ನೀವು ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಾ..? ಹಾಗಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ..ಹೌದು, ಇತ್ತೀಚಿನ ದಿನಗಳಲ್ಲಿ ಜನರು ಡೆಬಿಟ್ ಕಾರ್ಡ್‌ಗಿಂತ ಅಧಿಕವಾಗಿ ಕ್ರೆಡಿಟ್ ಕಾರ್ಡ್ ಅನ್ನು ಹೆಚ್ಚಾಗಿ ಬಳಕೆಯನ್ನು ಮಾಡಿಕೊಳ್ಳುತ್ತಾರೆ.ಯಾವುದೇ ವಸ್ತುವನ್ನು ಖರೀದಿ ಮಾಡಬೇಕೆಂದರೆ ಅತಿ ಹೆಚ್ಚಾಗಿ ಬಳಕೆ ಮಾಡಿಕೊಳ್ಳವುದು ಕ್ರೆಡಿಟ್ ಕಾರ್ಡ್.
ಹೌದು, ಸಾಲ ತಗೆದುಕೊಳ್ಳಬೇಕು ಅಂತ ಅಂದ್ಕೊಂಡಿರೋರಿಗೆ, ಒಳ್ಳೆ ಕ್ರೆಡಿಟ್ ಸ್ಕೋರ್ (Credit Score) ಇರೋವುದು ಆರ್ಥಿಕ ಭದ್ರತೆಗೆ ತುಂಬಾನೇ ಮುಖ್ಯ. ಅದರಲ್ಲೂ ಭಾರತದಲ್ಲಿ ಕ್ರೆಡಿಟ್ ಸ್ಕೋರ್ ಸಾಮಾನ್ಯವಾಗಿ 300 ರಿಂದ 900 ರವರೆಗೆ ಇರುತ್ತೆ. ಟ್ರಾನ್ಸ್‌ಯೂನಿಯನ್ ಸಿಐಬಿಐಎಲ್ (TransUnion CIBIL), ಈಕ್ವಿಫ್ಯಾಕ್ಸ್ (Equifax), ಎಕ್ಸ್‌ಪೀರಿಯನ್ (Experian) ಅಥವಾ ಸಿಆರ್ಐಎಫ್ ಹೈ ಮಾರ್ಕ್ (CRIF High Mark) ನಂತಹ ಕಂಪನಿಗಳು ಈ ಸ್ಕೋರ್ ನಿರ್ಧಾರ ಮಾಡುತ್ತೇವೆ.

ಕ್ರೆಡಿಟ್ ಸ್ಕೋರ್ ಸಾಲ, ಕ್ರೆಡಿಟ್ ಕಾರ್ಡ್ (Credit Card) ಬಾಡಿಗೆ ಮತ್ತು ಇತರ ಖರ್ಚುಗಳನ್ನ ಸುಲಭವಾಗಿ ಪಡೆಯಲು ಸಹಾಯ ಮಾಡುತ್ತೆ. ಹಾಗಾಗಿ, ಸಾಲ ತಗೋಬೇಕು ಅಂದುಕೊಂಡವರು ಒಂದು ಪ್ಲಾನ್ ಮಾಡ್ಕೊಂಡು, ಸರಿಯಾದ ರೀತಿಯಲ್ಲಿ ಹಣಕಾಸು ನಿರ್ವಹಣೆ ಮಾಡಬೇಕು. ನೀವು ಸಾಲವನ್ನು ತಗೆದುಕೊರ್ಲಳವ ಮೊದಲಿನಿಂದ ಕ್ರೆಡಿಟ್ ಸ್ಕೋರ್ ಹೇಗೆ ಸುಧಾರಣೆಯನ್ನು ಮಾಡಿದ್ದರೆ ಇದು ನಿಮಗೆ ಭದ್ರವಾದ ಆರ್ಥಿಕ ಭವಿಷ್ಯ ಕಟ್ಟಲು ಸಹಾಯ ಮಾಡಬಹುದು ಎಂಬುವುದನ್ನು ತಿಳಿಯೋಣ ಬನ್ನಿ.
ಕ್ರೆಡಿಟ್ ಸ್ಕೋರ್ ತುಂಬಾನೇ ಮುಖ್ಯ
ನೀವು ಎಲ್ಲಿ ಸಾಲವನ್ನು ಸಾಲವನ್ನು ತಗೆದುಕೊಳ್ಳಬೇಕೆಂದುಕೊಂಡರೂ ಕ್ರೆಡಿಟ್ ಸ್ಕೋರ್ ಚನ್ನಾಗಿ ಇರುವುದು ಮುಖ್ಯವಾಗುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್ ಲೆಕ್ಕಚಾರವನ್ನು ನೀವು ಸಾಲ ಹೇಗೆ ತೀರಿಸಿದ್ದೀರಿ, ಎಷ್ಟು ಕ್ರೆಡಿಟ್ ಬಳಸಿದ್ದೀರಿ, ಕ್ರೆಡಿಟ್ ಇತಿಹಾಸ ಎಷ್ಟಿದೆ, ಯಾವೆಲ್ಲಾ ಕ್ರೆಡಿಟ್ ಬಳಸಿದ್ದೀರಿ ಮತ್ತು ಹೊಸ ಕ್ರೆಡಿಟ್‌ಗಾಗಿ ಎಷ್ಟು ಸಲ ವಿಚಾರಿಸಿದ್ದೀರಿ ಅನ್ನೋದರ ಮೇಲೆ ಅವಲಂಬಿತವಾಗಿರುತ್ತದೆ.
ನೀವೇನಾದರೂ ಹೊಸದಾಗಿ ಸಾಲ ತಗೋದುಕೊಳ್ಳತ್ತಿದ್ದೀರಾ ನಿಮ್ಮಗೆ ಕ್ರೆಡಿಟ್ ಇತಿಹಾಸ ಇರಲ್ಲ, ಹಾಗಾಗಿ ಸೊನ್ನೆಯಿಂದ ನಿಮ್ಮ ಕ್ರೆಡಿಟ್ ಕಾರ್ಡ್ ಪ್ರಾರಂಭವಾಗುತ್ತೆ.ಆದರೆ, ಕೆಲವು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಈ ರೀತಿ ಮಾಡಿದ್ದರೆ ಒಳ್ಳೆ ಕ್ರೆಡಿಟ್ ಪ್ರೊಫೈಲ್ ನಿಮ್ಮದಾಗುತ್ತದೆ. ನಿಮ್ಮ ಕ್ರೆಡಿಟ್ 750ಕ್ಕಿಂತ ಹೆಚ್ಚು ಸ್ಕೋರ್ ಇದ್ರೆ ಉತ್ತಮವಾಗಿರುತ್ತದೆ. ಇದು ನಿಮಗೆ ಸಾಲದ ಮೇಲೆ ಒಳ್ಳೆ ನಿಯಮಗಳನ್ನ ಮತ್ತು ಜಾಸ್ತಿ ಕ್ರೆಡಿಟ್ ಲಿಮಿಟ್ ಸಹಾಯವನ್ನು ಮಾಡುತ್ತದೆ.
ಅನೇಕ ಬ್ಯಾಂಕ್‌ಗಳು ಬೇಸಿಕ್ ಫೀಚರ್ಸ್ ಇರುವ ಕ್ರೆಡಿಟ್ ಕಾರ್ಡ್‌ಗಳನ್ನ ಕೊಡುತ್ತವೆ. ಸಂಬಳ ಬರುವ ಖಾತೆ ಅಥವಾ ಫಿಕ್ಸೆಡ್ ಡೆಪಾಸಿಟ್ ನಂತಹ ಬ್ಯಾಂಕಿನೊಂದಿಗೆ ಒಳ್ಳೆಯ ಸಂಬಂಧ ಹೊಂದಿದ್ರೆ ಕ್ರೆಡಿಟ್ ಕಾರ್ಡ್ ಸಿಗೋದು ಸುಲಭವಾಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ICICI ಬ್ಯಾಂಕ್, HDFC ಬ್ಯಾಂಕ್ ಮತ್ತು Axis ಬ್ಯಾಂಕ್‌ನಂತಹ ಬ್ಯಾಂಕುಗಳು ಈ ಸೌಲಭ್ಯ ನೀಡುತ್ತವೆ.
ಸುರಕ್ಷಿತ ಕ್ರೆಡಿಟ್ ಕಾರ್ಡ್
ನೀವು ಒಂದು ಸುರಕ್ಷಿತ ಕ್ರೆಡಿಟ್ ಕಾರ್ಡ್‌ನಿಂದ ಪ್ರಾರಂಭವನ್ನು ಮಾಡಬೇಕಾಗುತ್ತದೆ. ಸುರಕ್ಷಿತ ಕ್ರೆಡಿಟ್ ಕಾರ್ಡ್‌ಗಳಿಗೆ ಫಿಕ್ಸೆಡ್ ಡೆಪಾಸಿಟ್ ನಿಮ್ಮಗೆ ಬೇಕಾಗುತ್ತದೆ. ಇದು ನಿಮ್ಮ ಕ್ರೆಡಿಟ್ ಲಿಮಿಟ್ ಮೇಲೆ ನಿರ್ಧಾರವಾಗುತ್ತದೆ. ಉದಾಹರಣೆಯನ್ನು ನೋಡುವುದಾದರೆ 20,000 ರೂ. ಎಫ್ ಡಿ ಇದ್ರೆ, ನಿಮಗೆ 20,000 ರೂ. ಕ್ರೆಡಿಟ್ ಲಿಮಿಟ್ ಸಿಗುಬಹುದು.
ಅಗತ್ಯ ವಸ್ತುಗಳ ಖರೀದಿಗೆ ಸಾಲ ಪಡೆಯಿರಿ
ನೀವು ಕ್ರೆಡಿಟ್ ಕಾರ್ಡ್ ಬಳಕೆಯನ್ನು ಮಾಡಿಕೊಂಡು ದಿನಸಿ, ಪೆಟ್ರೋಲ್ ಅಥವಾ ಮೊಬೈಲ್ ರೀಚಾರ್ಜ್‌ನಂತಹ ಸಣ್ಣ ಖರೀದಿಗಳಿಗೆ ಕಾರ್ಡ್ ಬಳಸಿ ಮತ್ತು ಪ್ರತಿ ತಿಂಗಳು ಸರಿಯಾಗಿ ಹಣ ಮರುಪಾವತಿಯ ಹಣವನ್ನು ಪಾವತಿ ಮಾಡಿ.ಇದನ್ನು ನೀವು ಸಮಯಕ್ಕೆ ಸರಿಯಾಗಿ ಪಾವತಿಸೋದು ತುಂಬ ಮುಖ್ಯ, ಯಾಕಂದ್ರೆ ಇದು ನಿಮ್ಮ ಸ್ಕೋರ್ ಮೇಲೆ ಪರಿಣಾಮ ಬೀರುತ್ತೆ. ಖರ್ಚು ಮಾಡೋದಕ್ಕೋಸ್ಕರ ಮಾತ್ರ ಸಾಲ ತಗೋಬೇಡಿ. ನಿಮಗೆ ನಿಜವಾಗಿಯೂ ಅಗತ್ಯವಿದ್ದಾಗ ಮಾತ್ರ ಸಾಲ ತಗೊಳ್ಳಿ.
ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ಗಳು ಅಥವಾ ಬ್ಯಾಂಕ್‌ಗಳಿಂದ ಕಮ್ಮಿ ಅಥವಾ ಯಾವುದೇ ಸಂಸ್ಕರಣಾ ಶುಲ್ಕವಿಲ್ಲದ ಸಣ್ಣ ಸಾಲಗಳನ್ನ ನೋಡಿ. ಸಾಲದ ಮೇಲೆ ಸರಿಯಾದ ಸಮಯಕ್ಕೆ ಈಎಂಐ (EMI) ಕಂತುಗಳನ್ನ ಕಟ್ಟಬೇಕು. ಸಮಯಕ್ಕೆ ಸರಿಯಾಗಿ ಪಾವತಿಸುವುದರಿಂದ ಹಣಕಾಸು ಶಿಸ್ತು ಹೆಚ್ಚಾಗುತ್ತೆ ಮತ್ತು ಸಾಲ ನೀಡುವವರಿಗೆ ನಿಮ್ಮ ಮೇಲೆ ವಿಶ್ವಾಸ ಹೆಚ್ಚಾಗುತ್ತೆ.
ಈ ಕೆಲವು ತಪ್ಪುಗಳನ್ನು ಮಾಡಬೇಡಿ
ನೀವು ಸಾಲ ತಗೋಬೇಕು ಅಂತ ಅಂದುಕೊಂಡರೆ ಕೆಲವು ತಪ್ಪುಗಳನ್ನ ಮಾಡಬಾರದು. ಸ್ವಲ್ಪ ಸಮಯದ ಅಂತರದಲ್ಲಿ ಅನೇಕ ಕ್ರೆಡಿಟ್ ಕಾರ್ಡ್‌ಗಳು ಅಥವಾ ಸಾಲಗಳಿಗೆ ಅರ್ಜಿ ಸಲ್ಲಿಕೆಯನ್ನು ಮಾಡಬೇಡಿ. ಇದರಿಂದ ನಿಮ್ಮ ಸ್ಕೋರ್ ಕಡಿಮೆಯಾಗಬಹುದು.ಪಾವತಿ ಮಾಡಿದ ತಕ್ಷಣ ನಿಮ್ಮ ಕ್ರೆಡಿಟ್ ಖಾತೆಗಳನ್ನ ಮುಚ್ಚಬೇಡಿ. ಇದರಿಂದ ನಿಮ್ಮ ಕ್ರೆಡಿಟ್ ಹಿಸ್ಟರಿ ಕಡಿಮೆಯಾಗುತ್ತೆ. ಇದು ನಿಮ್ಮ ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ.
ಕ್ರೆಡಿಟ್ ಸ್ಕೋರ್ ಬೆಳೆಸಲು ಸಮಯ ಹಿಡಿಯುತ್ತೆ. ಸಾಮಾನ್ಯವಾಗಿ 6-12 ತಿಂಗಳುಗಳು ಬೇಕಾಗಬಹುದು. ನಿಮ್ಮ ಕ್ರೆಡಿಟ್ ವರದಿಯನ್ನ ಆಗಾಗ ಚೆಕ್ ಮಾಡ್ತಾ ಇರಿ. ವರ್ಷಕ್ಕೊಮ್ಮೆ ಕ್ರೆಡಿಟ್ ಬ್ಯೂರೋದಿಂದ ಉಚಿತ ಕ್ರೆಡಿಟ್ ವರದಿ ಪಡೆಯಬಹುದು. ಬ್ಯಾಂಕ್‌ಬಜಾರ್ ಅಥವಾ ಪೈಸಾಬಜಾರ್‌ನಂತಹ ಫಿನ್‌ಟೆಕ್ ಆಪ್‌ಗಳನ್ನೂ ಬಳಕೆಯನ್ಉ ಮಾಡಿಕೊಂಡು ಸಹ ಕ್ರೆಡಿಟ್ ಸ್ಕೋರ್ ತಿಳಿದುಕೊಳ್ಳಬಹುದು.


Click it and Unblock the Notifications