ಗೃಹ ಸಾಲ ಬಡ್ಡಿ ದರ ಯಾವ ಬ್ಯಾಂಕ್ ನಲ್ಲಿ ಕಡಿಮೆ ಅಂತ ನೋಡಿದರೆ, ದೊಡ್ಡ ಸ್ಪರ್ಧೆಯೇ ಏರ್ಪಟ್ಟಿರುವುದು ಕಂಡುಬರುತ್ತದೆ. ಇನ್ನು ಮುಂಬರುವ ತಿಂಗಳುಗಳಲ್ಲಿ 7 ಪರ್ಸೆಂಟ್ ನೊಳಗೆ ಬಡ್ಡಿ ದರ ಇರುವಂತೆ ಯಾರು ಸಾಲ ನೀಡುತ್ತಾರೆ ಎಂಬ ಬಗ್ಗೆ ಪೈಪೋಟಿಯೇ ಏರ್ಪಟ್ಟರೂ ಅಚ್ಚರಿ ಇಲ್ಲ.
ಕೆಲವು ಪ್ರಮುಖ ಬ್ಯಾಂಕ್ ಗಳು ಗೃಹ ಸಾಲ ಬಡ್ಡಿ ದರವನ್ನು 7 ಪರ್ಸೆಂಟ್ ಗಿಂತ ಕಡಿಮೆ ಇಳಿಸಿದ್ದು, ಇದೀಗ ಎಲ್ ಐಸಿ ಹೌಸಿಂಗ್ ಫೈನಾನ್ಸ್ ನಿಂದ ಕೂಡ ದರವನ್ನು 7 ಪರ್ಸೆಂಟ್ ಗಿಂತ ಕೆಳಗೆ ಇಳಿಸಲಾಗಿದೆ. ಸದ್ಯಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಎಚ್ ಡಿಎಫ್ ಸಿ ಹೌಸಿಂಗ್ ಲೋನ್ ಬಡ್ಡಿ ದರ ವಾರ್ಷಿಕ 6.95 ಪರ್ಸೆಂಟ್ ಇದೆ.
ಎಲ್ ಐಸಿ ಹೌಸಿಂಗ್ ಫೈನಾನ್ಸ್ ಈಗ 6.90 ಪರ್ಸೆಂಟ್ ಮೇಲ್ಪಟ್ಟು ಗೃಹಸಾಲ ನೀಡುವುದಾಗಿ ಘೋಷಿಸಿದೆ. ಈ ಮಧ್ಯೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೂಡ 7 ಪರ್ಸೆಂಟ್ ಗೂ ಕಡಿಮೆ ಬಡ್ಡಿ ದರದಲ್ಲಿ ಮನೆ ಸಾಲ ಒದಗಿಸುತ್ತಿದೆ. ಎಲ್ ಐಸಿ ಹೌಸಿಂಗ್ ಫೈನಾನ್ಸ್ ನಲ್ಲಿ ಪಡೆಯುವ 50 ಲಕ್ಷ ರುಪಾಯಿಯೊಳಗಿನ ಸಾಲಕ್ಕೆ ವಾರ್ಷಿಕ 6.9% ಬಡ್ಡಿ.
ಎಷ್ಟು ಸಾಲಕ್ಕೆ ಎಷ್ಟು ಬಡ್ಡಿ?
50 ಲಕ್ಷದಿಂದ 1 ಕೋಟಿ ರುಪಾಯಿ ತನಕ ಸಾಲಕ್ಕೆ 7% ಮೇಲ್ಪಟ್ಟು ಮತ್ತು 50 ಲಕ್ಷದಿಂದ 3 ಕೋಟಿ ತನಕ ಸಾಲಕ್ಕೆ 7.1% ಹಾಗೂ 3 ಕೋಟಿಯಿಂದ 15 ಕೋಟಿ ತನಕದ 7.2% ಮೇಲ್ಪಟ್ಟು ಬಡ್ಡಿ ದರ ಇರಲಿದೆ. ಸದ್ಯಕ್ಕೆ ಎಲ್ ಐಸಿ ಹೌಸಿಂಗ್ ಫೈನಾನ್ಸ್ ಪ್ರೈಮ್ ಲೆಂಡಿಂಗ್ ರೇಟ್ (PLR) 14.70 ಪರ್ಸೆಂಟ್ ಇದೆ.
ಪ್ರೈಮ್ ಲೆಂಡಿಂಗ್ ರೇಟ್ ಆಧಾರದಲ್ಲಿ ಗೃಹ ಸಾಲ
ಬ್ಯಾಂಕ್ ಗಳು ಮಾತ್ರ ಸಾಲ ನೀಡುವಾಗ ಎಕ್ಸ್ ಟರ್ನಲ್ ಬೆಂಚ್ ಮಾರ್ಕ್ ರೇಟ್ (EBR) ಹಾಗೂ MCLR ಆಧಾರದಲ್ಲಿ ನೀಡಬೇಕು. ಆದರೆ ಎಲ್ ಐಸಿ ಹೌಸಿಂಗ್ ಫೈನಾನ್ಸ್ ಎಂಬುದು ಹೌಸಿಂಗ್ ಫೈನಾನ್ಸ್ ಕಂಪೆನಿ. ಅದಕ್ಕೆ ತನ್ನದೇ ಆದ ಪ್ರೈಮ್ ಲೆಂಡಿಂಗ್ ರೇಟ್ ಇರುತ್ತದೆ. ಅದರ ಆಧಾರದಲ್ಲಿ ಗೃಹ ಸಾಲವನ್ನು ನೀಡಲಾಗುತ್ತದೆ.
ವೇತನದಾರರಿಗೆ ಗರಿಷ್ಠ 30, ಸ್ವ ಉದ್ಯೋಗಿಗಳಿಗೆ ಗರಿಷ್ಠ 20 ವರ್ಷ
30 ಲಕ್ಷ ರುಪಾಯಿ ಒಳಗಿನ ಸಾಲಕ್ಕೆ ಆಸ್ತಿ ಮೌಲ್ಯದ ಶೇಕಡಾ 90ರಷ್ಟನ್ನು ನೀಡಲಾಗುತ್ತದೆ. 30ರಿಂದ 75 ಲಕ್ಷದ ಸಾಲಕ್ಕೆ ಆಸ್ತಿ ಮೌಲ್ಯದ ಶೇಕಡಾ 80ರಷ್ಟು ಹಾಗೂ 75 ಲಕ್ಷದ ಮೇಲ್ಪಟ್ಟ ಸಾಲಕ್ಕೆ ಆಸ್ತಿ ಮೌಲ್ಯದ 75ರಷ್ಟು ನೀಡಲಾಗುತ್ತದೆ. ವೇತನದಾರರಿಗೆ ಗರಿಷ್ಠ 30 ವರ್ಷ ಹಾಗೂ ಸ್ವ ಉದ್ಯೋಗಿಗಳಿಗೆ ಗರಿಷ್ಠ 20 ವರ್ಷ ಮರುಪಾವತಿ ಅವಧಿ ಸಿಗುತ್ತದೆ.
ಫ್ಲೋಟಿಂಗ್ ಮತ್ತು ಫಿಕ್ಸೆಡ್ ಬಡ್ಡಿ ದರದ ಲೆಕ್ಕಾಚಾರ
ಬದಲಾಗುವ ಬಡ್ಡಿ ದರದಲ್ಲಿ ಸಾಲ ಪಡೆದವರಿಗೆ ಪ್ರತಿ ಮೂರು ತಿಂಗಳಿಗೆ ಒಮ್ಮೆ ದರ ಪರಿಶೀಲನೆ ಮಾಡಲಾಗುತ್ತದೆ. ಅದು ಜನವರಿ, ಏಪ್ರಿಲ್, ಜುಲೈ ಹಾಗೂ ಅಕ್ಟೋಬರ್ ನಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ. ಮಾರುಕಟ್ಟೆ ಸ್ಥಿತಿಯನ್ನು ಅವಲೋಕಿಸಲಾಗುತ್ತದೆ. ಬದಲಾಗುವ ಬಡ್ಡಿ ದರ ಹೆಚ್ಚಾದರೂ ಆಗಬಹುದು ಅಥವಾ ಕಡಿಮೆ ಆಗಬಹುದು. ಅಥವಾ ಬದಲಾಗದಿರಬಹುದು. ಇನ್ನು ಕಂಪೆನಿ ವೆಬ್ ಸೈಟ್ ಪ್ರಕಾರ, ಹಳೇ ಗ್ರಾಹಕರಿಗೆ ಬಡ್ಡಿ ದರವನ್ನು (ಜನವರಿ, ಜುಲೈ) ಆರು ತಿಂಗಳಿಗೊಮ್ಮೆ ಪರಿಶೀಲಿಸಲಾಗುವುದು.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications