HDFC ಬ್ಯಾಂಕ್ ನಿಂದ ಹಿರಿಯ ನಾಗರಿಕರಿಗೆ ಎಫ್.ಡಿ. ಮೇಲೆ ಹೆಚ್ಚು ಬಡ್ಡಿ ಯೋಜನೆ

ಎಚ್ ಡಿಎಫ್ ಸಿ ಬ್ಯಾಂಕ್ ನಿಂದ ಹಿರಿಯ ನಾಗರಿಕರಿಗಾಗಿ ವಿಶೇಷ ಫಿಕ್ಸೆಡ್ ಡೆಪಾಸಿಟ್ (ಎಫ್.ಡಿ) ಯೋಜನೆ ಆರಂಭಿಸಲಾಗಿದೆ. ಇದಕ್ಕೆ "ಸೀನಿಯರ್ ಸಿಟಿಜನ್ ಕೇರ್ ಎಫ್ ಡಿ ಸ್ಕೀಮ್" ಎಂದು ಹೆಸರಿಡಲಾಗಿದೆ. ಈ ಎಫ್.ಡಿ. ಯೋಜನೆಗೆ ಬ್ಯಾಂಕ್ ನಿಂದ ಹೆಚ್ಚಿನ ಬಡ್ಡಿ ದರವನ್ನು ನೀಡಲಾಗುತ್ತದೆ. 5 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಎಫ್.ಡಿ. ಮಾಡಿದರೆ 75 ಬೇಸಿಸ್ ಪಾಯಿಂಟ್ ಹೆಚ್ಚು ಬಡ್ಡಿ ದರ ದೊರೆಯುತ್ತದೆ.

ಮೇ 18, 2020ರಿಂದ ಈ ಯೋಜನೆಯು ಜಾರಿಗೆ ಬಂದಿದೆ. ಹೊಸದಾಗಿ ಫಿಕ್ಸೆಡ್ ಡೆಪಾಸಿಟ್ ಮಾಡುವವರಿಗೆ ಹಾಗೂ ಈಗಾಗಲೇ ಇರುವ ಡೆಪಾಸಿಟ್ ರಿನೀವ್ ಮಾಡುವ ಹಿರಿಯ ನಾಗರಿಕರಿಗೆ ಇದು ಅನ್ವಯ ಆಗಲಿದೆ. ಈ ವರ್ಷದ ಸೆಪ್ಟೆಂಬರ್ 30ರ ತನಕ ಸ್ಕೀಮ್ ಜಾರಿಯಲ್ಲಿ ಇರಲಿದೆ. ಐದು ವರ್ಷದ ಮೇಲ್ಪಟ್ಟು ಹತ್ತು ವರ್ಷದೊಳಗಿನ ಅವಧಿಗೆ 75 ಬೇಸಿಸ್ ಪಾಯಿಂಟ್ ಹೆಚ್ಚು ಬಡ್ಡಿ ದೊರೆಯಲಿದೆ.

ಸೀನಿಯರ್ ಸಿಟಿಜನ್ ಕೇರ್ ಎಫ್ ಡಿ ಸ್ಕೀಮ್ ನಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡಿದರೆ ವರ್ಷಕ್ಕೆ 6.50 ಪರ್ಸೆಂಟ್ ನಂತೆ ಬಡ್ಡಿ ದೊರೆಯುತ್ತದೆ. ಈ ಹೊಸ ಪ್ರಾಡಕ್ಟ್ ನಲ್ಲಿ 25 ಬಿಪಿಎಸ್ ಪ್ರೀಮಿಯಂ ಅನ್ನು 5 ವರ್ಷ 1 ದಿನ ಮೇಲ್ಪಟ್ಟ ಅವಧಿಗೆ ಡೆಪಾಸಿಟ್ ಮಾಡಿದರೆ ಮಾತ್ರ ಪಾವತಿಸಲಾಗುತ್ತದೆ.

HDFC ಬ್ಯಾಂಕ್ ನಿಂದ ಹಿರಿಯ ನಾಗರಿಕರಿಗೆ ಎಫ್.ಡಿ. ಮೇಲೆ ಹೆಚ್ಚು ಬಡ್ಡಿ

ಒಂದು ವೇಳೆ ಆ ನಿರ್ದಿಷ್ಟ ಅವಧಿಗೆ ಮುಂಚೆಯೇ ಡೆಪಾಸಿಟ್ ಹಿಂಪಡೆದುಕೊಂಡರೆ ಒಪ್ಪಂದಕ್ಕಿಂತ 1.25 ಪರ್ಸೆಂಟ್ ಬಡ್ಡಿ ದೊರೆಯಲಿದೆ. ಅಥವಾ ಆಗ ಬೇಸ್ ರೇಟ್ ಎಷ್ಟು ಇರುತ್ತದೋ ಅದರಲ್ಲಿ ಯಾವುದು ಕಡಿಮೆಯೋ ಅದು ಅನ್ವಯ ಆಗುತ್ತದೆ. ಇತ್ತೀಚಿನ ಬಡ್ಡಿ ದರ ಪರಿಷ್ಕರಣೆ ಮಾಡಿದ ನಂತರ ಸಾಮಾನ್ಯ ಗ್ರಾಹಕರಿಗೆ ಮೂರರಿಂದ 5.75 ಪರ್ಸೆಂಟ್ ಬಡ್ಡಿ ನೀಡುತ್ತಿದ್ದರೆ, ಹಿರಿಯ ನಾಗರಿಕರಿಗೆ 3, 5%ನಿಂದ 6.50%* ಬಡ್ಡಿ ದರವನ್ನು 7 ದಿನದಿಂದ 10 ವರ್ಷಗಳ ಅವಧಿಗೆ ಬಡ್ಡಿ ದರ ನೀಡಲಾಗುತ್ತಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+