Home Loan: 30 ಲಕ್ಷ ಸಾಲ ಬೇಕೇ? ನಿಮ್ಮ ಸಂಬಳ ಇಷ್ಟು ಇರಲೇಬೇಕು.. EMI ಇಷ್ಟೆನಾ?

ಸ್ವಂತ ಮನೆ ಕಟ್ಟುವ ಕನಸಿದ್ಯಾ? ಹಾಗಿದ್ರೆ ಮಿಸ್ ಮಾಡದೇ ಈ ಸ್ಟೋರಿ ಓದಿ. 'ಮನೆ ಕಟ್ಟಿ ನೋಡು.. ಮದುವೆ ಮಾಡಿ ನೋಡು' ಅನ್ನೋ ಮಾತಿದೆ. ಅದರಲ್ಲೂ ಮನೆ ಕಟ್ಟುವಷ್ಟರಲ್ಲಿ ಜೀವನದ ಅರ್ಧ ಆಯಸ್ಸೇ ಕಳೆದು ಹೋಗಿರುತ್ತೆ. ಇದರ ಜೊತೆಗೆ ಆರ್ಥಿಕ ಸಮಸ್ಯೆ ಬಿಟ್ಟು ಬಿಡದೇ ಕಾಡುತ್ತದೆ.ಕೆಲವರು ಬ್ಯಾಂಕ್‌ನಲ್ಲಿ ಸಾಲ ಮಾಡಿ ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ನಿಮಗೂ ಸಹ ಸ್ವಂತ ಮನೆ ಕಟ್ಟುವ ಬಗ್ಗೆ ಆಲೋಚನೆ ಇದ್ಯಾ? ಇದಕ್ಕಾಗಿ ಗೃಹಸಾಲಕ್ಕೆ ಅರ್ಜಿ ಸಲ್ಲಿಸಲ್ಲಿಸಲು ಯಾವ ಬ್ಯಾಂಕ್‌ ಉತ್ತಮ..? ಎಷ್ಟು ಬಡ್ಡಿ ಇದೆ..? ತಿಂಗಳ EMI ಎಷ್ಟಿದೆ? ಎಂಬ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ...

ಹೌದು,ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಡಿಮೆ ಬಡ್ಡಿದರದಲ್ಲಿ ವಿವಿಧ ಗೃಹ ಸಾಲವನ್ನು ಕೊಡುತ್ತದೆ. ನಿಮಗೆ SBI ಗೃಹ ಸಾಲದ ಬಡ್ಡಿ ದರಗಳು ಶೇ. 8.50ರಿಂದ ಆರಂಭವಾಗುತ್ತದೆ. ಹಾಗಿದ್ರೆ ನೀವು SBIನಿಂದ 30 ಲಕ್ಷ ಗೃಹ ಸಾಲ ತಗೆದುಕೊಂಡರೆ ನಿಮ್ಮ ಸಂಬಳ ಎಷ್ಟಿರಬೇಕು? ಮತ್ತು ತಿಂಗಳ EMI ಎಷ್ಟು ಬರುತ್ತದೆ ಅನ್ನೋದರ ಹೆಚ್ಚಿನ ವಿವರ ಈ ಕೆಳಗಿನಂತೆ ಇದೆ..

Home Loan: 30 ಲಕ್ಷ ಸಾಲ ಬೇಕೇ? ನಿಮ್ಮ ಸಂಬಳ ಇಷ್ಟು ಇರಲೇಬೇಕು?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಅರ್ಜಿದಾರರ

ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಎಸ್‌ಬಿಐ ಶೇಕಡ 8.6 ರಿಂದ ಶೇಕಡ 9.65 ರವರೆಗೆ ಬಡ್ಡಿದರವನ್ನು ನೀಡುತ್ತದೆ. 750 ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರುವ ಸಾಲಗಾರರಿಗೆ ಕಡಿಮೆ ಬಡ್ಡಿ ದರವು ಶೇಕಡ 8.6 ಆಗಿದೆ. 700 ಮತ್ತು 749 ರ ನಡುವಿನ ಕ್ರೆಡಿಟ್ ಸ್ಕೋರ್ ಹೊಂದಿರುವ ಸಾಲಗಾರರಿಗೆ ಶೇಕಡ 8.7 ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ. 650 ರಿಂದ 699 ಸ್ಕೋರ್ ಹೊಂದಿರುವ ಸಾಲಗಾರರಿಗೆ ಶೇಕಡ 9.45 ಬಡ್ಡಿದರ ಸಾಲ ನೀಡಲಾಗುತ್ತದೆ. 550 ರಿಂದ 649 ರ ವ್ಯಾಪ್ತಿಯಲ್ಲಿ ಸ್ಕೋರ್ ಹೊಂದಿರುವವರು ಶೇಕಡ 9.65 ಬಡ್ಡಿದರದಲ್ಲಿ ಸಾಲ ಪಡೆಯಬಹುದು.
ಗೃಹ ಸಾಲಗಳ ಮೇಲೆ ಕನಿಷ್ಠ ಶೇ.8.25 ಬಡ್ಡಿದರವನ್ನು ನೀಡುತ್ತಿದೆ. ಗರಿಷ್ಠ ಬಡ್ಡಿದರ ಶೇ.9.20 ಆಗಿರುತ್ತದೆ.

30 ಲಕ್ಷ ರೂ.ಗಳ ಗೃಹ ಸಾಲ ತಗೆದುಕೊಂಡರೆ ತಿಂಗಳಿಗೆ ಎಷ್ಟು ಇಎಂಐ..?

ನೀವು ಏನಾದರೂ SBI ನಿಂದ 30 ವರ್ಷಗಳ ಅವಧಿಗೆ ಶೇ. 8.50 ದರದಲ್ಲಿ 30 ಲಕ್ಷ ರೂ.ಗಳ ಗೃಹ ಸಾಲವನ್ನು ಪಡೆದರೆ ಮಾಸಿಕ EMI ನಿಮ್ಮಗೆ 23,067 ರೂ.ಗಳು ಬೀಳುತ್ತದೆ. ನೀವು ಯಾವುದೇ ಸಾಲವನ್ನು ಹೊಂದಿಲ್ಲದಿದ್ದರೆ, ಈ ಸಾಲವನ್ನು ಪಡೆಯಲು ನಿಮ್ಮ ಕನಿಷ್ಠ ವೇತನ ತಿಂಗಳಿಗೆ 46,134 ರೂ.ಗಳು ನಿಮಗೆ ತಿಂಗಳಿಗೆ EMI ಪಾವತಿ ಮಾಡಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಿರುವ ದಾಖಲೆಗಳು

ಉದ್ಯೋಗದಾತ ಸಂಸ್ಥೆಯ ಗುರುತಿನ ಚೀಟಿ, ಪೂರ್ಣಗೊಂಡ ಸಾಲ ಅರ್ಜಿ ನಮೂನೆ ಮತ್ತು ಮೂರು ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ, ಕೆಲವು ಮೂಲ ದಾಖಲೆಗಳು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಲು ಅಗತ್ಯವಿದೆ. ಗುರುತಿನ ಪುರಾವೆಗಾಗಿ
ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಮತದಾರರ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ನೀಡಬಹುದು.

ವಿವಿಧ ಬ್ಯಾಂಕುಗಳಲ್ಲಿನ ಬಡ್ಡಿದರ

UCO ಬ್ಯಾಂಕ್‌ನ ಬಡ್ಡಿ ದರವು ಶೇ.8.30ರಿಂದ ಶುರುವಗುತ್ತದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಬಡ್ಡಿದರವು ಶೇ 8.30 ರಿಂದ 10.90 ರವರೆಗೆ ಇರುತ್ತದೆ.
ಬ್ಯಾಂಕ್ ಆಫ್ ಇಂಡಿಯಾದ ಬಡ್ಡಿ ದರವು ಶೇ.8.35 ರಿಂದ 11.10 ರ ನಡುವೆಯಲ್ಲಿ ಇದೆ. ಬ್ಯಾಂಕ್ ಆಫ್ ಬರೋಡಾದ ಬಡ್ಡಿದರವು ಶೇ.8.40 ರಿಂದ 10.65 ರ ನಡುವೆ ಇದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಬಡ್ಡಿ ದರ ಶೇ.8.40ರಿಂದ ಶೇ.10.25ರ ನಡುವೆ ಇದೆ
ಕೆನರಾ ಬ್ಯಾಂಕ್‌ನ ಬಡ್ಡಿ ದರ ಶೇ.8.40ರಿಂದ ಶೇ.11.25ರ ನಡುವೆ ಇದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಡ್ಡಿ ದರವು ಶೇ 8.50 ರಿಂದ 9.85 ರ ನಡುವೆ ಇದೆ.

FAQs
SBI ಗೃಹ ಸಾಲದ ಬಡ್ಡಿ ದರ ಎಷ್ಟು?

SBI ಗೃಹ ಸಾಲದ ಬಡ್ಡಿ ದರಗಳು ಶೇ. 8.50ರಿಂದ ಆರಂಭವಾಗುತ್ತದೆ

ಸಾಲಕ್ಕೆ ಅರ್ಜಿ ಸಲ್ಲಿಸಲು ಬೇಕಿರುವ ದಾಖಲೆಗಳು?

ಗುರುತಿನ ಚೀಟಿ, ಪೂರ್ಣಗೊಂಡ ಸಾಲ ಅರ್ಜಿ ನಮೂನೆ ಮತ್ತು ಮೂರು ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ, ಕೆಲವು ಮೂಲ ದಾಖಲೆಗಳು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಲು ಅಗತ್ಯವಿದೆ.

30 ಲಕ್ಷ ಸಾಲ ಬೇಕೇ? ನಿಮ್ಮ ಸಂಬಳ ಇಷ್ಟು ಇರಲೇಬೇಕು?

SBI ನಿಂದ 30 ವರ್ಷಗಳ ಅವಧಿಗೆ ಶೇ. 8.50 ದರದಲ್ಲಿ 30 ಲಕ್ಷ ರೂ.ಗಳ ಗೃಹ ಸಾಲವನ್ನು ಪಡೆದರೆ ಮಾಸಿಕ EMI ನಿಮ್ಮಗೆ 23,067 ರೂ.ಗಳು ಬೀಳುತ್ತದೆ.

GoodReturns Finance

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+