ಹೋಮ್ ಲೋನ್ ಫಿಕ್ಸೆಡ್ ರೇಟ್ 7.4%ನಿಂದ ಶುರು; ಯಾವ ಸಂಸ್ಥೆಯಿಂದ ಎಷ್ಟಿದೆ ರೇಟ್?

ಗೃಹ ಸಾಲ ಪಡೆಯಬೇಕು ಎಂದುಕೊಳ್ಳುವವರು ಬಡ್ಡಿ ದರ ಫ್ಲೋಟಿಂಗ್ ಇರಲಿ ಎಂದುಕೊಳ್ಳುತ್ತಾರೆ. ಆದರೆ ಅದರ ಮಧ್ಯೆಯೂ ಕೆಲವರು ಫಿಕ್ಸೆಡ್ ಬಡ್ಡಿ ದರವನ್ನು ಆರಿಸಿಕೊಳ್ಳುತ್ತಾರೆ. ಯಾರು ತಮ್ಮ ಸಾಲದ ಬಾಧ್ಯತೆಯು ನಿಶ್ಚಿತವಾಗಿ ಇರಬೇಕು ಎಂದು ಬಯಸುತ್ತಾರೋ ಅಂಥವರು ಫಿಕ್ಸೆಡ್ ಬಡ್ಡಿ ದರವನ್ನು ಆರಿಸಿಕೊಳ್ಳುತ್ತಾರೆ.

ಆದರೆ, ನೆನಪಿರಲಿ. ಫ್ಲೋಟಿಂಗ್ ಗಿಂತ ಫಿಕ್ಸೆಡ್ ಬಡ್ಡಿ ದರ ಸ್ವಲ್ಪ ಮಟ್ಟಿಗೆ ಹೆಚ್ಚಿರುತ್ತದೆ. ಇನ್ನು ಸಾಲ ಮರುಪಾವತಿಯ ಉದ್ದಕ್ಕೂ ಇಎಂಐ ಒಂದೇ ಮೊತ್ತ ಇರುತ್ತದೆ, ಯಾವ ಬದಲಾವಣೆ ಆಗಲ್ಲ. ಇನ್ನು ಫ್ಲೋಟಿಂಗ್ ದರವು ಹೇಗೆ ಬಡ್ಡಿ ದರದ ಬದಲಾವಣೆಗೆ ತಕ್ಕಂತೆ ಅದೇ ದರವು ಆಯಾ ಸಮಯಕ್ಕೆ ಅನ್ವಯ ಆಗುತ್ತದೆ. ಹತ್ತು ವರ್ಷದೊಳಗೆ ಗೃಹ ಸಾಲ ಮರುಪಾವತಿ ಮಾಡ ಬಯಸುವವರು ಫಿಕ್ಸೆಡ್ ದರವನ್ನು ಆರಿಸಿಕೊಳ್ಳಬಹುದು.

ರೆಪೋ ಆಧಾರಿತ ಬಡ್ಡಿ 7%ಗಿಂತ ಸ್ವಲ್ಪ ಕಡಿಮೆ

ರೆಪೋ ಆಧಾರಿತ ಬಡ್ಡಿ 7%ಗಿಂತ ಸ್ವಲ್ಪ ಕಡಿಮೆ

ಕಳೆದ ವರ್ಷ ಅಕ್ಟೋಬರ್ ನಲ್ಲಿ ರಿಸರ್ವ್ ಬ್ಯಾಂಕ್ ಅಫ್ ಇಂಡಿಯಾದಿಂದ ರೆಪೋ ಆಧಾರಿತ ಫ್ಲೋಟಿಂಗ್ ಬಡ್ಡಿ ದರವನ್ನು ಗೃಹ ಸಾಲಕ್ಕೆ ಪರಿಚಯಿಸಲಾಯಿತು. ಹಲವು ಬ್ಯಾಂಕ್ ಗಳು ಈಗ ಅದೇ ರೀತಿಯ ಸಾಲ ನೀಡುತ್ತಿವೆ. ಬಡ್ಡಿ ದರ ವಾರ್ಷಿಕವಾಗಿ 7%ಗಿಂತ ಸ್ವಲ್ಪ ಕಡಿಮೆ ಇದೆ. ಆದರೆ ಯಾವಾಗೆಲ್ಲ ರಿಸರ್ವ್ ಬ್ಯಾಂಕ್ ನಿಂದ ಬಡ್ಡಿ ದರ ಹೆಚ್ಚಿಸಲಾಗುತ್ತದೋ ಆಗೆಲ್ಲ ಸಾಲ ಪಡೆದವರ ಮೇಲೆ ಬಡ್ಡಿಯ ದರ ಹೆಚ್ಚಾಗುತ್ತದೆ. ಆದರೆ ಫಿಕ್ಸೆಡ್ ದರ ಎಂದು ಪಡೆದಿರುತ್ತಾರಲ್ಲಾ ಅವರಿಗೆ ಈ ಬದಲಾವಣೆ ಅನ್ವಯ ಆಗಲ್ಲ. ಏಕೆಂದರೆ ಸಾಲ ಪಡೆಯುವಾಗಲೇ ಆಗಿನ ಸಮಯಕ್ಕೆ ಸ್ವಲ್ಪ ಹೆಚ್ಚಿಗೆ ಬಡ್ಡಿ ದರಕ್ಕೆ ಒಪ್ಪಿಕೊಂಡಿರುತ್ತಾರೆ. ಅದೇ ನಿಶ್ಚಿತ ಮೊತ್ತವನ್ನು ಮರುಪಾವತಿ ಅವಧಿ ಉದ್ದಕ್ಕೂ ಹಿಂತಿರುಗಿಸುತ್ತಾರೆ. ಫಿಕ್ಸೆಡ್ ಬಡ್ಡಿ ದರವು ಸಾಲದ ಹೊರೆ ಬಗ್ಗೆ ಸ್ಪಷ್ಟತೆ ಸಿಗುತ್ತದೆ. ಬಜೆಟ್ ನಲ್ಲಿ ಉಳಿತಾಯ ಹಾಗೂ ಹೂಡಿಕೆ ಎಂದು ಹಂಚಬಹುದು. ಇದರ ಜತೆಗೆ ಮಕ್ಕಳ ಉನ್ನತ ಶಿಕ್ಷಣಕ್ಕೆ ಹಾಗೂ ನಿವೃತ್ತಿ ನಿಧಿ ರೂಪಿಸಲು ನೆರವಾಗುತ್ತದೆ.

ಮಹಿಳೆಯರಿಗೆ ಉತ್ತಮ ಬಡ್ಡಿ ದರ

ಮಹಿಳೆಯರಿಗೆ ಉತ್ತಮ ಬಡ್ಡಿ ದರ

ಸಾಲ ಪಡೆಯುವವರು ತಮ್ಮ ಕುಟುಂಬದ ತಿಂಗಳ ಆದಾಯದ ಶೇಕಡಾ 40ಕ್ಕಿಂತ ಹೆಚ್ಚಿನ ಮೊತ್ತದ ಸಾಲದ ಹೊಣೆಯನ್ನು ಹೊಂದಿರಬಾರದು. ಫಿಕ್ಸೆಡ್ ಬಡ್ದಿ ದರದಲ್ಲಿ ಅವಧಿಗೆ ಪೂರ್ವವಾಗಿ ಮರುಪಾವತಿ ಮಾಡಿದಲ್ಲಿ ಅಥವಾ ಭಾಗಶಃ ಮರುಪಾವತಿ ಮಾಡಿದಲ್ಲಿ ದಂಡ ಶುಲ್ಕ ಇಂತಿಷ್ಟು ಎಂದು ಬರುತ್ತದೆ. ಆದರೆ ಫ್ಲೋಟಿಂಗ್ ಬಡ್ಡಿ ದರದಲ್ಲಿ ಹೀಗಾಗುವುದಿಲ್ಲ. ಜತೆಗೆ ಫಿಕ್ಸೆಡ್ ಬಡ್ದಿ ದರವನ್ನು ಹಲವು ಅಂಶಗಳನ್ನು ಗಣನೆಗೆ ತೆಗೆದುಕೊಂಡು ನಿರ್ಧರಿಸಲಾಗುತ್ತದೆ. ಮಹಿಳೆಯರಿಗೆ ಉತ್ತಮ ಬಡ್ಡಿ ದರ ದೊರೆಯುತ್ತದೆ. ಜತೆಗೆ ವಯಸ್ಸು, ಆದಾಯ, ಕ್ರೆಡಿಟ್ ಸ್ಕೋರ್ (750ರಿಂದ 800 ಇದ್ದಲ್ಲಿ ಉತ್ತಮ ಬಡ್ಡಿ ದರ ಸಿಗುತ್ತದೆ), ಸಾಲದ ಮೊತ್ತ, ಸಾಲದ ಮರುಪಾವತಿ ಅವಧಿ ಇಷ್ಟೆಲ್ಲ ಅಂಶಗಳು ಗಣನೆಗೆ ಬರುತ್ತವೆ.

ಯಾವ ಬ್ಯಾಂಕ್ ಗಳಲ್ಲಿ ಎಷ್ಟು ಬಡ್ಡಿ ದರ?

ಯಾವ ಬ್ಯಾಂಕ್ ಗಳಲ್ಲಿ ಎಷ್ಟು ಬಡ್ಡಿ ದರ?

ಕೆಲವು ಹಣಕಾಸು ಸಂಸ್ಥೆ ಅಥವಾ ಬ್ಯಾಂಕ್ ಗಳು ನಿರ್ದಿಷ್ಟ ಅವಧಿಯ ತನಕ ಅಥವಾ ಅವಧಿಗೆ ಮಾತ್ರ ಫಿಕ್ಸೆಡ್ ಬಡ್ಡಿ ದರ ಒದಗಿಸುತ್ತವೆ. ಆ ನಂತರ ಫ್ಲೋಟಿಂಗ್ ದರವೇ ಪಡೆಯಬೇಕಾಗುತ್ತದೆ. ಇನ್ನು ಹೋಮ್ ಲೋನ್ ಗೆ ಫಿಕ್ಸೆಡ್ ಬಡ್ಡಿ ದರವನ್ನು ಆಯ್ಕೆ ಮಾಡಿಕೊಂಡಿದ್ದಲ್ಲಿ ನಿರ್ದಿಷ್ಟ ಮೊತ್ತದ ಶುಲ್ಕವನ್ನು ಪಾವತಿಸಿ, ಫ್ಲೋಟಿಂಗ್ ಗೆ ಬದಲಾಯಿಸಿಕೊಳ್ಳಲು ಅವಕಾಶ ಇದೆ. ಒಂದು ವೇಳೆ ಫಿಕ್ಸೆಡ್ ಬಡ್ಡಿ ದರದಲ್ಲಿ ಹೋಮ್ ಲೋನ್ ಪಡೆಯಬೇಕು ಎಂದಿದ್ದಲ್ಲಿ ಪ್ರಮುಖ ಬ್ಯಾಂಕ್ ಗಳಲ್ಲಿ ವಾರ್ಷಿಕ ಬಡ್ಡಿ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ:

ಎಚ್ ಡಿಎಫ್ ಸಿ ಬ್ಯಾಂಕ್ 7.40%- 8.20%

ಎಚ್ ಡಿಎಫ್ ಸಿ ಲಿಮಿಟೆಡ್ 7.40%- 8.35%

ಐಡಿಬಿಐ ಬ್ಯಾಂಕ್ 9.85%- 10.10%

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 11.40%- 12.65%

ಆಕ್ಸಿಸ್ ಬ್ಯಾಂಕ್ 12%

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+