ರೀಚಾರ್ಜ್ ಮಾಡುವಾಗ ಹೆಚ್ಚು ಹಣ ಕಟ್ ಆಗುತ್ತದೆ. ಇದು ನಿಮ್ಮ ಗಮನಕ್ಕೆ ಸಹ ಬಂದಿರುತ್ತದೆ. ನಾವು ಹೇಳಿದ ಟ್ರಿಕ್ ಬಳಸಿದರೆ, ಹೆಚ್ಚುವರಿ ಹಣ ಪಾವತಿಸದೆ ರೀಚಾರ್ಜ್ (Mobile Recharge) ಮಾಡಬಹುದು! ಹೌದು, ಈ ಹಿಂದೆ ಫೋನ್ ಪೇ (PhonePe) ಮತ್ತು ಗೂಗಲ್ ಪೇ (Google Pay) ನಂತಹ ಆನ್‌ಲೈನ್ ಪಾವತಿ ಸೇವೆಗಳು ಮೊಬೈಲ್ ರೀಚಾರ್ಜ್‌ಗಳಿಗೆ ಕ್ಯಾಶ್‌ಬ್ಯಾಕ್ ನೀಡುತ್ತಿದ್ದವು. ಆದರೆ, ಈಗ ರೀಚಾರ್ಜ್‌ಗಳು ಮತ್ತು ಇತರೆ ಸೇವೆಗಳಿಗೆ ತನ್ನ ಬಳಕೆದಾರರಿಗೆ ಹೆಚ್ಚಿನ ಶುಲ್ಕ ವಿಧಿಸಲಾಗುತ್ತಿದೆ. ನಾವು ಈ ಲೇಖನದಲ್ಲಿ ಹೆಚ್ಚುವರಿ ಹಣ ಪಾವತಿಸದೆ ನಿಮ್ಮ ಜಿಯೋ ಮತ್ತು ಏರ್‌ಟೆಲ್ ಸಿಮ್ ರೀಚಾರ್ಜ್ ಹೇಗೆ ಮಾಡಬಹುದು ಎಂದು ತಿಳಿಸಿದ್ದೇವೆ.
ಪ್ರಸ್ತುತ ಬಹುತೇಕ ಮೊಬೈಲ್ ಬಳಕೆದಾರರು ರೀಚಾರ್ಜ್‌ಗಳಿಗಾಗಿ (Recharge) ಫೋನ್ ಪೇ, ಗೂಗಲ್ ಪೇ, ಯುಪಿಐ (UPI) ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದಾರೆ. ಈ ರೀಚಾರ್ಜ್‌ಗೆ ಸಾಮಾನ್ಯವಾಗಿ ಹೆಚ್ಚುವರಿಯಾಗಿ 3 ರೂ. ಪಾವತಿಸಬೇಕಿದೆ. ವಿಶೇಷವೆಂದರೆ, 50 ರೂ.ಗಿಂತ ಕಡಿಮೆ ರೀಚಾರ್ಜ್‌ಗಳಿಗೆ ಯಾವುದೇ ಹೆಚ್ಚುವರಿ ಶುಲ್ಕಗಳು ಇರಲ್ಲ. ಹೆಚ್ಚುವರಿ ಹಣ ಪಾವತಿಸದೆ, ಈ ರೀತಿ ರೀಚಾರ್ಜ್ ಮಾಡಬಹುದು ಎಂಬುವುದು ಬಹುತೇಕರಿಗೆ ಗೊತ್ತೇ ಇಲ್ಲ. ನೀವು ಸಹ ಹೆಚ್ಚುವರಿ ಹಣ ಪಾವತಿಸದೆ, ರೀಚಾರ್ಜ್ ಮಾಡಲು ಬಯಸುತ್ತೀರಾ? ಮುಂದೆ ಓದಿ.

ಹಂತ 1: ಮೊದಲು ಪ್ಲೇ ಸ್ಟೋರ್ ಓಪನ್ ಮಾಡಿ. ನಿಮ್ಮ ಬಳಿ ಜಿಯೋ ಸಿಮ್ ಇದ್ದರೆ ಮೈ ಜಿಯೋ ಆಪ್ ಅಥವಾ ನಿಮ್ಮಲ್ಲಿ ಏರ್‌ಟೆಲ್ ಸಿಮ್ ಇದ್ದರೆ ಏರ್‌ಟೆಲ್ ಥ್ಯಾಂಕ್ಸ್ ಆಪ್ ಡೌನ್‌ಲೋಡ್ ಮಾಡಬೇಕು.
ಹಂತ 2: ಬಳಿಕ ನಿಮ್ಮ ಮೊಬೈಲ್ ನಂಬರ್ ಬಳಸಿಕೊಂಡು ಲಾಗಿನ್ ಆಗಿ. ಇದಾದ ನಂತರ ಡಿಸ್ಪ್ಲೇನಲ್ಲಿರುವ ರೀಚಾರ್ಜ್ ಆಯ್ಕೆಯ ಮೇಲೆ ಕ್ಲಿಕ್ಕಿಸಿ.
ಹಂತ 3: ಅಲ್ಲಿ ಲಭ್ಯವಿರುವ ಆಯ್ಕೆಗಳಲ್ಲಿ, ನಿಮಗೆ ಬೇಕಾದ ಪ್ಲಾನ್ ಆಯ್ಕೆ ಮಾಡಿ. ಯೋಜನೆಯನ್ನು ಆಯ್ಕೆ ಮಾಡಿದ ಬಳಿಕ, ರೀಚಾರ್ಜ್ ಮೇಲೆ ಟ್ಯಾಪ್ ಮಾಡಿ. ನಂತರ ಶುಲ್ಕ ಪಾವತಿ ಪುಟಕ್ಕೆ ಹೋಗಿ.
ಹಂತ 4: ಈಗ ಯುಪಿಐ ಐಡಿ ಮೂಲಕ ಪಾವತಿಸಿ ಆಯ್ಕೆ ಮಾಡಿ. ಮತ್ತು ನಿಮ್ಮ ಯುಪಿಐ ಐಡಿಯನ್ನು ನಮೂದಿಸಿ.
ಹಂತ 5: ಇದಾದ ಬಳಿಕ ನಿಮ್ಮ ಗೂಗಲ್ ಪೇ ಅಥವಾ ಫೋನ್ ಪೇ ತೆರೆಯಿರಿ. ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ರೀಚಾರ್ಜ್ ಮಾಡಿ.
ಹಂತ 6: ಇಲ್ಲಿ ನೀವು ನೆಟ್ ಬ್ಯಾಂಕಿಂಗ್ ಅಥವಾ ಕ್ರೆಡಿಟ್, ಡೆಬಿಟ್ ಕಾರ್ಡ್ ಸಹ ಆಯ್ಕೆ ಮಾಡಬಹುದು. ನಿಮ್ಮ ಆದ್ಯತೆಯ ವಿಧಾನವನ್ನು ಬಳಸಿಕೊಂಡು ಪಾವತಿ ಪೂರ್ಣಗೊಳಿಸಬಹುದು.
ಈ ರೀತಿಯಾಗಿ ನೀವು ಯುಪಿಐ ಆಪ್‌ಗಳು ವಿಧಿಸುವ ಹೆಚ್ಚುವರಿ ಶುಲ್ಕವನ್ನು ತಪ್ಪಿಸಬಹುದು.
ಕ್ಯಾಶ್‌ಬ್ಯಾಕ್ ಅಥವಾ ರಿಯಾಯಿತಿ ಸಹ ಲಭ್ಯ
ಕೆಲವು ಡಿಜಿಟಲ್ ವ್ಯಾಲೆಟ್‌ಗಳು ಜಿಯೋ ರೀಚಾರ್ಜ್‌ಗಳಲ್ಲಿ ಹೆಚ್ಚುವರಿಯಾಗಿ ಕ್ಯಾಶ್‌ಬ್ಯಾಕ್ ಅಥವಾ ರಿಯಾಯಿತಿಗಳನ್ನು ಸಹ ನೀಡುತ್ತವೆ. ನೀವು ಪೇಟಿಎಂ ಅಥವಾ ಅಮೆಜಾನ್ ಪೇ ನಂತಹ ವ್ಯಾಲೆಟ್‌ಗಳಲ್ಲಿ ಆಫರ್‌ಗಳ ವಿಭಾಗವನ್ನು ಪರಿಶೀಲಿಸಬಹುದು. ಈ ಆಫರ್ ಬಳಸುವ ಮೂಲಕ ನೀವು ಕೆಲವು ಶುಲ್ಕಗಳನ್ನು ಕಡಿಮೆ ಮಾಡಬಹುದು.
ಹೆಚ್ಚುವರಿ ಶುಲ್ಕದ ಜೊತೆಗೆ ಜಿಎಸ್‌ಟಿ!
ಗೂಗಲ್ ಪೇ ಮತ್ತು ಫೋನ್ ಪೇ ಜನಪ್ರಿಯ ಆನ್‌ಲೈನ್ ಪಾವತಿ ಆಪ್‌ಗಳಾಗಿವೆ. ಇವು ಬಳಕೆದಾರರಿಗೆ ತಮ್ಮ ಯುಟಿಲಿಟಿ ಬಿಲ್‌ಗಳನ್ನು ಅನುಕೂಲಕರವಾಗಿ ಪಾವತಿಸಲು ಮತ್ತು ಇತರೆ ಆನ್‌ಲೈನ್ ವಹಿವಾಟುಗಳನ್ನು ನಿರ್ವಹಿಸಲು ಅವಕಾಶ ಮಾಡಿಕೊಡುತ್ತವೆ. ಗೂಗಲ್ ಪೇ ಮತ್ತು ಫೋನ್ ಪೇ ಸೇರಿದಂತೆ ಇನ್ನಿತರ ಆನ್‌ಲೈನ್ ಪಾವತಿ ಸೇವೆಗಳು ಮೊಬೈಲ್ ರೀಚಾರ್ಜ್‌ಗಳಿಗೆ ಕ್ಯಾಶ್‌ಬ್ಯಾಕ್ ನೀಡುತ್ತಿದ್ದವು. ಹೀಗಾಗಿ, ಗ್ರಾಹಕರು ಅವುಗಳನ್ನು ಹೆಚ್ಚಾಗಿ ಬಳಸಲು ಮುಂದಾದರು. ಆದರೆ, ಕಳೆದ ಕೆಲವು ವರ್ಷಗಳಿಂದ ಬಿಲ್ ಪಾವತಿಗಳು, ಮೊಬೈಲ್ ರೀಚಾರ್ಜ್‌ಗಳು ಮತ್ತು ಇತರೆ ಸೇವೆಗಳಿಗೆ ಹೆಚ್ಚಿನ ಶುಲ್ಕವನ್ನು ವಿಧಿಸಲಾಗುತ್ತಿದೆ. ಈ ಶುಲ್ಕವು ಜಿಎಸ್‌ಟಿಯನ್ನು ಸಹ ಒಳಗೊಂಡಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications