FD Banks: ಸೂಪರ್ ಡೂಪರ್‌ ಸ್ಕೀಮ್‌ ಇದು;‌ ನಿಮ್ಮ ಹಣಕ್ಕೆ ಅತೀ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್‌ಗಳಿವು!

ಪೋಸ್ಟ್‌ ಆಫೀಸ್‌, ಬ್ಯಾಂಕ್‌ಗಳಲ್ಲಿ (Post Office, Banks) ಹಲವಾರು ಹೂಡಿಕೆ ಯೋಜನೆಗಳಿವೆ. ಅದರಲ್ಲೊಂದು ಸ್ಥಿರ ಠೇವಣಿ ಯೋಜನೆ ಅಥವಾ ಫಿಕ್ಸೆಡ್‌ ಡೆಪಾಸಿಟ್‌ (FD). ಹೆಚ್ಚಿನವರು ಈ ಯೋಜನೆಯಿಂದ ಹೆಚ್ಚು ಬಡ್ಡಿದರ ಸಿಗುತ್ತೆ, ಹೆಚ್ಚು ಆದಾಯ ಗಳಿಸಬಹುದು ಅಂದುಕೊಳ್ಳುತ್ತಾರೆ. ಅದೇ ಕಾರಣದಿಂದ ಹಲವರು ಈ ಯೋಜನೆಯಲ್ಲಿ ಹೂಡಿಕೆ (Invest) ಮಾಡುತ್ತಾರೆ. ಆದ್ದರಿಂದ ಹಿರಿಯ ನಾಗರಿಕರು ಸ್ಥಿರ ಠೇವಣಿ (FD) ಇನ್ವೆಸ್ಟ್‌ಮೆಂಟ್‌ ಪ್ಲಾನ್‌ ಮಾಡುವಾಗ ಬಡ್ಡಿದರಗಳು, ಠೇವಣಿ ಮಿತಿ, ಬ್ಯಾಂಕ್‌ನ ವಿಶ್ವಾಸಾರ್ಹತೆ, ಟಿಡಿಎಸ್ ಪರಿಣಾಮ ಮತ್ತು ವಿಮಾ ರಕ್ಷಣೆಯ ಬಗ್ಗೆ ಮಾಹಿತಿಯನ್ನು ಪಡೆಯಬೇಕು. ಏಕೆಂದರೆ ಈ ಮಾಹಿತಿಯನ್ನು ನೋಡಿದ್ರೆ ಮಾತ್ರ ನೀವು ಉತ್ತಮ ಆದಾಯ ಗಳಿಸಬಹುದು.

ನಿಮ್ಮ ಹಣಕ್ಕೆ ಅತೀ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್‌ಗಳಿವು!

ಕಡಿಮೆ ಹೂಡಿಕೆ, ಹೆಚ್ಚು ಲಾಭ!
ಭಾರತದಲ್ಲಿ ಹಿರಿಯ ನಾಗರಿಕರು ಫಿಕ್ಸೆಡ್‌ ಡೆಪಾಸಿಟ್‌ ಮೂಲಕ 5 ವರ್ಷದ ಅವಧಿವರೆಗೆ ಹಣ ಹೂಡಿಕೆ ಮಾಡಿದ್ರೆ, ಹೆಚ್ಚೆಂದರೆ 8.10% ಬಡ್ಡಿದರವನ್ನು ಪಡೆಯಬಹುದು. ಸಣ್ಣ ಹಣಕಾಸು ಬ್ಯಾಂಕುಗಳು ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತಿದ್ದು, ದೀರ್ಘಾವಧಿಯ ಎಫ್‌ಡಿಗಳಿಗೆ ಇದು ಉತ್ತಮವಾಗಿದೆ. ಈ ದರಗಳು 3 ಕೋಟಿವರೆಗಿನ ಡೆಪಾಸಿಟ್‌ಗಳ ಮೇಲೆ ಲಭ್ಯವಿದ್ದು, ಆದಾಯ ತೆರಿಗೆಯಲ್ಲೂ ವಿನಾಯಿತಿ ಪಡೆಯಬಹುದು.

ಪ್ರಮುಖ ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ಅವುಗಳ ಬಡ್ಡಿದರಗಳು ಇಲ್ಲಿವೆ:
ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್: 8%
ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: 8.10%
ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: 7.75%

ಇತರ ಸಣ್ಣ ಹಣಕಾಸು ಬ್ಯಾಂಕುಗಳ ಎಫ್‌ಡಿ ದರಗಳು ಈ ಕೆಳಗಿನಂತಿವೆ:
ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: 7.5%
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: 7.7%
ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್: 7.25%
ಸ್ಲೈಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: 7.25%

ಸಣ್ಣ ಹಣಕಾಸು ಬ್ಯಾಂಕುಗಳಲ್ಲಿನ ಎಫ್‌ಡಿ ಮೇಲೆ ಇಟ್ಟಿರುವ ಹಣಕ್ಕೆ ಡಿಐಸಿಜಿಸಿ (DICGC) ಮೂಲಕ ₹5 ಲಕ್ಷದವರೆಗೆ ವಿಮೆ ಕೂಡಾ ಮಾಡಲ್ಪಟ್ಟಿರುತ್ತದೆ. ಆದರೆ ಕೆಲವು ಬ್ಯಾಂಕುಗಳಲ್ಲಿ ಹೂಡಿಕೆ ಮಾಡುವ ಮುನ್ನ ಎಚ್ಚರಿಕೆಯಿಂದ ಹೂಡಿಕೆ ಮಾಡಿದ್ರೆ ಒಳ್ಳೆಯದು. ಈ ಬ್ಯಾಂಕುಗಳ ವ್ಯವಹಾರಗಳು, ವಾಣಿಜ್ಯ ಬ್ಯಾಂಕುಗಳಿಗಿಂತ ಹೆಚ್ಚಿನ ಅಪಾಯವನ್ನು ಹೊಂದಿರಬಹುದು. ಆದ್ದರಿಂದ, ಹೂಡಿಕೆದಾರರು ಡಿಐಸಿಜಿಸಿ ರಕ್ಷಣೆಯ ಮಿತಿಯವರೆಗೆ ಮಾತ್ರ ಎಫ್‌ಡಿಗಳಲ್ಲಿ ಹೂಡಿಕೆ ಮಾಡಬೇಕು.

ಕೆಲವು ಖಾಸಗಿ ಬ್ಯಾಂಕುಗಳು ಸಹ ಹಿರಿಯ ನಾಗರಿಕರಿಗಾಗಿ 5 ವರ್ಷಗಳ ಎಫ್‌ಡಿಗೆ ಉತ್ತಮ ಬಡ್ಡಿದರಗಳನ್ನು ನೀಡುತ್ತದೆ:
ಆರ್‌ಬಿಎಲ್ ಬ್ಯಾಂಕ್: 7.2%
ಆಕ್ಸಿಸ್ ಬ್ಯಾಂಕ್: 7.35%
ಬಂಧನ್ ಬ್ಯಾಂಕ್: 6.6%
ಇಂಡಸ್ಇಂಡ್ ಬ್ಯಾಂಕ್: 7.15%
ಎಚ್‌ಡಿಎಫ್‌ಸಿ ಬ್ಯಾಂಕ್: 6.9%
ಸೌತ್ ಇಂಡಿಯನ್ ಬ್ಯಾಂಕ್: 6.2%

ಇತರ ಬ್ಯಾಂಕುಗಳಲ್ಲಿನ ಎಫ್‌ಡಿ ದರಗಳು ಹೀಗಿವೆ:
ಐಡಿಎಫ್‌ಸಿ ಫಸ್ಟ್ ಬ್ಯಾಂಕ್: 7.1%
ಎಸ್‌ಬಿಎಂ ಬ್ಯಾಂಕ್ ಇಂಡಿಯಾ: 7.5%
ಐಸಿಐಸಿಐ ಬ್ಯಾಂಕ್: 7.1%
ತಮಿಳುನಾಡ್ ಮರ್ಕೆಂಟೈಲ್ ಬ್ಯಾಂಕ್: 7.1%

ಸಾರ್ವಜನಿಕ ವಲಯದ ಬ್ಯಾಂಕುಗಳ ಎಫ್‌ಡಿ ದರಗಳು:
ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್: 6.75%
ಇಂಡಿಯನ್ ಬ್ಯಾಂಕ್: 6.5%
ಎಸ್‌ಬಿಐ: 7.05%
ಬ್ಯಾಂಕ್ ಆಫ್ ಬರೋಡಾ: 7%

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+