ನೀವು ಡೆಬಿಟ್ ಕಾರ್ಡ್ ಇಲ್ಲದೆಯೇ ನಿಮ್ಮ ಯುಪಿಐ (UPI) ಪಿನ್ ಚೇಂಜ್ ಮಾಡಬಹುದು. ಹೌದು, ಭಾರತದಲ್ಲಿ ಲಕ್ಷಾಂತರ ಜನರು ಬಳಸುವ ತಾಂತ್ರಿಕ ಸೌಲಭ್ಯಗಳಲ್ಲಿ ಯುಪಿಐ (Unified Payments Interface) ಕೂಡ ಒಂದು. ಇದು ಡಿಜಿಟಲ್ ಹಣದ ವಹಿವಾಟು ಆಗಿದೆ.
ಜನರು ಇದರ ಮೂಲಕ ತಮಗೆ ಬೇಕಾದಂತೆ ಹಣದ ವಹಿವಾಟು ನಡೆಸುತ್ತಿದ್ದಾರೆ. ಹಣದ ವಹಿವಾಟುಗಳಿಗೆ ಯುಪಿಐ ಬಳಸುವುದು ತುಂಬಾ ಸುಲಭವಾಗಿದ್ದರೂ, ಅದನ್ನು ಸುರಕ್ಷಿತವಾಗಿಡುವುದು ಬಹಳ ಮುಖ್ಯ. ಯುಪಿಐ ಪಿನ್ (UPI Pin) ಬದಲಾಯಿಸುವುದು ಬಹಳ ಕೂಡ ಮುಖ್ಯ.

ಹೌದು, ಒಂದೇ ಯುಪಿಐ ಪಿನ್ ಅನ್ನು ಹಲವು ವರ್ಷಗಳ ಕಾಲ ಬಳಸುವುದರಿಂದ ವಂಚನೆಗೆ ಸುಲಭ ದಾರಿಯಾಗಿದೆ. ದೇಶದಲ್ಲಿ ಕೋಟ್ಯಂತರ ಜನರು ಯುಪಿಐ ಬಳಸುತ್ತಾರೆ. ಅಭಿವೃದ್ಧಿ ಹೊಂದಿದ ನಗರಗಳಿಂದ ಹಿಡಿದು ಗ್ರಾಮೀಣ ಪ್ರದೇಶಗಳವರೆಗೆ ದೇಶದ ಎಲ್ಲಾ ಭಾಗಗಳಲ್ಲಿ ಯುಪಿಐ ಸೇವೆಯನ್ನು ಬಳಸಲಾಗುತ್ತಿದೆ. ಎಲ್ಲಾ ಜನರು ತಮ್ಮ ದೈನಂದಿನ ಜೀವನದಲ್ಲಿ ಬಳಸುವ ಈ ಸೇವೆಯನ್ನು ಸುರಕ್ಷಿತಗೊಳಿಸಲು ಯುಪಿಐ ಪಿನ್‌ಗಳನ್ನು ಬಳಸಲಾಗುತ್ತದೆ. ಹೀಗಾಗಿ, ತಜ್ಞರು ಸಹ ವಂಚನೆಗೆ ಅವಕಾಶ ನೀಡಬೇಡಿ ಎಂದು ಸೂಚನೆ ನೀಡಿದ್ದಾರೆ.
ಸುಲಭವಾಗಿ ಹಣವನ್ನು ವರ್ಗಾಯಿಸಬಹುದು
ಪ್ರಸ್ತುತ ಕೋಟ್ಯಂತರ ಭಾರತೀಯರು ಯುಪಿಐ ಬಳಸುತ್ತಿದ್ದಾರೆ. ಡಿಜಿಟಲ್ (ಆನ್‌ಲೈನ್) ವಹಿವಾಟುಗಳು ತಾಂತ್ರಿಕ ಅಭಿವೃದ್ಧಿಗೆ ಹಿಡಿದ ಕೈಗನ್ನಡಿಯಾಗಿದೆ. ಈ ಆನ್‌ಲೈನ್ ಹಣ ವರ್ಗಾವಣೆಯ ಮೂಲಕ ಜನರು ಎಲ್ಲಿಂದಲಾದರೂ ಸುಲಭವಾಗಿ ಹಣವನ್ನು ವರ್ಗಾಯಿಸಬಹುದು. ಹಣದ ವಹಿವಾಟು ನಡೆಸಲು ಬ್ಯಾಂಕ್‌ಗಳಿಗೆ ಅಥವಾ ಎಟಿಎಂಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ಎಲ್ಲಿಂದಲಾದರೂ, ಯಾವುದೇ ಸಮಯದಲ್ಲಿ ಹಣವನ್ನು ಕಳುಹಿಸಲು ಸಾಧ್ಯವಿದೆ.
ನಿಮಗೆ ಇದು ತಿಳಿದಿರಬಹುದು. ಈ ಹಿಂದೆ ಯುಪಿಐ ಪಿನ್ ಚೇಂಜ್ (UPI Pin Change) ಮಾಡಲು ಡೆಬಿಟ್ ಕಾರ್ಡ್ ಅಗತ್ಯವಾಗಿ ಬೇಕಿತ್ತು. ಆದರೆ, ಪ್ರಸ್ತುತ ಡೆಬಿಟ್ ಕಾರ್ಡ್ ಬೇಕಿಲ್ಲ. ಈ ಕಾರ್ಡ್ ಇಲ್ಲದೆಯೂ ಯುಪಿಐ ಪಿನ್ ಬದಲಾಯಿಸಲು ಹೊಸ ನಿಯಮಗಳನ್ನು ಪರಿಚಯಿಸಲಾಗಿದೆ. ಹಾಗಿದ್ರೆ, ಬನ್ನಿ ಡೆಬಿಟ್ ಕಾರ್ಡ್ ಇಲ್ಲದೆ ನಿಮ್ಮ ಯುಪಿಐ (UPI) ಪಿನ್ ಅನ್ನು ಹೇಗೆ ಬದಲಾಯಿಸಬಹುದು ಅನ್ನೋದನ್ನು ತಿಳಿಯೋಣ.
ಡೆಬಿಟ್ ಕಾರ್ಡ್ ಇಲ್ಲದೆ ಯುಪಿಐ ಪಿನ್ ಬದಲಾಯಿಸಲು ಹೀಗೆ ಮಾಡಿ!
ಯುಪಿಐ ಪಿನ್ ಬದಲಾಯಿಸಲು ಮೊಬೈಲ್ ನಂಬರ್, ಆಧಾರ್ ನಂಬರ್ ಮತ್ತು ಬ್ಯಾಂಕ್ ನಂಬರ್ ಲಿಂಕ್ ಮಾಡುವ ಅಗತ್ಯವಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ನೀವು (ಬಳಕೆದಾರರು) ಯುಪಿಐ ಪಿನ್ (UPI Pin) ಅನ್ನು ಸುಲಭವಾಗಿ ಚೇಂಜ್ ಮಾಡಬಹುದು.
ಹಂತ 1: ಮೊದಲು ಯುಪಿಐ ಅಪ್ಲಿಕೇಶನ್ ಓಪನ್ ಮಾಡಿ
ಹಂತ 2: ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸಿ ಮತ್ತು ಲಾಗಿನ್ ಮಾಡಿ.
ಹಂತ 3: ಇದಾದ ಬಳಿಕ ನೀವು ಯುಪಿಐ ಪಿನ್ ಬದಲಾಯಿಸಲು ಬಯಸುವ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಬೇಕು.
ಹಂತ 4: ಇದರಲ್ಲಿ ನೀವು ಯುಪಿಐ ಪಿನ್ ಹೊಂದಿಸುವ ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕು.
ಹಂತ 5: ಅದರಲ್ಲಿ ಎರಡು ಆಯ್ಕೆಗಳು ಇರುತ್ತವೆ. ನೀವು ಡೆಬಿಟ್ ಕಾರ್ಡ್, ಆಧಾರ್ ಒಟಿಪಿ ಬಳಸಿ ಪಾಸ್‌ವರ್ಡ್ ಚೇಂಜ್ ಮಾಡಬಹುದು.
ಹಂತ 6: ಆಧಾರ್ ಓಟಿಪಿ ಆಪ್ಷನ್ ಆಯ್ದುಕೊಳ್ಳಿ. ಇದರೊಂದಿಗೆ ನಿಮ್ಮ ಮೊಬೈಲ್ ನಂಬರ್‌ಗೆ ಕಳುಹಿಸಲಾದ ಓಟಿಪಿ ಅನ್ನು ನಮೂದಿಸಬೇಕು.
ಹಂತ 7: ಹೀಗೆ ಮಾಡಿದರೆ ನೀವು ಸುಲಭವಾಗಿ ಯುಪಿಐ ಪಿನ್ ಬದಲಾಯಿಸಬಹುದು.
ಒಟ್ಟಾರೆ, ಈ ಮೇಲೆ ತಿಳಿಸಿದ ಟ್ರಿಕ್ ಬಳಸುವ ಮೂಲಕ ನೀವು, ಡೆಬಿಟ್ ಕಾರ್ಡ್ ಇಲ್ಲದೆಯೇ ಯುಪಿಐ ಪಿನ್ ಅನ್ನು ಚೇಂಜ್ ಮಾಡಬಹುದು. ದೊಡ್ಡ ದೊಡ್ಡ ಸಿಟಿಗಳಿಂದ ಹಿಡಿದು ದೂರದ ಹಳ್ಳಿಗಳವರೆಗೆ ಯುಪಿಐ ಸೇವೆಯನ್ನು ಬಳಸಲಾಗುತ್ತಿದೆ. ಎಲ್ಲಾ ಜನರು ತಮ್ಮ ದೈನಂದಿನ ಜೀವನದಲ್ಲಿ ಬಳಸುವ ಈ ಸೇವೆಯನ್ನು ಸುರಕ್ಷಿತವಾಗಿರಿಸಲು ಯುಪಿಐ ಪಿನ್‌ಗಳನ್ನು ಬದಲಾಯಿಸಬೇಕಿದೆ. ಇದು ತಜ್ಞರ ಸಲಹೆ ಆಗಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications