ಫಿಕ್ಸೆಡ್ ಡೆಪಾಸಿಟ್ (ಎಫ್.ಡಿ.) ಮೇಲೆ ಹೂಡಿಕೆ ಮಾಡಬೇಕು ಎಂದಿದ್ದೀರಾ? ನಿಮಗೆ ಸಹಾಯ ಆಗುವಂಥ ಮಾಹಿತಿ ಇಲ್ಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ನಿರಂತರವಾಗಿ ರೆಪೋ ದರ ಇಳಿಸುತ್ತಾ ಬಂದ ಮೇಲೆ ಬ್ಯಾಂಕ್ ಗಳಲ್ಲಿ ಸಾಲದ ಮೇಲಿನ ಬಡ್ಡಿ ದರ ಕೂಡ ಕಡಿಮೆ ಆಯಿತು. ಅದೇ ಸಮಯಕ್ಕೆ ಫಿಕ್ಸೆಡ್ ಡೆಪಾಸಿಟ್ ಗಳ ಮೇಲೆ ಸಿಗುತ್ತಿದ್ದ ಬಡ್ಡಿಯೂ ಕಡಿಮೆ ಆಗಿದೆ.
ಭಾರತದಲ್ಲಿ ಎಫ್.ಡಿ. ಬಹಳ ಜನಪ್ರಿಯ ಹೂಡಿಕೆ. ಅಪಾಯ ಇಲ್ಲದ ಅಥವಾ ಅತ್ಯಂತ ಕಡಿಮೆ ಇರುವ ಕಡೆ ಹೂಡಿಕೆ ಮಾಡಬೇಕು ಎಂದುಕೊಳ್ಳುವ ಹಿರಿಯ ನಾಗರಿಕರಿಗೆ ಎಫ್.ಡಿ.ಯಲ್ಲಿ ಹಣ ತೊಡಗಿಸುವುದು ಅತ್ಯುತ್ತಮ ಎಂದೆನಿಸುತ್ತದೆ. ಅಂಥದ್ದರಲ್ಲಿ ಎಫ್.ಡಿ. ಮೇಲೆ ಬಡ್ಡಿಯೇ ಕಡಿಮೆ ಆದ ಮೇಲೆ ಚಿಂತೆಗೆ ಗುರಿಯಾಗುವವರಿಗೆ ಉತ್ತಮ ಬಡ್ಡಿ ದರ ನೀಡುವ ಟಾಪ್ 10 ಬ್ಯಾಂಕ್ ಗಳ ಮಾಹಿತಿ ಇಲ್ಲಿದೆ.
ಇಲ್ಲಿರುವ ಬಡ್ಡಿ ದರವು ಸಾಮಾನ್ಯರ ಠೇವಣಿ (ಹಿರಿಯ ನಾಗರಿಕರದ್ದಲ್ಲ) 1 ಕೋಟಿ ರುಪಾಯಿಗಿಂತ ಕಡಿಮೆಗೆ ಅನ್ವಯ ಆಗುತ್ತದೆ. ಡಿಸೆಂಬರ್ 11, 2020ಕ್ಕೆ ಅನ್ವಯ ಆಗುವಂತೆ ಆಯಾ ಬ್ಯಾಂಕ್ ವೆಬ್ ಸೈಟ್ ನಲ್ಲಿನ ಮಾಹಿತಿ ಒಟ್ಟು ಹಾಕಿ, ಇಲ್ಲಿ ನೀಡಲಾಗುತ್ತಿದೆ.

* ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ 7.50%
* ಸೂರ್ಯೋದಯ್ ಸ್ಮಾಲ್ ಫಿನ್ ಬ್ಯಾಂಕ್ 7.50%
* ಇಂಡಸ್ ಇಂಡ್ ಬ್ಯಾಂಕ್ 7%
* ಈಕ್ವಿಟಾಸ್ ಸ್ಮಾಲ್ ಫಿನ್ ಬ್ಯಾಂಕ್ 7%
* ಡಿಸಿಬಿ ಬ್ಯಾಂಕ್ 6.95%
* ಆರ್ ಬಿಎಲ್ ಬ್ಯಾಂಕ್ 6.95%
* ಯೆಸ್ ಬ್ಯಾಂಕ್ 6.75%
* ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ 6.75%
* ಉಜ್ಜೀವನ್ ಸ್ಮಾಲ್ ಫಿನ್ ಬ್ಯಾಂಕ್ 6.50%
* ಫೈನಾನ್ಸ್ ಸ್ಮಾಲ್ ಫಿನ್ ಬ್ಯಾಂಕ್ 6.50%


Click it and Unblock the Notifications