ನವೆಂಬರ್‌ನಲ್ಲಿ ಈರುಳ್ಳಿ ಮತ್ತು ಟೊಮೆಟೊ ಬೆಲೆಯು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಕ್ರಿಸಿಲ್‌ನ ಇತ್ತೀಚಿನ ಮಾಸಿಕ ಆಹಾರದ ಪ್ಲೇಟ್ ಬೆಲೆಯ ಪ್ರಕಾರ, ಮನೆಯಲ್ಲಿ ತಯಾರಿಸಿದ ಸಸ್ಯಾಹಾರಿ ಮತ್ತು ಮಾಂಸಾಹಾರಿ ಥಾಲಿಗಳು (ಆಹಾರ ಪ್ಲೇಟ್) ದುಬಾರಿಯಾಗಿದೆ. ಇದಕ್ಕೆ ಮುಖ್ಯ ಕಾರಣ ಬೆಲೆ ಏರಿಕೆಯಾಗಿದೆ.
ಕ್ರಿಸಿಲ್ ಎಂಐ&ಎ ಸಂಶೋಧನೆಯ ಅಂದಾಜಿನ ಪ್ರಕಾರ, ನವೆಂಬರ್‌ನಲ್ಲಿ, ಪ್ರಾತಿನಿಧಿಕ ಮನೆಯಲ್ಲಿ ಬೇಯಿಸಿದ ಸಸ್ಯಾಹಾರಿ ಮತ್ತು ಮಾಂಸಾಹಾರಿ ಥಾಲಿಗಳ ವೆಚ್ಚವು ಕ್ರಮವಾಗಿ ತಿಂಗಳಿಗೆ ಶೇಕಡ 10 ರಷ್ಟು ಮತ್ತು ಶೇಕಡ 5 ರಷ್ಟು ಹೆಚ್ಚಳವಾಗಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ.....

ಪ್ರಮುಖ ಕಾರಣಗಳನ್ನು ತಿಳಿಯಿರಿ
ಅನಿಯಮಿತ ಮಳೆಯ ಕಾರಣದಿಂದಾಗಿ ಖಾರಿಫ್ ಸೀಸನ್‌ನಲ್ಲಿ ಕಡಿಮೆ ಉತ್ಪಾದನೆಯಿಂದಾಗಿ ಈರುಳ್ಳಿ ಮತ್ತು ಟೊಮೆಟೊ ಬೆಲೆಗಳಲ್ಲಿ ಕ್ರಮವಾಗಿ ಶೇಕಡ 58 ಮತ್ತು ಶೇಕಡ 35 ರಷ್ಟು ಏರಿಕೆಯಾಗಿದೆ. ಈ ತಿಂಗಳಿನಿಂದ ಮಾಂಸಹಾರಿ ಊಟದ ಪ್ಲೇಟ್‌ನ ಬೆಲೆಯು ಅತೀ ವೇಗವಾಗಿ ಏರಿಕೆಯಾಗಿಲ್ಲ. ಅದಕ್ಕೆ ಮುಖ್ಯ ಕಾರಣ ಬ್ರಾಯಿಲರ್ ಕೋಳಿ ಬೆಲೆ ಶೇಕಡ 1ರಿಂದ ಶೇಕಡ 3 ರಷ್ಟು ಇಳಿಕೆಯಾಗಿರುವುದು ಆಗಿದೆ.
ಸಸ್ಯಾಹಾರಿ ಥಾಲಿಯ ಬೆಲೆಯು ವರ್ಷಕ್ಕೆ ಶೇಕಡ 9 ರಷ್ಟು ಏರಿಕೆಯಾಗಿದೆ. ಈರುಳ್ಳಿ ಮತ್ತು ಟೊಮೆಟೊ ಬೆಲೆಗಳು ಕ್ರಮವಾಗಿ ಶೇಕಡ 93 ಮತ್ತು ಶೇಕಡ 15 ರಷ್ಟು ಹೆಚ್ಚಳವಾಗಿದೆ. ಬೇಳೆಕಾಳುಗಳ ಬೆಲೆಗಯು ಶೇಕಡ 9 ರಷ್ಟು ಏರಿಕೆಯಾದ ಕಾರಣದಿಂದಾಗಿ ಸಸ್ಯಾಹಾರಿ ಥಾಲಿ ವೆಚ್ಚವು ಶೇಕಡ 21 ರಷ್ಟು ಹೆಚ್ಚಾಗಿದೆ.
ಮನೆಯಲ್ಲಿ ಥಾಲಿಯನ್ನು ತಯಾರಿಸುವ ಸರಾಸರಿ ವೆಚ್ಚವನ್ನು ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾರತದಲ್ಲಿ ಆಹಾರ ತಯಾರಿಕ ವೆಚ್ಚದ ಆಧಾರದ ಮೇಲೆ ಲೆಕ್ಕ ಹಾಕಲಾಗಿದೆ. ಮಾಸಿಕ ಬದಲಾವಣೆಯು ಸಾಮಾನ್ಯ ಜನರ ವೆಚ್ಚದ ಮೇಲೆ ಪ್ರಭಾವ ಬೀರುತ್ತದೆ.
ಅಕ್ಟೋಬರ್ ಡೇಟಾ ಏನು ಹೇಳುತ್ತದೆ?
ಅಕ್ಟೋಬರ್‌ನಲ್ಲಿ, ಮನೆಯಲ್ಲಿ ತಯಾರಿಸಿದ ಸಸ್ಯಾಹಾರಿ ಮತ್ತು ಮಾಂಸಾಹಾರಿ ಥಾಲಿಗಳು ಆಲೂಗೆಡ್ಡೆ, ಟೊಮೆಟೊ ಮತ್ತು ಬ್ರೈಲರ್‌ಗಳ ಬೆಲೆಯಲ್ಲಿ ಇಳಿಕೆಯಾಗಿದೆ. ಆಲೂಗೆಡ್ಡೆ ಮತ್ತು ಟೊಮೇಟೊ ಬೆಲೆಯಲ್ಲಿ ಕ್ರಮವಾಗಿ ಶೇಕಡ 21 ಮತ್ತು ಶೇಕಡ 37 ರಷ್ಟು ಕುಸಿತವಾಗಿದೆ. ಸೆಪ್ಟೆಂಬರ್‌ನಲ್ಲಿ, ಸಸ್ಯಾಹಾರಿ ಥಾಲಿಯ ಬೆಲೆ ಸೆಪ್ಟೆಂಬರ್‌ನಲ್ಲಿ ತಿಂಗಳಿಗೆ ಶೇಕಡ 17 ರಷ್ಟು ಕುಸಿದಿದೆ. ಟೊಮೆಟೊ ಬೆಲೆ ಏರಿಕೆಯೇ ಅತೀ ಅಧಿಕ ಕಾರಣವಾಗಿದೆ.


Click it and Unblock the Notifications