ಕಾರು ಸಾಲ, ವೈಯಕ್ತಿಕ ಸಾಲಗಳನ್ನು ಪಡೆದ ಗ್ರಾಹಕರಿಗೆ ಇಎಂಐಗಳನ್ನು ಹೆಚ್ಚಿಸಲಿದೆ.

ಇತ್ತೀಚಿನ ಎಚ್‌ಡಿಎಫ್‌ಸಿ ಬ್ಯಾಂಕ್ ಎಂಸಿಎಲ್‌ಆರ್ ದರಗಳು ಇಲ್ಲಿವೆ
1. ಓವರ್‌ನೈಟ್ ಎಂಸಿಎಲ್‌ಆರ್: ಶೇಕಡ 8.35 ರಿಂದ ಶೇಕಡ 8.50 ಕ್ಕೆ ಏರಿಕೆ
2. ಒಂದು ತಿಂಗಳ ಎಂಸಿಎಲ್‌ಆರ್: ಶೇಕಡ 8.45 ರಿಂದ ಶೇಕಡ 8.55 ಕ್ಕೆ ಏರಿಕೆ
3. ಮೂರು ತಿಂಗಳ ಎಂಸಿಎಲ್‌ಆರ್: ಶೇಕಡ 8.70 ರಿಂದ ಶೇಕಡ 8.80 ಕ್ಕೆ ಏರಿಕೆ
4. ಆರು ತಿಂಗಳ ಎಂಸಿಎಲ್‌ಆರ್: ಶೇಕಡ 8.95 ರಿಂದ ಶೇಕಡ 9.05 ಕ್ಕೆ ಏರಿಕೆ
ಒಂದು ವರ್ಷದ ಎಂಸಿಎಲ್‌ಆರ್‌ಗೆ ಅಡಿಯಲ್ಲಿ ಬರುವ ಸಾಲಗಳಿಗೆ ಶೇಕಡ 0.05 ರಷ್ಟು ಬಡ್ಡಿದರ ಏರಿಕೆಯಾಗಿದೆ, ಶೇಕಡ 9.10ರಿಂದ ಶೇಕಡ 9.15ಕ್ಕೆ ಏರಿಕೆಯಾಗಿದೆ. ಒಂದು ಮತ್ತು ಎರಡು ವರ್ಷಗಳ ಅವಧಿಯ ಸಾಲಗಳ ಎಂಸಿಎಲ್‌ಆರ್ ಸಹ ಶೇಕಡ 0.05 ರಷ್ಟು ಹೆಚ್ಚಾಗಿದೆ, ಇದು ಶೇಕಡ 9.20 ತಲುಪಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನ ಪರಿಷ್ಕೃತ ಮೂಲ ದರವು ಈಗ ಶೇಕಡ 9.20 ಆಗಿದ್ದು, ಜೂನ್ 16 ರಿಂದ ಜಾರಿಗೆ ಬರಲಿದೆ. ಬೆಂಚ್‌ಮಾರ್ಕ್ ಪಿಎಲ್‌ಆರ್ ದರವು ಶೇಕಡ 17.70 ರಷ್ಟಿದೆ. ಎಂಸಿಎಲ್‌ಆರ್ ದರಗಳಲ್ಲಿನ ಈ ಹೆಚ್ಚಳವು ಸಾಲಗಳ ಮೇಲೆ ಪರಿಣಾಮ ಬೀರುತ್ತದೆ.
ಕಳೆದ ತಿಂಗಳು ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಬೆಂಚ್‌ಮಾರ್ಕ್ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ (ಎಂಸಿಎಲ್‌ಆರ್) ಆಧಾರಿತ ಸಾಲದ ದರಗಳನ್ನು ಏರಿಕೆ ಮಾಡಿದೆ. ನಿಗದಿತ ಅವಧಿಗಳ ಎಂಸಿಎಲ್‌ಆರ್ ಅನ್ನು ಬ್ಯಾಂಕ್ 15 ಬೇಸಿಸ್ ಪಾಯಿಂಟ್‌ಗಳವರೆಗೆ ಹೆಚ್ಚಿಸಿದೆ. ಅಂದರೆ ಬ್ಯಾಂಕ್‌ನಲ್ಲಿ ಈಗ ಎಂಸಿಎಲ್‌ಆರ್‌ಗೆ ಲಿಂಕ್ ಮಾಡಲಾದ ಸಾಲಗಳ ಮೇಲೆ ಹೆಚ್ಚಿನ ಬಡ್ಡಿ ದರವನ್ನು ವಿಧಿಸುತ್ತದೆ. ಹೊಸ ದರಗಳು ಆಗಸ್ಟ್ 7, 2023 ರಿಂದ ಜಾರಿಗೆ ಬಂದಿದೆ.


Click it and Unblock the Notifications