ನಿವೃತ್ತರು ಹಾಗೂ ಎಫ್.ಡಿ. ಬಡ್ಡಿಯ ಮೇಲೆ ಅವಲಂಬಿತರಾಗಿ ಬದುಕುತ್ತಿರುವವರಿಗೆ ಕಳೆದ ಒಂದು ವರ್ಷದಿಂದ ಆದಾಯಕ್ಕೆ ಪೆಟ್ಟು ಬಿದ್ದಿದೆ. ಏಕೆಂದರೆ ಫಿಕ್ಸೆಡ್ ಡೆಪಾಸಿಟ್ಸ್ ಮೇಲಿನ ಬಡ್ಡಿ ದರ ಸಿಕ್ಕಾಪಟ್ಟೆ ಕುಸಿದುಹೋಗಿದೆ. ಯಾವ ಬ್ಯಾಂಕ್ ನಲ್ಲಿ 6ರಿಂದ 7 ಪರ್ಸೆಂಟ್ ಬಡ್ಡಿ ಕೊಡಲಾಗುತ್ತದೆ ಎಂಬುದನ್ನು ಕಷ್ಟ ಪಟ್ಟು ಹುಡುಕಾಟ ನಡೆಸುವಂತಾಗಿದೆ ಪರಿಸ್ಥಿತಿ.
ಕೆಲವು ಬ್ಯಾಂಕ್ ಗಳಿವೆ. ಅವು ಈಗಲೂ ಒಂದು ವರ್ಷದ ಡೆಪಾಸಿಟ್ ಗೆ ಉತ್ತಮವಾದ ಬಡ್ಡಿ ದರವನ್ನೇ ನೀಡುತ್ತಿವೆ. ಯಾವುದು ಆ ಬ್ಯಾಂಕ್ ಹಾಗೂ ಬಡ್ಡಿ ದರ ಎಷ್ಟು ಎಂಬ ವಿವರ ಹೀಗಿದೆ. ನೆನಪಿಡಿ, ಇದು ಒಂದು ವರ್ಷದ ಅವಧಿಯ ಫಿಕ್ಸೆಡ್ ಡೆಪಾಸಿಟ್ ಗೆ ಇರುವ ಬಡ್ಡಿ ದರ.
* ಇಂಡಸ್ ಇಂಡ್ ಬ್ಯಾಂಕ್ 7%
* ಯೆಸ್ ಬ್ಯಾಂಕ್ 7%
* ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಸೇವಿಂಗ್ಸ್ ಅಕೌಂಟ್ 7%
* ಶ್ರೀರಾಮ್ ಟ್ರಾನ್ಸ್ ಪೋರ್ಟ್ ಫೈನಾನ್ಸ್ 7%
* ಶ್ರೀರಾಮ್ ಸಿಟಿ ಯೂನಿಯನ್ 7%

ಇಲ್ಲಿ ಸೇವಿಂಗ್ಸ್ ಬ್ಯಾಂಕ್ ಅಕೌಂಟ್- ಉಳಿತಾಯ ಖಾತೆ ಹಾಗೂ ಎನ್ ಬಿಎಫ್ ಸಿಗಳಾದ ಶ್ರೀರಾಮ್ ಟ್ರಾನ್ಸ್ ಪೋರ್ಟ್ ಹಾಗೂ ಶ್ರೀರಾಮ್ ಸಿಟಿ ಯೂನಿಯನ್ ಕೂಡ ನೀಡಲಾಗಿದೆ. ಎರಡಕ್ಕೂ ಕ್ರಿಸಿಲ್ ರೇಟಿಂಗ್ ಇದೆ. ಶ್ರೀರಾಮ್ ಸಿಟಿ ಯೂನಿಯನ್ ಗೆ AAA ರೇಟಿಂಗ್ ಇಲ್ಲ. ಅದಕ್ಕೆ ಇರುವುದು AA ರೇಟಿಂಗ್ ಮಾತ್ರ.
ಇನ್ನೂ ಒಂದು ವಿಚಾರ ಏನೆಂದರೆ, ಫಿಕ್ಸೆಡ್ ಡೆಪಾಸಿಟ್ ಮೊತ್ತ 5 ಲಕ್ಷ ರುಪಾಯಿ ತನಕ ಮಾತ್ರ ಸುರಕ್ಷಿತ. ಇನ್ಷೂರೆನ್ಸ್ ಮೂಲಕ ಫಿಕ್ಸೆಡ್ ಡೆಪಾಸಿಟ್ ಹಾಗೂ ಅದರ ಮೇಲಿನ ಬಡ್ಡಿ 5 ಲಕ್ಷದ ತನಕ ಮಾತ್ರ ಸುರಕ್ಷಿತ. ಅಂದಹಾಗೆ ಈ ಮೇಲ್ಕಂಡಂತೆ ತಿಳಿಸಿರುವ ಒಂದು ವರ್ಷ ಬಡ್ಡಿ ದರವು ಪೋಸ್ಟ್ ಆಫೀಸ್ ಗಿಂತ ಉತ್ತಮ ಬಡ್ಡಿ ನೀಡುತ್ತದೆ. ನೆನಪಿನಲ್ಲಿರಲಿ, ಈ ದೇಶದ ಅತಿ ದೊಡ್ಡ ಬ್ಯಾಂಖ್ ಎಸ್ ಬಿಐ ಸದ್ಯಕ್ಕೆ ಕೊಡುತ್ತಿರುವುದು ಕೇವಲ 5% ಬಡ್ಡಿ.
ಫಿಕ್ಸೆಡ್ ಡೆಪಾಸಿಟ್ ಮೇಲೆ ಬಡ್ಡಿ ಬರುತ್ತಲ್ಲಾ, ಅದಕ್ಕೆ ತೆರಿಗೆ ಹಾಕಲಾಗುತ್ತದೆ. ಅದಕ್ಕೆ ಟಿಡಿಎಸ್ ಇರುತ್ತದೆ. ಕಂಪೆನಿ ಫಿಕ್ಸೆಡ್ ಡೆಪಾಸಿಟ್ ಆಗಿದ್ದಲ್ಲಿ ಒಂದು ವೇಳೆ ಬಡ್ಡಿ ಮೊತ್ತ ಐದು ಸಾವಿರ ದಾಟಿದರೆ ಟ್ಯಾಕ್ಸ್ ಡಿಡಕ್ಟಡ್ ಅಟ್ ಸೋರ್ಸ್ ಆಗುತ್ತದೆ. ಅದೇ ಬ್ಯಾಂಕ್ ಆದಲ್ಲಿ ಹತ್ತು ಸಾವಿರ ರುಪಾಯಿ ದಾಟಬೇಕು.
ಒಂದು ವೇಳೆ ಯಾವುದೇ ಆದಾಯ ತೆರಿಗೆ ಕಟ್ಟುವ ಜವಾಬ್ದಾರಿ ನಿಮ್ಮ ಮೇಲೆ ಇಲ್ಲ ಎಂದಾದದಲ್ಲೆ 15G ಮತ್ತು 15H ಫಾರ್ಮ್ ಸಲ್ಲಿಸಬೇಕು. ಒಳ್ಳೆ ರೇಟಿಂಗ್ ಇರುವ ಸೆಕ್ಯೂರ್ಡ್ ಡೆಪಾಸಿಟ್ ಆರಿಸಿಕೊಳ್ಳುವುದು ಉತ್ತಮ. ಬ್ಯಾಂಕ್ ಡೆಪಾಸಿಟ್ ಗಳು ಕೂಡ ಆದಾಯಕ್ಕೆ ಉತ್ತಮ ಮಾರ್ಗ. ಆದರೆ ಪಿಎಂಸಿ ಬ್ಯಾಂಕ್ ಹಾಗೂ ಯೆಸ್ ಬ್ಯಾಂಕ್ ಸಮಸ್ಯೆಗಳು ಕಾಣಿಸಿಕೊಂಡ ಮೇಲೆ ಹೂಡಿಕೆದಾರರಲ್ಲಿ ಆತಂಕ ಹೆಚ್ಚಾಗಿದೆ.


Click it and Unblock the Notifications