UPI ಪಾವತಿಗೆ ಕ್ರೆಡಿಟ್ ಕಾರ್ಡ್ ಬಳಸಿ ರಿವಾರ್ಡ್ ಪಾಯಿಂಟ್ ಗಳಿಸಿ..! ಆದರೆ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ

UPI ಕ್ರೆಡಿಟ್ ಕಾರ್ಡ್‌ ಬಳಕೆ ಮಾಡುತ್ತಿದ್ದೀರಾ..? ಹಾಗಿದ್ದರೆ ಈ ಸುದ್ದಿ ನಿಮಗಾಗಿ.. ಹೌದು, ಇತ್ತೀಚಿನ ದಿನಗಳಲ್ಲಿ UPI ಕ್ರೆಡಿಟ್ ಕಾರ್ಡ್‌ಗಳು ಹೆಚ್ಚಾಗಿ ಬಳಕೆಯನ್ನು ಮಾಡುತ್ತಾರೆ. ಸಾಮಾನ್ಯ ಕಾರ್ಡ್ ಪಾವತಿಗಳಿಗಿಂತ UPI ಪಾವತಿಗಳನ್ನೇ ಹೆಚ್ಚಾಗಿ ಬಳಸುವುದರಿಂದ, ಕ್ರೆಡಿಟ್ ಕಾರ್ಡ್‌ಗಳನ್ನು UPI ಜೊತೆ ಲಿಂಕ್ ಮಾಡುವಂತಹ ವ್ಯವಸ್ಥೆ ಜಾರಿಗೆ ಬಂದಿದೆ. ಅತಿಯಾಗಿ ಸಾಲ ಮಾಡುವ ಅಭ್ಯಾಸವನ್ನು ತಪ್ಪಿಸುವುದು ಇದರ ಮುಖ್ಯ ಉದ್ದೇಶ. UPI ಕ್ರೆಡಿಟ್ ಕಾರ್ಡ್‌ಗಳ ಮೂಲಕ ಕ್ಯಾಶ್‌ಬ್ಯಾಕ್ ಮತ್ತು ರಿವಾರ್ಡ್ ಪಾಯಿಂಟ್‌ಗಳಂತಹ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಇವುಗಳನ್ನು ಬಳಸುವ ಮೊದಲು, ಇದು ಹೇಗೆ ಕೆಲಸ ಮಾಡುತ್ತದೆ, ಎಲ್ಲಿ ಬಳಸಬೇಕು ಮತ್ತು ಯಾವುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.

UPI ಪಾವತಿಗೆ ಕ್ರೆಡಿಟ್ ಕಾರ್ಡ್ ಬಳಸಿ ರಿವಾರ್ಡ್ ಪಾಯಿಂಟ್ ಗಳಿಸಿ

UPI ಅಪ್ಲಿಕೇಶನ್‌ಗಳೊಂದಿಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?

ನಿಮ್ಮ RuPay ಕ್ರೆಡಿಟ್ ಕಾರ್ಡ್ ಅನ್ನು PhonePe, Google Pay ಮತ್ತು Paytm ನಂತಹ UPI ಅಪ್ಲಿಕೇಶನ್‌ಗಳೊಂದಿಗೆ ಲಿಂಕ್ ಮಾಡಬಹುದು. ಸದ್ಯಕ್ಕೆ, ಭಾರತೀಯ ರಾಷ್ಟ್ರೀಯ ಪಾವತಿ ನಿಗಮದ (NPCI) ಪ್ರಕಾರ RuPay ಕಾರ್ಡ್‌ಗಳು ಮಾತ್ರ ಈ ಸೇವೆಗೆ ಅರ್ಹವಾಗಿವೆ. ಕಾರ್ಡ್ ಲಿಂಕ್ ಆದ ನಂತರ, ಈ ಕ್ರೆಡಿಟ್ ಕಾರ್ಡ್ ಅನ್ನು UPIನಲ್ಲಿ ನಿಮ್ಮ ಬ್ಯಾಂಕ್ ಖಾತೆಯಂತೆ ಬಳಸಬಹುದು.

ಯುಪಿಐ ಕ್ರೆಡಿಟ್ ಕಾರ್ಡ್‌ನ ಬಳಕೆ
ಯುಪಿಐ ಕ್ರೆಡಿಟ್ ಕಾರ್ಡ್ ಪಾವತಿಗಳು ಕೇವಲ ವ್ಯಾಪಾರಿ ವಹಿವಾಟುಗಳಿಗೆ ಮಾತ್ರ ಲಭ್ಯವಿರುತ್ತದೆ. ಅಂದರೆ, ಈ ಕ್ರೆಡಿಟ್ ಕಾರ್ಡ್ ಅನ್ನು ಅಂಗಡಿಯವರು, ರೆಸ್ಟೋರೆಂಟ್‌ಗಳು ಅಥವಾ ಇ-ಕಾಮರ್ಸ್ ವ್ಯಾಪಾರಿಗಳೊಂದಿಗೆ ವಹಿವಾಟು ನಡೆಸಲು ಮಾತ್ರ ಬಳಸಲು ಸಾಧ್ಯ. ಸ್ನೇಹಿತರು ಅಥವಾ ಸಂಬಂಧಿಕರಿಗೆ ಹಣವನ್ನು ಕಳುಹಿಸಲು ಇದು ಬಳಕೆಯಾಗುವುದಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ದಂಡ ವಿಧಿಸುವ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ನಿರ್ಬಂಧಿಸುವ ಸಾಧ್ಯತೆಗಳಿರುತ್ತವೆ.

ಗುಪ್ತ ಶುಲ್ಕಗಳ ಬಗ್ಗೆ ಇರಲಿ ಎಚ್ಚರ

ರುಪೇ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಯುಪಿಐವಹಿವಾಟು ನಡೆಸಲು ಯಾವುದೇ ಶುಲ್ಕವಿರುವುದಿಲ್ಲ. ಆದರೂ, ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಕಾರ್ಡ್‌ನ ನಿಯಮ ಮತ್ತು ಷರತ್ತುಗಳನ್ನು ಪರಿಶೀಲಿಸುವುದು ಸೂಕ್ತ. ಒಂದು ವೇಳೆ UPIನಲ್ಲಿ ನಿಮ್ಮ ಕಾರ್ಡ್ ಅನ್ನು ಅತಿಯಾಗಿ ಬಳಸಿದರೆ, ನಿಮ್ಮ ಕ್ರೆಡಿಟ್ ಮಿತಿ ಮುಗಿಯುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಸಣ್ಣ ವಹಿವಾಟುಗಳಿಗೆ ನಿಮ್ಮ ಕ್ರೆಡಿಟ್ ಕಾರ್ಡ್ ಬಳಸುವುದನ್ನು ತಪ್ಪಿಸಿ. ಒಂದು ವೇಳೆ ನೀವು ರಿವಾರ್ಡ್ ಮಿತಿಗಳ ಒಳಗೆ ಇಲ್ಲದಿದ್ದರೆ ಕ್ರೆಡಿಟ್ ಕಾರ್ಡ್ ಬಳಸುವುದನ್ನು ಕಡಿಮೆ ಮಾಡಿ.

ರಿವಾರ್ಡ್ ಪಾಯಿಂಟ್‌ಗಳ ಬಳಕೆ
ಹೆಚ್ಚಿನ ಕ್ರೆಡಿಟ್ ಕಾರ್ಡ್‌ಗಳು ಕ್ಯಾಶ್‌ಬ್ಯಾಕ್ ಮತ್ತು ಗಿಫ್ಟ್ ವೋಚರ್‌ಗಳಂತಹ ವಿವಿಧ ಆಯ್ಕೆಗಳನ್ನು ನೀಡುತ್ತವೆ. ಇನ್ನೂ ಕೆಲವು ಕಾರ್ಡ್‌ಗಳು ಏರ್ ಮೈಲ್‌ಗಳಾಗಿ ಪರಿವರ್ತಿಸುವ ಆಯ್ಕೆಯನ್ನು ಹೊಂದಿವೆ. ಆದ್ದರಿಂದ ರಿಡೆಂಪ್ಶನ್ ಮೌಲ್ಯವನ್ನು ಪರೀಕ್ಷಿಸಿ, ಹೆಚ್ಚಿನ ಮೌಲ್ಯದ ರಿಡೆಂಪ್ಶನ್‌ಗಳನ್ನು ಗರಿಷ್ಠಗೊಳಿಸಿ ಮತ್ತು ಸಣ್ಣ ಗಿಫ್ಟ್ ಕಾರ್ಡ್‌ಗಳಂತಹ ಕಡಿಮೆ ಮೌಲ್ಯದ ವಸ್ತುಗಳಿಗೆ ಪಾಯಿಂಟ್‌ಗಳನ್ನು ಬಳಸುವುದನ್ನು ತಪ್ಪಿಸಿ.

ಒಟ್ಟಾರೆಯಾಗಿ, UPI ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಮೊದಲು ಅದರ ನಿಯಮಗಳು ಮತ್ತು ಷರತ್ತುಗಳನ್ನು ಸರಿಯಾಗಿ ತಿಳಿದುಕೊಂಡು, ಎಚ್ಚರಿಕೆಯಿಂದ ಬಳಸಬೇಕು. ಅನಗತ್ಯ ಖರ್ಚುಗಳನ್ನು ತಡೆಗಟ್ಟುವ ಮೂಲಕ, ಕ್ರೆಡಿಟ್ ಕಾರ್ಡ್‌ನ ಪ್ರಯೋಜನಗಳನ್ನು ಪಡೆಯಲು ಇದು ಸಹಾಯಕವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+