ಪಾಲಕರಿಗೆ ಆರೋಗ್ಯ ವಿಮೆ ಮಾಡಿಸದೆ 80D ಡಿಡಕ್ಷನ್ ಕ್ಲೈಮ್ ಹೇಗೆ?

ಆದಾಯ ತೆರಿಗೆ ಇಲಾಖೆಯ ಪ್ರಕಾರ, ಯಾವುದೇ ಭಾರತೀಯ ನಾಗರಿಕ ಅಥವಾ ಹಿಂದು ಅವಿಭಕ್ತ ಕುಟುಂಬವು (HUF) ತಾನು ಹಣಕಾಸು ವರ್ಷವೊಂದರಲ್ಲಿ ಪಾವತಿಸಿದ ಆರೋಗ್ಯ ವಿಮೆ ಕಂತನ್ನು ತನ್ನ ಒಟ್ಟು ಆದಾಯದಿಂದ ಸೆಕ್ಷನ್ 80D ಅಡಿಯಲ್ಲಿ ಕಡಿತ ಮಾಡುವಂತೆ ಅಥವಾ ಕ್ಲೈಮ್ ನೀಡುವಂತೆ ಕೋರಬಹುದು. ಅರ್ಜಿದಾರನೊಬ್ಬನ ಒಟ್ಟು ಆದಾಯವನ್ನು ಲೆಕ್ಕ ಹಾಕುವಾಗ, ಯಾವುದೇ ಓರ್ವ ವ್ಯಕ್ತಿ ಅಥವಾ ಒಂದು ಹಿಂದು ಅವಿಭಕ್ತ ಕುಟುಂಬವು, ಕಳೆದ ವರ್ಷದಲ್ಲಿ ತನ್ನ ತೆರಿಗೆ ಆದಾಯದಿಂದ ಸಬ್ ಸೆಕ್ಷನ್ (2B) ಯಲ್ಲಿ ತಿಳಿಸಲಾದ ಯಾವುದೇ ರೀತಿಯಲ್ಲಿ ಪಾವತಿಸಿರುವ ಮೊತ್ತವು ಡಿಡಕ್ಷನ್‌ಗೆ ಅರ್ಹವಾಗಿರುತ್ತದೆ. ವ್ಯಕ್ತಿಗಳು ಹಾಗೂ ಎಚ್‌ಎಫ್ ತೆರಿಗೆ ಪಾವತಿದಾರರು ತಮ್ಮ ಕುಟುಂಬದ

ಹಿರಿಯ ಸದಸ್ಯರ ಆರೋಗ್ಯ ವಿಮಾ ಪಾಲಿಸಿಯ ಕಂತು ಪಾವತಿಯ ಮೊತ್ತಕ್ಕೆ ಮಾತ್ರ ಡಿಡಕ್ಷನ್ ಕ್ಲೈಮ್ ಮಾಡಬಹುದು.

ಆರೋಗ್ಯ ವಿಮಾ ಕಂತು ಹಾಗೂ ಸೆಕ್ಷನ್ 80D ಡಿಡಕ್ಷನ್ ಮೇಲೆ ತಿಳಿಸಲಾದ ವಿಷಯಗಳನ್ನು ಹೊರತುಪಡಿಸಿ, ಈ ಡಿಡಕ್ಷನ್ ಕುರಿತಂತೆ ಮತ್ತೊಂದು ಉಪಯೋಗವಿದೆ. ಸ್ವತಃ ತೆರಿಗೆದಾರನು ಅಥವಾ ಆತನ ಪತ್ನಿ, ಮಕ್ಕಳು ಸೇರಿದಂತೆ ಕುಟುಂಬ ಸದಸ್ಯರಿಗಾಗಿ ಖರೀದಿಸಲಾದ ಆರೋಗ್ಯ ವಿಮಾ ಪಾಲಿಸಿ ಅಥವಾ ಕೇಂದ್ರ ಸರ್ಕಾರದ ಯಾವುದೇ ಆರೋಗ್ಯ ಯೋಜನೆಗೆ ನೀಡಲಾದ ವಂತಿಗೆ ಅಥವಾ ಕೇಂದ್ರ ಸರ್ಕಾರವು ಅಧಿಸೂಚಿಸಿದ ಯಾವುದೇ ಯೋಜನೆಗೆ ಸಲ್ಲಿಸಲಾದ ವಂತಿಗೆಯನ್ನು ಸಹ 80D ಯಲ್ಲಿ ಕ್ಲೈಮ್ ಮಾಡಬಹುದಾಗಿದೆ.

80D ಅಡಿಯಲ್ಲಿ ಅನುಮತಿಸಲಾದ ಡಿಡಕ್ಷನ್‌ಗಳ ಪಟ್ಟಿ

80D ಅಡಿಯಲ್ಲಿ ಅನುಮತಿಸಲಾದ ಡಿಡಕ್ಷನ್‌ಗಳ ಪಟ್ಟಿ

ತೆರಿಗೆದಾರ ಅಥವಾ ಆತನ ಕುಟುಂಬಕ್ಕಾಗಿ ಆರೋಗ್ಯ ವಿಮೆ ಖರೀದಿಸಲು ಅಥವಾ ನಿರ್ವಹಿಸಲು ಖರ್ಚು ಮಾಡಲಾದ ಒಟ್ಟು ಮೊತ್ತ ಅಥವಾ ಕೇಂದ್ರ ಸರ್ಕಾರದ ಯಾವುದೇ ಆರೋಗ್ಯ ಯೋಜನೆಗೆ ಪಾವತಿಸಲಾದ ಮೊತ್ತ ಅಥವಾ ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಅಧಿಸೂಚಿಸಿದ ಯಾವುದೇ ಯೋಜನೆ ಅಥವಾ ತೆರಿಗೆದಾರ ಅಥವಾ ಆತ ತನ್ನ ಕುಟುಂಬದ ಸದಸ್ಯರ ಆರೋಗ್ಯ ತಪಾಸಣೆಗಾಗಿ ಖರ್ಚು ಮಾಡಲಾದ ಮೊತ್ತ, ಇದು 25,000 ರೂಪಾಯಿಗಳನ್ನು ಮೀರಕೂಡದು.

ತೆರಿಗೆದಾರನೊಬ್ಬ ತನ್ನ ಅಥವಾ ತನ್ನ ಪೋಷಕರ ಆರೋಗ್ಯ ತಪಾಸಣೆಗಾಗಿ ಆರೋಗ್ಯ ವಿಮೆ ಪಾಲಿಸಿ ಖರೀದಿಸಲು ಅಥವಾ ನಿರ್ವಹಿಸಲು ಪಾವತಿಸಿರುವ ಒಟ್ಟು ಮೊತ್ತ 25,000 ರೂಪಾಯಿಗಳನ್ನು ಮೀರಕೂಡದು. ಹಣಕಾಸು ವರ್ಷವೊಂದರಲ್ಲಿ ತನ್ನ ಅಥವಾ ತನ್ನ ಕುಟುಂಬಸ್ಥರ ವೈದ್ಯಕೀಯ ಚಿಕಿತ್ಸೆಗಾಗಿ ಪಾವತಿಸಲಾದ ಒಟ್ಟು ಮೊತ್ತ 50,000 ರೂಪಾಯಿಗಳನ್ನು ಮೀರಕೂಡದು. ತೆರಿದಾರನು ತನ್ನ ಪೋಷಕರ ಆರೋಗ್ಯಕ್ಕಾಗಿ ಖರ್ಚು ಮಾಡಿದ ಒಟ್ಟಾರೆ ವೈದ್ಯಕೀಯ ವೆಚ್ಚವು ಹಣಕಾಸು ವರ್ಷದಲ್ಲಿ 50,000 ವರೆಗೆ ಇರಬಹುದು.

 

ಪಾವತಿ ವಿಧಾನ ಹಾಗೂ ಅರ್ಹತೆ

ಪಾವತಿ ವಿಧಾನ ಹಾಗೂ ಅರ್ಹತೆ

ತೆರಿಗೆದಾರನು ಸ್ವತಃ ತನಗೆ ಮತ್ತು ಪತ್ನಿ ಹಾಗೂ ಮಕ್ಕಳ ಆರೋಗ್ಯ ತಪಾಸಣೆಗಾಗಿ ಅಥವಾ ಆರೋಗ್ಯ ವಿಮೆಯ ಕಂತು ಪಾವತಿಗಾಗಿ ಹಣವನ್ನು ನಗದು ರೂಪದಲ್ಲಿ ಅಥವಾ ಇನ್ನಾವುದೇ ರೂಪದಲ್ಲಿ ಪಾವತಿಸಿದ್ದರೂ ಡಿಡಕ್ಷನ್ ಪಡೆಯಬಹುದು. ಹಾಗೆಯೇ ತನ್ನ ಪೋಷಕರ ಆರೋಗ್ಯ ತಪಾಸಣೆ ಅಥವಾ ಆರೋಗ್ಯ ವಿಮಾ ಕಂತನ್ನು ನಗದು ಹೊರತುಪಡಿಸಿ ಇನ್ನಾವುದೇ ರೀತಿಯಲ್ಲಿ ಪಾವತಿಸಲಾದ ಮೊತ್ತಕ್ಕೆ ಡಿಡಕ್ಷನ್ ಪಡೆಯಬಹುದು. ಇನ್ನು ಹಿಂದು ಅವಿಭಕ್ತ ಕುಟುಂಬಕ್ಕೆ ಸಂಬಂಧಿಸಿದಂತೆ, ಕುಟುಂಬದ ಯಾವುದೇ ಸದಸ್ಯರ ಆರೋಗ್ಯ ವಿಮಾ ಪಾಲಿಸಿಗಾಗಿ ಪಾವತಿಸಲಾದ ಒಟ್ಟಾರೆ ಮೊತ್ತವು 25,000 ರೂಪಾಯಿಗಳನ್ನು ಮೀರಕೂಡದು. ಹಿಂದು ಅವಿಭಕ್ತ ಕುಟುಂಬವೊಂದರ ಯಾವುದೇ ಸದಸ್ಯನ ವೈದ್ಯಕೀಯ ಚಿಕಿತ್ಸೆಗಾಗಿ ಮಾಡಲಾದ ಒಟ್ಟು ವೆಚ್ಚವು 50,000 ರೂಪಾಯಿಗಳ ಒಳಗಿದ್ದರೆ ಡಿಡಕ್ಷನ್ ಕ್ಲೈಮ್ ಮಾಡಬಹುದು. ಹಿರಿಯ ನಾಗರಿಕರಿಗೆ ಡಿಡಕ್ಷನ್ ಮಿತಿ 50,000 ರೂಪಾಯಿಗಳಾಗಿದೆ.

ಒಟ್ಟು 1 ಲಕ್ಷ ರೂಪಾಯಿ ಡಿಡಕ್ಷನ್ ಪಡೆಯಲು ಅರ್ಹ

ಒಟ್ಟು 1 ಲಕ್ಷ ರೂಪಾಯಿ ಡಿಡಕ್ಷನ್ ಪಡೆಯಲು ಅರ್ಹ

ತೆರಿಗೆದಾರನೊಬ್ಬ ತನಗಾಗಿ, ತನ್ನ ಹೆಂಡತಿ ಹಾಗೂ ಅವಲಂಬಿತ ಮಕ್ಕಳಿಗಾಗಿ ಖರೀದಿಸಿದ ಆರೋಗ್ಯ ವಿಮೆಗಾಗಿ 25,000 ರೂಪಾಯಿಗಳವರೆಗೆ ತೆರಿಗೆ ಡಿಡಕ್ಷನ್ ಕ್ಲೈಮ್ ಮಾಡಬಹುದು. 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪೋಷಕರಿಗಾಗಿ ಖರೀದಿಸಲಾದ ಆರೋಗ್ಯ ವಿಮೆಗೆ 25,000 ರೂಪಾಯಿಗಳವರೆಗೆ ಹಾಗೂ 60 ವರ್ಷ ಮೇಲ್ಪಟ್ಟ ಪೋಷಕರಿಗಾಗಿ ಖರೀದಿಸಲಾದ ಆರೋಗ್ಯ ವಿಮೆಗೆ 50,000 ರೂಪಾಯಿಗಳವರೆಗೆ ಹಣಕಾಸು ವರ್ಷವೊಂದರಲ್ಲಿ ಡಿಡಕ್ಷನ್ ಸಿಗುತ್ತದೆ. 50,000 ರೂಪಾಯಿ ಕಂತು ಪಾವತಿಸುವ ವ್ಯಕ್ತಿಗಳು, ಕುಟುಂಬಗಳು ಮತ್ತು 60 ವರ್ಷ ಮೇಲ್ಪಟ್ಟ ಪೋಷಕರು, ಮತ್ತು ತಮ್ಮ ಕುಟುಂಬ ಮತ್ತು ತಮ್ಮ ಮಕ್ಕಳಿಗಾಗಿ ಮತ್ತು ಪೋಷಕರಿಗಾಗಿ 50,000 ರೂಪಾಯಿ ಕಂತು ಪಾವತಿಸುವವರು ಒಟ್ಟು 1 ಲಕ್ಷ ರೂಪಾಯಿ ಡಿಡಕ್ಷನ್ ಪಡೆಯಲು ಅರ್ಹರಾಗಿರುತ್ತಾರೆ.

ಪೋಷಕರಿಗೆ ಆರೋಗ್ಯ ವಿಮೆ ಮಾಡಿಸದಿದ್ದರೂ 80D ಡಿಡಕ್ಷನ್ ಕ್ಲೈಮ್ ಹೇಗೆ?

ಸದ್ಯ ಭಾರತೀಯ ಸ್ಟೇಟ್ ಬ್ಯಾಂಕ್ ಇಂಥದೊಂದು ಅವಕಾಶವನ್ನು ನೀಡುತ್ತಿದೆ. "ಈಗ ಮತ್ತಷ್ಟು ಹೆಚ್ಚು ಉಳಿತಾಯ ಮಾಡಿ. ನಿಮ್ಮ ಪೋಷಕರಿಗೆ ಆರೋಗ್ಯ ವಿಮೆ ಮಾಡಿಸದಿದ್ದರೂ 80D ಅನ್ವಯ ಡಿಡಕ್ಷನ್ ಪಡೆದುಕೊಳ್ಳಿ. YONO ಗೆ ಲಾಗ್ ಇನ್ ಮಾಡಿ ಮತ್ತು Tax2win ಜೊತೆಗೆ ಉಚಿತವಾಗಿ ನಿಮ್ಮ ಐಟಿಆರ್ ಫೈಲ್ ಮಾಡಿ" ಎಂದು ಭಾರತದ ಅಗ್ರಗಣ್ಯ ಬ್ಯಾಂಕ್ ಎಸ್‌ಬಿಐ ಟ್ವೀಟ್ ಮಾಡಿದೆ.
ಅಂದರೆ ಈಗ YONO ಆ್ಯಪ್ ನಲ್ಲಿ Tax2win ಜೊತೆಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೂಲಕ ತೆರಿಗೆದಾತರು ತಮ್ಮ ಪೋಷಕರಿಗೆ ಆರೋಗ್ಯ ವಿಮೆ ಮಾಡಿಸದೆಯೂ 80D ಯಲ್ಲಿ ತೆರಿಗೆ ಡಿಡಕ್ಷನ್ ಪಡೆಯಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+