ಸಾಮಾನ್ಯ ಜನರಿಗೂ ಸುಲಭವಾಗಿ ಅರ್ಥವಾಗುತ್ತಿದ್ದ, ಒಳ್ಳೆ ಬಡ್ಡಿಯೂ ಸಿಗುತ್ತಿದ್ದ ಉಳಿತಾಯ ಯೋಜನೆ ಅಂದರೆ ಅದು ಪಿಪಿಎಫ್. ಇದು ಯಾವುದೇ ಫೈನಾನ್ಷಿಯಲ್ ಅಡ್ವೈಸರ್ ಕೂಡ ತೆರಿಗೆ ಉಳಿಸುವುದಕ್ಕೆ ಕೊಡುತ್ತಿದ್ದ ಸಲಹೆಯೂ ಹೌದು. 2020-21ನೇ ಹಣಕಾಸು ವರ್ಷದ ಮೊದಲ ದಿನವೇ ಪಿಪಿಎಫ್ ಉಳಿತಾಯದ ಬಗ್ಗೆ ಒಂದು ಕೆಟ್ಟ ಸುದ್ದಿ ನಿಮಗೆ ತಿಳಿಸಬೇಕಿದೆ.
ಪ್ರತಿ ಮೂರು ತಿಂಗಳಿಗೊಮ್ಮೆ ಪಿಪಿಎಫ್ ಬಡ್ಡಿ ದರ ನಿರ್ಧಾರ ಆಗುತ್ತದೆ. ಈ ಬಾರಿಯೂ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕಕ್ಕೆ ಬಡ್ಡಿ ದರವನ್ನು ಸರ್ಕಾರ ನಿಗದಿ ಮಾಡಿದೆ. ಈವರೆಗೂ ಇದ್ದ 7.9 ಪರ್ಸೆಂಟ್ ಇದ್ದ ಬಡ್ಡಿ ದರವನ್ನು 7.1 ಪರ್ಸೆಂಟ್ ಗೆ ಇಳಿಸಲಾಗಿದೆ. ಅಲ್ಲಿ 0.80 ಪರ್ಸೆಂಟ್ ಇಳಿದಿದೆ. ಇದೇ ಬಡ್ಡಿ ದರ ಏಪ್ರಿಲ್ 1, 2020 ಮಾರ್ಚ್ 31, 2020ರ ತನಕ ಇರುತ್ತದೆ.
ಉಳಿತಾಯ ಯೋಜನೆಗಳ ಬಡ್ಡಿ ಇಳಿಕೆ
ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳೂ ಸೇರಿದಂತೆ ಎನ್ ಎಸ್ ಸಿ, ಕೆವಿಪಿ, ಎಸ್ ಸಿಎಸ್ ಎಸ್, ಎಸ್ ಎಸ್ ವೈ ಮುಂತಾದ ಉಳಿತಾಯ ಯೋಜನೆಗಳ ಬಡ್ಡಿ ಕೂಡ ಇಳಿಕೆಯಾಗಿದೆ. ಹೀಗೆ 0.8 ಪರ್ಸೆಂಟ್ ಬಡ್ಡಿಯನ್ನು ಇಳಿಕೆ ಮಾಡುವುದರಿಂದ ಒಟ್ಟಾರೆಯಾಗಿ ಮೆಚ್ಯೂರಿಟಿ ಸಂದರ್ಭದಲ್ಲಿ ಬರುವ ಮೊತ್ತದಲ್ಲೂ ದೊಡ್ಡ ವ್ಯತ್ಯಾಸ ಆಗಲಿದೆ. ಹಾಗಿದ್ದರೆ ಈಗಿನ ಬಡ್ಡಿ ದರ ಕಡಿತ ಎಷ್ಟು ವ್ಯತ್ಯಾಸ ಮಾಡುತ್ತದೆ ಎಂಬ ಲೆಕ್ಕಾಚಾರ ನೋಡೋಣ. 7.9 ಪರ್ಸೆಂಟ್ ಬಡ್ಡಿದರದಲ್ಲಿ ವರ್ಷಕ್ಕೆ 1.5 ಲಕ್ಷ ರುಪಾಯಿಯಂತೆ 15 ವರ್ಷ ಹೂಡಿಕೆ ಮಾಡಿದರೆ ಆ ಮೊತ್ತ 43 ಲಕ್ಷ ರುಪಾಯಿಯ ಸಮೀಪಕ್ಕೆ ಬರುತ್ತದೆ.
ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ದರ ಬದಲಾವಣೆ
ಆದರೆ, ಈಗ ನಿಗದಿ ಮಾಡಿರುವಂತೆ 7.1 ಪರ್ಸೆಂಟ್ ಬಡ್ಡಿಯಾದರೆ 15 ವರ್ಷಕ್ಕೆ 40 ಲಕ್ಷ ರುಪಾಯಿ ಆಗುತ್ತದೆ. ಇಲ್ಲಿ ತಿಳಿದುಕೊಳ್ಳಬೇಕಾದ ವಿಷಯ ಏನೆಂದರೆ, ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ದರ ಬದಲಾಗುತ್ತಲೇ ಇರುತ್ತದೆ. ಆದ್ದರಿಂದ ಪಿಪಿಎಫ್ ಕ್ಯಾಲ್ಕುಲೇಟರ್ ಬಳಸಿ, ಅಂತಿಮವಾಗಿ ಎಷ್ಟು ಮೊತ್ತ ಬರಬಹುದು ಎಂಬುದನ್ನು ತಿಳಿದುಕೊಳ್ಳಬೇಕಿದ್ದರೆ ಕಡಿಮೆ ಬಡ್ಡಿ ದರದಲ್ಲೇ ಲೆಕ್ಕ ಹಾಕಿಕೊಳ್ಳಿ. ನಿವೃತ್ತಿ ನಂತರ 1 ಕೋಟಿ ರುಪಾಯಿ ಬರಬೇಕು ಎಂಬ ಕಾರಣಕ್ಕೆ ಪಿಪಿಎಫ್ ನಲ್ಲಿ ಹಣ ಹೂಡಿಕೆ ಆರಂಭಿಸಿದ್ದೀರಿ ಅಂದುಕೊಳ್ಳಿ. ನೀವೀಗ ಮತ್ತೆ ಎಷ್ಟು ಸಮಯಕ್ಕೆ ಉಳಿತಾಯ ಮಾಡಬೇಕಾಗುತ್ತದೆ ಎಂಬುದನ್ನು ಲೆಕ್ಕ ಹಾಕಬೇಕಾಗುತ್ತದೆ.
ಕನಿಷ್ಠ 500 ರುಪಾಯಿ, ಗರಿಷ್ಠ 1.5 ಲಕ್ಷ ರುಪಾಯಿ
2019ರ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ ನಿಯಮ ಅನುಸಾರ, ಒಬ್ಬ ವ್ಯಕ್ತಿ ಕನಿಷ್ಠ 500 ರುಪಾಯಿ ಹಾಗೂ ಗರಿಷ್ಠ 1.5 ಲಕ್ಷ ರುಪಾಯಿ ಅಥವಾ ತಿಂಗಳಿಗೆ 12,500 ರುಪಾಯಿ ಒಂದು ಆರ್ಥಿಕ ವರ್ಷ ಅಂದರೆ ಏಪ್ರಿಲ್ ನಿಂದ ಮುಂದಿನ ವರ್ಷದ ಮಾರ್ಚ್ ಮಧ್ಯೆ ಪಿಪಿಎಫ್ ಗೆ ಕಟ್ಟಬಹುದು. ಆದ್ದರಿಂದ ಒಂದು ವರ್ಷಕ್ಕೆ ಇಷ್ಟು ಮೊತ್ತ ಮಾತ್ರ ಎಂಬ ಮಿತಿ ಹೇರಲಾಗಿದೆ. ಆದ್ದರಿಂದ 1 ಕೋಟಿ ಮೊತ್ತಕ್ಕೆ ಎಷ್ಟು ವರ್ಷ ಹಣ ಹೂಡಿಕೆ ಮಾಡಬೇಕಾಗುತ್ತದೆ ಎಂಬುದನ್ನು ನೋಡೋಣ. ಪಿಪಿಎಫ್ 15 ವರ್ಷದ ಅವಧಿಗೆ ಇರುವ ಉಳಿತಾಯ ಯೋಜನೆ. ಆ ನಂತರ 5 ವರ್ಷ ಅವಧಿ ವಿಸ್ತರಣೆ ಮಾಡಿಕೊಳ್ಳಬಹುದು. ನೀವು ಅಂದುಕೊಂಡಂತೆ ಒಂದು ಕೋಟಿ ಮೊತ್ತದ ಉಳಿತಾಯ ಆಗುವವರೆಗೆ 5 ವರ್ಷದಂತೆ ವಿಸ್ತರಣೆ ಮಾಡುತ್ತಾ ಹೋಗಬಹುದು.
25 ವರ್ಷಕ್ಕೆ 1 ಕೋಟಿ ರುಪಾಯಿಗೆ ಹತ್ತಿರ
ನೀವು 1.5 ಲಕ್ಷ ರುಪಾಯಿಯಂತೆ 20 ವರ್ಷಗಳ ಕಾಲ (ಮೊದಲ ವಿಸ್ತರಣೆಯೂ ಸೇರಿ), ವಾರ್ಷಿಕ 7.1 ಪರ್ಸೆಂಟ್ ಬಡ್ಡಿ ದರದಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಖಾತೆಯಲ್ಲಿ 66 ಲಕ್ಷ ರುಪಾಯಿ ಆಗುತ್ತದೆ. ಆದರೆ ಎರಡನೇ ಅವಧಿಗೂ ಮತ್ತೆ ಐದು ವರ್ಷ ವಿಸ್ತರಣೆ ಮಾಡಿದರೆ, ನಿರಂತರವಾಗಿ 25 ವರ್ಷ ಹೂಡಿಕೆ ಮಾಡಿದರೆ ಬಾಕಿ ಮೊತ್ತವು 1 ಕೋಟಿ ರುಪಾಯಿ ಆಗುತ್ತದೆ. ಆದ್ದರಿಂದ ನಿವೃತ್ತಿ ಜೀವನಕ್ಕೆ 1 ಕೋಟಿ ರುಪಾಯಿ ಉಳಿತಾಯ ಮಾಡಬೇಕು ಅಂದುಕೊಂಡಿದ್ದಲ್ಲಿ 1.5 ಲಕ್ಷ ರುಪಾಯಿಯಂತೆ 25 ವರ್ಷಗಳ ಕಾಲ ಹೂಡಿಕೆ ಮಾಡಬೇಕು. ಇಡೀ ಅವಧಿಯಲ್ಲಿ ಬಡ್ಡಿ ದರವು ವಾರ್ಷಿಕ 7.1 ಪರ್ಸೆಂಟ್ ನಷ್ಟೇ ಇರಬೇಕು. ಈ ಬಡ್ಡಿ ದರವು ಮೇಲೇರಲಿ ಅಥವಾ ಕೆಳಗೆ ಇಳಿಯಲಿ. ಇಡೀ ಅವಧಿಯಲ್ಲಿ ಸರಾಸರಿ ಬಡ್ಡಿ ದರವು 25 ವರ್ಷಗಳ ಕಾಲ 7.1 ಪರ್ಸೆಂಟ್ ಬಡ್ಡಿ ದರದಲ್ಲೇ ಇದ್ದಲ್ಲಿ 1 ಕೋಟಿ ರುಪಾಯಿಯನ್ನು ಉಳಿತಾಯ ಮಾಡಲು ಸಾಧ್ಯ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications