ಯುಸ್ ಡಾಲರ್ ಎದುರಿನಲ್ಲಿ ಭಾರತೀಯ ರೂಪಾಯಿ ಮೌಲ್ಯ ನಿರಂತರವಾಗಿ ಕುಸಿತ ಕಾಣುತ್ತಿದೆ. ಈ ನಡುವೆ ಸರ್ಕಾರವು ಕಳೆದ ತಿಂಗಳ ಕೊನೆಯಲ್ಲಿ ಚಿನ್ನದ ಆಮದಿನ ಮೇಲಿನ ಸುಂಕವನ್ನು ಶೇಕಡ 7.5ರಿಂದ ಶೇಕಡ 12.5ಕ್ಕೆ ಏರಿಕೆ ಮಾಡಿದೆ. ಈ ಬೆನ್ನಲ್ಲೇ ಚಿನ್ನದ ಬೇಡಿಕೆಯು ಇಳಿಕೆಯಾಗುವ ನಿರೀಕ್ಷೆ ಇದೆ.
ಈ ಹಣಕಾಸು ವರ್ಷದಲ್ಲಿ ಚಿನ್ನದ ಬೇಡಿಕೆಯು ಶೇಕಡ 5ರಷ್ಟು ಅಥವಾ 550 ಟನ್‌ಗೆ ಇಳಿಕೆಯಾಗುವ ನಿರೀಕ್ಷೆ ಇದೆ. ಚಿನ್ನದ ಆಮದಿನ ಮೇಲಿನ ಸುಂಕವನ್ನು ಶೇಕಡ 7.5ರಿಂದ ಶೇಕಡ 12.5ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದಾಗಿ ಚಿನ್ನದ ಆಭರಣ ಮಾರಾಟಗಾರರಿಗೆ ಕಳೆದ ವರ್ಷದ ಬೇಡಿಕೆಗೆ ಹೋಲಿಸಿದರೆ ಈ ಹಣಕಾಸು ವರ್ಷದಲ್ಲಿ ಬೇಡಿಕೆ ಕುಸಿತವಾಗುವ ಸಾಧ್ಯತೆ ಇದೆ ಎಂದು ರೇಟಿಂಗ್ ಏಜೆನ್ಸಿ ಕ್ರಿಸಿಲ್ ಹೇಳಿದೆ.
ಇನ್ನು ಚಿನ್ನದ ಆಮದಿನ ಮೇಲಿನ ಸುಂಕವನ್ನು ಏರಿಕೆ ಮಾಡಿದಾಗ ವ್ಯಾಪಾರಿಗಳು ಸಾಮಾನ್ಯವಾಗಿ ಇದರ ಹೊರೆಯನ್ನು ಗ್ರಾಹಕರಿಗೆ ವರ್ಗಾವಣೆ ಮಾಡುತ್ತಾರೆ. ಇದರಿಂದಾಗಿ ಚಿನ್ನದ ಬೆಲೆ ಏರಿಕೆಯಾದಾಗ ಗ್ರಾಹಕರು ಚಿನ್ನ ಖರೀದಿಯಿಂದ ಕೊಂಚ ದೂರ ಉಳಿಯುತ್ತಾರೆ ಎಂದು ಕ್ರಿಸಿಲ್ ವರದಿ ಹೇಳಿದೆ.

ಹಿಂದಿನ ವರ್ಷದಲ್ಲಿ 580 ಟನ್ ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿದೆ. ಆದರೆ ಈ ಹಣಕಾಸು ವರ್ಷದಲ್ಲಿ ಆಮದಿನ ಮೇಲೆ ಸುಂಕ ಏರಿಕೆ ಕಾರಣದಿಂದಾಗಿ ಚಿನ್ನದ ಬೇಡಿಕೆಯು 550 ಟನ್‌ಗೆ ಇಳಿಕೆ ಸಾಧ್ಯತೆ ಇದೆ.
ಕೊರೊನಾ ವೈರಸ್ ಸಾಂಕ್ರಾಮಿಕದ ಕಾರಣದಿಂದಾಗಿ ಆದಾ ಅಡೆತಡೆಗಳ ಬಳಿಕ ಕಳೆದ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 5 ರಷ್ಟು ಆಮದು ಸುಂಕ ಕಡಿತ ಮಾಡಲಾಗಿದೆ. ಇದರಿಂದಾಗಿ ವಹಿವಾಟು ಸರಾಗವಾಯಿತು.
ಚಿನ್ನದ ಮಾರಾಟಕ್ಕಾಗಿ ಪ್ರಚಾರವೇ ದಾರಿ
ಚಿನ್ನದ ಬೆಲೆ ಅಧಿಕವಾದಂತೆ ನಷ್ಟವನ್ನು ಸರಿದೂಗಿಸಲಾಗುತ್ತದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಈ ವರ್ಷ ಉದ್ಯಮದ ಆದಾಯವು ಏರಿಳಿತವಾಗಿಲ್ಲ. "ಆಮದು ಸುಂಕ ಹೆಚ್ಚಳದಿಂದಾಗಿ ಚಿನ್ನದ ಬೆಲೆಗಳು ಹೆಚ್ಚಾಗುವುದರಿಂದ, ಚಿನ್ನಾಭರಣ ರಿಟೇಲ್ ವ್ಯಾಪಾರಿಗಳು ಹೊಸ ಮಾರಾಟ ವಿಧಾನವನ್ನು ಪಾಲನೆ ಮಾಡಬೇಕಾಗುತ್ತದೆ. ಮಾರಾಟ ಅಧಿಕವಾಗಲು ಪ್ರಚಾರ ಮಾಡಬೇಕಾಗುತ್ತದೆ," ಎಂದು ತಜ್ಞರು ಹೇಳುತ್ತಾರೆ.
ವಿಶ್ವದ ಎರಡನೇ ಅತೀ ದೊಡ್ಡ ಚಿನ್ನ ಬಳಕೆ ಮಾಡುವ ದೇಶದಲ್ಲಿ ಚಿನ್ನದ ಒಳಹರಿವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಈ ಹಿಂದೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ಬಜೆಟ್‌ನಲ್ಲಿ ಚಿನ್ನದ ಮೇಲಿನ ಕಸ್ಟಮ್ ಸುಂಕವನ್ನು ಶೇಕಡ 12.5ರಿಂದ ಶೇಕಡ 7.5ಕ್ಕೆ ಇಳಿಕೆ ಮಾಡಲಾಗುವುದು ಎಂದು ಹೇಳಿದ್ದರು. ಆದರೆ ಈಗ ಚಿನ್ನದ ಆಮದಿನ ಮೇಲಿನ ಸುಂಕವನ್ನು ಶೇಕಡ 7.5ರಿಂದ ಶೇಕಡ 12.5ಕ್ಕೆ ಏರಿಕೆ ಮಾಡಲಾಗಿದೆ.
ಇನ್ನು ಚಿನ್ನದ ಮೇಲೆ ಶೇಕಡ 10.75ರಷ್ಟು ಜಿಎಸ್‌ಟಿ, ತೆರಿಗೆ ಸೇರಿ ಹೆಚ್ಚುವರಿ ತೆರಿಗೆ ವಿಧಿಸಲಾಗುತ್ತದೆ. ಈಗ ಆಮದು ಸುಂಕದಲ್ಲಿ ಶೇಕಡ ಐದರಷ್ಟು ಏರಿಕೆ ಮಾಡಿರುವ ಕಾರಣದಿಂದಾಗಿ ಚಿನ್ನದ ಮೇಲಿನ ಒಟ್ಟು ತೆರಿಗೆಯು ಶೇಕಡ 15.75 ಆಗಲಿದೆ.


Click it and Unblock the Notifications